ವಿಷಯಕ್ಕೆ ಹೋಗು

ಧರ್ಮಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧರ್ಮಶ್ರೀ ಎಸ್ ಎಲ್ ಭೈರಪ್ಪನವರ ಕಾದಂಬರಿ.


ಚಿತ್ರಣ

[ಬದಲಾಯಿಸಿ]

ಡಾ. ಎಸ್ ಎಲ್ ಭೈರಪ್ಪಅವರ ಧರ್ಮಶ್ರೀ(1961) ಧಾರ್ಮಿಕ ಮತಾಂತರದ ದುಷ್ಕೃತ್ಯಗಳು ಮತ್ತು ಅದು ಉಂಟುಮಾಡುವ ಆಘಾತ — ವ್ಯಕ್ತಿ, ಕುಟುಂಬ ಮತ್ತು ಸಮಾಜದ ಮೇಲಿನಪರಿಣಾಮಗಳನ್ನು ವಿವರಿಸುತ್ತದೆ.

ಕ್ರಿಶ್ಚಿಯನ್ ಮಿಷನರಿಗಳ ಸೂಕ್ಷ್ಮ ಮತ್ತು ದುಷ್ಕೃತ್ಯದ ಪ್ರಯತ್ನಗಳು ಮತ್ತು ಮತಾಂತರದ ಸಲುವಾಗಿ ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಅವರ ಪಟ್ಟುಹಿಡಿದ ಪ್ರಯತ್ನಗಳನ್ನು ಈ ಕಾದಂಬರಿಯಲ್ಲಿ ಸ್ಪಷ್ಟವಾಗಿ ಹೊರತಂದಿದೆ.


ಬಡಕುಟುಂಬದಲ್ಲಿ ಹುಟ್ಟಿ ತನ್ನೂರು, ಮಾವನೂರು ಕೊನೆಗೆ ಮೈಸೂರು, ಹೀಗೆ ಎಲ್ಲೆಲ್ಲೊ ಓದಿ ದೊಡ್ಡವನಾಗಿ, ಹಿಂದೂ ದರ್ಮದ ಬಗ್ಗೆ ಅಪಾರ ಅಭಿಮಾನ ಹೊಂದಿದ ಒಬ್ಬ ಯುವಕ, ಆತ ಬೆಳೆಯುವ ರೀತಿ, ಆತನ ಶಿಕ್ಷಣ, ಇವೆಲ್ಲವು ನಮ್ಮನ್ನು ಗಾಢವಾಗಿ ಆವರಿಸಿ ಬಿಡುತ್ತವೆ. ಕೊನೆಗೆ ಅಷ್ಟೊಂದು ನಂಬಿಕೆ ಇಟ್ಟ ಧರ್ಮವನ್ನೆ ತ್ಯಜಿಸಿ ಪ್ರೀತಿಗಾಗಿ ಅನ್ಯಧರ್ಮೀಯ (ಕ್ರೈಸ್ತ) ಹುಡುಗಿಯನ್ನು ಮದುವೆಯಾಗಿ ತನ್ನವರನ್ನೆಲ್ಲ ತೊರೆದು, ಏಕಾಂಗಿ ಬದುಕು ನಡೆಸುತ್ತಾನೆ. ಅಲ್ಲಿ ನಡೆಯುವ ಅವಮಾನಗಳ ಸರಮಾಲೆಯನ್ನೆ ಹೊತ್ತು, ಬೇಸತ್ತು ಅವರು ಕೊಟ್ಟ ಅಧಿಕಾರ, ನೌಕರಿ, ಐಶ್ವರ್ಯವನ್ನು ತ್ಯಜಿಸಿ ಮತ್ತೆ ಹಿಂದೂ ಧರ್ಮವನ್ನು ಆರಿಸಿ, ಹೆಂಡತಿಯನ್ನೂ ಇದೇ ಧರ್ಮಕ್ಕೆ ಬದಲಾಯಿಸಿ ಕರೆತರುವ ಮದ್ಯವಯಸ್ಕನ ಕಥೆಯಿದು.
ಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಕ್ವಚಿತ್ತಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ. ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ , ಎರಡೂ ಒಂದೇ ಆಗಿವೆ.

ಉಲ್ಲೇಖ

[ಬದಲಾಯಿಸಿ]