ಟೊರಾಂಟೊ ನಗರ
Toronto | |
---|---|
ಸಿಟಿ ಆಫ್ ಟೊರಾಂಟೋ | |
Nickname(s): | |
Motto: Diversity Our Strength | |
Country | ಕೆನಡಾ |
Province | Ontario |
Districts | East York, Etobicoke, North York, Old Toronto, Scarborough, York |
Established | August 27, 1793 (as York) |
Incorporated | March 6, 1834 (as Toronto) |
Amalgamated | January 1, 1998 (from Metropolitan Toronto) |
Government | |
• Type | Mayor-council |
• Mayor | Rob Ford |
• Deputy Mayor | Norm Kelly |
• Council | Toronto City Council |
• MPs | List of MPs |
• MPPs | List of MPPs |
Area | |
• Single-tier municipality (city) | ೬೩೦ km೨ (೨೪೦ sq mi) |
• Urban | ೧,೭೪೯ km೨ (೬೭೫ sq mi) |
• Metro | ೭,೧೨೫ km೨ (೨,೭೫೧ sq mi) |
Elevation | ೭೬ m (೨೪೯ ft) |
Population (2011)[೧] | |
• Single-tier municipality (city) | ೨೬,೧೫,೦೬೦ (೧st) |
• Density | ೪,೧೪೯/km೨ (೧೦,೭೫೦/sq mi) |
• Urban | ೫೧,೩೨,೭೯೪ (೧st) |
• Metro | ೫೫,೮೩,೦೬೪ (೧st) |
Demonym | Torontonian |
Time zone | UTC-5 (EST) |
• Summer (DST) | UTC-4 (EDT) |
Postal code span | |
Area code(s) | 416, 437, 647 |
NTS Map | 030M11 |
GNBC Code | FEUZB |
Website | www |
ಟೊರಾಂಟೋ, ಕೆನಡಾ ದೇಶದ ಅತಿ ದೊಡ್ಡ ನಗರ. [೩] ಆಂಟೇರಿಯೋ ರಾಜ್ಯದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಟೊರಾಂಟೋ ನಗರ, ದಕ್ಷಿಣ ಆಂಟೇರಿಯೋ ಸರೋವರದ ಉತ್ತರ, ಪಶ್ಚಿಮ ದಡದ ಬಳಿಯಿದೆ. ಟೊರಾಂಟೊ, ಕೆನಡಾದ ಅತ್ಯಾಧುನಿಕ ನಗರಗಳಲ್ಲೊಂದೆಂದು ಪತ್ರಿಕೆ,ಮೀಡಿಯಾಗಳಲ್ಲಿ ದಾಖಲಾಗಿದೆ. ಕೆನಡಾದ ಇತಿಹಾಸದ ಪ್ರಕಾರ, ೧೮ ನೆಯ ಶತಮಾನದ ಮೊದಲಲ್ಲಿ ಬ್ರಿಟಿಷ್ ರಾಜಪರಿವಾರ ಇಲ್ಲಿನ ಜಾಗವನ್ನು ಮಿಸ್ಸಿಸಾಗುವಾಸ್ ರಿಂದ ಖರೀದಿಸಿದರು. ಮೊದಲು ಈ ಪ್ರದೇಶವನ್ನು 'ಯಾರ್ಕ್' ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವನ್ನು ಉತ್ತರ ಕೆನಡಾದ ರಾಜಧಾನಿಯನ್ನಾಗಿ ಮಾಡಲು ಲೆಫ್ಟಿನೆಂಟ್ ಗವರ್ನರ್ 'ಜಾನ್ ಗ್ರೆವ್ಸ್ ಸಿಮ್ಕೋ' ಬಹಳವಾಗಿ ಶ್ರಮಿಸಿದರು. ೧೮೧೨ ರ ಕೆನಡಾ-ಅಮೆರಿಕ ಯುದ್ಧದಲ್ಲಿ ಅಮೆರಿಕನ್ ಮಿಲಿಟರಿ ಸೈನಿಕರು ನಗರವನ್ನು ಕೊಳ್ಳೆಹೊಡೆದು ಸಂಪತ್ತನ್ನೆಲ್ಲಾ ದೋಚಿಕೊಂಡುಹೋದರು. ೧೮೩೪ ರಲ್ಲಿ ಯಾರ್ಕ್ ನಗರಕ್ಕೆ 'ಟೊರಾಂಟೊ' ಎಂಬ ಒಂದು ಹೊಸ ಹೆಸರನ್ನು ಕೊಟ್ಟರು. ೧೮೪೯ ಮತ್ತು ೧೯೦೪ ರಲ್ಲಿ ಆದ ಬೆಂಕಿ ಅಪಘಾತದಲ್ಲಿ ಈ ನಗರ ಬಹಳವಾಗಿ ನಲುಗಿತ್ತು. ಮುಂದಿನ ದಿನಗಳಲ್ಲಿ ಅದು ಅಕ್ಕಪಕ್ಕದ ಮುನಿಸಿಪಾಲಿಟಿಗಳನ್ನೂ ಸೇರಿಕೊಳ್ಳುತ್ತಾ ೧೯೯೮ ರಲ್ಲೂ ಸೇರಿದಂತೆ, ಬೆಳೆಯುತ್ತಾ ವಿಸ್ತಾರವಾಗುತ್ತಾ ಹೋಯಿತು. ೨೦೧೧ ರ ಜನಸಂಖೆಯ ಪ್ರಕಾರ,ನಗರದ ಜನಸಂಖ್ಯೆ ೨.೬ ಮಿ. ಈಗ ಉತ್ತರ ಅಮೇರಿಕಾ ಖಂಡದ ೫ ನೆಯ ಅತಿ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲೊಂದಾಗಿದೆ.
ಇದು ಉತ್ತರ ಅಮೇರಿಕದಲ್ಲಿ ಐದನೇ ಹೆಚ್ಚು ಜನದಟ್ಟಣೆಯ ನಗರ. ಸುಮಾರು ೨೬ ಲಕ್ಷ ಜನ ಇಲ್ಲಿದ್ದಾರೆ. ಟೊರಾಂಟೋ ಮಹಾನಗರ ಕ್ಷೇತ್ರದಲ್ಲಿ ೫೫ ಲಕ್ಷ ಜನ ವಾಸವಾಗಿದ್ದಾರೆ. ಜಗತ್ತಿನ ಎಲ್ಲೆಡೆಯಿಂದ ಬಂದು ಇಲ್ಲಿ ನೆಲೆಸಿರುವ ಜನರೇ ಬಹಳ. ಇಲ್ಲಿರುವ ಜನರಲ್ಲಿ ಸುಮಾರು ಅರ್ಧದಷ್ಟು ಜನ ಹುಟ್ಟಿದ್ದು, ಕೆನಡಾ ದೇಶದ ಹೊರಗಡೆ. ಟೊರಾಂಟೋ ನಗರವು ಜಗತ್ತಿನಲ್ಲಿಯೇ ವಾಸಿಸಲು ಅತ್ಯಂತ ಅನುಕೂಲವಾದ ನಾಗರಿಕ ಸೌಲಭ್ಯಗಳನ್ನು ಹೊಂದಿದ ನಗರಗಳಲ್ಲಿ ಒಂದಾಗಿದೆ. ಟೊರಾಂಟೋ ಕೆನಡಾ ದೇಶದ ಆರ್ಥಿಕ ರಾಜಧಾನಿಯಾಗಿದೆ.
ನಗರದ ಜನಸಂಖ್ಯೆ
[ಬದಲಾಯಿಸಿ]ಜನಸಂಖ್ಯಾ-ರಿಪೋರ್ಟ್ ಪ್ರಕಾರ, ಸನ್.೩೦೧೧ ರಲ್ಲಿ,(The census metropolitan area) (CMA) ವಲಯದಲ್ಲಿ, 5,583,064, ಜನರಿದ್ದರು. ಗ್ರೇಟರ್ ಟೊರಾಂಟೊ ಏರಿಯ(Greater Toronto Area) (GTA)ದಲ್ಲಿ,ಅಂದರೆ, 'ಗೋಲ್ಡನ್ ಹಾರ್ಸ್ ಶೂ ಪ್ರದೇಶ'ದಲ್ಲಿ, 6,054,191 ಜನರಿದ್ದರು. ದಕ್ಷಿಣ ಟೊರಾಂಟೋನಗರದ 'ಗ್ರೇಟರ್ ಟೊರಾಂಟೋ' ಪ್ರದೇಶ ಅತಿ ಜನಜನಿತ ಕೆಂದ್ರ ಬಿಂದುವೆಂದು ಹೆಸರಾಗಿದೆ. ಅದರ 'ಕಾಸ್ಮೊಪಾಲಿಟನ್' ಮತ್ತು 'ಅಂತಾರಾಷ್ಟ್ರೀಯ ಜನಸಂಖ್ಯೆ' ಅತಿ ಹೆಚ್ಚಲು ಕಾರಣ, ಇದು, ವಿಶ್ವದ ಬಹುರಾಷ್ಟ್ರೀಯ ಪರ್ಯಟಕರ ಆಶೆಯ ತಾಣವಾಗಿರುವ ಕಾರಣಕ್ಕಾಗಿ. ಅವರೆಲ್ಲಾ ಇಲ್ಲಿಗೆ ಸೇರಿಸಲು ಅತಿ ಹೆಚ್ಚು ವಿವಿಧ ರಾಷ್ಟ್ರೀಯ ಜನರ ರಾಷ್ಟ್ರೀಯ,ಸಂಸ್ಕೃತಿಯ ಅಲ್ಲಿ ಬೆಳೆದು ದೊಡ್ದವರದವರಿಗೆ ಹೋಲಿಸಿದರೆ, ೪೯% ಜನ ಹೊರಗೆ ಹುಟ್ಟಿ ಕೆನಡಾಕ್ಕೆ ಬಂದು ನೆಲೆಸಲು ಹಾತೊರಿಯುವ ಜನಾಂಗವಾಗಿದ್ದಾರೆ. ಹೀಗಾಗಿ ಟೊರಾಂಟೋ ವಾಸ್ತವವಾಗಿ ಕೆನಡಾದ ರಾಜಧಾನಿ ಅಲ್ಲವಾದರೂ ವಾಣಿಜ್ಯ ರಾಜಧಾನಿ ಎನ್ನುವಷ್ಟು ಬೆಳವಣಿಗೆ ಸಾಧಿಸಿದೆ. 'ಕೆನಡಾದ ಸ್ಟಾಕ್ ಎಕ್ಸ್ ಚೇಂಜ್' ಮತ್ತು 'ರಾಷ್ಟ್ರದ ಅತಿ ಭಾರಿ ಬ್ಯಾಂಕ್' ಗಳೂ ಸೇರಿದಂತೆ, ಭಾರಿ ಭಾರಿ ಆಫೀಸ್ ಗಳು ಈ ನಗರದಲ್ಲಿ ಸ್ಥಾಪಿಸಲ್ಪಟ್ಟಿವೆ. ಟೊರಾಂಟೋ ಪಟ್ಟಣ ಕೆನಡಾದ ಪೂರ್ವಭಾಗದಲ್ಲಿದೆ. ಮಧ್ಯಕೆನಡಾವನ್ನು ಪ್ರತಿನಿಧಿಸಲು ಅನುವಾಗುವಂತೆ, ಸರ್ಕಾರದ ಆಡಳಿತಕ್ಕೆ ನೆರೆವಾಗುವಂತೆ ಕಟ್ಟಡಗಳನ್ನು 'ಆಟ್ವಾ'ನಗರದಲ್ಲಿ ನಿರ್ಮಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ಟೆಂಪ್ಲೇಟು:SCref
- ↑ "The real story of how Toronto got its name | Earth Sciences". Geonames.nrcan.gc.ca. September 18, 2007. Archived from the original on ಡಿಸೆಂಬರ್ 9, 2011. Retrieved February 10, 2012.
- ↑ "origin-of-the-name-of-toronto". Archived from the original on 2019-01-31. Retrieved 2021-04-20.
- Pages using duplicate arguments in template calls
- Pages with non-numeric formatnum arguments
- Short description is different from Wikidata
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using infobox settlement with possible nickname list
- Pages using infobox settlement with possible area code list
- Pages using infobox settlement with unknown parameters
- Pages using infobox settlement with no coordinates
- ಕೆನಡಾದ ಪ್ರಮುಖ ನಗರಗಳು