ವಿಷಯಕ್ಕೆ ಹೋಗು

ಟೊರಾಂಟೊ ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Toronto
ಸಿಟಿ ಆಫ್ ಟೊರಾಂಟೋ
From top left: Downtown Toronto featuring the CN Tower and Financial District from the Toronto Islands, City Hall, the Ontario Legislative Building, Casa Loma, Prince Edward Viaduct, and the Scarborough Bluffs
ಅಡ್ಡಹೆಸರು(ಗಳು): 
ಧ್ಯೇಯವಾಕ್ಯ: 
Diversity Our Strength
Location of Toronto and its census metropolitan area in the province of Ontario
Location of Toronto and its census metropolitan area in the province of Ontario
Toronto is located in Canada
Toronto
Toronto
Location of Toronto in Canada
Country Canada
Province Ontario
DistrictsEast York, Etobicoke, North York, Old Toronto, Scarborough, York
EstablishedAugust 27, 1793 (as York)
IncorporatedMarch 6, 1834 (as Toronto)
AmalgamatedJanuary 1, 1998 (from Metropolitan Toronto)
ಸರ್ಕಾರ
 • ಪ್ರಕಾರMayor-council
 • MayorRob Ford
 • Deputy MayorNorm Kelly
 • CouncilToronto City Council
 • MPs
 • MPPs
ವಿಸ್ತೀರ್ಣ
630 km2 (240 sq mi)
 • ನಗರ
1,749 km2 (675 sq mi)
 • ಮೆಟ್ರೋ
7,125 km2 (2,751 sq mi)
ಎತ್ತರ
76 m (249 ft)
ಜನಸಂಖ್ಯೆ
 (2011)[೧]
೨೬,೧೫,೦೬೦ (೧st)
 • ಸಾಂದ್ರತೆ4,149/km2 (10,750/sq mi)
 • ನಗರ
೫೧,೩೨,೭೯೪ (೧st)
 • ಮೆಟ್ರೋ
೫೫,೮೩,೦೬೪ (೧st)
ಡೆಮೊನಿಮ್Torontonian
ಸಮಯ ವಲಯUTC-5 (EST)
 • ಬೇಸಿಗೆ (DST)UTC-4 (EDT)
Postal code span
ಪ್ರದೇಶ ಕೋಡ್(ಗಳು)416, 437, 647
NTS Map030M11
GNBC CodeFEUZB
ಜಾಲತಾಣwww.toronto.ca

ಟೊರಾಂಟೋ, ಕೆನಡಾ ದೇಶದ ಅತಿ ದೊಡ್ಡ ನಗರ. [೨] ಆಂಟೇರಿಯೋ ರಾಜ್ಯದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಟೊರಾಂಟೋ ನಗರ, ದಕ್ಷಿಣ ಆಂಟೇರಿಯೋ ಸರೋವರದ ಉತ್ತರ, ಪಶ್ಚಿಮ ದಡದ ಬಳಿಯಿದೆ. ಟೊರಾಂಟೊ, ಕೆನಡಾದ ಅತ್ಯಾಧುನಿಕ ನಗರಗಳಲ್ಲೊಂದೆಂದು ಪತ್ರಿಕೆ,ಮೀಡಿಯಾಗಳಲ್ಲಿ ದಾಖಲಾಗಿದೆ. ಕೆನಡಾದ ಇತಿಹಾಸದ ಪ್ರಕಾರ, ೧೮ ನೆಯ ಶತಮಾನದ ಮೊದಲಲ್ಲಿ ಬ್ರಿಟಿಷ್ ರಾಜಪರಿವಾರ ಇಲ್ಲಿನ ಜಾಗವನ್ನು ಮಿಸ್ಸಿಸಾಗುವಾಸ್ ರಿಂದ ಖರೀದಿಸಿದರು. ಮೊದಲು ಈ ಪ್ರದೇಶವನ್ನು 'ಯಾರ್ಕ್' ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವನ್ನು ಉತ್ತರ ಕೆನಡಾದ ರಾಜಧಾನಿಯನ್ನಾಗಿ ಮಾಡಲು ಲೆಫ್ಟಿನೆಂಟ್ ಗವರ್ನರ್ 'ಜಾನ್ ಗ್ರೆವ್ಸ್ ಸಿಮ್ಕೋ' ಬಹಳವಾಗಿ ಶ್ರಮಿಸಿದರು. ೧೮೧೨ ರ ಕೆನಡಾ-ಅಮೆರಿಕ ಯುದ್ಧದಲ್ಲಿ ಅಮೆರಿಕನ್ ಮಿಲಿಟರಿ ಸೈನಿಕರು ನಗರವನ್ನು ಕೊಳ್ಳೆಹೊಡೆದು ಸಂಪತ್ತನ್ನೆಲ್ಲಾ ದೋಚಿಕೊಂಡುಹೋದರು. ೧೮೩೪ ರಲ್ಲಿ ಯಾರ್ಕ್ ನಗರಕ್ಕೆ 'ಟೊರಾಂಟೊ' ಎಂಬ ಒಂದು ಹೊಸ ಹೆಸರನ್ನು ಕೊಟ್ಟರು. ೧೮೪೯ ಮತ್ತು ೧೯೦೪ ರಲ್ಲಿ ಆದ ಬೆಂಕಿ ಅಪಘಾತದಲ್ಲಿ ಈ ನಗರ ಬಹಳವಾಗಿ ನಲುಗಿತ್ತು. ಮುಂದಿನ ದಿನಗಳಲ್ಲಿ ಅದು ಅಕ್ಕಪಕ್ಕದ ಮುನಿಸಿಪಾಲಿಟಿಗಳನ್ನೂ ಸೇರಿಕೊಳ್ಳುತ್ತಾ ೧೯೯೮ ರಲ್ಲೂ ಸೇರಿದಂತೆ, ಬೆಳೆಯುತ್ತಾ ವಿಸ್ತಾರವಾಗುತ್ತಾ ಹೋಯಿತು. ೨೦೧೧ ರ ಜನಸಂಖೆಯ ಪ್ರಕಾರ,ನಗರದ ಜನಸಂಖ್ಯೆ ೨.೬ ಮಿ. ಈಗ ಉತ್ತರ ಅಮೇರಿಕಾ ಖಂಡದ ೫ ನೆಯ ಅತಿ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲೊಂದಾಗಿದೆ.

ಇದು ಉತ್ತರ ಅಮೇರಿಕದಲ್ಲಿ ಐದನೇ ಹೆಚ್ಚು ಜನದಟ್ಟಣೆಯ ನಗರ. ಸುಮಾರು ೨೬ ಲಕ್ಷ ಜನ ಇಲ್ಲಿದ್ದಾರೆ. ಟೊರಾಂಟೋ ಮಹಾನಗರ ಕ್ಷೇತ್ರದಲ್ಲಿ ೫೫ ಲಕ್ಷ ಜನ ವಾಸವಾಗಿದ್ದಾರೆ. ಜಗತ್ತಿನ ಎಲ್ಲೆಡೆಯಿಂದ ಬಂದು ಇಲ್ಲಿ ನೆಲೆಸಿರುವ ಜನರೇ ಬಹಳ. ಇಲ್ಲಿರುವ ಜನರಲ್ಲಿ ಸುಮಾರು ಅರ್ಧದಷ್ಟು ಜನ ಹುಟ್ಟಿದ್ದು, ಕೆನಡಾ ದೇಶದ ಹೊರಗಡೆ. ಟೊರಾಂಟೋ ನಗರವು ಜಗತ್ತಿನಲ್ಲಿಯೇ ವಾಸಿಸಲು ಅತ್ಯಂತ ಅನುಕೂಲವಾದ ನಾಗರಿಕ ಸೌಲಭ್ಯಗಳನ್ನು ಹೊಂದಿದ ನಗರಗಳಲ್ಲಿ ಒಂದಾಗಿದೆ. ಟೊರಾಂಟೋ ಕೆನಡಾ ದೇಶದ ಆರ್ಥಿಕ ರಾಜಧಾನಿಯಾಗಿದೆ.

ನಗರದ ಜನಸಂಖ್ಯೆ

[ಬದಲಾಯಿಸಿ]

ಜನಸಂಖ್ಯಾ-ರಿಪೋರ್ಟ್ ಪ್ರಕಾರ, ಸನ್.೩೦೧೧ ರಲ್ಲಿ,(The census metropolitan area) (CMA) ವಲಯದಲ್ಲಿ, 5,583,064, ಜನರಿದ್ದರು. ಗ್ರೇಟರ್ ಟೊರಾಂಟೊ ಏರಿಯ(Greater Toronto Area) (GTA)ದಲ್ಲಿ,ಅಂದರೆ, 'ಗೋಲ್ಡನ್ ಹಾರ್ಸ್ ಶೂ ಪ್ರದೇಶ'ದಲ್ಲಿ, 6,054,191 ಜನರಿದ್ದರು. ದಕ್ಷಿಣ ಟೊರಾಂಟೋನಗರದ 'ಗ್ರೇಟರ್ ಟೊರಾಂಟೋ' ಪ್ರದೇಶ ಅತಿ ಜನಜನಿತ ಕೆಂದ್ರ ಬಿಂದುವೆಂದು ಹೆಸರಾಗಿದೆ. ಅದರ 'ಕಾಸ್ಮೊಪಾಲಿಟನ್' ಮತ್ತು 'ಅಂತಾರಾಷ್ಟ್ರೀಯ ಜನಸಂಖ್ಯೆ' ಅತಿ ಹೆಚ್ಚಲು ಕಾರಣ, ಇದು, ವಿಶ್ವದ ಬಹುರಾಷ್ಟ್ರೀಯ ಪರ್ಯಟಕರ ಆಶೆಯ ತಾಣವಾಗಿರುವ ಕಾರಣಕ್ಕಾಗಿ. ಅವರೆಲ್ಲಾ ಇಲ್ಲಿಗೆ ಸೇರಿಸಲು ಅತಿ ಹೆಚ್ಚು ವಿವಿಧ ರಾಷ್ಟ್ರೀಯ ಜನರ ರಾಷ್ಟ್ರೀಯ,ಸಂಸ್ಕೃತಿಯ ಅಲ್ಲಿ ಬೆಳೆದು ದೊಡ್ದವರದವರಿಗೆ ಹೋಲಿಸಿದರೆ, ೪೯% ಜನ ಹೊರಗೆ ಹುಟ್ಟಿ ಕೆನಡಾಕ್ಕೆ ಬಂದು ನೆಲೆಸಲು ಹಾತೊರಿಯುವ ಜನಾಂಗವಾಗಿದ್ದಾರೆ. ಹೀಗಾಗಿ ಟೊರಾಂಟೋ ವಾಸ್ತವವಾಗಿ ಕೆನಡಾದ ರಾಜಧಾನಿ ಅಲ್ಲವಾದರೂ ವಾಣಿಜ್ಯ ರಾಜಧಾನಿ ಎನ್ನುವಷ್ಟು ಬೆಳವಣಿಗೆ ಸಾಧಿಸಿದೆ. 'ಕೆನಡಾದ ಸ್ಟಾಕ್ ಎಕ್ಸ್ ಚೇಂಜ್' ಮತ್ತು 'ರಾಷ್ಟ್ರದ ಅತಿ ಭಾರಿ ಬ್ಯಾಂಕ್' ಗಳೂ ಸೇರಿದಂತೆ, ಭಾರಿ ಭಾರಿ ಆಫೀಸ್ ಗಳು ಈ ನಗರದಲ್ಲಿ ಸ್ಥಾಪಿಸಲ್ಪಟ್ಟಿವೆ. ಟೊರಾಂಟೋ ಪಟ್ಟಣ ಕೆನಡಾದ ಪೂರ್ವಭಾಗದಲ್ಲಿದೆ. ಮಧ್ಯಕೆನಡಾವನ್ನು ಪ್ರತಿನಿಧಿಸಲು ಅನುವಾಗುವಂತೆ, ಸರ್ಕಾರದ ಆಡಳಿತಕ್ಕೆ ನೆರೆವಾಗುವಂತೆ ಕಟ್ಟಡಗಳನ್ನು 'ಆಟ್ವಾ'ನಗರದಲ್ಲಿ ನಿರ್ಮಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. 1 2 "ಟೊರಾಂಟೊ ನಗರ (Code 3520) Census Profile". 2011 census. Government of Canada - Statistics Canada.
  2. ↑ "origin-of-the-name-of-toronto". Archived from the original on 2019-01-31. Retrieved 2021-04-20.