ವಿಷಯಕ್ಕೆ ಹೋಗು

ಟೆಕ್ಸಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
State of Texas
Flag of Texas State seal of Texas
Flag Seal
ಅಡ್ಡಹೆಸರು: ಒಂಟಿ ನಕ್ಷತ್ರ ರಾಜ್ಯ
ಧ್ಯೇಯ: ಸ್ನೇಹಕ್ಕಾಗಿ
Map of the United States with Texas highlighted
Map of the United States with Texas highlighted
ಅಧಿಕೃತ ಭಾಷೆ(ಗಳು) No official language
(see Languages spoken in Texas)
Demonym Texan
Texian (archaic)
ರಾಜಧಾನಿ Austin
ಅತಿ ದೊಡ್ಡ ನಗರ Houston
ಅತಿ ದೊಡ್ಡ ನಗರ ಪ್ರದೇಶ Dallas–Fort Worth–Arlington[]
ವಿಸ್ತಾರ  Ranked 2nd in the US
 - ಒಟ್ಟು 268,581 sq mi
(696,241 km²)
 - ಅಗಲ 773[] miles (1,244 km)
 - ಉದ್ದ 790 miles (1,270 km)
 - % ನೀರು 2.5
 - Latitude 25° 50′ N to 36° 30′ N
 - Longitude 93° 31′ W to 106° 39′ W
ಜನಸಂಖ್ಯೆ  2ndನೆಯ ಅತಿ ಹೆಚ್ಚು
 - ಒಟ್ಟು 25,145,561 (2010 Census)[]
 - ಜನಸಂಖ್ಯಾ ಸಾಂದ್ರತೆ 96.3[]/sq mi  (37.2/km²)
26thನೆಯ ಸ್ಥಾನ
ಎತ್ತರ  
 - ಅತಿ ಎತ್ತರದ ಭಾಗ Guadalupe Peak[]
8,751 ft  (2,667 m)
 - ಸರಾಸರಿ 1,700 ft  (520 m)
 - ಅತಿ ಕೆಳಗಿನ ಭಾಗ Gulf of Mexico coast[]
0 ft  (0 m)
ಸಂಸ್ಥಾನವನ್ನು ಸೇರಿದ್ದು  December 29, 1845 (28th)
Governor Rick Perry (R)
Lieutenant Governor David Dewhurst (R)
U.S. Senators Kay Bailey Hutchison (R)
John Cornyn (R)
Congressional Delegation 20 Republicans, 12 Democrats (list)
Time zones  
 - most of state Central: UTC−6/−5
 - tip of West Texas Mountain: UTC−7/−6
Abbreviations TX Tex. US-TX
Website www.texas.gov/


ಟೆಕ್ಸಸ್ ಅಮೆರಿಕದಲ್ಲಿ ಇರುವ ಒಂದು ರಾಜ್ಯ. ಅದರ ರಾಜಧಾನಿ ಆಸ್ಟಿನ್. ಕಾಡೊ ಭಾಷೆಯಲ್ಲಿ ಟೆಕ್ಸಸ್ ಎಂದರೆ ಸ್ನೇಹ. ಅದರ ಮೂಡನಕ್ಕೆ ಲೂಯಿಸಿಯಾನಾ ಹಾಗೂ ಅರ್ಕನ್ಸಾಸ್, ಪಡುವಣಕ್ಕೆ ನ್ಯೂ ಮೆಕ್ಸಿಕೋ, ಬದಗಣಕ್ಕೆ ಒಕ್ಲಹೊಮಾ, ಹಾಗೂ ತಂಕಣಕ್ಕೆ ಮೆಕ್ಸಿಕೋ ಸ್ತಿಥವಾಗಿವೆ. ಹೂಸ್ಟನ್ ನಗರ ಟೆಕ್ಸಸಿನಲ್ಲಿ ಅತಿ ದೊಡ್ಡ ನಗರ.

ಟೆಕ್ಸಸ್ ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ಸೇರಿದ, ಅದರ ಪಶ್ಚಿಮದಲ್ಲಿರುವ ಒಂದು ರಾಜ್ಯ. ಪ.ರೇ. 93ಲಿ 31'-106ಲಿ 38' ಮತ್ತು ಉ.ಅ. 25ಲಿ 50'-36ಲಿ 30' ನಡುವೆ ಹಬ್ಬಿದೆ. ಇಂಡಿಯನ್ ಹೆಸರಾದ ಟೆಕ್ಸಿಯ ಎಂಬುದರಿಂದ ಟೆಕ್ಸಸ್ ಎಂಬ ಹೆಸರು ಬಂದಿದೆ. ನೈಋತ್ಯದಲ್ಲಿ ಮೆಕ್ಸಿಕೋ ಗಣರಾಜ್ಯ, ಪಶ್ಚಿಮದಲ್ಲಿ ನ್ಯೂ ಮೆಕ್ಸಿಕೋ ರಾಜ್ಯ, ಉತ್ತರದಲ್ಲಿ ಓಕ್ಲಹೋಮ ರಾಜ್ಯ, ಈಶಾನ್ಯದಲ್ಲಿ ಆರ್ಕನ್‍ಸಾ ರಾಜ್ಯ, ಪೂರ್ವದಲ್ಲಿ ಲುವೀಸೀಯಾನ ರಾಜ್ಯ, ಆಗ್ನೇಯದಲ್ಲಿ ಮೆಕ್ಸಿಕೋ ಖಾರಿ-ಇವು ಇದರ ಮೇರೆಗಳು. ಈ ರಾಜ್ಯದ ಸುತ್ತಳತೆ 2,845.3 ಮೈ. (4,580 ಕಿಮೀ.), ವಿಸ್ತೀರ್ಣ 2,67,339 ಚ.ಮೈ. (6,92,410 ಚ.ಮೀ.). ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎರಡನೆಯ ದೊಡ್ಡ ರಾಜ್ಯ. ಜನಸಂಖ್ಯೆ 1,11,96,730 (1970). ರಾಜಧಾನಿ ಆಸ್ಟಿನ್ (2,51,808).

ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳೆರಡರಿಂದ ಸಮಾನ ದೂರದಲ್ಲಿರುವ ಈ ರಾಜ್ಯಕ್ಕೆ 624 ಮೈ.ಗಳ ಸಮುದ್ರತೀರವುಂಟು. ಇದೊಂದು ವೈಪರೀತ್ಯಗಳ ನಾಡು. ರಾಜ್ಯವೆನ್ನುವುದಕ್ಕಿಂತ ಇದೊಂದು ಪ್ರದೇಶದಂತಿದೆಯೆನ್ನ ಬಹುದು. ಭಾಷೆ, ಪ್ರಧಾನ ಮತ್ತು ನಾಗರಿಕತೆಗಳಲ್ಲಿ ಭಿನ್ನವಾಗಿರುವ ಅನ್ಯರಾಷ್ಟ್ರವೊಂದರೊಡನೆ (ಮೆಕ್ಸಿಕೋ) ಗಡಿ ಹೊಂದಿರುವ ಟೆಕ್ಸಸ್ ರಾಜ್ಯ ಅಮೆರಿಕ ಸಂಯುಕ್ತ ಸಂಸ್ಥಾನಗಳ ಇತರ ರಾಜ್ಯಗಳಿಗಿಂತ ಅನೇಕ ರೀತಿಯಲ್ಲಿ ಭಿನ್ನವಾದ್ದು. ಸ್ವತಂತ್ರರಾಷ್ಟ್ರವಾಗಿದ್ದು ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸೇರಿದ ರಾಜ್ಯ ಇದೊಂದೇ. 1836ರಲ್ಲಿ ಇದು ಮೆಕ್ಕಿಕೋದಿಂದ ಸ್ವತಂತ್ರವಾಗಿ, ಗಣರಾಜ್ಯವಾಗಿತ್ತು. 1845ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸೇರ್ಪಡೆ ಹೊಂದಿತು.

ಭೌತಲಕ್ಷಣ

[ಬದಲಾಯಿಸಿ]

ಪಶ್ಚಿಮ ಪರ್ವತಗಳಿಗೆ ಒರಗಿಸಿ ನಿಲ್ಲಿಸಿದಂತೆ ಟೆಕ್ಸಸ್ ರಾಜ್ಯ ಆಗ್ನೇಯದ ಕಡೆಗೆ ಇಳಿಜಾರಾಗಿದೆ. ಆದ್ದರಿಂದ ಟೆಕ್ಸಸಿನ ನದಿಗಳು ವಾಯನನ್ಯದಿಂದ ಆಗ್ನೇಯಕ್ಕೆ, ಒಂದಕ್ಕೊಂದು ಬಹುತೇಕ ಸಮಾಂತರಗಳಲ್ಲಿ ಹರಿಯುತ್ತವೆ. ಸಬೀನ್, ನೆಚೆಸ್, ಟ್ರಿನಿಟೀ, ಬ್ರ್ಯಾಜûಸ್, ಕಾ¯ರ್ಯಾಡೊ, ಗ್ವಾಡ್ಲೂಪ್, ಸ್ಯಾನ್ ಆಂಟೋನಿಯೋ, ನುವೇಸ್, ರೀಯೊ ಗ್ರಾಂಡ್_ಇವು ಮೆಕ್ಸಿಕೋ ಖಾರಿಯನ್ನು ಸೇರುತ್ತವೆ. ಇವುಗಳಲ್ಲಿ ಅತ್ಯಂತ ಉದ್ದವಾದ್ದು ರೀಯೊ ಗ್ರಾಂಡ್. ಇದು ಟೆಕ್ಸಸಿನ ನೈಋತ್ಯ ಗಡಿಯಾಗಿ ಪರಿಣಮಿಸಿದೆ. ರೆಡ್ ನದಿ ಉದ್ದದಲ್ಲಿ ಎರಡನೆಯದು. ಇದೂ ಸಬೀಸ್ ನದಿಯೂ ಅನುಕ್ರಮವಾಗಿ ಭಾಗಶಃ ಉತ್ತರ ಮತ್ತು ಪೂರ್ವ ಗಡಿಗಳಾಗಿವೆ. ರಾಜ್ಯದ ಇತಿಹಾಸ, ಸಂಸ್ಕøತಿ, ಆರ್ಥಿಕತೆಗಳ ಮೇಲೆ ಅಸಾಧಾರಣ ಪರಿಣಾಮ ಬೀರಿರುವ ನೈಸರ್ಗಿಕ ವಿಭಾಗ ರೇಖೆಯೆಂದರೆ ಬಾಲ್ಕೋನ್ಸ್ ಸ್ತರಭಂಗ, ಇದು ಟೆಕ್ಸಸನ್ನು ಎರಡು ಭಾಗಗಳಾಗಿ ಕತ್ತರಿಸಿದೆ. ರೀಯೊ ಗ್ರಾಂಡ್ ನದಿಯಿಂದ ಸ್ಯಾನ್ ಆಂಟೋನಯೋ ವರೆಗೆ ಪೂರ್ವಾಭಿ ಮುಖವಾಗಿ ಸಾಗಿ ಅನಂತರ ಆಸ್ಟಿನ್ ನಗರದವರೆಗೆ ಈಶಾನ್ಯ ದಿಕ್ಕಿನಲ್ಲಿ ಮುಂದುವರಿದು, ಅಲ್ಲಿ ಪಶ್ಚಿಮಕ್ಕೆ ಉಬ್ಬಿ ಅನಂತರ ಮತ್ತೆ ಈಶಾನ್ಯಾಭಿಮುಖವಾಗಿ ರೆಡ್ ನದಿಯನ್ನು ತಲುಪುವ ಈ ರೇಖೆಯ ಪೂರ್ವಕ್ಕೆ ಇರುವ ಪ್ರದೇಶ ಇಡೀ ರಾಜ್ಯದ ಸೇ. 40ರಷ್ಟಿದೆ. ಎಲ್ ಪಾಸೋವನ್ನು ಉಳಿದು ರಾಜ್ಯದ ಎಲ್ಲ ಜನಭರಿತ ನಗರಗಳೂ ಬಹುತೇಕ ಸಂಪತ್ತೂ ಇರುವುದು ಈ ಪ್ರದೇಶದಲ್ಲಿ. ಇಲ್ಲಿ ಮಳೆಯೂ ಅಧಿಕ. ಪಶ್ಚಿಮ ಭಾಗದಲ್ಲಿ ಮಳೆ ಕಡಿಮೆ ; ನೀರಾವರಿ ಸೌಲಭ್ಯ ಇರುವಲ್ಲಿ ಮಾತ್ರ ವ್ಯವಸಾಯ ಪ್ರಗತಿ ಹೊಂದಿದೆ; ತೈಲ ಇರುವ ಪ್ರದೇಶಗಳೂ ಮುಂದುವರಿದಿವೆ.

ಭೌತಿಕವಾಗಿ ಟೆಕ್ಸಸ್ ರಾಜ್ಯದಲ್ಲಿ ನಾಲ್ಕು ವಿಭಾಗಗಳಿವೆ: 1 ಖಾರಿಯ ಬಳಿಯ ಕರಾವಳಿ ಬಯಲು: ಇದು ಬಾಲ್ಕೋನ್ಸ್ ಸ್ತರಭಂಗ ರೇಖೆಯ ಪೂರ್ವದ ಪ್ರದೇಶದ ಸೇ. 40ರಷ್ಟು ಭಾಗವನ್ನೊಳಗೊಂಡಿದೆ. ಸಮುದ್ರಮಟ್ಟದಿಂದ 800' ವರೆಗೆ ಉನ್ನತವಾಗುತ್ತ ಸಾಗುವ ಪ್ರದೇಶವೆಲ್ಲ ಇದರಲ್ಲಿ ಸೇರುತ್ತದೆ. 2 ಮಧ್ಯದ ತಗ್ಗು ನೆಲ; ಪೂರ್ವದ ಕರಾವಳಿ ಬಯಲಿಗೂ ಪಶ್ಚಿಮ ಮತ್ತು ದಕ್ಷಿಣದ ಮಹಾ ಮೈದಾನಕ್ಕೂ (ಗ್ರೇಟ್ ಪ್ಲೇನ್ಸ್) ನಡುವೆ 200 ಮೈ. ಅಗಲಕ್ಕೆ ಹಬ್ಬಿರುವ ಪ್ರದೇಶವಿದು. ಇದರ ಪೂರ್ವ ಅಂಚು ಸಮುದ್ರಮಟ್ಟದಿಂದ 800' ಎತ್ತರವಾಗಿದೆ. ಪಶ್ಚಿಮದ ಮಹಾ ಮೈದಾನದ ಬಳಿ ಇದರ ಎತ್ತರ 2,500'. ಇಡೀ ಪ್ರದೇಸ ಇಳಿಜಾರಾಗಿದೆ. 3 ಮಹಾ ಮೈದಾನ; ಮಧ್ಯದ ತಗ್ಗು ನೆಲದ ಪಶ್ಚಿಮ ಮತ್ತು ದಕ್ಷಿಣಕ್ಕೆ ಮತ್ತು ಖಾರಿಯ ಕರಾವಳಿ ಬಯಲಿನ ಪಶ್ಚಿಮಕ್ಕೆ ಇರುವ ಪ್ರದೇಶ ರಾಕೀ ಪರ್ವತಗಳ ಪೂರ್ವ ಇಳಿಜಾರಿನವರೆಗೂ ವಿಸ್ತರಿಸಿದೆ. ಪೂರ್ವದ ಎಲ್ಲೆಯ ಬಳಿ 2,500' ಎತ್ತರದಿಂದ ಥಟ್ಟನೆ ಮೇಲೇರುವ ಈ ಪ್ರದೇಶ ನ್ಯೂ ಮೆಕ್ಸಿಕೋ ರಾಜ್ಯದ ಎಲ್ಲೆಯಲ್ಲಿ 4,600' ಎತ್ತರವಾಗಿದೆ. 4 ರಾಕೀ ಪರ್ವತಗಳು: ಇದು ಟೆಕ್ಸಸಿನ ಅತ್ಯಂತ ಬರಡು ಪ್ರದೇಶವಾದರೂ ಹಲವು ಬಗೆಯಲ್ಲಿ ಸ್ವಾರಸ್ಯಕರ. ಇದು ಮರುಭೂಮಿಗಳಿಂದಲೂ ರಾಜ್ಯದ ಅತ್ಯುನ್ನತ ಶಿಖರಗಳಿಂದಲೂ ಬಿಗ್ ಬೆಂಡ್ ರಾಷ್ಟ್ರೀಯ ವನದ ವೈವಿಧ್ಯಮಯ ಸೌಂದರ್ಯದಿಂದಲೂ ಕೂಡಿದೆ. ಇದರ ಎತ್ತರ 2,000'-8,751'. ಟೆಕ್ಸಸಿನ ಪಶ್ಚಿಮದ ಅಂಚಿನಲ್ಲಿರುವ ಎಲ್ ಪ್ಯಾಸೋ ನಗರಪ್ರದೇಶವನ್ನು ಬಿಟ್ಟರೆ ಉಳಿದ ಭಾಗದಲ್ಲಿ ಜನಸಂಖ್ಯೆ ವಿರಳವಾಗಿದೆ.

ವಾಯುಗುಣ

[ಬದಲಾಯಿಸಿ]

ಟೆಕ್ಸಸ್ ಮಧ್ಯಮ ಉಷ್ಣತೆಯ ಪ್ರದೇಶದಲ್ಲಿದೆ. ಚಳಿಗಾಲದಲ್ಲಿ ಕೆಲವೊಮ್ಮೆ ಇದೇ ಟೆಕ್ಸಸ್ ರಾಜ್ಯದಲ್ಲಿ ತೀವ್ರವಾದ ಚಳಿಯೂ ಬೇಸಿಗೆಯಲ್ಲಿ ಉದ್ದಕ್ಕೂ ತೀವ್ರ ಬಿಸಿಯೂ ಇರುತ್ತವೆ. ಉತ್ತರದ ತುದಿಯಲ್ಲಿ ಮಾಧ್ಯ ವಾರ್ಷಿಕ ಉಷ್ಣರೆ 55ಲಿ ಈ. (13ಲಿ ಅ); ದಕ್ಷಿಣದ ಕೊನೆಯಾದ ರೀಯೊ ಗ್ರಾಂಡ್ ಬಳಿ 74ಲಿ ಈ (23ಲಿ ಅ). ರಾಜ್ಯದ ಅತ್ಯಂತ ಪೂರ್ವದಲ್ಲಿ ವಾರ್ಷಿಕ ಸರಾಸರಿ ಮಳೆ 55ಗಿಂತ (1,397 ಮಿಮೀ.) ಅಧಿಕ. ಪಶ್ಚಿಮಕ್ಕೆ ಸಾಗಿದಂತೆ ಇದು ಕಡಿಮೆಯಾಗುತ್ತದೆ. ಎಲ್ ಪ್ಯಾಸೋದಲ್ಲಿ 10'ಗಿಂತ (254 ಮಿಮೀ.) ಕಡಿಮೆ. ವಾರ್ಷಿಕ ಸರಾಸರಿ ಹಿಮಪಾತ ಉತ್ತರದಲ್ಲೂ ಉನ್ನತ ಪರ್ವತ ಪ್ರದೇಶದಲ್ಲೂ 20" (508 ಮಿಮೀ.). ಉಳಿದ ಪ್ರದೇಶದಲ್ಲಿ ಹೆಚ್ಚಿಲ್ಲ. ಚಳಿಗಾಲದಲ್ಲೂ ಅದಕ್ಕೆ ಮುಂದು ಹಿಂದಿನ ದಿನಗಳಲ್ಲೂ ಟೆಕ್ಸಸಿನ ಮೇಲೆ ಉತ್ತರದಿಂದ ತೀವ್ರ ಚಳಿಗಾಳೀ ಬೀಸಿ. ಕೇವಲ 2-3 ಗಂಟೆಗಳಲ್ಲಿ ರಾಜ್ಯದ ಉಷ್ಣತೆ 20ಲಿ-30ಲಿ ಈ. ನಷ್ಟು (11ಲಿ-17ಲಿಅ). ಇಳಿಯುವುದುಂಟು. ಆದರೆ 32ಲಿ ಈ. ಗಿಂತ ಕಡಿಮೆ ಉಷ್ಣತೆ ಹೆಚ್ಚುಕಾಲ ಇರುವುದಿಲ್ಲ. ಟೆಕ್ಸಸಿನ ಹವಾಗುಣ ಆಗಾಗ್ಗೆ ತೀವ್ರ ಬದಲಾವಣೆಗಳಿಗೆ ಓಳಗಾಗುತ್ತದೆ. ಜುಲೈನಿಂದ ಸೆಪ್ಟೆಂಬರ್‍ವರೆಗಿನ ಕಾಲದಲ್ಲಿ ಆಗಿಂದಾಗ್ಗೆ ಚಂಡಮಾರುತ ಬೀಸಿ ಜನಕ್ಕೂ ಆಸ್ತಿಗೂ ತೀವ್ರ ಅಪಾಯಕಾರಿಯಗಿ ಪರಿಣಮಿಸುತ್ತದೆ.

ಸಸ್ಯ ಪ್ರಾಣಿ ಜೀವನ

[ಬದಲಾಯಿಸಿ]

ಟೆಕ್ಸಸ್ ನಲ್ಲಿ ಅಲ್ಲಿಯ ವಾಯುಗುಣ ಪರಿಮಿತಿಯಲ್ಲಿ ಸಾಧ್ಯವಿರುವ ಬಹುತೇಕ ಎಲ್ಲ ಬಗೆಯ ಸಸ್ಯಗಳೂ ಇವೆ. 3,60,00,000 ಎಕರೆಗಳಷ್ಟು ನೆಲ ಕಾಡಿನಿಂದ ಆವೃತವಾಗಿದೆ. ಇದರಲ್ಲಿ 1,10,00,000 ಎಕರೆಗಳಲ್ಲಿ ವಾಣಿಜ್ಯೋಪಯುಕ್ತವಾದ ಚೌಬೀನೆಯುಂಟು. ಪೈನ್, ಓಕ್ ಹೇರಳವಾಗಿ ಬೆಳೆಯುತ್ತವೆ. ಟೆಕ್ಸಸ್ ನಲ್ಲಿ ಮರಗಳ ಸು. 225 ಪ್ರರೂಪಗಳುಂಟು. ಪೂರ್ವ ಟೆಕ್ಸಸ್ ನ ದಕ್ಷಿಣ ಭಾಗದಲ್ಲಿರುವ ಬಿಗ್ ತಿಕೆಟ್ ಎಂಬುದು ಸಸ್ಯವಿಜ್ಞಾನ ದೃಷ್ಟಿಯಿಂದ ಗಮನಾರ್ಹವಾದ ವನ. ನೈಋತ್ಯದಲ್ಲಿ ಮರುಭೂಮಿ ಸಸ್ಯಗಳಿವೆ. ಉತ್ತರ ಅಮೆರಿಕದಲ್ಲಿರುವ ಪಕ್ಷಿಪ್ರರೂಪಗಳಲ್ಲಿ ಮೂರನೆಯ ಎರಡರಷ್ಟು ಪ್ರರೂಪಗಳು ಟೆದ್ಸಸಿನಲ್ಲಿವೆ. 800 ಬಗೆಗಳಲ್ಲಿ 42 ಬಗೆಯವು ಇಲ್ಲಿಯೇ ವಾಸಿಸುವವು; 225 ಬಗೆಯ ಪಕ್ಷಿಗಳು ಚಳಿಗಾಲದಲ್ಲೂ 70 ಬಗೆಯ ಪಕ್ಷಿಗಳು ಬೇಸಗೆಯಲ್ಲೂ ಇಲ್ಲಿ ವಾಸಿಸುತ್ತವೆ. ಇಲ್ಲಿ ಅನೇಕ ರಾಷ್ಟ್ರೀಯ ಪಕ್ಷಿ ಧಾಮಗಳೂ ಉಂಟು. ಹೂಪಿಂಗ್ ಕೊಕ್ಕರೆ ಟೆಕ್ಸಸಿಗೆ ವಿಶಿಷ್ಟವಾದ ಹಕ್ಕಿ. ಇದು ಬಹುತೇಕ ನಶಿಸಿಹೋಗಿದೆ. ಪ್ರೈರಿ ಕೋಳಿಯಿರುವ ಪ್ರದೇಶಗಳನ್ನೆಲ್ಲ ಬತ್ತ ಬೆಳೆಯಲು ಬಳಸಿಕೊಳ್ಳುತ್ತಿರುವುದರಿಂದ ಅದರ ಅಸ್ತಿತ್ವಕ್ಕೂ ಅಪಾಯ ಒದಗಿ ಬಂದಿದೆ. ಅಮೇರಿಕದ ಕಾಡು ಸೀಮೆಕೋಳಿಗಳಲ್ಲಿ ಸುಮಾರು ಅರ್ಧದಷ್ಟು ಇರುವುದು ಟೆದ್ಸಸಿನಲ್ಲಿ. ಬಾತು, ವರಟೆ, ಲಾವುಗೆಗಳೂ ಇವೆ. ಜಿಂಕೆ, ಪ್ರೈರಿ ನಾಯಿ, ಕಯೋಟ್, ಕಾಡೆಮ್ಮೆ, ಕುರಿ ಕೆಲವು ಮುಖ್ಯ ಪ್ರಾಣಿಗಳು. ಕೆಂದಲೆ ಹಾವು, ಬುಡುಬುಡುಕೆ ಹಾವು, ಕೊಂಬಿನ ನೆಲಗಪ್ಪೆ ಮುಂತಾದವೂ ಇವೆ. ಚಟ್ಲಿ, ಸಿಂಪಿ, ಕೆಮ್ಮೀನು, ಟ್ರೌಟ್, ಗ್ರೌಪರ್ ಮುಂತಾದ ಮೀನುಗಳು ಕಡಲಲ್ಲಿ ದೊರಕುತ್ತವೆ.

ಟೆಕ್ಸಸಿನಲ್ಲಿ ಅನೇಕ ಅಭಯಾರಣ್ಯಗಳೂ ಉದ್ಯಾನಗಳೂ ಉಂಟು.

ಆಡಳಿತ

[ಬದಲಾಯಿಸಿ]

ಟೆಕ್ಸಸಿನ ಸಂವಿಧಾನ 1876ರಲ್ಲಿ ಸ್ವೀಕೃತವಾಯಿತು. ಇದು ಅಮೆರಿಕದ ಸಂವಿಧಾನಗಳ ಪೈಕಿ ಅತ್ಯಂತ ಅದಕ್ಷವೂ ಲಂಬಿತವೂ ಆದ್ದೆಯ ಹೇಳಲಾಗಿದೆ. ಬಹುಶಃ ಬೇರಾವ ಸಂವಿಧಾನಕ್ಕೂ ಇದಕ್ಕಾಗಿರುವಷ್ಟು ತಿದ್ದುಪಡಿಗಳು ಆಗಿಲ್ಲ. ರಾಜ್ಯದ ಸಂವಿಧಾನ ಹಾಗೂ ಪರಿನಿಯಮಗಳ ಸುಧಾರಣೆಗಳಿಗಾಗಿ ಆಗಿಂದಾಗ್ಗೆ ಚಳವಳಿಗಳಾಗಿವೆ.

ಸಂವಿಧಾನ ಪ್ರಕಾರ ರಾಜ್ಯದ ವಿಧಾನಾಂಗಕ್ಕೆ ಅದರ ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕಿಂತ ಹೆಚ್ಚಿನ ಅಧಿಕಾರಗಳು ದತ್ತವಾಗಿವೆ. ಬೇರೆ ಯಾವ ರಾಜ್ಯದಲ್ಲೂ ವಿಧಾನಾಂಗಕ್ಕೆ ಇಷ್ಟೊಂದು ಅಧಿಕಾರವಿಲ್ಲ. ಸೆನೆಟ್ ಸಭೆಯಲ್ಲಿ 31, ಪ್ರತಿನಿಧಿ ಸಭೆಯಲ್ಲಿ 150 ಸದಸ್ಯರಿದ್ದಾರೆ. ಕಾರ್ಯಾಂಗದ ಮುಖ್ಯಸ್ಥರು ರಾಜ್ಯಪಾಲ ಮತ್ತು ಉಪರಾಜ್ಯಪಾಲ. ರಾಜ್ಯದ ನ್ಯಾಯಾಂಗದಲ್ಲಿ ಮೂರು ಹಂತಗಳಿವೆ. ಮೇಲಿನ ಹಂತದಲ್ಲಿ ಎರಡು ಪರಮೋನ್ನತೆ ನ್ಯಾಯಾಲಯಗಳಿವೆ. ಒಂದು ಸಿವಿಲ್, ಇನ್ನೊಂದು ಕ್ರಿಮಿನಲ್. ಇವೆರಡು ಕಾರ್ಯಗಳಿಗೂ ಎರಡು ಪ್ರತ್ಯೇಕ ಪರಮೋನ್ನತ ನ್ಯಾಯಾಲಯವಿರುವುದು ಟೆಕ್ಸಸನ್ನು ಬಿಟ್ಟರೆ ಓಕ್ಲ ಹಾಮದಲ್ಲಿ ಮಾತ್ರ. ಎರಡನೆಯ ಹಂತದಲ್ಲಿ ಸಿವಿಲ್ ಅಪೀಲಿನ 11 ನ್ಯಾಯಾಲಯಗಳೂ ಕೆಳಗಿನ ಹಂತದಲ್ಲಿ ಸುಮಾರು 150 ಜಿಲ್ಲಾ ನ್ಯಾಯಾಲಯಗಳೂ ಇವೆ.

ಜನಸಂಖ್ಯೆ

[ಬದಲಾಯಿಸಿ]

ಈಗಿನ ಟೆಕ್ಸಸ್ ಪ್ರದೇಶದ ಜನಸಂಖ್ಯೆ 19ನೆಯ ಶತಮಾನದ ಆರಂಭದಲ್ಲಿ 6-7 ಸಾವಿರ ಇತ್ತೆಂದು ಕಾಣುತ್ತದೆ. 1850ರ ವೇಳೆಗೆ ಇದು 2,12,592ಕ್ಕೆ ಏರಿತು. 1900ರಲ್ಲಿ 30,48,710 ಆಗಿತ್ತು. 1970ರಲ್ಲಿ ಇದರ ಜನಸಂಖ್ಯೆ 1,11,96,730. ರಾಜ್ಯದಲ್ಲಿ 1960ರ ಜನಗಣತಿಯ ಪ್ರಕಾರ 83,74,831 ಬಿಳಿಯರೂ 12,04,846 ವರ್ಣೀಯರೂ ಇದ್ದರು. ಜನಸಾಂದ್ರತೆ ಚ.ಮೈ.ಗೆ 36.4 (1960). (ಅಮೆರಿಕ ಸಂಯುಕ್ತ ಸಂಸ್ಥಾನಗಳ ಜನಸಾಂದ್ರತೆ 49.6). ಹಿಂದೆ ಟೆಕ್ಸಸಿನಲ್ಲಿ ಗ್ರಾಮವಾಸಿಗಳ ಸಂಖ್ಯೆಯೇ ಅಧಿಕವಾಗಿತ್ತು. 1960ರಲ್ಲಿ ನಗರವಾಸಿಗಳು ಒಟ್ಟು ಜನಸಂಖ್ಯೆಯ 75% ಇದ್ದರು. (ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 69.9%).

ಶಿಕ್ಷಣ

[ಬದಲಾಯಿಸಿ]

ಟೆಕ್ಸಸಿನ ವಿಶ್ವವಿದ್ಯಾಲಯಗಳು ಇವು: ಟೆಕ್ಸಸ್ ವಿಶ್ವವಿದ್ಯಾಲಯ (1881), ಆಸ್ಟಿನ್ ; ಟೆಕ್ಸಸ್ ಕೃಷಿ ಮತ್ತು ಯಾಂತ್ರಿಕ ವಿಶ್ವವಿದ್ಯಾಲಯ (1876), ಕಾಲೇಜ್ ಸ್ಟೇಷನ್; ಉತ್ತರ ಟೆಕ್ಸಸ್ ವಿಶ್ವವಿದ್ಯಾಲಯ (1890), ಡೆಂಟನ್: ಟೆಕ್ಸಸ್ ಮಹಿಳಾ ವಿಶ್ವವಿದ್ಯಾಲಯ (1901), ಡೆಂಟನ್; ಟೆಕ್ಸಸ್ ದಕ್ಷಿಣ ವಿಶ್ವವಿದ್ಯಾಲಯ (1947), ಹ್ಯೂಸ್ಟನ್ : ರೈಸ್ ವಿಶ್ವವಿದ್ಯಾಲಯ (1912), ಹ್ಯೂಸ್ಟನ್; ಹ್ಯೂಸ್ಟನ್ ವಿಶ್ವವಿದ್ಯಾಲಯ (1934), ಹ್ಯೂಸ್ಟನ್.

ಕೃಷಿ, ಕೈಗಾರಿಕೆ

[ಬದಲಾಯಿಸಿ]

ಈ ರಾಜ್ಯದ ಮುಖ್ಯ ಬೆಳೆಗಳು ಹತ್ತಿ, ಬತ್ತ, ಗೋದಿ, ಸೋರ್ಗಂ, ಕುರಿ ಮತ್ತು ದನಕರುಗಳ ಸಾಕಣೆ ನಡೆಯುತ್ತದೆ. ದ್ರಾಕ್ಷಿ ಮತ್ತು ಕಿತ್ತಳೆಹಣ್ಣು, ಅನೇಕ ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತದೆ.

ಸಾರಿಗೆ ಉಪಕರಣ, ವಿಮಾನೋಪಕರಣ, ಅಲ್ಯೂಮಿನಿಯಂ, ರಾಸಾಯನಿಕ, ಪ್ಲಾಸ್ಟಿಕ್, ಕೃತಕ ರಬ್ಬರ್ ಇವು ಮುಖ್ಯ ಕೈಗಾರಿಕಾ ಉತ್ಪನ್ನಗಳು. ಉಕ್ಕಿನ ಕೈಗಾರಿಕೆಯೂ ಬೆಳೆದಿದೆ. ಹ್ಯೂಸ್ಟನ್ ನಗರ (12,32,802) (1970) ಕೈಗಾರಿಕೆಗಳ ಕೇಂದ್ರ.

ಖನಿಜ ಸಂಪತ್ತು

[ಬದಲಾಯಿಸಿ]

ಎಣ್ಣೆ ಮತ್ತು ನೈಸರ್ಗಿಕ ಅನಿಲ ಈ ರಾಜ್ಯದ ಮುಖ್ಯ ಖನಿಜ ಸಂಪತ್ತು: ಅಮೆರಿಕ ಸಂಯುಕ್ತಸಂಸ್ಥಾನಗಳ ಒಟ್ಟು ಉತ್ಪನ್ನದಲ್ಲಿ 1/2 ಭಾಗದಷ್ಟು ಇಲ್ಲಿ ಉತ್ಪತ್ತಿಯಾಗುತ್ತದೆ. ಟೆಕ್ಸಸ್ ಎರಡನೆಯ ಪ್ರಮುಖ ಖನಿಜ ಗಂಧಕ, ಟೆಕ್ಸಸ್ ಮತ್ತು ಲುವೂಸೀಯಾನದಲ್ಲಿ ಉತ್ಪತ್ತಿಯಾಗುವ ಗಂಧಕ, ಪ್ರಪಂಚದ ಒಟ್ಟು ಉತ್ಪಾದನೆಯಲ್ಲಿ 70%. ಪೊಟಾಷ್, ಕಬ್ಬಿಣ ಅದುರು, ಲಿಗ್ನೈಟ್, ಮ್ಯಾಂಗನೀಸ್ ಈ ರಾಜ್ಯದ ಇತರ ಖನಿಜಗಳು.

ಸಾರಿಗೆ, ಸಂಪರ್ಕ

[ಬದಲಾಯಿಸಿ]

ಟೆಕ್ಸಸ್ ರಾಜ್ಯದಲ್ಲಿ ಅನೇಕ ಪ್ರಮುಖ ರಸ್ತೆ ಮತ್ತು ರೈಲುಮಾರ್ಗಗಳಿವೆ. 2,00,000 ಮೈಲಿಗಳ ಸಾರ್ವಜನಿಕ ರಸ್ತೆಯಲ್ಲಿ 60,000 ಮೈ.ಗಳ ಉದ್ದದ ಹೆದ್ದಾರಿಗಳಿವೆ. ರೈಲುಮಾರ್ಗಗಳು 21,000 ಮೈ. ರಾಜ್ಯದಲ್ಲಿ ಸು. 700 ವಿಮಾನ ನಿಲ್ದಾಣಗಳಿವೆ.

ಟೆಕ್ಸಸ್ ರಾಜ್ಯದ ತೀರಪ್ರದೇಶಗಳಲ್ಲಿ 13 ಬಂದರುಗಳುಂಟು. ಹ್ಯೂಸ್ಟನ್, ಗಾಲ್ವೆಸ್ಟನ್ (61.809), ಕಪೋರ್ಟ್ ಆರ್ತರ್ (57,371), ಬೋಮಾಂಟ್ (1,15,919). ಆರೆಂಜ್ (24,459), ಕಾರ್ಪಸ್ ಕ್ರಿಸ್ಟೀ (2,04,525), ಬ್ರೌನ್ಸ್ ಮಿಲ್ (52,222), ಟೆಕ್ಸಸ್ ಸಿಟಿ (38,908), ಫ್ರೀಪೋರ್ಟ್ (11,997) ಮುಖ್ಯ ಬಂದರುಗಳು. (ಎಂ.ಎ.ಎಚ್.)

ಇತಿಹಾಸ

[ಬದಲಾಯಿಸಿ]

ಟೆಕ್ಸಸ್ ಪ್ರದೇಶದಲ್ಲಿ ನೆಲಸಿದ ಐರೋಪ್ಯರಲ್ಲಿ ಸ್ಟ್ಯಾನಿಷರು ಮೊದಲಿಗರು. 16 ಮತ್ತು 17ನೆಯ ಶತಮಾನಗಳಲ್ಲಿ ಪಿನೇಡ, ಕಾಬೇತಾ, ನಾರ್ವಾಯೇತ್ ಕೋರೊನಾದೋ ಮುಂತಾದ ಸ್ಟ್ಯಾನಿಷ್ ಸಾಹಸಿಗಳು ಚಿನ್ನವನ್ನು ಅರಸಿ ಟೆಕ್ಸಸ್ ನಲ್ಲೆಲ್ಲ ಓಡಾಡಿದರು. ಈ ಕಾಲದಲ್ಲಿ ಇಲ್ಲಿ ಸ್ಟ್ಯನಿಷರ ನೆಲೆಗಳು ಸ್ಥಾಪಿತವಾದುವು. ಕೋಟೆಗಳು ನಿರ್ಮಿತವಾದುವು. 200 ವರ್ಷಗಳ ಸ್ಪ್ಯಾನಿಷರ ಹತೋಟಿಯಲ್ಲಿ ಟೆಕ್ಸಸ್ ನಲ್ಲಿ ಅನೇಕ ಪಟ್ಟಣಗಳು ನಿರ್ಮಿತವಾದುವು. 1730ರ ಹೊತ್ತಿಗೆ ಸಾನ್ ಆಂಟೋನಿಯೋ ಎಂಬುದು ಐರೋಪ್ಯ ನಾಗರಿಕರ ಪ್ರಥಮ ನೆಲೆಯಾಯಿತು. ಆದರೂ ಸ್ಟ್ಯಾನಿಷರು ಅಲ್ಲಿ ಭದ್ರವಾಗಿ ತಳ ಊರಲಗಲಿಲ್ಲ. ಅನಂತರ ಆಂಗ್ಲೊ-ಅಮೆರಿಕನ್ನರು ಟೆಕ್ಸಸ್‍ಗೆ ಬಂದರು.

ಆಧುನಿಕ ಟೆಕ್ಸಸ್ ನ ಇತಿಹಾಸ 1821ರಿಂದ ಆರಂಭವಗುತ್ತದೆ. ಆ ವರ್ಷ ಮೆಕ್ಸಿಕೋ ದೇಶ ಸ್ಟೇನ್ ನಿಂದ ಸ್ವತಂತ್ರವಾಯಿತು. ಟೆಕ್ಸಸ್ ಮೆಕ್ಸಿಕೋ ದೇಶದ ಭಾಗವಾಗಿ ಉಳಿಯಿತು. ಮೊದಲು ಒಪ್ಪಂದದ ಪ್ರಕಾರ ಅಮೆರಿಕನರು ತಮಗೆ ಟೆಕ್ಸಸ್ ಮೇಲೆ ಯಾವ ಹಕ್ಕೂ ಇಲ್ಲವೆಂದು ಘೋಷಿಸಿದ್ದರು. ಮೋಸಸ್ ಆಸ್ಟಿನ್ ಎಂಬ ಆಮೆರಿಕನ್ ಪ್ರಜೆಯೊಬ್ಬ ಟೆಕ್ಸಸ್ ನಲ್ಲಿ 300 ಅಮೆರಿಕನ್ ಕುಟುಂಬಗಳು ನೆಲಸಲು ಮೆಕ್ಸಿಕನ್ ಸರ್ಕಾರದಿಂದ ಅಪ್ಪಣೆ ಪಡೆದ. 1821ರ ಡಿಸೆಂಬರಿನಲ್ಲಿ ಅವನ ಮರಣಾನಂತರ ಅವನ ಮಗ ಸ್ಟೀಫನ್ ಆಸ್ಟಿನ್ ಮೊದಲ ಬಾರಿಗೆ ಸ್ಯಾನ್ ಫಲೀಪೇ ಡೇ ಅಸ್ಟಿನ್ ಎಂಬಲ್ಲಿ ಶಾಶ್ವತವಾದ ಆಂಗ್ಲೊ-ಅಮೆರಿಕನ್ ನೆಲೆಯೊಂದನ್ನು ಸ್ಥಾಪಿಸಿದ. ಅಲ್ಲಿಂದಾಚೆಗೆ 15 ವರ್ಷಗಳಲ್ಲಿ 25,000 ದಿಂದ 30,000 ಜನ ಅಮೆರಿಕನ್ನರು ಟೆಕ್ಸಸ್ ಗೆ ಬಂದು ನೆಲಸಿದರು. ಅವರಲ್ಲಿ ಕೆಲವರು ತಮ್ಮ ಗುಲಾಮರನ್ನು ಟೆಕ್ಸಸ್ ಗೆ ಕರೆತಂದರು. 1829ರಲ್ಲೇ ಮೆಕ್ಸಿಕೋ ಸರ್ಕಾರ ಗುಲಮಗಿರಿಯನ್ನು ರದ್ದು ಮಾಡಿತು. ಫಲವತ್ತಾದ ಭೂಮಿ ಇದ್ದುದರಿಂದ ಪ್ಲಾಂಟೇಷನ್ಗಳನ್ನು ಸ್ಥಾಪಿಸಲು ಅಲ್ಲಿ ಒಳ್ಳೆಯ ಅವಕಾಶವಿತ್ತು. ಮೆಕ್ಸಿಕೋ ಸರ್ಕಾರದ ಕೇಂದ್ರದಿಂದ ಟೆಕ್ಸಸ್ ಬಹು ದೂರದಲ್ಲಿದ್ದದ್ದರಿಂದ ಅಮೆರಿಕನರು ಅಲ್ಲಿ ತಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದರು.

1824ರಲ್ಲಿ ಮೆಕ್ಸಿಕನ್ ಸಂಯುಕ್ತ ಗಣರಾಜ್ಯವನ್ನು ಸ್ಥಾಪಿಸಲಾಯಿತು. ಟೆಕ್ಸಸ್ ಅದರ ಒಂದು ಭಾಗವಾಯಿತು. 1835ರಲ್ಲಿ ಸಾಂತಾ ಆನಾ ಎಂಬವನು ಸಂಯುಕ್ತ ಗಣರಾಜ್ಯವನ್ನು ರದ್ದುಗೊಳಿಸಿ ಮೆದ್ಸಿಕೋದ ಸರ್ವಾಧಿಕಾರಿಯಾದ. ಇದನ್ನು ಒಪ್ಪದ ಟೆಕ್ಸಸ್ ಅಮೆರಿಕನರು ತಮ್ಮದೇ ಆದ ಸರ್ಕಾರ ರಚಿಸಿಕೊಂಡರು. ಉದಾರವಾದಿ ಮೆಕ್ಸಿಕನರೋಡಗೂಡಿ ಹೊಸ ರಾಜ್ಯ ಸ್ಥಾಪಿಸಲು ಬೆಂಬಲ ನೀಡಿದರು. ಸಾಂತಾ ಆನಾ ಟೆಕ್ಸಸ್ ಗೆ ಸೈನ್ಯ ಕಳುಹಿಸಿದ. ಯುದ್ಧ ಆರಂಭವಾಯಿತು. ಅಮೆರಿಕನರು ಜನರಲ್ ಸ್ಯಾಮ್ ಹ್ಯೂಸ್ಟನನ ನಾಯಕತ್ವದಲ್ಲಿ ಹೋರಾಡಿ ಸಾಂತಾ ಆನಾನ ಸೇನೆಯನ್ನು ಸೋಲಿಸಿ ಸ್ವಾತಂತ್ರ್ಯ ಘೋಷಿಸಿದರು. 1836ರಿಂದ 1845ರ ವರೆಗೆ ಟೆಕ್ಸಸ್ ಸ್ವತಂತ್ರ ಗಣರಾಜ್ಯವಾಗಿತ್ತು.ಸ್ಯಾಮ್ ಹ್ಯೂಸ್ಟನ್ ಅಧ್ಯಕ್ಷನಾದ. ಸಂವಿಧಾನವೊಂದು ರಚಿತವಾಯಿತು. ಗುಲಾಮಗಿರಿಯ ಸಮಸ್ಯೆಯಿಂದ ಅಮೆರಿಕದ ಉತ್ತರ ಪ್ರಾಂತ್ಯಗಳು ಟೆಕ್ಸಸ್ ನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಲು 1845ರ ವರೆಗೆ ಒಪ್ಪಲಿಲ್ಲ. ಆ ವರ್ಷ ಅದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಕ್ಕೂಟವನ್ನು ಸೇರಿತು. ಇದರಿಂದ ಮೆಕ್ಸಿಕೋ ದೇಶಕ್ಕೂ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೂ ನಡುವೆ ಯುದ್ಧ ನಡೆಯಿತು. ಕಡೆಗೆ ರೀಯೊ ಗ್ರಾಂಡ್ ನದಿ ಎರಡು ದೇಶಗಳ ನಡುವಣ ಗಡಿಯಾಯಿತು.

ಟೆಕ್ಸಸ್ ಅಮೆರಿಕ ಸಂಯುಕ್ತಸಂಸ್ಥಾನಗಳ ಒಕ್ಕೂಟದಲ್ಲಿ ಇರಬೇಕು, ಹೊರ ಬರಬೇಕೇ ಎಂಬ ವಿಚಾರದಲ್ಲಿ ಅನಂತರವೂ ವಾದ_ಪ್ರತಿವಾದಗಳು ನಡೆಯುತ್ತಲೇ ಇದ್ದುವು. ಎರಡು ಬಾರಿ ಟೆಕ್ಸಸ್ ಗನರಾಜ್ಯದ ಅಧ್ಯಕ್ಷನಾಗಿದ್ದ ಸ್ಯಾಮ್ ಹ್ಯೂಸ್ಟನ್ ಅಮೆರಿಕನ್ ಒಕ್ಕೂಟದ ಪರವಾಗಿದ್ದ. 1859ರಿಂದ 1861ರ ವರೆಗೆ ಅವನು ಟೆಕ್ಸಸಿನ ರಾಜ್ಯಪಾಲನಾಗಿದ್ದ. ಅಮೆರಿಕ ಅಂತರ್ಯುದ್ಧದ ಕಾಲದಲ್ಲಿ ಟೆಕ್ಸಸ್ ದಕ್ಷಿಣ ರಾಜ್ಯಗಳ ಮಂಡಲವನ್ನು ಸೇರಿ, ಒಕ್ಕೂಟದಿಂದ ಪ್ರತ್ಯೇಕವಾಯಿತು. ಅದುಮತ್ತೆ ಸಂಯುಕ್ತ ಸಂಸ್ಥಾನಗಳೊಡನೆ ಸೇರಿಕೊಂಡಿದ್ದು 1870ರಲ್ಲಿ.

1876ರಿಂದೀಚೆಗೆ ಟೆಕ್ಸಸ್ ನಲ್ಲಿ ಪಶುಪಾಲನೆಯ ಉದ್ಯೋಗ ಅಭಿವೃದ್ಧಿ ಹೊಂದಿತು. ಫಶುಪಾಲನ ಕ್ಷೇತ್ರಗಳಿಗೆ ತಂತಿ ಬೇಲಿ ಹಾಕುವ ಪದ್ಧತಿ ಜಾರಿಗೆ ಬಂದಿತು. ಕೆಲವು ವೇಳೆ ಶಾಲೆಗಳ, ಸಾರ್ವಜನಿಕರ ಭೂಮಿಯನ್ನು ಆಕ್ರಮಿಸಿಕೊಂಡು ದನಗಾಹಿಗಳು ಬೇಲಿ ಹಾಕುತ್ತಿದ್ದುದರಿಂದ, 1880ರ ದಶಕದಲ್ಲಿ ಘರ್ಷಣೆಗಳಾದುವು. ಇದನ್ನು ತಡೆಗಟ್ಟಲು ಟೆಕ್ಸಸ್ ಶಾಸನಸಭೆ ಶಾಸನವೊಂದನ್ನು ರಚಿಸಿತು. ರೈಲ್ವೆದಾರಿಗಳ ಬೆಳೆವಣಿಗೆಯಾಯಿತು. ಟೆಕ್ಸಸ್ ರಾಜ್ಯದ ಗಡಿಯನ್ನು ಅಂತಿಮವಾಗಿ ನಿರ್ಧರಿಸಲಾದ್ದು 1896ರಲ್ಲಿ. 1900ರ ವರೆಗೂ ವ್ಯವಸಾಯಪ್ರಧಾನವಾಗಿದ್ದ ಟೆಕ್ಸಸ್ ರಾಜ್ಯದಲ್ಲಿ ತೈಲ ನಿಕ್ಷೇಪ ಪತ್ತೆಯಾದ ಮೇಲೆ ಹೊಸ ಹೊಸ ಕೈಗಾರಿಕೆಗಳು ಬೆಳೆದುವು.

1914ರಲ್ಲೂ 1916ರಲ್ಲೂ ಫರ್ಗೂಸನ್ ಎಂಬವನು ಟೆಕ್ಸಸ್ ನ ಗವರ್ನರ್ ಆಗಿ ಚುನಾಯಿತನಾದ. ಈತ ಗೇಣಿದಾರರಿಗೆ ಅನುಕೂಲ ಮಾಡಿ ಕೊಟ್ಟು ಜನಪ್ರಿಯನಾದ. ಈತ ಪಾನನಿರೋಧ ವಿರೋಧಿಯಾಗಿದ್ದ. ಎರಡನೆಯ ಬಾರಿ ಚುನಾವಣೆಯಲ್ಲಿ ಗೆದ್ದ ಸ್ವಲ್ಪ ಕಾಲದಲ್ಲಿ ಟೆಕ್ಸಸಿನ ಸೆನೆಟ್ ಅವನನ್ನು ವಿಚಾರಣೆಗೆ ಒಳಪಡಿಸಿ ಮಹಾಭಿಯೋಗ ಮಾಡಿ ಅವನನ್ನೂ ತೆಗೆದುಹಾಕಿತು. 1924 ಮತ್ತು 1932ರಲ್ಲಿ ಆತನ ಹೆಂಡತಿ ಗವರ್ನರ್ ಆಗಿ ಚುನಾಯಿತಳಾದಳು. ಫರ್ಗೂಸನ್ ಗಳು 1940ರ ವರೆಗೂ ಟೆಕ್ಸಸ್ ರಾಜ್ಯದ ರಾಜಕೀಯದಲ್ಲಿ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರು.

1930ರಲ್ಲಿ ಟೆಕ್ಸಸ್‍ನ ಪೂರ್ವದಲ್ಲಿ ಎಣ್ಣೆ ದೊರೆಯಿತು. ಅದರಿಂದ ಉತ್ಪಾದನೆ ಅಧಿಕವಾಗಿ ಬೆಲೆ ತಗ್ಗಿತು. ರಾಜ್ಯ ಸರ್ಕಾರ ಅತ್ಯುತ್ಪಾದನೆಯನ್ನು ತಡೆಗಟ್ಟಲು. ಸಂಪನ್ಮೂಲವನ್ನು ಉಳಿಸಲು ಮತ್ತು ಗರಿಷ್ಠಮಟ್ಟದಲ್ಲಿ ಎಣ್ಣೆಬಾವಿಗಳನ್ನು ಉಪಯೋಗಿಸಿಕೊಳ್ಳಲು ಸೂಕ್ತ ಆಧಿನಿಯಮ ರಚಿಸಿತು. ಎರಡನೆಯ ಮಹಾ ಯುದ್ಧವಾದ ಮೇಲೆ ಟೆಕ್ಸಸಿನ ಆರ್ಥಿಕ ಬೆಳೆವಣಿಗೆ ಅಧಿಕವಾಗಿದೆ. ಪೆಟ್ರೋಲಿಯಂ ವಸ್ತುಗಳ ಮತ್ತು ನಿಸರ್ಗ ಅನಿಲ ಉತ್ಪಾದನೆಗಳ ಪ್ರಗತಿಯಾಗಿದೆ. ಅಮೆರಿಕದ ಅಧ್ಯಕ್ಷರಾಗಿದ್ದ (1963-68) ಎಲ್.ಬಿ. ಜಾನ್ಸನ್ ಟೆಕ್ಸಸ್ ರಾಜ್ಯದವರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

[ಬದಲಾಯಿಸಿ]
  1. "Metropolitan and Micropolitan Statistical Area Estimates". US Census. 2007-04-04. Retrieved 2008-04-28.
  2. "Environment" (2008–2009 ed.). Texas Almanac. 2008. Archived from the original on 2008-03-17. Retrieved 2008-04-29.
  3. "2010 Resident Population Data: Population Change". US Census. Archived from the original on 2010-12-27. Retrieved 2010-Dec-21. {{cite web}}: Check date values in: |accessdate= (help)
  4. "2010 Resident Population Data: Population Density". US Census. Archived from the original on 2011-10-28. Retrieved 2010-Dec-21. {{cite web}}: Check date values in: |accessdate= (help)
  5. ೫.೦ ೫.೧ "Elevations and Distances in the United States". U.S Geological Survey. April 29, 2005. Archived from the original on 2011-10-15. Retrieved 2006-11-08.


"https://kn.wikipedia.org/w/index.php?title=ಟೆಕ್ಸಸ್&oldid=1253502" ಇಂದ ಪಡೆಯಲ್ಪಟ್ಟಿದೆ