ಟಾಟಾ ಟೆಕ್ನಾಲಜೀಸ್
ಸಂಸ್ಥೆಯ ಪ್ರಕಾರ | ಸಾರ್ವಜನಿಕ, ಅಂಗಸಂಸ್ಥೆ |
---|---|
ಸ್ಥಾಪನೆ | ೧೯೮೯ |
ಮುಖ್ಯ ಕಾರ್ಯಾಲಯ | ಪುಣೆ, ಮಹಾರಾಷ್ಟ್ರ, ಭಾರತ |
ಪ್ರಮುಖ ವ್ಯಕ್ತಿ(ಗಳು) | ವಾರೆನ್ ಹ್ಯಾರೀಸ್ (ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ನಿರ್ವಾಹಕ ನಿರ್ದೇಶಕ)[೧] |
ಸೇವೆಗಳು | |
ಆದಾಯ | ೫೨೩೩ ಕೋಟಿ (೨೦೨೪)[೫] |
ಆದಾಯ(ಕರ/ತೆರಿಗೆಗೆ ಮುನ್ನ) | ೯೩೨ ಕೋಟಿ (೨೦೨೪)[೫] |
ನಿವ್ವಳ ಆದಾಯ | ೭೨೭ ಕೋಟಿ (೨೦೨೪)[೫] |
ಉದ್ಯೋಗಿಗಳು | ೧೧,೦೦೦ (೨೦೨೩) |
ಪೋಷಕ ಸಂಸ್ಥೆ | ಟಾಟಾ ಮೋಟರ್ಸ್ (೫೩.೩೯% ಪಾಲುದಾರಿಕೆ)[೬] |
ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಭಾರತೀಯ ಮೂಲದ, ಬಹುರಾಷ್ಟ್ರೀಯ ಉತ್ಪನ್ನ ಎಂಜಿನಿಯರಿಂಗ್ ಕಂಪನಿಯಾಗಿದ್ದು, ಇದು ಎಂಜಿನಿಯರಿಂಗ್ ಮತ್ತು ವಿನ್ಯಾಸ, ಉತ್ಪನ್ನ ಜೀವನಚಕ್ರ ನಿರ್ವಹಣೆ, ಉತ್ಪಾದನೆ, ಉತ್ಪನ್ನ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಇದಲ್ಲದೆ ವಾಹನೋದ್ಯಮಗಳಿಗೆ ಮಾಹಿತಿ ತಂತ್ರಜ್ಞಾನ ಸೇವಾ ನಿರ್ವಹಣೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಮೂಲ ಉಪಕರಣಗಳ ತಯಾರಕರಾಗಿ, ಮತ್ತು ಕೈಗಾರಿಕಾ ಯಂತ್ರೋಪಕರಣಗಳ ಕಂಪನಿಗಳಿಗೆ ಸೇವೆಗಳನ್ನು ಒದಗಿಸುತ್ತದೆ.[೭][೮] ಇದು ಟಾಟಾ ಮೋಟಾರ್ಸ್ ಅಂಗಸಂಸ್ಥೆಯಾಗಿದೆ. .[೯]
ಟಾಟಾ ಟೆಕ್ನಾಲಜೀಸ್ ತನ್ನ ಪ್ರಧಾನ ಕಛೇರಿಯನ್ನು ಪುಣೆ ಯಲ್ಲಿ ಹೊಂದಿದೆ. ವಿದೇಶದಲ್ಲಿನ ಪ್ರಾದೇಶಿಕ ಪ್ರಧಾನ ಕಛೇರಿಯು ಅಮೇರಿಕಾದ ಡೆಟ್ರಾಯಿಟ್, ಮಿಚಿಗನ್‌ನಲ್ಲಿ ಇದೆ. 2023 ರ ಹೊತ್ತಿಗೆ, ಕಂಪನಿಯು ಭಾರತ, ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾ-ಫೆಸಿಫಿಕ್ ದೇಶಗಳ 18 ವಿತರಣಾ ಕೇಂದ್ರಗಳಲ್ಲಿನ ಉದ್ಯೋಗಿಗಳೂ ಸೇರಿ ಒಟ್ಟು 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.[೧೦][೧೧]
ಇತಿಹಾಸ
[ಬದಲಾಯಿಸಿ]ಟಾಟಾ ಟೆಕ್ನಾಲಜೀಸ್ ಅನ್ನು 1989 ರಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ವಾಹನ ವಿನ್ಯಾಸ ಘಟಕವಾಗಿ ಸ್ಥಾಪಿಸಲಾಯಿತು.[೧೨] 1994ರಲ್ಲಿ ಇದನ್ನು ಪ್ರತ್ಯೇಕ ಕಂಪನಿಯಾಗಿ ವಿಭಜಿಸಲಾಯಿತು, ಟಾಟಾ ಮೋಟಾರ್ಸ್ ಬಹುಪಾಲು ಪಾಲನ್ನು ಉಳಿಸಿಕೊಂಡಿತು ಮತ್ತು ಅದರ ಅತಿದೊಡ್ಡ ಗ್ರಾಹಕನಾಗಿ ಮುಂದುವರಿಯಿತು.[೧೩]
ಸ್ವಾಧೀನ ವಿವರಗಳು
[ಬದಲಾಯಿಸಿ]ಟಾಟಾ ಟೆಕ್ನಾಲಜೀಸ್ ಇಂಕ್, 2005ರ ಆಗಸ್ಟ್ನಲ್ಲಿ, ಯುಕೆ ಮತ್ತು ಯುಎಸ್ ಮೂಲದ ಆಟೋಮೋಟಿವ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಕಂಪನಿಯಾದ ಐಎನ್ಸಿಎಟಿ ಇಂಟರ್ನ್ಯಾಷನಲ್ ಅನ್ನು 53.4 ದಶಲಕ್ಷ ಪೌಂಡ್ಗಳಿಗೆ ಸ್ವಾಧೀನಪಡಿಸಿಕೊಂಡಿತು.[೧೪]
2011ರಲ್ಲಿ, ಟಾಟಾ ಟೆಕ್ನಾಲಜೀಸ್ ಸಂಸ್ಥೆಯು ತನ್ನ 13% ಪಾಲನ್ನು ಟಾಟಾ ಕ್ಯಾಪಿಟಲ್ ಮತ್ತು ಆಲ್ಫಾ ಟಿಸಿ ಹೋಲ್ಡಿಂಗ್ಸ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ೧೪೧ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು.[೧೫]
ಏಪ್ರಿಲ್ 2013 ರಲ್ಲಿ, ಟಾಟಾ ಟೆಕ್ನಾಲಜೀಸ್ ಅಮೆರಿಕನ್ ಎಂಜಿನಿಯರಿಂಗ್ ಸೇವಾ ಕಂಪನಿಯಾದ ಕ್ಯಾಂಬ್ರಿಕ್ ಕಾರ್ಪೊರೇಷನ್ ಅನ್ನು $32.5 ಮಿಲಿಯನ್ಗೆ ಸ್ವಾಧೀನಪಡಿಸಿಕೊಂಡಿತು.[೧೬]
ಮೇ 2017 ರಲ್ಲಿ, ಟಾಟಾ ಟೆಕ್ನಾಲಜೀಸ್ ಸ್ವೀಡಿಷ್ ಆಟೋಮೋಟಿವ್ ಡಿಸೈನ್ ಮತ್ತು ಉತ್ಪನ್ನ ಎಂಜಿನಿಯರಿಂಗ್ ಕಂಪನಿಯಾದ ಎಸ್ಸೆಂಡಾ ಎಂಜಿನಿಯರಿಂಗ್ ಎಬಿ ಯಲ್ಲಿ 100% ಪಾಲನ್ನು ಸ್ವಾಧೀನಪಡಿಸಿಕೊಂಡಿತು.[೧೭]
2017ರಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ಸಾಲವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಟಾಟಾ ಗ್ರೂಪ್ ಟಾಟಾ ಟೆಕ್ನಾಲಜೀಸ್‌ನಲ್ಲಿನ ತನ್ನ 43% ಪಾಲನ್ನು ಖಾಸಗಿ ಇಕ್ವಿಟಿ ಸಂಸ್ಥೆ ವಾರ್ಬರ್ಗ್ ಪಿಂಕಸ್ ಸಂಸ್ಥೆಗೆ $360 ದಶಲಕ್ಷಕ್ಕೆ ಮಾರಾಟ ಮಾಡುವುದಾಗಿ ಘೋಷಿಸಿತು ಮತ್ತು ಕಂಪನಿಯಲ್ಲಿನ ನಿಯಂತ್ರಕ ಷೇರುದಾರಿಕೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿತು.[೧೮] ಆದರೆ, 2018ರಲ್ಲಿ ಒಪ್ಪಂದವನ್ನು ರದ್ದುಪಡಿಸಲಾಯಿತು.[೧೯]
ನವೆಂಬರ್ 2023 ರಲ್ಲಿ, ಟಾಟಾ ಟೆಕ್ನಾಲಜೀಸ್ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಘೋಷಿಸಿತು. ಸುಮಾರು ೩,೦೪೨ ಕೋಟಿ ಮೌಲ್ಯದ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಭಾರತೀಯ ಶೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಇದು ಸುಮಾರು ಎರಡು ದಶಕಗಳ ನಂತರ ಟಾಟಾ ಬಳಗದ ಮೊದಲ ಸಾರ್ವಜನಿಕ ಕೊಡುಗೆಯಾಗಿದೆ.[೨೦] ಇದರ ಷೇರುಗಳು ಎನ್ಎಸ್ಇ ಮತ್ತು ಬಿಎಸ್ಇಯಲ್ಲಿ 30 ನವೆಂಬರ್ 2023 ರಂದು ವಹಿವಾಟು ಪ್ರಾರಂಭಿಸಿದವು.[೨೧]
ಉಲ್ಲೇಖಗಳು
[ಬದಲಾಯಿಸಿ]- ↑ "Tata Tech eyes acquisitions, 69% growth to nearly $800 mn by 2025". Business Standard. 10 June 2022. Retrieved 11 May 2023.
- ↑ Gopalan, Krishna (22 May 2009). "Tata Tech eyes $1b revenue in seven years: Patrick McGoldrick". The Economic Times. Retrieved 11 May 2023.
- ↑ "Tata Tech looking for buys up to $50 m". The Hindu Businessline (in ಇಂಗ್ಲಿಷ್). 25 March 2014. Retrieved 11 May 2023.
- ↑ "Tata Technologies to hire 400 people by March 2012". The Economic Times. 26 June 2011. Retrieved 11 May 2023.
- ↑ ೫.೦ ೫.೧ ೫.೨ "29th Annual Report 2022-23" (PDF). Tata Technologies. Archived from the original (PDF) on 3 ಮೇ 2024. Retrieved 4 May 2024.
- ↑ Agarwal, Nikhil (22 November 2023). "Tata Tech IPO: Tata Motors to take home Rs 2,300 crore against Rs 34 crore investment". The Economic Times. Retrieved 23 November 2023.
- ↑ Srivastava, Moulishree (26 March 2014). "Tata Technologies plans to open more centres in India". mint (in ಇಂಗ್ಲಿಷ್). Retrieved 11 May 2023.
- ↑ Kalesh, Baiju; Shah, Sneha (7 April 2015). "Tata Motors and Tata Capital are looking to sell their 90% stake in Tata Technologies". The Economic Times. Retrieved 11 May 2023.
- ↑ Baggonkar, Swaraj (16 June 2022). "Tata Technologies to hire more amid talent crunch". The Hindu Businessline (in ಇಂಗ್ಲಿಷ್). Retrieved 11 May 2023.
- ↑ "Tata Motors arm Tata Technologies files draft IPO papers with Sebi". Business Today (in ಇಂಗ್ಲಿಷ್). 10 March 2023. Retrieved 11 May 2023.
- ↑ Shinde Nadhe, Shivani (20 September 2014). "Tata Technologies: Acquisitions key for $1-bn revenue target". Business Standard. Retrieved 4 July 2023.
- ↑ "Tata Tech eyes $250m buys to hit $1bn sales". The Times of India. 23 February 2015. Retrieved 11 May 2023.
- ↑ "PEs vie for $520 million Tata Tech stake". The Times of India. 22 April 2015. Retrieved 11 May 2023.
- ↑ "Tatas to acquire INCAT International". Rediff. 18 August 2005. Retrieved 21 January 2013.
- ↑ "Tata Tech sells 13% stake for Rs 141 cr to Alpha TC, TCGF". The Economic Times. 3 May 2011. Retrieved 11 May 2023.
- ↑ "Tata Technologies to acquire US-based firm Cambric for $32.5 million". The Economic Times. 26 April 2013. Retrieved 11 May 2023.
- ↑ "Tata Technologies acquires Swedish Escenda Engineering". Economic Times (in ಇಂಗ್ಲಿಷ್). Retrieved 2 December 2023.
- ↑ Ghoshal, Devjyot (19 June 2017). "Tata Technologies: One of the best-kept secrets of the Tata Group is leaving the mothership". Quartz (in ಇಂಗ್ಲಿಷ್). Retrieved 11 May 2023.
- ↑ Susmit, Sneh (5 February 2018). "Warburg Pincus, Tata Motors call off $360 million stake sale in Tata Technologies". mint (in ಇಂಗ್ಲಿಷ್). Retrieved 11 May 2023.
- ↑ Sen, Meghna (November 22, 2023). "Tata Technologies IPO opens: Should you bet on the Tata group's first IPO in 20 years". CNBC TV18.
- ↑ "Tata Technologies makes bumper D-st debut; lists at 140% premium at Rs 1,200". Business Today (in ಇಂಗ್ಲಿಷ್). 30 November 2023. Retrieved 2 December 2023.