ವಿಷಯಕ್ಕೆ ಹೋಗು

ಟ. ಎಸ್. ಮಂಜುಳಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[]

ಟಿ. ಎಸ್. ಮಂಜುಳಮ್ಮ

[ಬದಲಾಯಿಸಿ]

ಪರಿಚಯ

[ಬದಲಾಯಿಸಿ]

ವೃತ್ತಿರಂಗ ಮತ್ತು ಹವ್ಯಾಸಿ ರಂಗಗಳೆರಡರಲ್ಲೂ ಬಣ್ಣ ಹಚ್ಚಿಕೊಂಡು, ನಿಜ ಜೀವನದಲ್ಲಿ ಬಡತನದ ಎಲ್ಲೆ ದಾಟಿ ನಿಂತ ನಟನಟಯರು ತುಂಬ ವಿರಳ. ಚಲನಚಿತ್ರೋದ್ಯಮ ಬೆಳೆದ ಮೇಲಂತೂ, ನಾಟಕ ರಂಗವನ್ನೇ ನೆಚ್ಚಿನಿಂತ ನಟನಟಯರಿಗೆ ದಾರಿದ್ರದ ರೇಖೆ ದಾಟುವುದೇ ಕಷ್ಟವಾಗಿದೆ. ಇಂತಹ ಪರಿಸ್ತಿತಿಯಲ್ಲೂ ನಾಟಕಗಳಲ್ಲಿ ಪಾತ್ರ ನಿರ್ವಹಿಸುವುದೆನ್ನೇ ವೃತ್ತಿಯಾಗಿಟ್ಟುಕೊಂಡು ಪ್ರೇಕ್ಶಕರನ್ನು ರಂಜಿಸುವ ನಟ ಶ್ರೀಮತಿ ಟಿ. ಎಸ್. ಮಂಜುಳಮ್ಮ . ಮೂಲತಃ ಶೃಂಗೇರಿಯವರಾದ ಇವರ ತಂದೆ ಸುಂದರರಾಜ್, ರೈಲ್ವೆ ನೊವ್ ಕರಿ ಹಿಡಿದು ಬೆಂಗಳೂರಿಗೆ ಬಂದು ನೆಲಸಿದರು. ನೊವ್ ಕರಿ ಬಿಟ್ಟು ವ್ಯಾಪಾರೋದ್ಯಮ ಕೈಗೊಂಡರು. ದುರದೃಷ್ಟವಶಾತ್ ಮಧ್ಯವಯಸ್ಸಿನಲ್ಲೆ ನಿಧನರಾದರು. ತಾಯಿ ಲಲಿತಮ್ಮ ತುಂಬ ದೈವಭಕ್ತೆ. ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕಳು. ಮಂಜುಳಾ ಹಿರಿ ಮಗಳು ಪೂರ್ಣಿಮಾ ಕಿರಿಯವಳು. ಈ ಪುಟ್ಟ ಮಕ್ಕಳನ್ನು ಸಾಕಿ ಸಲಹುವ ಹೊಣೆ ಅವರದಾಯಿತು. ಕುಟುಂಬವಿಡೀ ಮೈಸೂರಿಗೆ ವಲಸೆ ಹೋಯಿತು. ಆಗ ಮಂಜುಳಾ ಎಂಟು ವರ್ಷದ ಹುಡುಗಿ.

ವಂಶಪಾರಂಪರ್ಯವಾಗಿ ಒಲಿದು ಬಂದಿದ್ದ "ಗಾಂಧರ್ವ ಸಂಸ್ಕಾರ" ಮಂಜುಳಾಗೆ ಆಸ್ತಿಯೇ ಆಗಿತ್ತು. ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ ಹುಡುಗಿ, ಪ್ರಸಿದ್ದ ಹಿನ್ನೆಲೆ ಗಾಯಕರೂ, ಚಿತ್ರ ಸಂಗೀತ ನಿರ್ದೇಶಕರು ಆಗಿದ್ದ "ಕೆ. ಸಿ. ಡೇ." ಮತ್ತು "ಪಂಕಜ್ ಮಲ್ಲಿಕ್" ಅವರುಗಳು ಹಾಡಿದ್ದ ಕೆಲವು ಚಿತ್ರಗಿತೇಗಳನ್ನು ಸೊಗಸಾಗಿ ಹಾಡುತ್ತಿದ್ದಳು. ಮೈಸೂರು ಶಿವರಾಮಪೇಟೆಯ ಅವಲಕ್ಕಿ ವೆಂಕಟಸ್ಪನವರ ಬೀದಿಯ ನಿವಾಸಿಗಳಿಗೆಲ್ಲ ಮಂಜುಳಾ ಆಗಲೇ ಗಾಯಕಿಯಾಗಿ ಸುಸರಿಚಿತೆಯಾಗಿಬಿಟ್ಟಿದ್ದಳು. ಮೈಸೂರಿನಲ್ಲಿ ಆಗು ನಡೆಯುತ್ತಿದ್ದ ಹಲವಾರು ಸಭೆ ಸಮಾರಂಭಗಳಲ್ಲಿ ಗಣೇಶೋತ್ಸವ, ಶಂಕರ ಜಯಂತಿ ಮೊದಲಾದ ಉತ್ಸವಗಳಲ್ಲಿ ಕುಮಾರಿ ಮಂಜುಳ ಅವರಿಂದಲೇ ಪ್ರಾರ್ಥನೆ ಹಾಡಿಸುವ ವಾಡಿಕೆ ಬಂತು.

ವೃತ್ತಿ

[ಬದಲಾಯಿಸಿ]

ಮೈಸೂರು ಮೂವಿತೋನ್ಸ್ ಸ್ಟುಡಿಯೋದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಂಜುಳಾ ಹಿನ್ನೆಲೆ ಗಾಯಕಿಯಾಗಿ ಸೇವೆ ಸಲ್ಲಿಸಿದರು. ''ಕಾಂಟ್ರಾಕ್ಟ್ಗೆ ಸಹಿ ಮಾಡಬೇಕೆಂಬ ಮಾಲೀಕರು ಷರತ್ತಿಗೆ ಹೆದರಿ ಯಾವ ಪ್ರತಿಫಲವನ್ನೂ ಪಡೆಯದೆ ಉದ್ಯೋಗ ಕೈ ಬಿಟ್ಟರು.

ಯಜಮಾನನಿಲ್ಲದ ಕುಟುಂಬ ಬಡತನದ ಕೋಟಲೆ ಇದನ್ನೆಲ್ಲ ಕಂಡ ನೆರೆಹೊರೆಯವರು ಲಲಿತಮ್ಮನವರ ಕುಟುಂಬಕ್ಕೆ ತೋರುತ್ತಿದ್ದ ಅನುಕಂಪವನ್ನು ಮಂಜುಳಾ ಈಗಲು ಕಣ್ಣು ಒದ್ದೆ ಮಾಡಿಕೊಂಡು ಸ್ಮರಿಸುತ್ತಾರೆ. ಆ ಸಮಯದಲ್ಲಿ ಕಾಗೆ ಶ್ಯಾಮರಾವ್ ಎಂಬ ಕಲಾವಿದರೊಬ್ಬರು ಇವರ ಮನೆಗೇ ಬಂದು ಅಮೆಚೂರ ನಾಟಕ ಸಂಸ್ಥೆಯೊಂದಕ್ಕೆ ಕರೆದೊಯ್ದು ನಟಿಯಾಗಿ ಸೇರಿಸಿದ್ದನ್ನು ಪ್ರತಿದಿನ ದೇವರ ಪೂಜೆ ಮಾಡುವಾಗಲೂ ನೆನೆಸಿಕೊಳ್ಳುವುದಾಗಿ ಹೇಳುತ್ತಾರೆ ಮಂಜುಳಮ್ಮ ಜೀವನ ನಿರ್ವಹಣೆಗೆ ಮತ್ತು ಖ್ಯಾತಿಗೆ ಕಾರಣವಾದಂತಹ ಉದ್ಯೋಗ ಹಾಗೂ ವೃತ್ತಿಯನ್ನೇ ತೋರಿಕೊಟ್ಟವರನ್ನು ಎಂದಾದರೂ ಮರೆಯಲಾದೀತೇ ಆ ನಾಟಕ ಸಂಸ್ಥೆಯ ವ್ಯವಸ್ಥಾಪಕರು ಹುಡುಗಿಯ ಕೈಯಲ್ಲಿ ಹಾಡಿಸಿ ನೋಡಿದರು. ಸಂಭಾಷಣೆಗಳನ್ನು ಹೇಳಿಕೊಟ್ಟು ಭಾವಭಂಗಿಗಳೊಡನೆ ಪುನರುಚ್ಚರಿಸುವಂತೆ ಹೇಳಿದರು. ಅವರಿಗೆ ಮೆಚ್ಚುಗೆಯಾಯಿತು. ಮೈಸೂರು ಚೊವ್ಡಮ್ಮ ಎಂಬ ಕಲಾವಿದೆ ಮಂಜುಳಮ್ಮನವರಿಗೆ ಗುರುವಾದರು. ಅವರ ಬಳಿ ಅಭಿನಯ, ಹಾಡಗಾರಿಕೆಗಳ ತರಬೇತಿ ಆಯಿತು. ಆ ಕಂಪನಿಯಲ್ಲಿ ಅಭಿನಯಿಸಿದ ಪ್ರಥಮ ಪಾತ್ರ " ಮಾಯಾ ಹಿಡಂಬಿ" , ಕಾಗೆ ಶ್ಯಾಮರಾಯರೇ ಭೀಮನ ಪಾತ್ರ. ಭೀಮನನ್ನುದ್ದೇಶಿಸಿ ಮಾಯಾ ಹಿಡಂಬಿ ಹಾಡುವ "ಮಾರಮೋಹನಾಂಗನೇ" ಹಾಡನ್ನು ಸೊಗಸಾಗಿ ಹಾಡಿದರು, ಪ್ರೆಕ್ಶಕವರ್ಗ ಒಟ್ಟಗೇ ಒನ್ಸ್ವೇರ ಎಂನುದರ ಅರ್ಥಕೊಂಡು ತಿಳಿಯದು. ಬೆಚ್ಚಿಬಿದ್ದು ನೇಪಥ್ಯಕ್ಕೆ ಹಾರಿ ಹೋದಳು.

ಮೊದಲೇ ಪರಿಚಯವಿದ್ದ ಭೀಮ ಪ್ರಾತ್ರಧಾರಿ ಶ್ಯಾಮರಾಯರು ಸಮಯೋಚಿತವಾಗಿ ಅಭಿನಯಿಸಿ ಮಾಯಾ ಹಿಡಂಬಿಯನ್ನು ಎತ್ತಿಕೊಂಡು ಬಂದು ರಂಗದ ಮೇಲೆ ನಿಲ್ಲಿಸಿ ಪಿಸುಮಾತಿನಲ್ಲಿ ಹೆದರಬೇಡ ಮತ್ತೊಮ್ಮೆ ಹಾಡು ಎಂದು ಹೇಳಿ ಪ್ರೋತ್ಸಾಹಿಸಿದರು. ಹೊಸದಾಗಿ ರಂಗಪ್ರವೇಶ ಮಾಡಿದ ಯಾರೇ ಆಗಲಿ, ಮೊಟ್ಟಮೊದಲಿಗೆ ಮಾರ್ಗದರ್ಶನವನ್ನು ನೀಡಿದವರನ್ನು ಮರೆಯುವುದು ಸಾಧ್ಯವಾದೀತೆ? ಈ ಕಂಪನಿಯ ನಾಟಕಗಳನ್ನು ನೋಡಲು ಆಗಮಿಸಿದ್ದ ಮಾರುತಿ ಲಲಿತಕಲಾ ಸಂಘದ ಮಾಲೀಕರಾಗಿದ್ದ ಶ್ರೀಮತಿ ಮುನಿಲಕ್ಶ್ಮಾಸಾನಿಯವರು ಮಂಜುಳಮ್ಮನವರ ಹಾಡುಗಾರಿಕೆ ಆಭಿನಯ ಚಾತುರ್ಯಗಳನ್ನು ಮೆಚ್ಚಿ ಈಕೆಯನ್ನು ತಮ್ಮ ಸಂಘಕ್ಕೆ ಹಾರಿಸಿಕೊಂದು ಹೋದರು. ತಾಯಿ ಲಲಿತಮ್ಮನವರಲ್ಲಿ ಬೇಡಿಕೊಂಡು ೧೫ರೂ ತಲುಬಿನ ಮೇಲೆ ಕಂಪನಿ ನಟಳಾಗಿ ಸೇರಿಸಿಕೊಂಡರು.

ಯಶಸ್ಸು

[ಬದಲಾಯಿಸಿ]

ಅವರ ಕಂಪನಿಯಲ್ಲಿ "ಕ್ರ್ರಷ್ಣ ಲೀಲೆ" ಯ ಕ್ರಷ್ಣ, " ಕಬೀರದಾಸ್" ನಾಟಕದ ಕಮಾಲ್, " ಪಹ್ಲ್ಲಾದ " ಹಾಗೂ ಬಾಲಬೋಜನ ಪಾತ್ರಗಳನ್ನು ಯಶಸ್ವಿಯಾಗಿ ಪ್ರೆಕ್ಷಕರ ಮನಮೆಚ್ಚುವಂತೆ ಆಭಿನಯಿಸುತ್ತಿದ್ದರು ಮಂಜುಳಾ. ಆ ಕಂಪನಿ ಕೊಳ್ಳೇಗಾಲ ತಾಲ್ಲೂಕಿನ ಮಧುವನ ಹಳ್ಳಿಯಲ್ಲಿ ಮೊಕ್ಕಾಂ ಹೂಡಿತ್ತು. ಇದ್ದಕ್ಕಿದ್ದಂತೆ ಆ ಸುತ್ತಮುತ್ತಲ ಕಾಲರಾ ವ್ಯಾಧಿ ಹಬ್ಬಿತು . ನಾಟಕಗಳು ಆರಂಭವೇ ಆಗಲಿಲ್ಲ. ಅಲ್ಲಿಗೆ ಮಂಜುಳಮ್ಮ ಮತ್ತು ಮಾರುತಿ ಲಲಿತಕಲಾ ಸಂಘದ ಋಣ ಹರಿದುಬಿತ್ತು.

ಆ ವೇಳೆಗೆ ಸರಿಯಾಗಿ ಕ್ರಷ್ಣ ರಾಜ ನಗರದಲ್ಲಿ ಎಡತೊರೆ ಕಂಪನಿ ಎಂಬ ನಾಟಕ ಸಂಸ್ಥೆ ಹೆಸರುವಾಸಿಯಾಗಿತ್ತು. ರಾಮಶೆಟ್ಟ, ಸುಬ್ಬ ಶೆಟ್ಟ ಸೋದರರು ಈ ಕಂಪನಿಯ ಮಾಲೀಕರು. ಆ ಕಂಪನಿಯಲ್ಲಿ ಈಗ ಚಿತ್ರ ರಂಗದಲ್ಲಿ ಖ್ಯಾತನಾಮರಾಗಿರುವ ಜಿ. ವಿ. ಅಯ್ಯರ , ಮೊರೆ - ಭಗವಾನ್ , ಬಾಲಕೃಷ್ಣ , ನರಸಿಂಹರಾಜು ಮೊದಲಾದವರು ಪಾತ್ರ ವಹಿಸುತ್ತಿದ್ದರು. ಅಣ್ಣ ಬಿ. ಎಸ್. ರಾಜಾರಾವ್ ಜತೆಗೆ ತಂಗಿ ಈ ಕಂಪನಿ ಸೇರಿಕೊಂಡು. ಮೈಲಾರಯ್ಯ - ರಾಜಾರಾವ್ ಮನೆಯಲ್ಲಿ ಕರೆಯುತ್ತಿದ್ದ ಹೆಸರು. ಅವರು ಗೇಟ್ ಕೀಪರ , ಮಂಜುಳಾ ಬಾಲಪಾತ್ರಗಳ ನಟ. ಈ ಕಂಪನಿಯಲ್ಲಿ ಬಾಲಪಾತ್ರಗಳ ಜತೆಗೆ ಆಗಾಗ ಸಖಿ ಮೊದಲಾದ ಪೋಷಕ ಸ್ತ್ರಿ ಪಾತ್ರಗಳನ್ನು ನಿರ್ವಹಿಸಬೇಕಾಗಿದೆ. ಅವಕಾಶಗಳು ಲಭಿಸುತು. ಯಾವ ಪಾತ್ರವೇ ಆಗಲಿ ಚೊಕ್ಕವಾಗಿ ಅಭಿನಯಿಸುವ ಶ್ರದ್ದಾವಂತ ನಟನೆಗೆ ಎಲ್ಲರ ಮೆಚ್ಚುಗೆ ಆನಾಯಾಸವಾಗಿ ಲಭಿಸಿದ್ದರಲ್ಲಿ ವಿಶೇಷವೇನೂ ಇಲ್ಲ. ಹಾಸನದ ಜಾತ್ರೆ ಈ ಕಂಪನಿಯ ಪ್ರದಾನ ಮೊಕ್ಕಾಂ. ಅಲ್ಲಿಂದ ಮುಂದೆ ಕಡೂರು ಕ್ಯಾಂಪ್. ಇವೆರಡು ಮೊಕ್ಕಾಂ ಮುಗಿಯಲು ಒಂದು ವರ್ಷ ಸಂದಿತ್ತು. ಮೈಸೂರಿಗೆ ಮರಳಿದ ಮಂಜುಳಾ ಅವರಿಗೆ ಮತ್ತೊಂದು ಕಂಪನಿಯ ಆಹ್ವಾನ ಕಾದಿತ್ತು.

ಜೆಟ್ಟಪ್ಪನವರ ಕಂಪನಿ ಮೈಸೂರಿನಲ್ಲಿ " ಟಿಪ್ಪು ಸುಲ್ತಾನ್ " ನಾಟಕ ಪ್ರದರ್ಶಿಸುತ್ತಿತ್ತು. ಮಂಜುಳಾ ಟಿಪ್ಪು ಪುತ್ರನ ಪಾತ್ರಕ್ಕೆ ನೇಮಕಗೊಂಡರು. ಆರು ತಿಂಗಳಕಾಲ ಸತತವಾಗಿ ಈ ನಾಟಕ ಪ್ರದರ್ಶನ ನಡೆಯಿತು. ಈ ನಾಟಕ ಮಾಲೀಕರ ಜೆಟ್ಟಪ್ಪನವರ ಪ್ರೋತ್ಸಾಹದಿಂದ ಮಂಜುಳ ಅವರಿಗೆ ಉತ್ತರಾದಿ ಸಂಗೀತದ ಶಾಸ್ತ್ರೀಯ ಶಿಕ್ಷಣ ಸಾಕಷ್ಟು ಲಭ್ಯವಾಯಿತು.

ಜೆಟ್ಟಪ್ಪನವರ ಕಂಪನಿ ಮೈಸೂರು ಮೊಕ್ಕಾಂ ಬದಲಿಸಿತು. ಮಂಜುಳಾ ಕಂಪನಿ ತೊರೆದು ಮೈಸೂರಲ್ಲೆ ನಿಂತರು.

೧೯೪೭. ಖ್ಯಾತಿಯ ಶೃಂಗದಲ್ಲಿದ್ದ ಶ್ರಿಮತಿ ಮಳವಳ್ಳಿ ಸುಂದರಮ್ಮನವರು " ಶ್ರೀ ಚಾಮುಂಡೇಶ್ವರಿ ನಾಟಕ ಮಂಡಲಿ " ಯ ನೇತೃತ್ವ ವಹಿಸಿಕೊಂಡು ಎಲ್ಲ ಪೊರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಿದರು. ಅವರ ಸೋದರ ಮಲಪ್ಪನವರು ಮಂಜುಳಮ್ಮನವರ ತಾಯಿ ಲಲಿತಮ್ಮನವರನ್ನು ಬೀಟಿಯಾಗಿ ಮಗಳನ್ನು ಚಾಮುಂಡೇಶ್ವರಿ ಕಂಪನಿಗೆ ಸೇರಿಸಲು ಕೇಳಿಕೊಂಡರು. ತಾಯಿಯ ಒಪ್ಪಿಗೆ ದೊರೆಯಿತು.

ಕಂಪನಿಯ ಚನ್ನ ಪಟ್ಟಣದ ಕ್ಯಾಂಪ್. " ರಾಜಸೂಯ ಯಾಗ " , " ದಾನಶೂರ ಕಾರ್ಣ " , " ವೀರ ಆಭಿಮನ್ಯು" , " ಭಕ್ತ ಪ್ರಹ್ಲಾದ " , ಭಕ್ತ ದೃವ " , " ಮನ್ಮಥ ವಿಜಯ " , " ವೀರ ಸಿಂಹ " , " ಕೃಷ್ಣ ಲೀಲೆ " ಮೊದಲಾದ ನಾಟಕಗಳನ್ನೂ ಕಂಪನಿ ಪ್ರದರ್ಶಿಸುತ್ತಿತ್ತು. ಮಂಜುಳಾಗೆ ಕೃಷ್ಣ , ನಾರದ , ದ್ರೊವ್ ಪದಿ , ಸೋಮಪ್ರಭೆ ಪಾತ್ರಗಳ್ನ್ನು ನೀಡಲಾಯಿತು

ಹೆಸರು ವಾಸಿಯಾದ ಗೀತೆಗಳು
[ಬದಲಾಯಿಸಿ]

ಬಸವಣ್ಣನ ಭಕ್ತಿ , ಅಯ್ಯಾ ನಿಮ್ಮ ಶರಣರು

ಉಲ್ಲೇಖಗಳು

[ಬದಲಾಯಿಸಿ]
  1. karnatakada ranga kalavidaru. ಸೀತಾರಾಮ್ಯಯ.

[]

https://www.musixmatch.com/lyrics/Vishwanath/Ayya-Nimma-Sharanaru

https://www.youtube.com/watch?v=hUIZ7OVtuJQ

  1. karnatakada ranga kalavidaru. ಸೀತಾರಾಮ್ಯಯ.