ವಿಷಯಕ್ಕೆ ಹೋಗು

ಜಾಗತಿಕ ತಾಪಮಾನ ನಿಯಂತ್ರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂಮಿಯ ಈ ನಕ್ಷೆಯು ಮೇಲ್ಮೈ ತಾಪಮಾನವು ಪ್ರವೃತ್ತಿಗಳು 1950 ಮತ್ತು 2014 ನಡುವೆ ಈ ನಕ್ಷೆ ಪ್ರಮುಖ ಇಲ್ಲಿದೆ ತೋರಿಸುತ್ತದೆ.
1950 and 2014ನಡುವೆ ಮೇಲ್ಮೈ ತಾಪಮಾನವು ಪ್ರವೃತ್ತಿಗಳು ತೋರಿಸುವ ವಿಶ್ವ ನಕ್ಷೆ ಕೀ
ತಾಪಮಾನ ಏರಿಕೆಯ ನಕ್ಷೆ

ಚೀನಾ ಮತ್ತು ಯು.ಎಸ್‍ನ ತಕರಾರುಗಳು

[ಬದಲಾಯಿಸಿ]
  • ಜಾಗತಿಕ ತಾಪಮಾನ ಏರಿಕೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆಗಳ ಹೆಚ್ಚಿದ ಜನಪ್ರಿಯತೆಯಿಂದಾಗಿ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳು ಆರಂಭವಾಗಿವೆ.ನಿರ್ದಿಷ್ಟವಾಗಿ ಆಫ್ರಿಕಾ ಸೇರಿದಂತೆ ಬಡ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಅವುಗಳ ಹೊರಸೂಸುವಿಕೆ ಅಲ್ಪವೇ ಆದರೂ ಜಾಗತಿಕ ತಾಪಮಾನ ಏರಿಕೆಯ ಪ್ರಕ್ಷೇಪಿತ ಪರಿಣಾಮಗಳಿಂದ ಹೆಚ್ಚು ಅಪಾಯ ಹೊಂದುವ ಸಾಧ್ಯತೆ ಇದೆ. ಕ್ಯೋಟೋ ನಿಯಮಾವಳಿಗಳಿಗೆ U.S.ನ ಅಸಮ್ಮತಿಯ ಕಾರಣದಿಂದ ಮತ್ತು ಆಸ್ಟ್ರೇಲಿಯಾ ದ ಟೀಕೆಗಳನ್ನು ತರ್ಕಬದ್ಧವಾಗಿಸಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅವುಗಳಿಂದ ವಿನಾಯಿತಿ ನೀಡಲಾಗಿದೆ. ಮತ್ತೊಂದು ವಿವಾದಾತ್ಮಕ ವಿಚಾರವೆಂದರೆ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಾದ ಭಾರತ ಮತ್ತು ಚೀನಾಗಳು ಎಷ್ಟರ ಮಟ್ಟಿಗೆ ತಮ್ಮ
  • ಹೊರಸೂಸುವಿಕೆಯನ್ನು ನಿಯಂತ್ರಿಸಿಕೊಳ್ಳಬೇಕು ಎಂಬುದು. U.S.ನ ವಾದವೆಂದರೆ ಹೊರಸೂಸುವಿಕೆಯನ್ನು ನಿಯಂತ್ರಿಸುವ ವೆಚ್ಚವನ್ನು ತಾನು ಭರಿಸಬೇಕೆಂದರೆ ಚೀನಾದ ಸಮಗ್ರ ರಾಷ್ಟ್ರೀಯ CO2 ಹೊರಸೂಸುವಿಕೆಯು U.S ನದನ್ನು ಮೀರಿಸುತ್ತಿರುವದರಿಂದ ಚೀನಾ ಸಹಾ ಆ ಕಾರ್ಯ ಕೈಗೊಳ್ಳಬೇಕು ಎಂಬುದು. ಚೀನಾ ತನ್ನ ಹೊರಸೂಸುವಿಕೆ ಇಳಿಸುವಿಕೆ ಅಷ್ಟು ಬದ್ಧವಾಗಿರಬೇಕಿಲ್ಲ, ಏಕೆಂದರೆ ತಲಾ ಜವಾಬ್ದಾರಿ ಹಾಗೂ ತಲಾ ಹೊರಸೂಸುವಿಕೆಗಳು U.S.ಗಿಂತ ಕಡಿಮೆ ಇದೆ ಎಂದು ವಾದಿಸುತ್ತಿದೆ. ಭಾರತವೂ ಕೂಡ, ಅದರಿಂದ ಹೊರಗುಳಿದು, ಅದೇ ಮಾದರಿಯ ವಾದವನ್ನು ಮುಂದಿಡುತ್ತಿದೆ. [][]

ರುವಾಂಡಾದ ಕಿಗಾಲಿ ಒಪ್ಪಂದ

[ಬದಲಾಯಿಸಿ]
Mean surface temperature change for the period 1999 to 2008 relative to the average temperatures from 1940 to 1980
  • ಇಂಗಾಲದ ಡೈಆಕ್ಸೈಡ್‌ಗಿಂತಲೂ ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಸಾವಿರ ಪಟ್ಟು ಅಧಿಕ ಪ್ರಭಾವ ಬೀರುವ ಹೈಡ್ರೋಫ್ಲೂರೋಕಾರ್ಬನ್‌ (ಎಚ್‌ಎಫ್‌ಸಿ) ನಿಯಂತ್ರಿಸಲು ರುವಾಂಡಾದ ಕಿಗಾಲಿಯಲ್ಲಿ ಶನಿವಾರ ಅಧಿಕೃತ ಒಪ್ಪಂದಕ್ಕೆ ಬರಲಾಗಿದೆ.
  • ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಪ್ರಭಾವಯುತ ಹಸಿರುಮನೆ ಅನಿಲ ಉತ್ಪಾದನೆ ನಿಯಂತ್ರಣ ಹಾಗೂ 2050ರ ವೇಳೆಗೆ 0.5 ಸೆಲ್ಸಿಯಸ್‌ ಉಷ್ಣಾಂಶ ಏರಿಕೆಯನ್ನು ನಿಯಂತ್ರಿಸುವ ಒಪ್ಪಂದಕ್ಕೆ 200 ರಾಷ್ಟ್ರಗಳು ಒಮ್ಮತ ಸೂಚಿಸಿವೆ. ಗೃಹ ಮತ್ತು ಕಾರುಗಳ ಹವಾನಿಯಂತ್ರಕಗಳಲ್ಲಿ ಶೈತ್ಯಕಾರಿಯಾಗಿ ಹೈಡ್ರೋಫ್ಲೂರೋಕಾರ್ಬನ್‌ (ಎಚ್‌ಎಫ್‌ಸಿ) ಅನಿಲ ಹೆಚ್ಚು ಬಳಕೆಯಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಇದರ ಪ್ರಭಾವ ಅಧಿಕವಾಗಿದ್ದು, 2045ರ ವೇಳೆಗೆ ಶೇ.85ರಷ್ಟು ಎಚ್‌ಎಫ್‌ಸಿ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಭಾರತ, ಚೀನಾ, ಅಮೆರಿಕ ಹಾಗೂ ಯುರೋಪ್‌ ಶುಕ್ರವಾರ ಸಮ್ಮತಿಸಿದ್ದವು. ಅತಿ ಹೆಚ್ಚು ಎಚ್‌ಎಫ್‌ಸಿ ಉತ್ಪಾದಕ ರಾಷ್ಟ್ರವಾಗಿರುವ ಚೀನಾ 2045ರಲ್ಲಿ ಶೇ.80 ಬಳಕೆ ಕಡಿಮೆ ಮಾಡುವ ಗುರಿ ಹೊಂದಿದೆ.
  • ಕ್ಲೋರೋ–ಡೈಫ್ಲೂರೋ–ಮಿಥೇನ್‌ (ಎಚ್‌ಸಿಎಫ್‌ಸಿ–22)ನ ಉಪ ಉತ್ಪನ್ನವಾಗಿರುವ ಟ್ರೈಫ್ಲೂರೋ–ಮಿಥೇನ್‌(ಎಚ್‌ಎಫ್‌ಸಿ–23) ಶಕ್ತಿಯಿರುವ ಹಸಿರುಮನೆ ಅನಿಲವಾಗಿದ್ದು, ಭಾರತ ಇದರ ನಿಯಂತ್ರಣಕ್ಕೆ ಈಗಾಗಲೇ ಕಾರ್ಯತಂತ್ರ ಪ್ರಕಟಿಸಿದೆ. ಎಚ್‌ಸಿಎಫ್‌ಸಿ–22 ದೇಶದಲ್ಲಿ ಶೈತ್ಯಕಾರಿಯಾಗಿ ಹೆಚ್ಚು ಬಳಕೆಯಲ್ಲಿದೆ.

[]

ಅಂಟಾರ್ಕ್ಟಿಕಾದ ಬೃಹತ್‌ ಮಂಜುಗಡ್ಡೆ ಹೋಳು

[ಬದಲಾಯಿಸಿ]
  • ಜಾಗತಿಕ ತಾಪಮಾನದ ಬಿಸಿ: ವೇಗವಾಗಿ ಕರಗುತ್ತಿರುವ ‘ಲಾರ್ಸೆನ್‌ ಸಿ’ಏಜೆನ್ಸಿಸ್‌
  • 9 Jan, 2017
  • ಜಾಗತಿಕ ತಾಪಮಾನದ ಬಿಸಿ ಈಗ ಅಂಟಾರ್ಕ್ಟಿಕಾ ಮಂಜುಗಡ್ಡೆಗೆ ಮತ್ತಷ್ಟು ತಟ್ಟಿದೆ. ತಾಪಮಾನ ತೀವ್ರತೆ ಪರಿಣಾಮ ಬೃಹತ್‌ ಮಂಜುಗಡ್ಡೆಯೇ ಹೋಳಾಗುವ ಸ್ಥಿತಿ ತಲುಪಿರುವುದು ಆತಂಕ ಮೂಡಿಸಿದೆ. ಇದರಿಂದ ಸಮುದ್ರದ ಮಟ್ಟ ಹೆಚ್ಚಿಸುವ ಮೂಲಕ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ವಿಷಯವನ್ನು ಪುಷ್ಟಿಕರಿಸುವಂತೆ ಕಳೆದ ವರ್ಷ ನವೆಂಬರ್‌ 10ರಂದು ‘ಲಾರ್ಸೆನ್‌ ಸಿ’ ಹೆಸರಿನ ಮಂಜುಗಡ್ಡೆಯಲ್ಲಿ ಬಿರುಕು ಉಂಟಾಗಿರುವ ಚಿತ್ರಗಳನ್ನು ನಾಸಾ ವಿಜ್ಞಾನಿಗಳು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.
  • ನ್ಯೂಯಾರ್ಕ್‌ನ ಮ್ಯಾನ್‌ಹಟ್ಟನ್‌ನ ಪ್ರದೇಶಕ್ಕಿಂತಲೂ 100 ಪಟ್ಟು ದೊಡ್ಡದಾಗಿರುವ ‘ಲಾರ್ಸೆನ್‌ ಸಿ’ ಮಂಜುಗಡ್ಡೆ ಹೋಳಾಗಲಿದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಬಿರುಕು ದಿಢೀರನೆ ವೇಗ ಪಡೆದುಕೊಂಡಿದ್ದು, ಕಳೆದ ವರ್ಷದ ಡಿಸೆಂಬರ್‌ ವೇಳೆಗೆ 18 ಕಿಲೋಮೀಟರ್‌ದಷ್ಟು ವಿಸ್ತರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
  • 2011ರಲ್ಲಿ ಕೇವಲ 50 ಮೀಟರ್‌ಗಿಂತ ಕಡಿಮೆ ಬಿರುಕು ಕಾಣಿಸಿಕೊಂಡಿದ್ದರೆ, ಇದೀಗ 500ಮೀಟರ್‌ಗೂ ಹೆಚ್ಚು ಬಿರುಕು ಉಂಟಾಗಿದೆ. 2016ರ ಆರಂಭದಲ್ಲಿ ಈ ಮಂಜುಗಡ್ಡೆಯಲ್ಲಿ 110 ಕಿ.ಮೀ. ಉದ್ದ, 299 ಅಡಿ ಅಗಲ ಹಾಗೂ 500 ಮೀಟರ್ ಆಳದ ಬಿರುಕು ಪತ್ತೆಯಾಗಿತ್ತು. ಮಂಜುಗಡ್ಡೆ ಹೋಳಾದರೆ ಸಮುದ್ರದ ಮಟ್ಟ 10 ಸೆಂಟಿಮೀಟರ್‌ಗಳಷ್ಟು ಹೆಚ್ಚಾಗಲಿದೆ. ಹವಾಮಾನ ಬದ ಲಾವಣೆಯೇ ಈ ಅವಘಡಕ್ಕೆ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಈ ಮಂಜುಗಡ್ಡೆ ಹೋಳಾದರೆ ಸುಮಾರು 3218 ಕಿಲೋಮೀಟರ್‌ದಷ್ಟು ವ್ಯಾಪಿಸಿಕೊಳ್ಳಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
  • ಲಾರ್ಸೆನ್‌ ಸಿ ಮಂಜುಗಡ್ಡೆಯಲ್ಲಿ ಉಂಟಾಗಿರುವ ಬಿರುಕಿನಿಂದ ಈ ಬಾರಿ ಆ ಪ್ರದೇಶದಲ್ಲಿ ನಾವು ಅಲ್ಲಿಗೆ ಅಧ್ಯಯನಕ್ಕಾಗಿ ಹೋಗುತ್ತಿಲ್ಲ’ ಎಂದು ಬ್ರಿಟಿಷ್‌ ಅಂಟಾರ್ಕ್ಟಿಕಾ ಸಮೀಕ್ಷಾ ನಿರ್ದೇಶಕ ಡೇವಿಡ್‌ ವೌಘಾನ್‌ ತಿಳಿಸಿದ್ದಾರೆ. ತೇಲುತ್ತಿರುವ ಮಂಜುಗಡ್ಡೆ ನಿರ್ಗಲ್ಲುಗಳಿಂದ ಆವೃತವಾಗಿದೆ. ಮಂಜುಗಡ್ಡೆ ಕರಗಿದಂತೆ ನಿರ್ಗಲ್ಲುಗಳು ವೇಗವಾಗಿ ತೇಲಲಾರಂಭಿಸುತ್ತವೆ. ಈ ಮೂಲಕ ಸಮದ್ರದಮಟ್ಟ ಹೆಚ್ಚಿಸಲು ಕಾರಣವಾಗುತ್ತವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
  • ಲಾರ್ಸೆನ್‌ ‘ಸಿ’ ಬಳಿಯೇ ಇರುವ ಲಾರ್ಸೆನ್‌ ‘ಎ’ ಮತ್ತು ‘ಬಿ’ ಈಗಾಗಲೇ ಬಹುತೇಕ ವಿಭಜನೆಗೊಂಡಿವೆ. ಲಾರ್ಸೆನ್‌ ‘ಬಿ’ ಮಂಜುಗಡ್ಡೆ ಬಹುದಿನಗಳ ಕಾಲ ಉಳಿಯುವುದಿಲ್ಲ. ತೀವ್ರಗತಿಯಲ್ಲಿ ಕರಗುತ್ತದೆ. 2002ರಲ್ಲಿ ಈ ಮಂಜುಗಡ್ಡೆಯ ಬಹುತೇಕ ಭಾಗ ಕುಸಿದಿತ್ತು. ಇದರಿಂದ ನಿರ್ಗಲುಗಳು ಸಮುದ್ರದತ್ತ ವೇಗವಾಗಿ ಸಾಗಿದ್ದವು. ಇದೇ ರೀತಿಯ ಸನ್ನಿವೇಶ ಮತ್ತೊಮ್ಮೆ ಎದುರಾಗಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ.[]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]