ವಿಷಯಕ್ಕೆ ಹೋಗು

ಘೋಡ್ ಬಂದರ್ ಪೋರ್ಟ್

Coordinates: 19°17′46″N 72°53′18″E / 19.2962°N 72.8883°E / 19.2962; 72.8883
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ghodbunder Fort
घोडबंदर किल्ला
ಘೋಡ್ ಬಂದರ್, ಥಾಣೆ ಜಿಲ್ಲೆ, ಮಹಾರಾಷ್ಟ್ರ

ಘೋಡ್ ಬಂದರ್ ಫೋರ್ಟ್ ಪ್ರಾಂಗಣ
ಪ್ರಕಾರ ಕೋಟೆ
ಕಕ್ಷೆಗಳು 19°17′46″N 72°53′18″E / 19.2962°N 72.8883°E / 19.2962; 72.8883
ನಿರ್ಮಾಣ c.1550-1730
ನಿರ್ಮಿಸಿದವರು ಪೋರ್ಚುಗೀಸ್
Current
owner
India, ಮಹಾರಾಷ್ಟ್ರ
ಸಾರ್ವಜನಿಕರಿಗೆ ಪ್ರವೇಶ Yes


ಘೋಡ್ ಬಂದರ್ ಫೋರ್ಟ್ ಮಹಾರಾಷ್ಟ್ರ ರಾಜ್ಯದ ಠಾಣೆ, ಹಳ್ಳಿಯ ಹತ್ತಿರವಿದೆ. ಥಾಣೆಯ ಬಳಿಯ ಬೆಟ್ಟದ ಮೇಲೆ ಇರುವ ಸ್ಥಳವಾಗಿದೆ. ಈ ಕೋಟೆ, ಉಲ್ಲ್ಹಾಸ್ ನದಿಯ ದಕ್ಷಿಣ ಭಾಗದಲ್ಲಿ ಭಾರತಕ್ಕೆ ವಲಸೆಬಂದ ಪ್ರಥಮ ಯೂರೋಪಿಯನ್ ಜನರಾದ, ಪೋರ್ಚುಗೀಸರ ಕಾಲದ ಆಡಳಿತಗಾರರಿಂದ ಕಟ್ಟಲ್ಪಟ್ಟಿತ್ತು. ಮರಾಠಾ ಸಾಮ್ರಾಜ್ಯ 'ಈಸ್ಟ್ ಇಂಡಿಯಾ ಕಂಪೆನಿ ಸರ್ಕಾರದ ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರ್ಸ್', ಆಗಿತ್ತು ಘೋಡ್ ಬಂದರ್, ಎಂದು ಕರೆಯಲು ಕಾರಣ, ಇಲ್ಲಿ ೧೫೩೦ ರಲ್ಲಿ ನಮ್ಮ ದೇಶಕ್ಕೆ ವಲಸೆಗಾರರಾಗಿ ಬಂದ ಪೋರ್ಚುಗೀಸ್ ವ್ಯಾಪಾರಿಗಳು ಅರಬ್ ವ್ಯಾಪಾರಗಾರರ ಜೊತೆ ಕುದುರೆಗಳ ಲೇವಾದೇವಿ ವ್ಯಾಪಾರವನ್ನು ಮಾಡುತ್ತಿದ್ದರು (ಘೋಡೆ ಎಂದರೆ ಕುದುರೆಗಳು,ಮತ್ತು ಫೋರ್ಟ್ ಎಂದರೆ ಕೋಟೆ) ರಲ್ಲಿ ಬಂದರು. ಠಾಣೆಯ ಹತ್ತಿರದ ತಮಗೆ ಸೇರಿದ್ದ ಗುಡ್ಡಗಳನ್ನು ದುರಸ್ತಿಮಾಡಿ ಬಲಪಡಿಸಿಕೊಂಡರು ೧೫೫೦ ರ ಹೊತ್ತಿಗೆ ಶುರುವಾದ ಕಾರ್ಯ, ೧೭೩೭ ರಲ್ಲಿ ಈಗ ಇರುವರೀತಿಯಲ್ಲಿ ಪೂರ್ತಿಯಾಯಿತು. ಪೋರ್ಚುಗೀಸರು ಇಟ್ಟ ಹೆಸರು 'ಕಾಕಬೇ' ಎಂದು. 'ಡಿ ಟ ನ್ನಾ' ೧೭೩೭ ರ ವರೆಗೆ ಪೋರ್ಚುಗೀಸರ ಅಧೀನದಲ್ಲಿತ್ತು ಆ ಸಮಯದಲ್ಲಿ ಅವರು ಒಂದು ಚರ್ಚನ್ನು ಕಟ್ಟಿದರು ಇವತ್ತಿಗೂ ನೋಡಬಹುದಾದ ಚರ್ಚ್ ಈಗ ಹೋಟೆಲ್ ಆಗಿ ಪರಿವರ್ತಿಸಲಾಗಿದೆ ಇಗರ್ಜಿಯ ಒಳಗಿನ ಗೋಡೆಗಳ ಮೇಲೆ ಕೆತ್ತಿದ ಎರಡು ದೇವತೆಗಳ ಶಿಲ್ಪವನ್ನುಇಂದೂ ನಾವು ನೋಡಬಹುದಾಗಿದೆ. ಹಿನ್ನೆಲೆಯಲ್ಲಿ ಪುರಾತನ ಚರ್ಚ್ ಕಾಣಿಸಿಕೊಳ್ಳುತ್ತದೆ.[][]

ಕೋಟೆಯ ಒಳಗೆ ಪುರಾತನ ವಸ್ತುಗಳು ಸಿಕ್ಕಿವೆ

[ಬದಲಾಯಿಸಿ]

ಘೋಡ್ ಬಂದರ್ ಫೋರ್ಟ್, ಒಳಗೆ, ಹಲವಾರು ಹಳೆಯ ನಕ್ಷೆಗಳು, ಭೂಪಟಗಳೂ ಹಾಗೂ ಕೈಬರಹಗಳೂ ಇಲ್ಲಿ ಲಭ್ಯವಿವೆ. ಮರಾಠರು ಈ ಕೋಟೆಯನ್ನು ವಶಪಡಿಸಿಕೊಳ್ಳುವ ಮಾಡಿದ ಹಲವು ಪ್ರಯತ್ನಗಳ ದಾಖಲೆಗಳಿವೆ. ಆದರೆ ಇಂತಹ ಆಕ್ರಮಣಗಳನ್ನು ಪೋರ್ಛುಗೀಸರು ಸಮರ್ಥವಾಗಿ ಎದುರಿಸಿದರು.೧೬೭೨ ರಲ್ಲಿ ಶಿವಾಜಿ ಮಹಾರಾಜರು ನಂತರ ಬಂದ ಸಾಂಬಾಜಿ ಮಹಾರಾಜರ ಪಡೆಗಳು ಹಲ್ಲೆ ಮಾಡಿದವು. ಆಗ ಪೋರ್ಚುಗೀಸರು ತಮ್ಮ ಕೋಟೆಯನ್ನು ಹೆಚ್ಚು ಬಲಪಡಿಸಲು ಪ್ರಯತ್ನಗಳನ್ನು ಮಾಡಿದ್ದು ಹಾಗು ಒಂದು ಗೋಪುರವನ್ನು ಕಟ್ಟುವ ಆಲೋಚನೆಯನ್ನು ವ್ಯಕ್ತಪಡಿಸಿದ ದಾಖಲೆಗಳಿವೆ. ಕೊನೆಗೆ ಚಿಮಾಜಿ ಅಪ್ಪ, ಎಂಬ ಮರಾಠಾ ಸರದಾರನು ೧೭೩೭ ರಲ್ಲಿ ಕೋಟೆಯನ್ನು ಗೆದ್ದು ತನ್ನ ವಶಕ್ಕೆ ತೆಗೆದುಕೊಂಡನು. ಸಾಂಬಾಜಿಯು ತನ್ನ ಸೈನ್ಯಕ್ಕೆ ಕೋಟೆಯ ದುರಸ್ತಿಯನ್ನು ಮಾಡಲು ಆಜ್ಞೆಮಾಡಿ ಒಂದು ಗೋಪುಉರದ ನಿರ್ಮಾಣಕ್ಕೆ ನಾಂದಿಹಾಕಿದನು.[][]

ಬ್ರಿಟಿಷ್ ವ್ಯಾಪಾರಿಗಳು ಬಂದನಂತರ

[ಬದಲಾಯಿಸಿ]

೧೮೧೮ ರಲ್ಲಿ ಬಂದ ಬಲಾಢ್ಯ ಬ್ರಿಟಿಷ್ ವ್ಯಾಪಾರಿಗಳು ಕೋಟೆಯನ್ನು ಮರಾಠರಿಂದ ಕಾದಾಡಿ ವಶಪಡಿಸಿಕೊಂಡರು. ಠಾಣೆಯಲ್ಲಿ ತಮ್ಮಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದ ಪ್ರಮುಖ ಜಿಲ್ಲಾಧಿಕಾರಿಯ ಕಚೇರಿಯನ್ನಾಗಿ ಪರಿವರ್ತಿಸಿದರು.[][]

ಪ್ರಸಕ್ತ ಪರಿಸ್ಥಿತಿ

[ಬದಲಾಯಿಸಿ]

ಈಗ 'ಘೋಡ್ ಬಂದರ್ ಕೋಟೆ'ಯು ಬಹಳ ಹೀನಾವಸ್ಥೆಯಲ್ಲಿದೆ.ಕೋಟೆಯ ಕಲ್ಲಿನ ಗೋಡೆಗಳು ಹಲವೆಡೆ ಬಿದ್ದಿವೆ, ಸ್ವಲ್ಪ ದುರಸ್ತಿಯ ಕಾರ್ಯ ಭಾರತ ಸರಕಾರದ ಪುರಾತತ್ವ ಶಾಖೆಯ ಉತ್ಖನನಗೊಂಡ ಅವಶೇಷಗಳ ಅಧ್ಯಯನ ಇಲಾಖೆಯ ಅಡಿಯಲ್ಲಿ ನಡೆಯುತ್ತಿವೆ. []

ಘೋಡ್ ಬಂದರ್ ಕೋಟೆಯ ಒಳಗಿನ ಕಲ್ಲಿನ ಗೋಡೆಗಳು

ಉಲ್ಲೇಖಗಳು

[ಬದಲಾಯಿಸಿ]
  1. Karkari, R.P. (2008). The Charm of Bombay. READ BOOKS. p. 423. ISBN 1-4097-9294-3. Retrieved 27 March 2009.
  2. Ashar, Hemal (2007-12-03). "Mid-day". Retrieved 2009-03-30.
  3. "Incredible India: Places to Visit Maharashtra: Ghodbunder (43 Km.)". Archived from the original on 14 October 2007. {{cite web}}: Unknown parameter |deadurl= ignored (help)
  4. Rao, Shilpa (17 May 2007). "History becomes mystery".
  5. [Rao, Shilpa (17 May 2007). "History becomes mystery".[dead link]
  6. Mehta, Rajshri (31 January 2014). "Plans afoot to beautify ruined Ghodbunder Fort". The Times of India. Archived from the original on 2 ಫೆಬ್ರವರಿ 2014. Retrieved 9 ಸೆಪ್ಟೆಂಬರ್ 2017. {{cite news}}: Unknown parameter |deadurl= ignored (help)
  7. "Plans afoot to beautify ruined Ghodbunder Fort TOI". Archived from the original on 2014-02-02. Retrieved 2014-02-02.



"ಮಹಾರಾಷ್ಟ್ರದ ಜಿಲ್ಲೆಗಳು"