ಗೋವಾದ ಜಿಲ್ಲೆಗಳು
ಗೋಚರ
ಭಾರತದ ಗೋವಾ ರಾಜ್ಯವು ಕೇವಲ ಎರಡು ಜಿಲ್ಲೆಗಳನ್ನು Archived 2023-05-27 ವೇಬ್ಯಾಕ್ ಮೆಷಿನ್ ನಲ್ಲಿ. ಒಳಗೊಂಡಿದೆ: ಉತ್ತರ ಗೋವಾ ಮತ್ತು ದಕ್ಷಿಣ ಗೋವಾ.
ಆಡಳಿತಾತ್ಮಕ ರಚನೆ
[ಬದಲಾಯಿಸಿ]ಉತ್ತರ ಗೋವಾ ಜಿಲ್ಲೆಯು ಮೂರು ಉಪವಿಭಾಗಗಳನ್ನು ಒಳಗೊಂಡಿದೆ - ಪಣಜಿ, ಮಪುಸ ಮತ್ತು ಬಿಚೋಲಿಂ. ಐದು ತಾಲ್ಲೂಕುಗಳಿವೆ - ತಿಸ್ವಾಡಿ (ಪಣಜಿ), ಬಾರ್ದೇಸ್ (ಮಪುಸ), ಪರ್ಣೆಂ, ಬಿಚೋಲಿಂ ಮತ್ತು ಸತಾರಿ (ವಾಲ್ಪೋಯ್).
ದಕ್ಷಿಣ ಗೋವಾ ಜಿಲ್ಲೆಯು ಐದು ಉಪವಿಭಾಗಗಳನ್ನು ಒಳಗೊಂಡಿದೆ – ಪೋಂಡ, ಮರ್ಮಗೋವಾ (ವಾಸ್ಕೊ ಡ ಗಾಮ), ಮಡಗಾಂವ್, ಕೆಪೆಂ ಮತ್ತು ಧರ್ಬಂದೋರ. ಏಳು ತಾಲ್ಲೂಕುಗಳಿವೆ – ಪೋಂಡ, ಮರ್ಮಗೋವಾ, ಸಾಷ್ಟಿ (ಮಡಗಾಂವ್), ಕೆಪೆಂ, ಕಾಣಕೋಣ, ಸಾಂಗೇ ಮತ್ತು ಧರ್ಬಂದೋರ. (ಪೋಂಡ ತಾಲ್ಲೂಕನ್ನು ಜನವರಿ ೨೦೧೫ರಲ್ಲಿ ಉತ್ತರ ಗೋವಾದಿಂದ ದಕ್ಷಿಣ ಗೋವಾ ಜಿಲ್ಲೆಗೆ ಸೇರಿಸಲಾಯಿತು).
ಜಿಲ್ಲೆಗಳ ಪಟ್ಟಿ
[ಬದಲಾಯಿಸಿ]ಕೋಡ್[೧] | ಜಿಲ್ಲೆ | ಜಿಲ್ಲಾ ಕೇಂದ್ರ | ಜನಸಂಖ್ಯೆ (೨೦೧೧)[೨] | ವಿಸ್ತಾರ (km²) | ಜನಸಾಂದ್ರತೆ (/km²) | ಅಧಿಕೃತ ಜಾಲತಾಣ |
NG | ಉತ್ತರ ಗೋವಾ (उत्तर गोंय) | ಪಣಜಿ (पणजी) | ೮೧೭,೭೬೧ | ೧,೭೩೬ | ೪೭೧ | https://northgoa.gov.in/ |
SG | ದಕ್ಷಿಣ ಗೋವಾ (दक्षिण गोंय) | ಮಡಗಾಂವ್ (मडगांव) | ೬೩೯,೯೬೨ | ೧,೯೬೬ | ೩೨೬ | https://southgoa.nic.in/ |
ಉಲ್ಲೇಖಗಳು
[ಬದಲಾಯಿಸಿ]- ↑ "NIC Policy on format of e-mail Address: Appendix (2): Districts Abbreviations as per ISO 3166–2" (PDF). ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. 2004-08-18. pp. ೫-೧೦. Archived from the original (PDF) on 2008-09-11. Retrieved 2012-11-27.
- ↑ "Distribution of Population, Decadal Growth Rate, Sex-Ratio and Population Density" (XLS). ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಕಮಿಷನರ್, ಭಾರತ, ನವದೆಹಲಿ - ೧೧೦೦೧೧. 2010–2011. Retrieved 2012-08-22.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಗೋವಾ ಸರ್ಕಾರದ ಅಧಿಕೃತ ಜಾಲತಾಣ
- ಗೋವ ರಾಜ್ಯದ ರೋಚಕ ತಥ್ಯಗಳು Archived 2023-05-27 ವೇಬ್ಯಾಕ್ ಮೆಷಿನ್ ನಲ್ಲಿ.