ಗೋವಾ ವಿಧಾನಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Legislative Assembly of Goa
गोंय विधानसभा
Coat of arms or logo
Type
Type
Unicameral
Term limits
5 years
Leadership
Speaker
Deputy Speaker
Vishnu Surya Wagh, BJP
since 2012
Leader of the House
Laxmikant Parsekar, BJP
since 2014
Leader Of Opposition
Pratapsingh Rane, INC
since March, 2012
Structure
Seats40
Political groups
  BJP (21)

  Congress (7)
  MGP (3)
  GVP (1)
  Goa Su-Raj Party (1)[೧]
  Independents (5)

  Vacant (2) [೨][೩]
Elections
First-past-the-post
Last election
3 March 2012
Website
Goa Assembly

ಗೋವಾ[ಬದಲಾಯಿಸಿ]

  • ಗೋವಾ ಶಾಸಕಾಂಗ ("गोंय विधानसभा") ಪಶ್ಚಿಮ ಭಾರತದ ಗೋವಾ ರಾಜ್ಯವು ಏಕ ಶಾಸನ ಶಾಸಕಾಂಗ. ಇದು 40 ಸದಸ್ಯರನ್ನು ಒಳಗೊಂಡಿರುತ್ತದೆ.ಗೋವ -
  • ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.
  • ಶ್ರೀಮತಿ ಮೃದುಲಾ ಸಿನ್ಹಾ ಅವರು ಗೋವಾದ ರಾಜ್ಯಪಾಲರಾಗಿ ದಿ.೩೧-೮-೨೦೧೪/31-8-2014 ಭಾನುವಾರ ಅಧಿಕಾರ ಸ್ವೀಕರಿಸಿದರು
  • ಬಿ.ವಿ. ವಾಂಚೂ ಅವರ ರಾಜೀನಾಮೆಯ ನಂತರ ಪ್ರಸಿದ್ಧ ಲೇಖಕಿ ಮತ್ತು ಹಿರಿಯ ಬಿಜಿಪಿ ನಾಯಕಿ ಮೃದುಲಾ ಸಿನ್ಹಾ ಅವರು ಭಾನುವಾರ ಗೋವಾ ರಾಜ್ಯದ ನೂತನ ರಾಜ್ಯಪಾಲ­ರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸರ್ಕಾರ[ಬದಲಾಯಿಸಿ]

ಪೊಸಿಷನ್ ಹೆಸರು
ಗವರ್ನರ್ ಮೃದುಲಾ ಸಿನ್ಹಾ
ಮುಖ್ಯಮಂತ್ರಿ ಪ್ರಮೋದ್ ಸಾವಂತ್
ಗೃಹ ಸಚಿವ ಲಕ್ಷ್ಮಿಕಾಂತ್ ಪರಸ್ಕರ್
ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ
ಸ್ಪೀಕರ್ ಅನಂತ್ ಶೇಟ್
ಉಪ ಸ್ಪೀಕರ್ ವಿಷ್ಣು ವಾಘ್

ಹಿನ್ನೆಲೆ[ಬದಲಾಯಿಸಿ]

  • 1930ರಲ್ಲಿ ಗೋವ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲಾಯಿತು. ಪೋರ್ಚುಗೀಸ್ ಸರ್ಕಾರ ಗೋವದಲ್ಲಿ ಚಳವಳಿಗಳನ್ನು ಉಗ್ರವಾಗಿ ಹತ್ತಿಕ್ಕಿತು. 1947ರಲ್ಲಿ ಭಾರತ ಸ್ವತಂತ್ರವಾದ ಅನಂತರ ಭಾರತ ಸರ್ಕಾರ ಗೋವ ಪ್ರದೇಶದಿಂದ ಪೋರ್ಚುಗಲ್ ತನ್ನ ಆಡಳಿತವನ್ನು ತೆರವು ಮಾಡಬೇಕೆಂದು ಸೂಚಿಸಿತು. ಆದರೂ ಪೋರ್ಚುಗೀಸ್ ಸರ್ಕಾರ ಬಿಗಿಮುಷ್ಟಿಯ ವಸಾಹತು ನೀತಿಯನ್ನು ಮುಂದುವರಿಸಿತು. ದೆಹಲಿ ಮತ್ತು ಲಿಸ್ಬನ್‍ಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಲಿಲ್ಲ.
  • 1947ರಿಂದ 1954ರ ವರೆಗೆ ನಡೆದ ವಿಮೋಚನಾ ಹೋರಾಟದ ಮುಖಂಡರನ್ನು ಪೋರ್ಚುಗೀಸ್ ಸರ್ಕಾರ ವರ್ಣನಾತೀತ ಶಿಕ್ಷೆಗಳಿಗೆ ಗುರಿ ಮಾಡಿತು. ಪೋರ್ಚುಗಲ್ ಮತ್ತು ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧ 1955ರಲ್ಲಿ ಕಡಿದುಬಿತ್ತು. ಅದೇ ವರ್ಷ ಗೋವ ವಿಮೋಚನೆಗಾಗಿ ಶಾಂತಿಯುತ ಚಳವಳಿ ಪ್ರಾರಂಭವಾಯಿತು. ಚಳವಳಿ 1961ರ ವರೆಗೂ ಸತತವಾಗಿ ಮುಂದುವರಿಯಿತು. ಪೋರ್ಚುಗಲ್ ಸರ್ಕಾರ ಅನೇಕ ಸತ್ಯಾಗ್ರಹಿಗಳನ್ನು ಗುಂಡಿಟ್ಟು ಕೊಂದಿತು. ಮುಖಂಡರನ್ನು ನಾನಾಬಗೆಯ ಚಿತ್ರಹಿಂಸೆಗಳಿಗೆ ಗುರಿಪಡಿಸಿತು.
  • ಸರ್ಕಾರದ ಉಗ್ರನೀತಿ ಮತ್ತು ದಂಡನೆಗಳು ಮುಂದುವರಿದುವು. ಭಾರತ ಸರ್ಕಾರದ ಸಂಯಮವನ್ನು ಪೋರ್ಚುಗಲ್ಲಿನ ವಸಾಹತು ನೀತಿ ಅಲುಗಿಸಿತು. ಪೋರ್ಚುಗೀಸ್ ಸೈನಿಕರು ಗೋವದ ಗಡಿಯಲ್ಲಿ ಭಾರತದ ಹಳ್ಳಿಗಳನ್ನು ಲೂಟಿ ಮಾಡಲುಪಕ್ರಮಿಸಿದರು. ಕೊನೆಗೆ 1961ರ ಡಿಸೆಂಬರ್ 17-18ರ ಮಧ್ಯರಾತ್ರಿಯ ವೇಳೆಗೆ ಪೋರ್ಚುಗೀಸರ ಆಡಳಿತಕೇಂದ್ರವಾದ ಪಣಜಿಯನ್ನು ಭಾರತ ಸೈನ್ಯ ಸುತ್ತುಗಟ್ಟಿತು.
  • ಅಲ್ಲಿದ್ದ ಪೋರ್ಚುಗೀಸ್ ದಳಗಳು ಭಾರತೀಯ ಸೈನ್ಯಕ್ಕೆ ಶರಣಾಗತವಾದುವು. ಕೇವಲ 36 ಗಂಟೆಗಳಲ್ಲಿ ಹೋರಾಟ ಕೊನೆಗೊಂಡಿತು. ಪೋರ್ಚುಗೀಸ್ ಆಳಿಕೆಯಿಂದ ಗೋವ ವಿಮೋಚನೆಗೊಂಡಿತು. ಡಿಸೆಂಬರ್ 20ರಂದು ಗೋವ ಭಾರತದಲ್ಲಿ ವಿಲೀನವಾಯಿತು.

ಸೇನಾ ಆಡಳಿತ[ಬದಲಾಯಿಸಿ]

  • ಪೋರ್ಚುಗೀಸ್ ಆಡಳಿತದ ಕೊನೆಯ 1961 ರಲ್ಲಿ ನಂತರ, ಗೋವಾ ಲೆಫ್ಟಿನೆಂಟ್ ಜನರಲ್ ಕ್ಯಾಂಡೆತ್ ನೇತೃತ್ವದ ಸೇನಾ ಆಡಳಿತದ ಅಡಿಯಲ್ಲಿ ಇರಿಸಲಾಯಿತು. ಆದರೆ 8 ಜೂನ್ 1962 ರಂದು ಮಿಲಿಟರಿ ಆಡಳಿತದ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪ್ರದೇಶದ ಆಡಳಿತಕ್ಕೆ ಸಹಾಯ ಮಾಡಲು 29 ನಾಮಕರಣ ಸದಸ್ಯರ ಒಂದು ಅನೌಪಚಾರಿಕ ಕನ್ಸಲ್ಟೇಟಿವ್ ಕೌನ್ಸಿಲ್‍ನ್ನು ನಾಗರಿಕ ಸರ್ಕಾರವಾಗಿ ನೇಮಿಸಲಾಯಿತು. ಸಾರ್ವಜನಿಕರ ಮೊದಲ ಕೌನ್ಸಿಲ್ ಮುಕ್ತ ಸಭೆ ದಿ.24 ಸೆಪ್ಟೆಂಬರ್ 1962 ಸೇರಿತು.
  • ಆ ನಂತರ ಚುನಾವಣೆ ನಡೆದು ಮೊದಲ ಅಸೆಂಬ್ಲಿ ಸಚಿವಾಲಯದ ಕಟ್ಟಡದಲ್ಲಿ 9 ಜನವರಿ 1964 (ಆದಿಲ್ ಷಾ ಅರಮನೆ) ಮೇಲೆ ಸೇರಿತು. ಆದ್ದರಿಂದ, 9 ಜನವರಿಯನ್ನು ಗೋವಾದ "ಶಾಸಕ ಡೇ" ಎಂದು ಪ್ರತಿ ವರ್ಷ ಗುರುತಿಸಲಾಗಿದೆ. ಗೋವಾ 1987 ರಲ್ಲಿ ಭಾರತದ ಒಂದು ರಾಜ್ಯ ಎಂದು ಕರೆಸಿಕೊಂಡಿತು. ನಂತರ ಸ್ಥಾನಗಳ ಸಂಖ್ಯೆಯನ್ನು 40 ಕ್ಕೆ ಹೆಚ್ಚಿಸಲಾಗಿದೆ.
  • ಪ್ರಸ್ತುತ, ಅಸೆಂಬ್ಲಿ (Porvorim, Bardez) ತನ್ನದೇ ಗೋವಾ ರಾಜ್ಯ ವಿಧಾನಸಭೆ ಕಾಂಪ್ಲೆಕ್ಸ್‍ನಲ್ಲಿ ಸೇರುತ್ತದೆ. ಕಟ್ಟಡದ ನಿರ್ಮಾಣ ಜನವರಿ 1994 22 ರಂದು ಆರಂಭವಾಗಿ, ಪೂರ್ಣಗೊಂಡಾಗ 5 ಮಾರ್ಚ್ 2000 ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದರು.

ಚುನಾವಣೆ[ಬದಲಾಯಿಸಿ]

ಗೋವ ಚುನಾವಣೆಗಳು ಗೋವ ಮುಖ್ಯ ಮಂತ್ರಿ ದಿಗಂಬರ್ ಕಾಮತ್ 08-06- 2007

  • ಲೋಕ ಸಭೆ ೨೦೧೪
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್--1 (22.60%)
  • ಬಿಜೆಪಿ -- ---------- -- 1 (44.78%)

ಗೋವಾ ವಿಧಾನಸಭಾ ಚುನಾವಣೆ (2012)[ಬದಲಾಯಿಸಿ]

  • ಮುಖ್ಯಮಂತ್ರಿ :ಮನೋಹರ್ ಪರಿಕ್ಕರ್ (2011ರಿಂದ)ಮನೋಹರ್ ಪರಿಕ್ಕರ್- ಕೇಂದ್ರಕ್ಕೆ -ರಕ್ಷಣಾ ಮಂತ್ರಿ ೨೦೧೪; ಈಗಿನ ಮುಖ್ಯಮಂತ್ರಿ ಲಕ್ಷ್ಮಿಕಾಂತ್‌ ಪಾರ್ಸೆಕರ್‌
  • ಒಟ್ಟು ಸ್ಥಾನಗಳು (40)
ಪಕ್ಷ ಸ್ಥಾನ ಗಳಿಕೆ ಶೇ. +-
ಬಿಜೆಪಿ 21 34.68% + 5% +5
ಕಾಂಗ್ರೆಸ್ 9 30.78 % - 7
ಜಿವಿಪಿ(ಗೋವ ವಿಕಾಸ ಪಾರ್ಟಿ 2
ಎಮ್ ಜಿ ಪಿ 3 5.92% +1
ಎನ ಸಿ ಪಿ 0
ಪಕ್ಷೇತರರು 5 +3
ಒಟ್ಟು 40

[೪]

ಜಾತಿ ಮತ[ಬದಲಾಯಿಸಿ]

  • ಹಿಂದೂ =60%
  • ಕ್ರಿಶ್ಚಿಯನ್ = 26%
  • ಮುಸ್ಲಿಂ = 9%
  • ಇತರೆ = 5%

ಚುನಾವಣೆ 2017[ಬದಲಾಯಿಸಿ]

  • ಫೆಬ್ರವರಿ 4 (ಶನಿವಾರ)ರಂದು ಒಂದೇ ಹಂತದಲ್ಲಿ ಮತದಾನ.
  • ಒಟ್ಟು 40 ಅಸೆಂಬ್ಲಿ ಕ್ಷೇತ್ರ
  • ಈಗಿನ ಅಸೆಂಬ್ಲಿ ಬಲಾಬಲ: ಬಿಜೆಪಿ (21), ಐಎನ್ ಸಿ(9), ಎಂಎಜಿ(3). ಇತರೆ (5)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)

ಫಲಿತಾಂಶ[ಬದಲಾಯಿಸಿ]

ರಾಜ್ಯ ಕಾಂಗ್ರೆಸ್ ಬಿಜೆಪಿ ಇತರೆ ಒಟ್ಟು
ಗೋವಾ (ಒಟ್ಟು 40 ಅಸೆಂಬ್ಲಿ ಕ್ಷೇತ್ರ) ಕಾಂ.17 ಬಿಜೆಪಿ 13 10 40

ಪರಿಕ್ಕರ್ ಮುಂದಿನ ಸಿ.ಎಂ[ಬದಲಾಯಿಸಿ]

  • 13 Mar, 2017
  • ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದ್ದು, ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮನೋಹರ್‌ ಪರಿಕ್ಕರ್‌ ಅವರಿಗೆ ಸೂಚಿಸಿದ್ದಾರೆ.
  • ಇದಕ್ಕೂ ಮೊದಲು ಸಭೆ ನಡೆಸಿದ್ದ ಬಿಜೆಪಿ ಶಾಸಕರು, ಪರಿಕ್ಕರ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲು ಅವಕಾಶ ನೀಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರನ್ನು ಒಕ್ಕೊರಲಿನಿಂದ ಒತ್ತಾಯಿಸಿದ್ದರು.
  • ಬಿಜೆಪಿ 13; ಎನ್ಸಿಪಿ 1, ಎಂ.ಜಿ.ಪಿ, 3, ಜೆಎಫ್ಪಿ 3, ಪಕ್ಷೇತರ 2 = 22
  • ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳ (ಎಂಜಿಪಿ) ತಲಾ ಮೂವರು ಶಾಸಕರ (೬), ಇಬ್ಬರು ಪಕ್ಷೇತರ ಶಾಸಕರ (೨), ಎನ್‌ಸಿಪಿಯ ಒಬ್ಬ ಶಾಸಕನ (೧=೯ +ಬಿಜೆಪಿ ೧೩) ಬೆಂಬಲ (ಒಟ್ಟು ಪತ್ರದೊಂದಿಗೆ ಪರಿಕ್ಕರ್ ರಾಜ್ಯಪಾಲರನ್ನು ಭೇಟಿ ಮಾಡಿದರು.
  • ‘ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ’ [೫]

ಮನೋಹರ್ ಪರಿಕ್ಕರ್ ಪ್ರಮಾಣವಚನ[ಬದಲಾಯಿಸಿ]

  • ಗೋವಾದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಅವರು ದಿ.೧೪,ಮಾರ್ಚಿ ೨೦೧೭ ಮಂಗಳವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಜೆ ಐದೂವರೆಗೆ ನಡೆದ ಸಮಾರಂಭದಲ್ಲಿ ಒಂಭತ್ತು (ಎಂಟು?) ಸಚಿವರು ಪರಿಕ್ಕರ್ ಜತೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅವರು, ೧.ಸುದಿನ್ ಧವಲಿಕರ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ೨.ಮನೋಹರ್ ಅಜಗಾಂವಕರ್, ೩.ವಿಜಯ್ ಸರ್ದೇಸಾಯಿ, ೪.ವಿನೋದ್ ಪಲಿಯೆಂಕರ್ ಮತ್ತು ಗೋವಾ ಫಾರ್ವರ್ಡ್‍ನ ೫.ಜಯೇಶ್ ಸಲಗಾಂವ್ಕರ್, ೬.ಫ್ರಾನ್ಸಿಸ್ ಡಿಸೋಜಾ, ೭.ಪಾಂಡುರಂಗ ಮದ್‍ಕಾಯ್ಕರ್ ಬಿಜೆಪಿ ಮತ್ತು ಸ್ವತಂತ್ರ ಶಾಸಕರಾದ ೮.ಗೋವಿಂದ ಗಾವಡೆ (Gawde) ಮತ್ತು ೯.ರೋಹನ್ ಖಾವುಂಟೆ (Khaunte).[೬][೭]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://timesofindia.indiatimes.com/city/goa/Now-Mickky-joins-Goa-Su-Raj-Party/articleshow/56264474.cms
  2. "Congress leader Madkaikar resigns from Goa assembly ahead of polls, joins BJP". 22 December 2016.
  3. "Congress leader Mauvin Godinho resigns from Goa Assembly".
  4. "infrastructure_1". Archived from the original on 2016-10-16. Retrieved 2017-01-04.
  5. ಗೋವಾ, ಮಣಿಪುರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ;ಪಿಟಿಐ;13 Mar, 2017
  6. ಗೋವಾ ಮುಖ್ಯಮಂತ್ರಿಯಾಗಿ ಪರಿಕ್ಕರ್ ಪ್ರಮಾಣ ವಚನ ಸ್ವೀಕಾರ;14 Mar, 2017;
  7. Manohar Parrikar takes over as Goa chief minister, floor