ಕರ್ಪುರಲಕ್ಕಿ
ಕರ್ಪುರಲಕ್ಕಿ ಬಿಳಿಲಕ್ಕಿ ದೊಡ್ಡ ಪೊದೆಸಸ್ಯ ಅಥವಾ ಸಣ್ಣ ಮರವಾಗಿದೆ. ಇದು ಲ್ಯಾಮಿನೇಸಿಯ ಸಸ್ಯ ಕುಟುಂಬಕ್ಕೆ ಸೇರಿದೆ. ವಿಟೆಕ್ಸ್ ಟ್ರೈಫೋಲಿಯಾ ಇದರ ವೈಜ್ಞಾನಿಕ ಹೆಸರು.[೧][೨]
ಸಸ್ಯದ ವಿವರಣೆ
[ಬದಲಾಯಿಸಿ]ಕರ್ಪುರಲಕ್ಕಿ ಮೃದು ಕೂದಲಿನ (ಟೊಮೆಂಟೋಸ್) ಆವರಿಸಿರುವ ಕಾಂಡ ಹೋದಿದೆ. ಇದು ೫ಮೀ ಗಿಂತಲೂ ಕಡಿಮೆ ಎತ್ತರವಿರುವ ಪೊದರುಮರ. ಈ ಮರದ ಕಾಂಡಗಳ ಉದ್ದಕ್ಕೂ ಎಲೆಗಳು ವಿರೋಧವಾಗಿ ಜೋಡಿಸಲ್ಪಟ್ಟಿರುತ್ತವೆ. ಇವು 3-ರೇಖಾತ್ಮಕ ಚಿಗುರೆಲೆಗಳಿಂದ ಕೂಡಿರುತ್ತವೆ. ಇದು ೧-೧೨ ಸೆಂ.ಮೀ ಉದ್ದವಿರುತ್ತದೆ. ಎಲೆಗಳ ಮೇಲಿನ ಮೇಲ್ಮೈ ಹಸಿರು ಮತ್ತು ಕೆಳ ಮೇಲ್ಮೈ ಬೂದು ಹಸಿರು ಬಣ್ಣವಿರುತ್ತದೆ. ಹೂವುಗಳು ೧೮ ಸೆಂ.ಮೀ ಉದ್ದದ ಗುಂಪಾಗಿ ಹುಟ್ಟುತ್ತವೆ. ಸಾಮಾನ್ಯವಾಗಿ ಹೂವುಗಳು ಸುಮಾರು ೫ಮಿಮೀ ಉದ್ದವಿರುವ ನೇರಳೆ ಅಥವಾ ಕೆನ್ನೇರಳೆ ಬಣ್ಣ ಹೊಂದಿರುತ್ತವೆ. ಎಲೆಯ ಮೇಲೆ ನಸು ಹಸಿರು ಹಾಗೂ ಅಡಿಭಾಗ ಬೂದು ಬಣ್ಣದ ರೋಮಗಳನ್ನು ಹೊಂದಿರುತ್ತದೆ. ತುಳಸಿ ಜಾತಿಯ ಸಸ್ಯಯಗಳಂತೆ ಅವರದೇ ವಿಶಿಷ್ಟ ಗಂಧ.[೩][೪]
ಬೆಳೆಯುವ ಪ್ರದೇಶ
[ಬದಲಾಯಿಸಿ]ಕರ್ಪುರಲಕ್ಕಿ ಸ್ವಾಭಾವಿಕವಾಗಿ ಉಷ್ಣವಲಯದ ಪೂರ್ವ ಆಫ್ರಿಕಾದ ತೀರ ಪೂರ್ವಕ್ಕೆ ಫ್ರೆಂಚ್ ಪಾಲಿನೇಷಿಯಾದ ಕರಾವಳಿಯಲ್ಲಿ ಕಂಡುಬರುತ್ತದೆ. ದಕ್ಷಿಣ ಭಾರತದ ಕರಾವಳಿಯುದ್ದಕ್ಕೂ ಯಥೇಚ್ಛವಾಗಿ ಕಾಣಸಿಗುವುದು.[೫]
ಔಷಧೀಯ ಉಪಯೋಗ
[ಬದಲಾಯಿಸಿ]ಸೊಂಟ ನೋವಿಗೆ - ಎಲೆಗಳನ್ನು ೧ ಚಮಚ ಮೆಂತೆಯೊಂದಿಗೆ ಚೆನ್ನಾಗಿ ಅರೆದು ಹರಳಣ್ಣೆ ಕಲಸಿ ಬಿಸಿ ಮಾಡಿ - ಬಿಸಿಯಾಗಿ ಲೇಪನಹಾಗೂ ಎಲೆಗಳ ಕಷಾಯ - ೧ ಚಮಚ ಹರಳೆಣ್ಣೆಯೊಂದಿಗೆ ರಾತ್ರೆ ಸೇವನೆ ಶೋಧ - ಎಲೆಯನ್ನು ಉಪ್ಪಿನೊಂದಿಗೆ ಅರೆದು ಬಿಸಿ ಲೇಪ ಮಾಡಬೇಕು.[೬][೭]
ಉಲ್ಲೇಖ
[ಬದಲಾಯಿಸಿ]- ↑ https://plants.usda.gov/core/profile?symbol=VITR7
- ↑ "ಆರ್ಕೈವ್ ನಕಲು". Archived from the original on 2016-07-17. Retrieved 2018-09-12.
- ↑ https://web.archive.org/web/20080705114831/http://www.ntbg.org/plants/plant_details.php
- ↑ http://tropical.theferns.info/viewtropical.php?id=Vitex+trifolia
- ↑ "ಆರ್ಕೈವ್ ನಕಲು". Archived from the original on 2017-06-08. Retrieved 2018-09-12.
- ↑ https://herbpathy.com/Uses-and-Benefits-of-Vitex-Trifolia-Cid4591
- ↑ "ಆರ್ಕೈವ್ ನಕಲು". Archived from the original on 2018-09-30. Retrieved 2018-09-12.