ಕರ್ಪುರಲಕ್ಕಿ

ವಿಕಿಪೀಡಿಯ ಇಂದ
Jump to navigation Jump to search
ಕರ್ಪುರಲಕ್ಕಿ

ಕರ್ಪುರಲಕ್ಕಿ ಕರಾವಳಿಯ ದೊಡ್ಡ ಪೊದೆಸಸ್ಯ ಅಥವಾ ಸಣ್ಣ ಮರವಾಗಿದೆ. ಇದು ಲ್ಯಾಮಿನೇಸಿಯ ಸಸ್ಯ ಕುಟುಂಬಕ್ಕೆ ಸೇರಿದೆ. ವಿಟೆಕ್ಸ್ ಟ್ರೈಫೋಲಿಯಾ ಇದರ ವೈಜ್ಞಾನಿಕ ಹೆಸರು.[೧][೨]

ಸಸ್ಯದ ವಿವರಣೆ[ಬದಲಾಯಿಸಿ]

ಕರ್ಪುರಲಕ್ಕಿ ಮೃದು ಕೂದಲಿನ (ಟೊಮೆಂಟೋಸ್) ಆವರಿಸಿರುವ ಕಾಂಡ ಹೋದಿದೆ. ಇದು ೫ಮೀ ಗಿಂತಲೂ ಕಡಿಮೆ ಎತ್ತರ ಬೆಳೆಯುತ್ತದೆ. ಈ ಮರದ ಕಾಂಡಗಳ ಉದ್ದಕ್ಕೂ ಎಲೆಗಳು ವಿರೋಧವಾಗಿ ಜೋಡಿಸಲ್ಪಟ್ಟಿರುತ್ತವೆ. ಇವು 3-ರೇಖಾತ್ಮಕ ಚಿಗುರೆಲೆಗಳಿಂದ ಕೂಡಿರುತ್ತವೆ. ಇದು ೧-೧೨ ಸೆಂ.ಮೀ ಉದ್ದವಿರುತ್ತದೆ. ಎಲೆಗಳ ಮೇಲಿನ ಮೇಲ್ಮೈ ಹಸಿರು ಮತ್ತು ಕೆಳ ಮೇಲ್ಮೈ ಬೂದು ಹಸಿರು ಬಣ್ಣವಿರುತ್ತದೆ. ಹೂವುಗಳು ೧೮ ಸೆಂ.ಮೀ ಉದ್ದದ ಗುಂಪಾಗಿ ಹುಟ್ಟುತ್ತವೆ. ಸಾಮಾನ್ಯವಾಗಿ ಹೂವುಗಳು ಸುಮಾರು ೫ಮಿಮೀ ಉದ್ದವಿರುವ ನೇರಳೆ ಅಥವಾ ಕೆನ್ನೇರಳೆ ಬಣ್ಣ ಹೊಂದಿರುತ್ತವೆ.[೩][೪]

ಬೆಳೆಯುವ ಪ್ರದೇಶ[ಬದಲಾಯಿಸಿ]

ಕರ್ಪುರಲಕ್ಕಿ ಸ್ವಾಭಾವಿಕವಾಗಿ ಉಷ್ಣವಲಯದ ಪೂರ್ವ ಆಫ್ರಿಕಾದ ತೀರ ಪೂರ್ವಕ್ಕೆ ಫ್ರೆಂಚ್ ಪಾಲಿನೇಷಿಯಾದ ಕರಾವಳಿಯಲ್ಲಿ ಕಂಡುಬರುತ್ತದೆ.[೫]

ಔಷಧೀಯ ಉಪಯೋಗ[ಬದಲಾಯಿಸಿ]

ಈ ಎಲೆಗಳನ್ನು ಕುಕ್ ದ್ವೀಪಗಳಲ್ಲಿ ಸ್ತ್ರೀ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ಜ್ವರ ನಿಯಂತ್ರಿಸಲು ಬಳಸಲಾಗುತ್ತದೆ. ಒಣಗಿದ ಎಲೆಗಳನ್ನು ಸೊಳ್ಳೆಗಳನ್ನು ತಡೆಯಲು ಸುಡುತ್ತಾರೆ.[೬][೭]

ಉಲ್ಲೇಖ[ಬದಲಾಯಿಸಿ]

  1. https://plants.usda.gov/core/profile?symbol=VITR7
  2. https://www.mdidea.com/products/new/new09702.html
  3. https://web.archive.org/web/20080705114831/http://www.ntbg.org/plants/plant_details.php
  4. http://tropical.theferns.info/viewtropical.php?id=Vitex+trifolia
  5. http://www.learn2grow.com/plants/vitex-trifolia-fascination/
  6. https://herbpathy.com/Uses-and-Benefits-of-Vitex-Trifolia-Cid4591
  7. http://www.medicinalplantsindia.com/vitex-trifolia.html