ವಿಷಯಕ್ಕೆ ಹೋಗು

ಐಸ್-ಸ್ಕೇಟಿಂಗ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸ್ಟ್ರಿಯಾದ ಹೊರಾಂಗಣ ಐಸ್-ಸ್ಕೇಟಿಂಗ್‌.

ಐಸ್-ಸ್ಕೇಟಿಂಗ್‌ ಎಂದರೆ ಐಸ್-ಸ್ಕೇಟ್‌‌ಗಳನ್ನು ಬಳಸಿಕೊಂಡು ಮಂಜುಗಡ್ಡೆಯ ಮೇಲೆ ಜಾರುವುದು. ಇದನ್ನು ವಿರಾಮ ಕಾಲ ಕಳೆಯಲು, ಪ್ರಯಾಣಿಸಲು ಮತ್ತು ವಿವಿಧ ಕ್ರೀಡೆಗಳನ್ನೂ ಒಳಗೊಂಡಂತೆ ಹಲವಾರು ಕಾರಣಗಳಿಗಾಗಿ ಮಾಡಲಾಗುತ್ತದೆ. ಐಸ್-ಸ್ಕೇಟಿಂಗ್‌ ವಿಶೇಷವಾಗಿ ರಚಿಸಿದ ಒಳಾಂಗಣ ಮತ್ತು ಹೊರಾಂಗಣ ಟ್ರ್ಯಾಕ್‌ಗಳೆರಡರಲ್ಲೂ ಕಂಡುಬರುತ್ತದೆ. ಅಷ್ಟೇ ಅಲ್ಲದೆ ಇದು ನೈಸರ್ಗಿಕವಾಗಿ ಕಂಡುಬರುವ ಸರೋವರಗಳು ಮತ್ತು ನದಿಗಳಂತಹ ಹಿಮಗಡ್ಡೆಯಿಂದ ಆವೃತವಾದ ನೀರಿನ ಆಗರಗಳಲ್ಲೂ ಕಂಡುಬರುತ್ತದೆ.

ಇತಿಹಾಸ

[ಬದಲಾಯಿಸಿ]
17ನೇ ಶತಮಾನದ ಡಚ್ ವರ್ಣಚಿತ್ರಕಾರ ಹೆಂಡ್ರಿಕ್ ಅವರ್‌ಕ್ಯಾಂಪ್‌ನ 'ಸ್ಕೇಟಿಂಗ್ ಫನ್'.
ಸೆಂಟ್ರಲ್ ಪಾರ್ಕ್, ನ್ಯೂಯಾರ್ಕ್ ಸಿಟಿ, ವಿಂಟರ್: ದಿ ಸ್ಕೇಟಿಂಗ್ ಪಾಂಡ್, 1862.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಫೆಡೆರಿಕೊ ಫಾರ್ಮೆಂಟಿ ಮಾಡಿದ ಅಧ್ಯಯನವೊಂದು ಆರಂಭಿಕ ಐಸ್-ಸ್ಕೇಟಿಂಗ್‌ ಸುಮಾರು 4000 ವರ್ಷಗಳ ಹಿಂದೆ ದಕ್ಷಿಣ ಫಿನ್‌ಲ್ಯಾಂಡ್‌ನಲ್ಲಿ ಕಂಡುಬಂದಿತ್ತೆಂದು ಸೂಚಿಸುತ್ತದೆ.[] ಆರಂಭದಲ್ಲಿ, ಸ್ಕೇಟ್‌ಗಳು ಹರಿತವಾಗಿ, ಚಪ್ಪಟೆಯಾಗಿದ್ದವು, ಅವುಗಳನ್ನು ಪಾದಕ್ಕೆ ಬಿಗಿದು ಕಟ್ಟಲಾಗುತ್ತಿತ್ತು. ಸ್ಕೇಟರ್‌ಗಳು ಮಂಜುಗಡ್ಡೆಯ ಮೇಲೆ ಸ್ಕೇಟ್ ಮಾಡುತ್ತಿರಲಿಲ್ಲ, ಬದಲಿಗೆ ಅದರ ಮೇಲೆ ನಿಧಾನಕ್ಕೆ ಜಾರುತ್ತಿದ್ದರು. ಹರಿತವಾದ ಅಂಚುಗಳುಳ್ಳ ಉಕ್ಕಿನ ಬ್ಲೇಡ್ಅನ್ನು ಬಳಸಲು ಆರಂಭಿಸಿದಾಗ ನಿಜವಾದ ಸ್ಕೇಟಿಂಗ್ ಚಾಲ್ತಿಗೆ ಬಂದಿತು. ಸ್ಕೇಟ್‌ಗಳು ಈಗ ಮಂಜುಗಡ್ಡೆಯ ಮೇಲೆ ಜಾರುವ ಬದಲಿಗೆ ಅದನ್ನು ಸೀಳಿಕೊಂಡು ಹೋಗುತ್ತವೆ. ಐಸ್-ಸ್ಕೇಟ್‌ಗಳಿಗೆ ಅಂಚುಗಳನ್ನು ಸೇರಿಸುವುದನ್ನು 13ನೇ ಅಥವಾ 14ನೇ ಶತಮಾನದಲ್ಲಿ ಡಚ್ಚರು ಕಂಡುಹಿಡಿದರು. ಈ ಐಸ್-ಸ್ಕೇಟ್‌‌ಗಳನ್ನು ಉಕ್ಕಿನಿಂದ ಮಾಡಲಾಗಿತ್ತು, ಚಲನೆಗೆ ನೆರವಾಗಲು ಅವುಗಳ ಕೆಳಗೆ ಹರಿತವಾದ ಅಂಚುಗಳಿದ್ದವು. ಆಧುನಿಕ ಐಸ್-ಸ್ಕೇಟ್‌‌ಗಳ ರಚನೆಯು ಈ ರಚನೆಯನ್ನೇ ಉಳಿಸಿಕೊಂಡು ಬಂದಿದೆ.

ನೆದರ್ಲೆಂಡ್ಸ್‌ನಲ್ಲಿ, ಓಲ್ಡ್ ಮಾಸ್ಟರ್‌ಗಳ ಅನೇಕ ಚಿತ್ರಗಳಲ್ಲಿ ತೋರಿಸಿದಂತೆ ಐಸ್-ಸ್ಕೇಟಿಂಗ್‌ಅನ್ನು ಎಲ್ಲಾ ವರ್ಗದ ಜನರಿಗೆ ಸೂಕ್ತವಾದುದೆಂದು ಪರಿಗಣಿಸಲಾಗುತ್ತಿತ್ತು. ಇಂಗ್ಲೆಂಡ್‌ನ ಜೇಮ್ಸ್ II ಗಡೀಪಾರು ಶಿಕ್ಷೆಗೆ ಒಳಗಾಗಿ ನೆದರ್ಲೆಂಡ್ಸ್‌ಗೆ ಬಂದರು ಮತ್ತು ಅಲ್ಲಿ ಆತ ಈ ಕ್ರೀಡೆಗೆ ಮರುಳಾದರು. ಆತ ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ, ಈ 'ಹೊಸ' ಕ್ರೀಡೆಯನ್ನು ಬ್ರಿಟಿಷ್ ಶ್ರೀಮಂತ ವರ್ಗದವರಿಗೆ ಪರಿಚಯಿಸಲಾಯಿತು ಮತ್ತು ಶೀಘ್ರದಲ್ಲಿ ಅದನ್ನು ಎಲ್ಲಾ ವರ್ಗದ ಜನರು ಆನಂದಿಸಲು ಆರಂಭಿಸಿದರು. ರಾಣಿ ವಿಕ್ಟೋರಿಯಾ ತನ್ನ ಭಾವಿ-ಪತಿ ರಾಜ ಆಲ್ಬರ್ಟ್ ಹಲವಾರು ಐಸ್-ಸ್ಕೇಟಿಂಗ್‌ ಪ್ರಯಾಣಗಳನ್ನು ಮಾಡಿದ್ದಾರೆಂದು ತಿಳಿದುಕೊಂಡರು ಎಂದು ಹೇಳಲಾಗಿದೆ[who?].[ಸೂಕ್ತ ಉಲ್ಲೇಖನ ಬೇಕು] ಅದೇ ರೀತಿ ಫೆನ್‌ಲ್ಯಾಂಡ್ ಕೃಷಿ-ಕಾರ್ಮಿಕರು ವೇಗವಾದ ಸ್ಕೇಟಿಂಗ್‌ನಲ್ಲಿ[ಸೂಕ್ತ ಉಲ್ಲೇಖನ ಬೇಕು] ಮಾಸ್ಟರ್‌ಗಳಾದರು. ಆದರೆ, ಇತರ ಸ್ಥಳಗಳಲ್ಲಿ ಐಸ್-ಸ್ಕೇಟಿಂಗ್‌ನಲ್ಲಿ ಭಾಗವಹಿಸುವುದು ಉನ್ನತ ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು. ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿ ರುಡೋಲ್ಫ್ II ಐಸ್-ಸ್ಕೇಟಿಂಗ್‌ಅನ್ನು ತುಂಬಾ ಇಷ್ಟಪಡುತ್ತಿದ್ದರು, ಆತ ಈ ಕ್ರೀಡೆಯನ್ನು ಜನಪ್ರಿಯಗೊಳಿಸಲು ತನ್ನ ಆಸ್ಥಾನದಲ್ಲಿ ಒಂದು ದೊಡ್ಡ ಮಂಜುಗಡ್ಡೆ-ಉತ್ಸವವನ್ನು ನಡೆಸುತ್ತಿದ್ದರು. ಫ್ರಾನ್ಸಿನ ರಾಜ ಲೂಯಿಸ್ XVI ಆತನ ಆಳ್ವಿಕೆಯ ಸಂದರ್ಭದಲ್ಲಿ ಐಸ್-ಸ್ಕೇಟಿಂಗ್‌ಅನ್ನು ಪ್ಯಾರಿಸ್‌ಗೆ ತಂದರು. ಮ್ಯಾಡಮೆ ಡಿ ಪೋಂಪಡೋರ್, ನೆಪೋಲಿಯನ್ I, ನೆಪೋಲಿಯನ್ III ಮತ್ತು ಹೌಸ್ ಆಫ್ ಸ್ಟ್ವಾರ್ಟ್ ಮೊದಲಾದ ರಾಜಕುಟುಂಬ ಮತ್ತು ಉನ್ನತ ವರ್ಗಕ್ಕೆ ಸೇರಿದವರು ಐಸ್-ಸ್ಕೇಟಿಂಗ್‌ ಮತ್ತು ಐಸ್-ಹಾಕಿಯ ಅಭಿಮಾನಿಗಳಾಗಿದ್ದರು.

ಸ್ಕೇಟಿಂಗ್‌ನ ದೈಹಿಕ ಚಲನೆಗಳು

[ಬದಲಾಯಿಸಿ]
ಹೊರಾಂಗಣ ಐಸ್-ಸ್ಕೇಟಿಂಗ್‌ ರಿಂಕ್.

ಸ್ಕೇಟ್ ಶೋನ ಕೆಳಭಾಗದಲ್ಲಿರುವ ಲೋಹದ ಬ್ಲೇಡ್ ಮಂಜುಗಡ್ಡೆಯ ಮೇಲ್ಮೈಯಲ್ಲಿ ತುಂಬಾ ಕಡಿಮೆ ಘರ್ಷಣೆಯೊಂದಿಗೆ ಜಾರುವುದರಿಂದ ಐಸ್-ಸ್ಕೇಟಿಂಗ್‌ ಸಾಧ್ಯವಾಗುತ್ತದೆ. ಆದರೆ, ಬ್ಲೇಡ್ಅನ್ನು ಸ್ವಲ್ಪ ಓರೆಯಾಗಿಸಿ ಅದರ ಯಾವುದಾದರೊಂದು ಅಂಚನ್ನು ಮಂಜುಗಡ್ಡೆಯೊಳಗೆ ತೂರಿಸುವುದರಿಂದ ಸ್ಕೇಟರ್‌ಗಳಿಗೆ ಘರ್ಷಣೆಯನ್ನು ಹೆಚ್ಚಿಸಿ, ತಮಗೆ ಇಷ್ಟ ಬಂದಂತೆ ಚಲಿಸುವ ನಿಯಂತ್ರಣವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ತಮ್ಮ ದೇಹವನ್ನು ತ್ರಿಜ್ಯಾಕಾರವಾಗಿ ವಾಲಿಸಿ ಮತ್ತು ಮಂಡಿಗಳನ್ನು ಬಾಗಿಸಿ ವಕ್ರವಾದ ಹಾದಿಯಲ್ಲಿ ಚಲಿಸುವುದನ್ನು ಆರಿಸುವ ಮೂಲಕ ಸ್ಕೇಟರ್‌ಗಳು ನಿಯಂತ್ರಿಸಲು ಮತ್ತು ತಮ್ಮ ಚಲನೆಯ ವೇಗವನ್ನು ಹೆಚ್ಚಿಸಲು ಗುರುತ್ವಾಕರ್ಷಣೆಯನ್ನು ಬಳಸಿಕೊಳ್ಳಬಹದು. ಬಾಗಿದ ಹಾದಿಗೆ ವಿರುದ್ಧವಾಗಿ ಬ್ಲೇಡ್ಅನ್ನು ತಳ್ಳುವ ಮೂಲಕವೂ ಸಹ ಅವರು ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ವಾಲುವ ಮತ್ತು ತಳ್ಳುವ ಈ ಎರಡು ಕ್ರಿಯೆಗಳನ್ನು ಕೌಶಲದಿಂದ ಮಾಡುವುದರಿಂದ— 'ಎಳೆಯುವುದು' ಎಂದು ಕರೆಯುವ ಒಂದು ವಿಧಾನ— ಮಂಜುಗಡ್ಡೆಯ ಮೇಲೆ ಪ್ರಯತ್ನರಹಿತ ಮತ್ತು ಆಕರ್ಷಕವಾದ ವಕ್ರರೇಖೀಯ ಚಲನೆಯನ್ನು ಮಾಡುತ್ತಿರುವಂತೆ ಕಾಣುತ್ತದೆ. ಕಡಿಮೆ-ಘರ್ಷಣೆಯ ಮೇಲ್ಮೈ ಹೇಗೆ ಹುಟ್ಟುತ್ತದೆ ಎಂಬುದು ಸರಿಯಾಗಿ ತಿಳಿದಿಲ್ಲ, ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯಿದೆ. ಇದನ್ನು ಕೆಳಗೆ ವಿವರಿಸಲಾಗಿದೆ. ಮಂಜುಗಡ್ಡೆಯು −7 °C ನಲ್ಲಿ (19 °F) ಕನಿಷ್ಠ ಚಲನೆಯ ಘರ್ಷಣೆಯನ್ನು ಹೊಂದಿದೆ ಎಂದು ಪ್ರಯೋಗಗಳು ತೋರಿಸುತ್ತವೆ ಮತ್ತು ಹೆಚ್ಚಿನ ಒಳಾಂಗಣ ಸ್ಕೇಟಿಂಗ್ ನೀರ್ಗಲ್ಲ ಹರವುಗಳು ಅವುಗಳ ವ್ಯವಸ್ಥೆಯನ್ನು ಅಷ್ಟೇ ತಾಪಮಾನಕ್ಕೆ ಸರಿಹೊಂದಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು] ವಿಶೇಷವಾಗಿ ಕಡಿಮೆ ತಾಪಮಾನದಲ್ಲಿ ನಿಜವಾಗಿ ಕಂಡುಬರುವ ಕಡಿಮೆ ಪ್ರಮಾಣದ ಘರ್ಷಣೆಯ ಬಗ್ಗೆ ವಿವರಿಸಲು ಭೌತವಿಜ್ಞಾನಿಗಳಿಗೆ ಕಷ್ಟವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಸುಮಾರು −20 °C (−4 °F)ಗಿಂತ ಮೇಲಿನ ತಾಪಮಾನದಲ್ಲಿ ಮಂಜುಗಡ್ಡೆಯ ಮೇಲ್ಮೈಯಲ್ಲಿ, ನೀರಿನ ತೆಳ್ಳಗಿನ ಪದರವಿರುತ್ತದೆ, ಈ ಪೊರೆಯ ದಪ್ಪವು ಕೆಲವು ಅಣುಗಳಿಂದ ಹಿಡಿದು ಸಾವಿರಾರು ಅಣುಗಳವರೆಗೆ ವ್ಯತ್ಯಾಸಗೊಳ್ಳುತ್ತದೆ. ಏಕೆಂದರೆ ಹರಳಿನಂಥ ರಚನೆಯ ಒರಟಾದ ಕೊನೆಯು ಯಾಂತ್ರಿಕ ಕೆಲಸವನ್ನು ಮಾಡಲು ಲಭ್ಯವಿಲ್ಲದ ಶಕ್ತಿಗೆ ಅನುಕೂಲಕರವಾದ ಸಾಧ್ಯತೆಯಲ್ಲ. ಈ ನೀರಿದ ಪದರದ ದಪ್ಪವು ಹೆಚ್ಚುಕಡಿಮೆ ಸಂಪೂರ್ಣವಾಗಿ ಮಂಜುಗಡ್ಡೆಯ ಮೇಲ್ಮೈ ತಾಪಮಾನವನ್ನು ಆಧರಿಸಿರುತ್ತದೆ, ಅಧಿಕ ತಾಪಮಾನವು ಈ ಪದರದ ದಪ್ಪವನ್ನು ಹೆಚ್ಚಿಸುತ್ತದೆ. ಆದರೆ, ನೈಸರ್ಗಿಕವಾಗಿ ಕಂಡುಬರುವ ನೀರಿನ ಪದರವಿರದ ತಾಪಮಾನ −20 °C ಗಿಂತ ತುಂಬಾ ಕಡಿಮೆ ತಾಪಗಳಲ್ಲಿ ಸ್ಕೇಟಿಂಗ್ ಸಾಧ್ಯವಾಗುತ್ತದೆ. ಐಸ್-ಸ್ಕೇಟ್‌‌ನ ಬ್ಲೇಡ್ ಮಂಜುಗಡ್ಡೆಯ ಮೇಲೆ ಸಾಗುವಾಗ, ಮಂಜುಗಡ್ಡೆಯು ಅದರ ಭೌತಿಕ ಸ್ಥಿತಿಯಲ್ಲಿ ಎರಡು ರೀತಿಯ ಬದಲಾವಣೆಗಳಿಗೆ ಹಾಗೂ ಚಲನೆಯ ಘರ್ಷಣೆ ಮತ್ತು ಕರಗುವ ತಾಪದಿಂದಾಗಿ ಅದರ ತಾಪಮಾನದಲ್ಲಿ ಒಂದು ರೀತಿಯ ಬದಲಾವಣೆಗೆ ಒಳಗಾಗುತ್ತದೆ.

ಅಪಾಯಗಳು

[ಬದಲಾಯಿಸಿ]

ಐಸ್-ಸ್ಕೇಟಿಂಗ್‌ನ ಪ್ರಾಥಮಿಕ ಅಪಾಯವೆಂದರೆ ಮಂಜುಗಡ್ಡೆಯ ಮೇಲೆ ಬೀಳುವುದು. ಬೀಳುವ ಸಂಭವವು ಮಂಜುಗಡ್ಡೆಯ ಒರಟು, ಐಸ್-ಸ್ಕೇಟ್‌‌ನ ವಿನ್ಯಾಸ ಹಾಗೂ ಸ್ಕೇಟರ್‌ನ ಕೌಶಲ ಮತ್ತು ಅನುಭವವನ್ನು ಆಧರಿಸಿರುತ್ತದೆ. ಗಂಭೀರ ಗಾಯಗಳಾಗುವುದು ವಿರಳವಾಗಿದ್ದರೂ, ಅಸಂಖ್ಯಾತ ಸಣ್ಣ-ಟ್ರ್ಯಾಕ್ ಸ್ಕೇಟರ್‌ಗಳು ಬೋರ್ಡಿಂಗ್‌ಗೆ ಢಿಕ್ಕಿ ಹೊಡೆದು ಬಿದ್ದ ನಂತರ ಪಾರ್ಶ್ವವಾಯು ಹೊಡೆತಕ್ಕೆ ಒಳಗಾಗಿ ಶಕ್ತಿಹೀನರಾಗಿದ್ದಾರೆ. ಬೀಳುವುದರ ಮತ್ತೊಂದು ಅಪಾಯವೆಂದರೆ ಸ್ಕೇಟರ್‌ಗಳಿಗೆ ತಮ್ಮದೇ ಲೋಹದ ಬ್ಲೇಡ್‌ಗಳಿಂದ ಅಥವಾ ಇತರ ಸ್ಕೇಟರ್‌ಗಳ ಬ್ಲೇಡ್‌ಗಳಿಂದ ಗಂಭೀರವಾದ ಪೆಟ್ಟಾಗಬಹುದು. ಗಂಭೀರವಾಗಿ ತಲೆಗೆ ಪೆಟ್ಟು ಬೀಳದಂತೆ ತಡೆಯಲು ಹೆಲ್ಮೆಟ್ಅನ್ನು ಧರಿಸಿಲ್ಲದಿದ್ದರೆ ಬೀಳುವುದು ಮಾರಕವಾಗಿರುತ್ತದೆ. ಅಪಘಾತಗಳು ವಿರಳವಾಗಿರುತ್ತದೆ, ಆದರೆ ಸಣ್ಣಪುಟ್ಟ ಘರ್ಷಣೆಗಳು ಸಾಮಾನ್ಯವಾಗಿರುತ್ತದೆ.

ಎರಡನೇ ಮತ್ತು ಹೆಚ್ಚು ಗಂಭೀರವಾದ ಅಪಾಯವೆಂದರೆ ಹಿಮಗಡ್ಡೆಯಿಂದ ಆವೃತವಾದ ನೀರಿನ ಆಗರಗಳ ಮೇಲೆ ಹೊರಾಂಗಣ ಸ್ಕೇಟಿಂಗ್ ಮಾಡುವಾಗ ಮಂಜುಗಡ್ಡೆಯ ಮೂಲಕ ಅಡಿಯಲ್ಲಿರುವ ಹಿಮನೀರಿಗೆ ಬೀಳುವುದು. ಇದು ಗಂಭೀರ ಪೆಟ್ಟಿಗೆ ಕಾರಣವಾಗಬಹುದು ಅಥವಾ ಆಘಾತ, ಲಘೂಷ್ಣತೆ ಅಥವಾ ಮುಳುಗಿ ಉಸಿರುಕಟ್ಟುವುದರಿಂದ ಸಾವನ್ನಪ್ಪಬಹುದು. ಮಂಜುಗಡ್ಡೆಯು ನಿರಂತರವಾಗಿ ಒಡೆದುಹೋಗುವುದರಿಂದ, ಸ್ಕೇಟ್‌ಗಳ ಭಾರದಿಂದಾಗಿ ಮತ್ತು ಚಳಿಗಾಲದ ದಪ್ಪನೆಯ ಉಡುಪಿನಿಂದಾಗಿ ಸ್ಕೇಟರ್ ಕೆಳಕ್ಕೆ ಜಗ್ಗಲ್ಪಡುವುದರಿಂದ ಅಥವಾ ನೀರಿನಡಿಯಲ್ಲಿ ಸ್ಕೇಟರ್ ಕಕ್ಕಾಬಿಕ್ಕಿಯಾಗುವುದರಿಂದ ಸ್ಕೇಟರ್‌ಗಳಿಗೆ ನೀರಿನಿಂದ ಮೇಲೆ ಬರಲು ಕಷ್ಟವಾಗುತ್ತದೆ ಅಥವಾ ಅಸಾಧ್ಯವಾಗುತ್ತದೆ. ಸ್ಕೇಟರ್‌ಗಳು ಅವರು ಕೆಳಕ್ಕೆ ಬಿದ್ದ ರಂಧ್ರವನ್ನು ಗುರುತಿಸಲೂ ಅಸಮರ್ಥರಾಗಬಹುದು. ಇದರಿಂದಾಗಿ ಅವರು ಮುಳುಗಬಹುದು ಅಥವಾ ಅವರ ದೇಹದ ಉಷ್ಣತೆಯು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಬಹುದು, ಆದರೆ ಶೀಘ್ರದಲ್ಲಿ ತಣ್ಣಗಾಗುವಿಕೆಯು ಕೆಲವರಿಗೆ ನೀರಿಗೆ ಬಿದ್ದ ನಂತರವೂ ಕೆಲವು ಗಂಟೆಗಳವರೆಗೆ ಜೀವಂತವಾಗಿಯೇ ಇರುವಂತಹ ಸ್ಥಿತಿಯನ್ನು ಉಂಟುಮಾಡಬಹುದು. ಸುರಕ್ಷತೆಗಾಗಿ, ಏಕಾಂಗಿಯಾಗಿ ಕತ್ತಲಲ್ಲಿ ಸ್ಕೇಟ್ ಮಾಡಬಾರದು ಹಾಗೂ ಸರೋವರ ಅಥವಾ ನದಿಯಲ್ಲಿ ಸ್ಕೇಟಿಂಗ್ ಮಾಡುವಾಗ ಪ್ರತಿಯೊಬ್ಬರೂ ನೈಲ್ಸ್ ಅಥವಾ ಐಸ್-ಕ್ಲಾಸ್ಅನ್ನು ಬಳಸಬೇಕೆಂಬ ನಿಯಮವಿದೆ. ಅವು ನೀರಿನಲ್ಲಿ ಬಿದ್ದು ಗೊಂದಲಕ್ಕೆ ಒಳಗಾಗುವ ಸ್ಕೇಟರ್‌ಗೆ ಮಂಜುಗಡ್ಡೆಯ ಮೇಲೆ ಹಿಡಿತವನ್ನು ಸಾಧಿಸಲು ಸಹಾಯ ಮಾಡುತ್ತವೆ. ಅವುಗಳಿಂದ ದುರದೃಷ್ಟದ ಸ್ಕೇಟರ್ ನೀರಿನಿಂದ ಮೇಲಕ್ಕೆ ಬರಬಹುದು.

ಹೊಸ ಶುಭ್ರ ಮಂಜುಗಡ್ಡೆಗೆ ಮಾತ್ರ ಇರುವ ಸಾಮಾನ್ಯ ಮಂಜುಗಡ್ಡೆ ದಪ್ಪದ ಮಾರ್ಗದರ್ಶನಗಳು: ಉಲ್ಲೇಖ ದೋಷ: Invalid parameter in <ref> tag

  • 2" ಅಥವಾ ಕಡಿಮೆ - ಸ್ಟೇ ಆಫ್
  • 4" - ಐಸ್ ಫಿಶಿಂಗ್ ಅಥವಾ ಕಾಲಿನಿಂದ ಮಾಡುವ ಇತರ ಚಟುವಟಿಕೆಗಳು
  • 5" - ಸ್ನೊಮೊಬೈಲ್ ಅಥವಾ ATV
  • 8" - 12" - ಕಾರ್ ಅಥವಾ ಸಣ್ಣ ಪಿಕಪ್
  • 12" - 15" - ಮಧ್ಯಮ ಗಾತ್ರದ ಟ್ರಕ್

ಐಸ್-ಸ್ಕೇಟಿಂಗ್‌ ಶೂಗಳ ಹರಿತವಾದ ಬ್ಲೇಡ್ ಗುಂಪಿನಲ್ಲಿ ಸ್ಕೇಟಿಂಗ್ ಮಾಡುವಾಗ ತೀವ್ರ ಗಾಯವನ್ನು ಉಂಟುಮಾಡಬಹುದು.[]

ಮಂಜುಗಡ್ಡೆಯ ಮೇಲೆ ಆಡುವ ಸಾಮುದಾಯಿಕ ಆಟಗಳು

[ಬದಲಾಯಿಸಿ]

ಮಂಜುಗಡ್ಡೆಯ ಮೇಲೆ ಅನೇಕ ಮನರಂಜನೆಯನ್ನು ನೀಡುವ ಆಟಗಳನ್ನು ಆಟಬಹುದು.

  • ಐಸ್ ಹಾಕಿ
  • ರೌಸೆಟ್ಟೆ ಸ್ಕೇಟಿಂಗ್ - ಇದು ಐಸ್-ಸ್ಕೇಟಿಂಗ್‌ಅನ್ನು ಆಧರಿಸಿದ ಒಂದು ಮನರಂಜನಾ ಆಟ.
  • ವಿವಿಧ ನಿಯಮಗಳನ್ನು ಹೊಂದಿರುವ ವಿವಿಧ ಟ್ಯಾಗ್ ಆಟಗಳು

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಟೂರ್ ಸ್ಕೇಟಿಂಗ್
  • ಫಿಗರ್ ಸ್ಕೇಟಿಂಗ್
  • ಫೆನ್ ಸ್ಕೇಟಿಂಗ್
  • ಸ್ಪೀಡ್ ಸ್ಕೇಟಿಂಗ್
  • ಕೈಟ್ ಐಸ್-ಸ್ಕೇಟಿಂಗ್‌

ಉಲ್ಲೇಖಗಳು‌‌

[ಬದಲಾಯಿಸಿ]
  1. "The first humans traveling on ice: an energy-saving strategy?". {{cite web}}: Unknown parameter |coauthors= ignored (|author= suggested) (help)
  2. https://www.youtube.com/watch?v=kGhtM2rqbYA&feature=related


ಫಾರ್ಮೆಂಟಿ ಎಫ್. ಮತ್ತು ಮಿನೆಟ್ಟಿ ಎ. ಇ. (2007) ಹ್ಯೂಮನ್ ಲೋಕೊಮೋಶನ್ ಆನ್ ಐಸ್: ದಿ ಎವಲ್ಯೂಷನ್ ಆಫ್ ಐಸ್-ಸ್ಕೇಟಿಂಗ್‌ ಎನರ್ಜೀಸ್ ಥ್ರೂ ಹಿಸ್ಟರಿ

ಫಾರ್ಮೆಂಟಿ ಎಫ್. ಮತ್ತು ಮಿನೆಟ್ಟಿ ಎ. ಇ. (2008) ದಿ ಫರ್ಸ್ಟ್ ಹ್ಯೂಮನ್ಸ್ ಟ್ರಾವೆಲ್ಲಿಂಗ್ ಆನ್ ಐಸ್: ಆನ್ ಎನರ್ಜಿ ಸೇವಿಂಗ್ ಸ್ಟ್ರಾಟೆಜಿ? ಐಸ್-ಸ್ಕೇಟಿಂಗ್‌.

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]