ವಿಷಯಕ್ಕೆ ಹೋಗು

ಇಂಡಿಗೋ ಪೇಂಟ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{{{ಸಂಸ್ಥೆಯ_ಹೆಸರು}}}
ಪ್ರಕಾರ: {{{ಸಂಸ್ಥೆಯ_ಪ್ರಕಾರ}}}
ಸ್ಥಾಪನೆ: {{{ ಸ್ಥಾಪನೆ }}}
ಕೇಂದ್ರ ಸ್ಥಳ: {{{ಸ್ಥಳ}}}

ಇಂಡಿಗೊ ಪೇಂಟ್ಸ್ ನಿಯಮಿತ ವಿವಿಧ ಬಳಕೆಯ ಬಣ್ಣ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರಿಸುವ, ಭಾರತೀಯ ಮೂಲದ, ಕಂಪನಿಯಾಗಿದ್ದು, ಜೋಧಪುರ, ಕೊಚ್ಚಿ ಮತ್ತು ಪುದುಕೊಟ್ಟೈನಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ. [] [] ಕಂಪನಿಯು ಅಲಂಕಾರಿಕ ಬಣ್ಣಗಳು, ಎಮಲ್ಷನ್‌ಗಳು, ಎನಾಮೆಲ್‌ಗಳು, ಮರದ ಲೇಪನಗಳು, ಡಿಸ್ಟೆಂಪರ್, ಪ್ರೈಮರ್‌ಗಳು, ಪುಟ್ಟಿಗಳು ಮತ್ತು ಸಿಮೆಂಟ್ ಬಣ್ಣಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯಲ್ಲಿ ತೊಡಗಿದೆ. []


ಬಣ್ಣ ತಯಾರಿಸುವ ಇತರ ಭಾರತೀಯ ಕಂಪೆನಿಗಳ ಮಾರುಕಟ್ಟೆ ಗಾತ್ರಕ್ಕೆ ಹೋಲಿಸಿದರೆ, ಪ್ರಸ್ತುತ ಇಂಡಿಗೋ ಪೇಂಟ್ಸ್ ೪ನೇ ಸ್ಥಾನದಲ್ಲಿದೆ[].

ಇತಿಹಾಸ

[ಬದಲಾಯಿಸಿ]

ರಸಾಯನಶಾಸ್ತ್ರಜ್ಞ ಹೇಮಂತ್ ಜಲಾನ್ ಇಂಡಿಗೊ ಪೇಂಟ್ಸ್‌ನ ಸ್ಥಾಪಕ. ೨೦೦ನೇ ಇಸವಿಯಲ್ಲಿ ಅವರು ತನ್ನಲ್ಲಿದ್ದ ರೂ. ೧ ಲಕ್ಷದ ಮೂಲ ಬಂಡವಾಳದೊಂದಿಗೆ ಸಂಸ್ಥೆಯನ್ನು ಸ್ಥಾಪಿಸಿದರು. ಪಾಟ್ನಾದ ಒಂದು ಸಣ್ಣ ರಾಸಾಯನಿಕ ಘಟಕ ಮತ್ತು ಜೋಧಪುರದಲ್ಲಿ ಒಂದು ಕೈಗಾರಿಕಾ ಶೆಡ್ ಸಂಸ್ಥೆಯ ಪ್ರಾಥಮಿಕ ತಯಾರಿಕಾ ಘಟಕವಾಗಿ ಕಾರ್ಯನಿರ್ವಹಿಸಿತು.

ಪ್ರಾರಂಭದಲ್ಲಿ ಕಡಿಮೆ ಗುಣಮಟ್ಟದ ಸಿಮೆಂಟ್ ಪೇಂಟ್‌ಗಳನ್ನು ತಯಾರಿಸುತ್ತಿದ್ದ ಸಂಸ್ಥೆ, ಕ್ರಮೇಣ ತನ್ನ ಉತ್ಪಾದನೆಯಲ್ಲಿ ಗುಣಮಟ್ಟ ಮತ್ತು ವೈವಿಧ್ಯತೆಯನ್ನು ಸಾಧಿಸುವಲ್ಲಿ ಅಡಿಯಿಟ್ಟಿತು. ೨೦೨೧ರ ಹೊತ್ತಿಗೆ ಕಂಪನಿಯು ಅಲಂಕಾರಿಕ ಪೇಂಟ್ ಉದ್ಯಮದಲ್ಲಿ ಆದಾಯ ಉತ್ಪಾದನೆಯ ದೃಷ್ಟಿಯಿಂದ ಐದನೇ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿತು. [] [] ಡಿಸೆಂಬರ್ ೨೦೧೯ರಲ್ಲಿ, ದೇಶದ ೨೭ ರಾಜ್ಯಗಳು ಮತ್ತು ೭ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಸ್ಥೆಯು ವಿತರಣಾ ಜಾಲಗಳನ್ನು ಹೊಂದಿತ್ತು Law, Abhishek (June 24, 2019). "Indigo Paints plans to raise up to ₹800 crore via IPO". Business Line. Retrieved April 13, 2020.Law, Abhishek (June 24, 2019). </ref> [] [] ೨೦೧೮ರಲ್ಲಿ ಸಂಸ್ಥೆಯು ಭಾರತೀಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿಯವರನ್ನು ತನ್ನ ರಾಯಭಾರಿಯನ್ನಾಗಿ ನೇಮಿಸಿತು. []


೨೦೧೪ರಲ್ಲಿ, ಅಮೇರಿಕಾ ಮೂಲದ ಹೂಡಿಕಾ ಸಂಸ್ಥೆಯಾದ ಸೆಕೋಯ ಕ್ಯಾಪಿಟಲ್, ಇಂಡಿಗೋ ಸಂಸ್ಥೆಯಲ್ಲಿ ಮೊದಲಿಗೆ ₹೫೫ ಕೋಟಿ ಹೂಡಿಕೆ ಮಾಡಲು ಮುಂದೆ ಬಂತು. ೨೦೧೬ರಲ್ಲಿ ಅದೇ ಸಂಸ್ಥೆ ಇಂಡಿಗೋ ಪೇಂಟ್ಸ್‌ನಲ್ಲಿ ಪುನಃ ₹೯೫ ಕೋಟಿ ಹಣವನ್ನು ಸಂಸ್ಥೆಯಲ್ಲಿ ಹೂಡಿತು. [೧೦] ೨೦೨೧ನೇ ಇಸವಿಯಲ್ಲಿ ಇಂಡಿಗೋ ತಾನು ಆರಂಭಿಕ ಸಾರ್ವಜನಿಕ ಕೊಡುಗೆಯ ಮೂಲಕ ಶೇರು ಮಾರುಕಟ್ಟೆ ಪ್ರವೇಶಿಸುವ ಕಾರ್ಯಕ್ರಮದ ಅಂಗವಾಗಿ, ಸಿಂಗಾಪುರ್ ಸರ್ಕಾರ, ಫಿಡೆಲಿಟಿ, ಗೋಲ್ಡ್‌ಮನ್ ಸ್ಯಾಕ್ಸ್, ನೋಮುರಾ, ಎಚ್ಎಸ್‌ಬಿಸಿ, ಪೆಸಿಫಿಕ್ ಹಾರಿಜಾನ್ ಇನ್ವೆಸ್ಟ್ಮೆಂಟ್ ಟ್ರಸ್ಟ್, ಎಸ್‌ಬಿಐ ಮ್ಯೂಚುಯಲ್ ಫಂಡ್, ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್ ಮತ್ತು ಆಕ್ಸಿಸ್ ಸೇರಿದಂತೆ ದೇಶೀ ಮತ್ತು ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಂದ ₹ ೩೪೮ ಕೋಟಿಯಷ್ಟು ಬಂಡವಾಳವನ್ನು ಸಂಗ್ರಹಿಸಿತು. ಮ್ಯೂಚುವಲ್ ಫಂಡ್ . [೧೧]

ಆರಂಭಿಕ ಸಾರ್ವಜನಿಕ ಕೊಡುಗೆ

[ಬದಲಾಯಿಸಿ]

ಜನವರಿ 20, 2021 ರಂದು, ಇಂಡಿಗೊ ಪೇಂಟ್ಸ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಸುಮಾರು 1170 ಕೋಟಿಗಳನ್ನು ಪ್ರಾರಂಭಿಸಿತು; ಬೆಲೆ ಬ್ಯಾಂಡ್ ಅನ್ನು ₹ 1,488-1,490 ಕ್ಕೆ ನಿಗದಿಪಡಿಸಲಾಗಿದೆ. [] ಈ ಸಮಸ್ಯೆಯನ್ನು 117 ಪಟ್ಟು ಹೆಚ್ಚು ಚಂದಾದಾರಿಕೆ ಮಾಡಲಾಗಿದೆ. [] [೧೨] ಫೆಬ್ರವರಿ, 2 2021 ರಂದು, ಇಂಡಿಗೊ ಪೇಂಟ್ಸ್ ಲಿಮಿಟೆಡ್ NSE ಮತ್ತು BSE ನಲ್ಲಿ ಪ್ರತಿ ಷೇರಿಗೆ ₹ 2,607.5 ದರದಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿತು, ಅದರ ವಿತರಣೆಯ ಬೆಲೆ ₹ 1,490 ಗಿಂತ 75 ಪ್ರತಿಶತದಷ್ಟು ಪ್ರೀಮಿಯಂ. [೧೩] [೧೪] [೧೫] ಪಟ್ಟಿಯ ದಿನದಂದು, ಸ್ಟಾಕ್ ತನ್ನ ಪಟ್ಟಿ ಬೆಲೆಗಿಂತ 20% ಏರಿಕೆಯಾಯಿತು ಮತ್ತು ಪ್ರತಿ ಷೇರಿಗೆ circuit 3,129 ರಂತೆ ಮೇಲಿನ ಸರ್ಕ್ಯೂಟ್ ಅನ್ನು ತಲುಪಿತು.

ಬಾಹ್ಯ ಲಿಂಕ್‌ಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Indigo Paints growth rate to beat industry for many years to come: Hemant Jalan". The Economic Times. January 20, 2020. Retrieved April 26, 2021.
  2. Law, Abhishek (June 24, 2019). "Indigo Paints plans to raise up to ₹800 crore via IPO". Business Line. Retrieved April 13, 2020.
  3. "Indigo Paints hits lowest level since listing, slips 29% from all-time high". Business Standard. March 17, 2021. Retrieved April 7, 2021.
  4. https://www.indiainfoline.com/company/indigo-paints-ltd/peer-comparison/42719
  5. Srivastava, Samar (July 23, 2018). "Indigo Paints: Adding colours with a new brush". Forbes. Retrieved April 7, 2021.
  6. Sarkar, John (December 8, 2019). "We are aiming for Rs 3,000 crore in five years: MD Indigo Paints". The Times Of India. Retrieved April 7, 2021.
  7. Matkar, Sunil (January 20, 2021). "Indigo Paints IPO worth Rs 1,170 crore opens today: Should you subscribe?". Moneycontrol.com. Retrieved April 7, 2021.
  8. ೮.೦ ೮.೧ ೮.೨ D'Souza, Sharleen (January 19, 2021). "Indigo Paints IPO: Here's All You Need To Know". Bloomberg. Retrieved April 12, 2021. ಉಲ್ಲೇಖ ದೋಷ: Invalid <ref> tag; name "BQ" defined multiple times with different content
  9. Laghate, Gaurav (June 15, 2018). "Indigo Paints signs MS Dhoni as brand ambassador; plans Rs 240 crore ad spend over 3 years". The Economic Times. Retrieved April 7, 2021.
  10. ಉಲ್ಲೇಖ ದೋಷ: Invalid <ref> tag; no text was provided for refs named HBL
  11. "Indigo Paints raises Rs 348 crore from 25 anchor investors ahead of IPO". Moneycontrol.com. January 20, 2021. Retrieved April 13, 2021.
  12. "Indigo Paints IPO subscribed over 50 times so far on final day". Mint. January 19, 2021. Retrieved April 12, 2021.
  13. D'Souza, Sharleen (February 2, 2021). "Indigo Paints Shares Double Over IPO Price On Market Debut". Bloomberg. Retrieved April 12, 2021.
  14. "Indigo Paints shares listing on BSE, NSE today: Grey market premium strong, bumper debut likely". India TV. February 2, 2021. Retrieved April 7, 2021.
  15. Bhargava, Kshitij (February 2, 2021). "Indigo Paints shares hit 20% upper circuit after bumper debut; total listing day gains touch 110%". Financial Express. Retrieved April 7, 2021.