ವಿಷಯಕ್ಕೆ ಹೋಗು

ಆಫೊನ್ಸೊ ಡಿ ಆಲ್ಬುಕರ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಫೊನ್ಸೊ ಡಿ ಆಲ್ಬುಕರ್ಕ್
Governor and Captain-General of the Seas of India, Viceroy of India, First Duke of Goa
Duke of Goa
Tenure1515
SuccessorBrás de Albuquerque
Issue Brás de Albuquerque, 2nd Duke of Goa
Full name
Afonso de Albuquerque
Noble familyAlbuquerque
FatherGonçalo de Albuquerque
MotherLeonor de Menezes
Born1453
Alhandra, Kingdom of Portugal
Died16 December 1515
Goa, Portuguese India
BuriedIgreja da Nossa Senhora da Graça, Lisbon, Kingdom of Portugal
OccupationAdmiral, Viceroy of India, Duke of Goa

ಆಫೊನ್ಸೊ ಡಿ ಆಲ್ಬುಕರ್ಕ್ (1453 - ಡಿಸೆಂಬರ್ 16, 1515)ಪೋರ್ಚುಗಲ್ ವಸಹಾತಿನ ಆಡಳಿತಗಾರ. ಶ್ರೇಷ್ಠ ನೌಕಾನಾಯಕ. ಜನನ ಲಿಸ್ಬನ್‍ನಲ್ಲಿ. ಐದನೆಯ ಆಫೊಜೊ ಡನ ಆಸ್ಥಾನದಲ್ಲಿ ಶಿಕ್ಷಣ ಪಡೆದ. ಆಫೊಜೊ ಡ ಸ್ಪೇನಿನ ಮೇಲೆ ದಾಳಿ ಮಾಡಿದಾಗ (1476) ಅದರಲ್ಲಿ ಭಾಗವಹಿಸಿದ. ಕೊಚ್ಚಿಯ ರಾಜನೊಂದಿಗೆ ಸ್ನೇಹ ಸಂಪಾದಿಸಲು ಮತ್ತು ಅಲ್ಲಿ ಕೋಟೆ ಕಟ್ಟಲು ರಾಜ ಇವನನ್ನು ಭಾರತಕ್ಕೆ ಕಳಿಸಿಕೊಟ್ಟ (1503). 1504ರಲ್ಲಿ ಲಿಸ್ಬನ್ನಿಗೆ ಮರಳಿದ. ಆದರೆ ಪುನಃ 1506ರಲ್ಲಿ ಇವನನ್ನು ಕೆಂಪುಸಮುದ್ರಕ್ಕೆ ಬರುವ ಇಲ್ಲವೇ ಹೊರಡುವ ಹಡಗುಗಳ ಮೇಲೆ ದಾಳಿಮಾಡಬೇಕೆಂಬ ಆದೇಶ ನೀಡಿ, ಪೂರ್ವದ ದಂಡಯಾತ್ರೆಗೆ ಕಳುಹಲಾಯಿತು. 1506-1508ರಲ್ಲಿ ಮಡಗಾಸ್ಕರ್ ಮತ್ತು ಮೋಜಾಂಬಿಕ್‍ಗಳಲ್ಲಿ ಶೋಧನೆ ನಡೆಸಿದ. ಸೊಕೊಟ್ರಾದಲ್ಲಿ ಕೋಟೆ ಕಟ್ಟಿಸಿದ. ಪರ್ಷಿಯನ್ ಕೊಲ್ಲಿಯ ಪ್ರವೇಶದ್ವಾರದಲ್ಲಿ, ಓರ್ಮಜ್ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡ. ಆದರೆ ದಂಡೆಗೆ ಬರುವ ಹಡಗುಗಳನ್ನು ದೋಚುವುದರಲ್ಲಿಯೇ ಆಸಕ್ತಿಯಿದ್ದ ಇವನ ಸಹಚರರ ಬಲವಂತದಿಂದ ಓರ್ಮಜನ್ನು ಕೆಲಕಾಲ ಬಿಡಬೇಕಾಯಿತು. 1508ರಲ್ಲಿ ಡಿಸೆಂಬರಿನಲ್ಲಿ ಭಾರತಕ್ಕೆ ಬಂದ. 1509ರಲ್ಲಿ ಆಲ್ಮೆಡಾನ ಉತ್ತರಾಧಿಕಾರಿಯಾಗಿ, ಗವರ್ನರ್ ಹುದ್ದೆ ಸ್ವೀಕರಿಸಿದ. ಗೋವೆಯ ಮೇಲೆ ದಾಳಿಮಾಡಿದ (ಮಾರ್ಚ್ 1510). ನವೆಂಬರ್ನಲ್ಲಿ ಅದು ಸಂಪುರ್ಣ ಕೈವಶವಾಯಿತು. ಲಿಸ್ಬನ್ನಿನ ಮಾದರಿಯಲ್ಲಿ ಗೋವಾದಲ್ಲೊಂದು ಸೆನೆಟ್ ಸ್ಥಾಪಿಸಿದ. ಪೌರಸ್ತ್ಯ ರಾಷ್ಟ್ರಗಳಲ್ಲಿಯೇ ಇದೊಂದು ಹೊಸ ಪ್ರಯೋಗ. ಆರ್ಥಿಕ ಮತ್ತು ನ್ಯಾಯಾಡಳಿತಗಳನ್ನು ಸ್ಥಳೀಯ ಅಧಿಕಾರಿಗಳಿಗೆ ವಹಿಸಿಕೊಟ್ಟ. ಮಲಬಾರ್ ದಂಡೆಗುಂಟ ವ್ಯಾಪಾರದ ಹತೋಟಿ ಪೋರ್ಚುಗೀಸರ ಕೈಗೆ ಬಂತು. ಆರು ತಿಂಗಳ ಅನಂತರ ಮಲಾಕ್ಕಾ ಮೇಲೆ ದಾಳಿ ಮಾಡಿ, ಕೈವಶಪಡಿಸಿಕೊಂಡ. ಅಲ್ಲೊಂದು ಕೋಟೆಯನ್ನು ನಿರ್ಮಿಸಿದನಲ್ಲದೆ ಸ್ಥಳೀಯರ ಆಡಳಿತವನ್ನು ಸಂಘಟಿಸಿದ. ಪೇಗು, ಕೊಚ್ಚಿ, ಚೀನ, ಸಯಾಮ್ ಮತ್ತು ಜಾವಾಗಳೊಂದಿಗೆ ಮೈತ್ರಿಯಂತ ಸಂಬಂಧ ಸ್ಥಾಪಿಸಿದ. ಗೋವ, ಕೊಚ್ಚಿ, ಕಣ್ಣಾನೂರುಗಳಲ್ಲಿ ಆಸ್ಪತ್ರೆ ಪ್ರಾರಂಭಿಸಿದ. ಕೆಲಕಾಲದ ಅನಂತರ ಓರ್ಮಜ್ಗೆ ಹಿಂತಿರುಗಿದ. ಈ ಪಟ್ಟಣವನ್ನು ಅಂಕಿತದಲ್ಲಿಟ್ಟು ಕೊಂಡಿದ್ದುದರಿಂದ ಪರ್ಷಿಯನ್ ಕೊಲ್ಲಿಯ ಸಮೃದ್ಧ ವ್ಯಾಪಾರದಮೇಲೆ ಪ್ರಭುತ್ವ ಸ್ಥಾಪಿಸುವುದು ಪೋರ್ಚುಗೀಸರಿಗೆ ಸಾಧ್ಯವಾಯಿತು. ಏಡನ್ ಮೇಲೆ ಈತ ಮಾಡಿದ ದಾಳಿ (1513) ಯಶಸ್ವಿಯಾಗಲಿಲ್ಲ. ವಸಾಹತು ವಿಸ್ತರಿಸುದದಲ್ಲದೇ ನೈಲ್ ನದಿಯನ್ನು ಕೆಂಪು ಸಮುದ್ರಕ್ಕೆ ತಿರುಗಿಸಿ ಈಜಿಪ್ಟನ್ನು ಒಂಟಿಯಾಗಿ ಮಾಡುವುದು, ಮದೀನಾದಿಂದ ಮಹಮ್ಮದ್ ಪೈಗಂಬರರ ಉಳಿದ ಅವಶೇಷಗಳನ್ನು ಸ್ಥಳಾಂತರಿಸುವುದು ಮೊದಲಾದ ಯೋಜನೆಗಳನ್ನು ಪುರಸ್ಕರಿಸಿದ. ಇವನಿಂದಲೇ ಪುರ್ವದಲ್ಲಿ ಪೋರ್ಚುಗೀಸರ ವಸಾಹತು ಸ್ಥಾಪನೆ ಸಾಧ್ಯವಾಯಿತು. ಮುಸ್ಲಿಮರಿಗೆ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಈ ಮೊದಲಿದ್ದ ಏಕಸ್ವಾಮ್ಯ ಕೊನೆಗೊಂಡಿತು. ಆಸ್ಥಾನದಲ್ಲಿನ ಒಳಸಂಚು, ವೈಯುಕ್ತಿಕ ವಿರೋಧಿಗಳು ಮೇಲಧಿಕಾರದಲ್ಲಿದ್ದುದು ಇವನ ಅವನತಿಗೆ ಕಾರಣಗಳಾದುವು. ಓರ್ಮಜ್ನಿಂದ ಭಾರತಕ್ಕೆ ಮರಳುವಾಗ ಅವನ ಆರೋಗ್ಯ ಕ್ಷೀಣಿಸಿತು. ಗೋವದಲ್ಲಿ ನಿಧನಹೊಂದಿದ. 1566ರಲ್ಲಿ ಅವನ ಮೂಳೆಗಳನ್ನು ಪೋರ್ಚುಗಲ್ಗೆ ಒಯ್ಯಲಾಯಿತು. ಆಲ್ಬುಕರ್ಕನ ಮೂಳೆಗಳು ಗೋವದಲ್ಲಿರುವವರೆಗೂ ಪೋರ್ಚುಗೀಸ್ ಸಾಮ್ರಾಜ್ಯ ಗೋವದಲ್ಲಿ ಸುಭದ್ರವಾಗಿತ್ತೆಂಬ ಮೂಢನಂಬಿಕೆಯೂ ಇದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]