ವಿಷಯಕ್ಕೆ ಹೋಗು

ಆಟಿಯ ಗಾದೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಟಿಯ ಗಾದೆಗಳು:ಆಟಿ ತಿಂಗಳು ಎಂದರೆ ಸುಮಾರು ಜುಲೈ ತಿಂಗಳಿನಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಂದು ಶುರುವಾಗಿ ಮತ್ತು ಮುಂದಿನ ಸಿಂಹ ಸಂಕ್ರಮಣದ ವರೆಗೆ. ತುಳುನಾಡಿನ ೧೨ ತಿಂಗಳುಗಳ ಪೈಕಿ ನಾಲ್ಕನೇ ತಿಂಗಳು. ರಾಜ್ಯದ ಬೇರೆಡೆಯಲ್ಲಿ ಆಷಾಡಮಾಸದ ಆಚರಣೆಯಂತೆ ಈ ತಿಂಗಳಿನಲ್ಲಿ ಯಾವುದೇ ಸಮಾರಂಭಗಳು, ಪೂಜೆ-ಪುನಸ್ಕಾರಗಳು ನಡೆಯುವುದಿಲ್ಲ. ಹಾಗಾಗಿ ಆಟಿಗೆ ಸಂಬಂದಪಟ್ಟಂತೆ ಕೆಲವು ಗಾದೆಗಳೂ ಸಹ ಇವೆ.

ಗಾದೆಯ ಲಕ್ಷಣಗಳು

[ಬದಲಾಯಿಸಿ]

ಆಟಿಯ ಗಾದೆಗಳು ಸಂಕ್ಷಿಪ್ತವಾಗಿ ಚುಟುಕಾಗಿರುತ್ತದೆ.

ಪ್ರಾಸ ಬದ್ಧವಾಗಿರುತ್ತದೆ.

ಅರ್ಥ ಪೂರ್ಣವಾಗಿರುತ್ತದೆ.

ಆಟಿಯ ಗಾದೆಗಳು

[ಬದಲಾಯಿಸಿ]

ಆಟಿಡ್ ನಕ್ಕುರು ಮರಿಟ ಪೊಣ್ಣು ಕೇನರೆ ಪೋಪುಂಡುಗೆ- ಆಟಿಯಲ್ಲಿ ಎರೆಹುಳು ನಾಗರಹಾವಿನ ಬಳಿ ಹೆಣ್ಣು ಕೇಳುವುದಕ್ಕೆ ಹೋಗುತ್ತದೆ ಅಂತೆ.

ಆಟಿಡ್ ತೆಡ್ಲ್ ಬತ್ತ್ಂಡ ಅಟ್ಟಪೊಲಿಪೋವು ಸೋಣೊಡು ತೆಡ್ಲ್ ಬತ್ತ್ಂಡ ಸೊಂಟ ಪೊಲಿಪೋವು(ತುಳು) - ಆಟಿ ತಿಂಗಳಲ್ಲಿ ಸಿಡಿಲು ಬಡಿದರೆ ಅಟ್ಟ ಮುರಿದುಬೀಳಬಹುದು ಸೋಣದಲ್ಲಿ ಸಿಡಿಲು ಬಡಿದರೆ ಸೊಂಟ ಮುರಿಯಬಹುದು ಎಂದು ಈ ಗಾದೆ ವಿವರಿಸುತ್ತದೆ. ಅದರ ಅರ್ಥ ಆಟಿ ತಿಂಗಳ ಸಿಡಿಲು ಭಯಂಕರವಾಗಿರುತ್ತದೆ ಎಂದರ್ಥ.

ಆಟಿಡ್ದ್ ಬೊಕ್ಕ ಅರೆಗಾಲ, ಮಾಯಿಡ್ದ್ ಬೊಕ್ಕ ಮರಿಯಾಲ - ಆಟಿಯಲ್ಲಿ ಬೇಸಿಗೆಕಾಲ , ಮಾಯಿಯಲ್ಲಿ ಮಳೆಗಾಲ. ಇದರರ್ಥ ಆಟಿ ತಿಂಗಳಲ್ಲಿ ಮಳೆ ಕಡಿಮೆ ಹಾಗೆ ಮಾಯಿ ತಿಂಗಳಲ್ಲಿ ಮಳೆ ಜಾಸ್ತಿ.

ಆಟಿ ಆಡೊಂದು ಪೋಪುಂಡು ಸೋನೊ ಓಡೊಂದು ಪೋಪುಂಡು - ಆಟಿ ಆಡುತ್ತಾ ಹೋಗುತ್ತದೆ ಸೋಣ ಓಡುತ್ತಾ ಹೋಗುತ್ತದೆ. ಇದರರ್ಥ ಆಟಿ ತಿಂಗಳು ಬಾರಿ ಮೆಲ್ಲನೆ ಕಳೆದು ಹೋಗುತ್ತದೆ ಆದರೆ ಸೋಣ ತಿಂಗಳು ಬೇಗ ಕಳೆದು ಹೋಗುತ್ತದೆ.

ಆಟಿ ಆನೆದಲೆಕ ಪೋಪುಂಡು ಸೋನೊ ಕುದ್‌ರೆದಲೆಕ ಪೋಪುಂಡು - ಆಟಿ ಆನೆ ತರ ಹೋಗುತ್ತದೆ ಸೋಣ ಕುದುರೆ ಹೋಗುತ್ತದೆ. ಇದರರ್ಥ ಆಟಿ ತಿಂಗಳು ಬಾರಿ ಮೆಲ್ಲನೆ ಕಳೆದು ಹೋಗುತ್ತದೆ ಆದರೆ ಸೋಣ ತಿಂಗಳು ಬೇಗ ಕಳೆದು ಹೋಗುತ್ತದೆ.

ಕನಿಕರೊದಾಯಗ್ ಆಟಿ ಸುಖೊತಾಯಗ್ ಸುಗ್ಗಿ - ಕನಿಕರ ಇದ್ದವನಿಗೆ ಆಟಿ ಸುಖ ಇದ್ದವನಿಗೆ ಸುಗ್ಗಿ . ಇದರ್ಥ ಕನಿಕರ ಇದ್ದವನಿಗೆ ಆಟಿ ತಿಂಗಳು ಸೂಕ್ತ ಸುಖ ಸಿಗಲು ಸೋಣ ತಿಂಗಳು ಬರಬೇಕಾದೀತು ಎಂದು.

ಆಟಿಡ್ ಬರ್ಸ ಬತ್ತ್ಂಡ ಅರಿ ಬುಲೆವು, ಮಾಯಿಡ್ ಬರ್ಸ ಬತ್ತ್ಂಡ ಮಲೆ ಬುಲೆವು - ಆಟಿಯಲ್ಲಿ ಮಳೆ ಸುರಿದರೆ ಅಕ್ಕಿ ಬೆಳೆಯಬಹುದು, ಮಾಯಿಯಲ್ಲಿ ಮಳೆ ಸುರಿದರೆ ಬೆಟ್ಟ ಬೆಳೆಯಬಹುದು. ಇದರರ್ಥ ಆಟಿ ತಿಂಗಳಲ್ಲಿ ಮಳೆ ಬಂದರೆ ಅಕ್ಕಿ ಬೆಳೆಯಬಹುದು, ಮಾಯಿಯಲ್ಲಿ ಮಳೆ ಬಂದರೆ ಬೆಟ್ಟ ಗುಡ್ಡ ಬೆಳೆಯಬಹುದು .

ಆಟಿದ ದೊಂಬುಗು ಆನೆದ ಬೆರಿ ಪುಡವು - ಆಟಿಯ ಬಿಸಿಲಿಗೆ ಆನೆಯ ಬೆನ್ನು ಮುರಿಯಬಹುದು. ಇದರರ್ಥ ಆಟಿ ತಿಂಗಳಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಆನೆಯ ಬೆನ್ನೂ ಮುರಿಯಬಹುದು ಎಂದು. []

ಆಟಿದ ಪೆಲಕಾಯಿ ನಂಜಿ ಮಗಾ, ಅಮ್ಮೆ ಬತ್ತೆನಾ ತೂಲ ಮಗಾ - ಆಟಿಯ ಹಲಸಿನಹಣ್ಣು ನಂಜಿ ಎಂದು ಹೇಳಿ ಅಪ್ಪ ಬರುವವರೆಗೆ ಕಾಯಿರಿ ಎಂದು ಈ ಗಾದೆಯ ಒಳ ಅರ್ಥ []

ಉಲ್ಲೇಖಗಳು

[ಬದಲಾಯಿಸಿ]
  1. Karnataka, Headline. "Mangalore News: ಆಟಿ ತಿಂಗಳು ಪೂರ್ತಿ ಬಿಸಿಲು ; 20 ವರ್ಷಗಳಲ್ಲೇ ಮೊದಲು, ಸೊರಗಿದ ನದಿಗಳು, ಒಣಗಿದ ಗದ್ದೆಗಳು, ಕರಾವಳಿಗೆ ಬರಗಾಲದ ಮುನ್ಸೂಚನೆ !". Headline Karanataka (in ಇಂಗ್ಲಿಷ್).
  2. "ಬೆನ್ನಿಡೊಂತೆ ಪುರ್ಸೊತುದ ತಿಂಗೊಲು - ಆಟಿ" (in Tulu). 22 July 2023.