ವಿಷಯಕ್ಕೆ ಹೋಗು

ಆಟಿ ಹುಣ್ಣಿಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಟಿ ತಿಂಗಳು

[ಬದಲಾಯಿಸಿ]

ಆಟಿ ತಿಂಗಳು ತುಳುನಾಡಿನವರಿಗೆ ತುಂಬಾ ಕಷ್ಟಕರವಾದ ಕಾಲವಾಗಿತ್ತು. ಆದರೆ ಕಾಲಘಟ್ಟ ಬದಲಾಗಿ ಬಡತನ, ರೋಗರುಜಿನಗಳು ಕಡಿಮೆಯಾಗಿ, ತುಳುನಾಡು ಈಗ ತುಂಬಾ ಬದಲಾಗಿದೆ. ಆದರೂ ಹಿರಿಯೆರು ಪ್ರಾರಂಭಿಸಿದ ಆಟಿ ತಿಂಗಳ ಕೆಲವು ಕ್ರಮಗಳು ಈಗ ಕೂಡಾ ತುಳುಜನರು ಪಾಲನೆ ಮಾಡುತ್ತಾ ಇದ್ದಾರೆ.

ಆಟಿ ಹುಣ್ಣಿಮೆ

[ಬದಲಾಯಿಸಿ]

ತುಳುವರು ಆಟಿಯ ಅಮವಾಸ್ಸ್ಯೆಗೆ ಹಾಲೆ ಮರದ ಕೆತ್ತೆಯ ಕಶಾಯ ಕುಡಿತ್ತಾರೆ, ಈಶ್ವರ ದೇವಸ್ಥಾನದಲ್ಲಿ ತೀರ್ಥ ಸ್ನಾನ ಮಾಡುತ್ತಾರೆ.ನಾಗರ ಪಂಚಮಿ ಬಂದಾಗ ನಾಗನಿಗೆ ತನು(ಹಾಲು) ಹಾಕುತ್ತಾರೆ, ಹಾಗೆಯೇ ಆಟಿ ಹುಣ್ಣಿಮೆಗೆ ತಡ್ಯ ಪುಡ್ಯಾಡುನು ಅಥಾವಾ ಹೊಸ್ತಿಲು ಪೂಜೆ ಮಾಡುತ್ತಾರೆ.[]

ಹುರುಳಿ ಯ ಹೂವು ಅತೀ ಮುಖ್ಯವಾದ ವಸ್ತು

[ಬದಲಾಯಿಸಿ]

ಹುರುಳಿಯನ್ನು ನೀರಿನಲ್ಲಿ ಹಾಕಿ ಅದನ್ನು ಸ್ವಲ್ಪ ಸಮಯ ನೀರಿನಲ್ಲಿ ಇಟ್ಟು ಆ ಬಳಿಕ ಅದನ್ನು ಮಣ್ಣಿನಲ್ಲಿ ಹಾಕಿ ಅದಕ್ಕೆ ಮಣ್ಣಿನ ಮಡಕೆಯೊಂದನ್ನು ಮುಚ್ಚಿ ಇಟ್ಟು, ಆಟಿ ಹುಣ್ಣಿಮೆಯಲ್ಲಿ ಅದನ್ನು ತೆಗೆದು ನೋಡಿದರೆ ಹಳದಿ ಬಣ್ಣದ ಸೊಗಸಾದ ಹುರುಳಿಯ ಹೂವುಗಳು ಆಟಿ ಹುಣ್ಣಿಮೆಯ ಹೊಸ್ತಿಲು ಪೂಜೆಗೆ ಸಿದ್ಧವಾಗಿರುತ್ತದೆ.[]

ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಬರೆಯುವ ಕ್ರಮ

[ಬದಲಾಯಿಸಿ]

ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆ ಅನ್ನುವುದು ತುಳುನಾಡಿನ ಆಟಿಯ ಹುಣ‍್ಣಿಮೆಯಲ್ಲಿ ಬರುವ ಅತೀ ಮುಖ್ಯವಾದ ಒಂದು ಆಚರಣೆ. ಹೊಸ್ತಿಲನ್ನು ಚೆನ್ನಾಗಿ ತೊಳೆದು , ಜೇಡಿ ಮಣ್ಣಿನಲ್ಲಿ ಹೊರಗೆ , ಒಳಗೆ ಸುಂದರವಾದ ರೇಖೆಯಲ್ಲಿ ರಂಗೋಲಿ ಬರೆಯುತ್ತಾರೆ. ಇದಕ್ಕೆ ಹೊಸ್ತಿಲು ಬರೆಯುದು ಎಂದೂ ಹೇಳುತ್ತಾರೆ.[]

ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆಯ ಕ್ರಮ

[ಬದಲಾಯಿಸಿ]

ಹೊಸ್ತಿಲು ಬರೆದ ನಂತರ, ಸಿಧ್ಧವಾದ ಹುರುಳಿಯ ಹೂವನ್ನು ಎರಡೂ ಬದಿಯಲ್ಲಿ ಇಟ್ಟು ಅಲಂಕಾರ ಮಾಡುತ್ತಾರೆ. ಅಶ್ತು ಮಾತ್ರವಲ್ಲದೆ ಹಲಸಿನ ಬೀಜವನ್ನು ಬೇಯಿಸಿ, ಅವುಗಳನ್ನು ಹೊಸ್ತಿಲಿನ ಎರಡೂ ಬದಿಯಲ್ಲಿ ಇಟ್ಟು ಅದರ ಜೊತೆಗೆ ನೀರನ್ನು ಇಟ್ಟು ಹೊಸ್ತಿಲು ಪೂಜೆ ಮಾಡುತ್ತಾರೆ.[]

ಜಾನಪದವೋ ಅಥಾವ ವೈಧಿಕ ಕ್ರಮವೋ

[ಬದಲಾಯಿಸಿ]

ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆ ಜಾನಪದವೋ ಅಥಾವ ವ್ಯಧಿಕ ಕ್ರಮವೋ ಎಂಬುದು ಸಾಮಾನ್ಯವಾಗಿ ಬರುವ ಪ್ರಶ್ನೆ. ಆದರೆ ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆಗೆ ಉಪಯೋಗಿಸುವ ಸಮಸ್ತ ಸಾಮಾಗ್ರಿಗಳು ಪ್ರಾಕೃತಿಕವಾಗಿರುದರಿಂದ ಈ ಆಚರಣೆಯು ಜಾನಪದವಾಗಿರುತ್ತದೆ ಎಂದು ತುಳು ಜಾನಪದ ವಿದ್ವಾಂಸ ಕುಂಡಂತಾಯರು ಅಭಿಪ್ರಾಯ ಪಟ್ಟಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Desk, Tulunada Dhwani News (24 August 2023). "ವರಮಹಾಲಕ್ಷ್ಮೀ ವ್ರತ" ಸಂಪೊತ್ತುದ ರಾಣಿಗ್ ಪೂಜೆ"." Tulunada Dhwani.
  2. karavalixpress, Janardhan Kodavoor/Team (19 July 2024). "ಆಟಿಯ ಹುಣ್ಣಿಮೆ "ತಡ್ಯಪುಡಾಡುಣ"". KaravaliXpress.com.
  3. ೩.೦ ೩.೧ karavalixpress, Janardhan Kodavoor/Team (ಜುಲೈ 19, 2024). "ಆಟಿಯ ಹುಣ್ಣಿಮೆ "ತಡ್ಯಪುಡಾಡುಣ"". KaravaliXpress.com.
  4. "ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ? | Udayavani – ಉದಯವಾಣಿ".