ವಿಷಯಕ್ಕೆ ಹೋಗು

ಆಟಿ ಪಾಯಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಟಿ ಪಾಯಸ
ಮೂಲಕರಾವಳಿ
ಸಂಬಂಧಿತ ಪಾಕಪದ್ಧತಿಪಾಯಸ

ಆಟಿ ಪಾಯಸ[] ಎಂದರೆ ಆಟಿ ತಿಂಗಳಲ್ಲಿ ಆಟಿ ಸೊಪ್ಪನ್ನು ಬಳಸಿ ಮಾಡುವ ಒಂದು ರೀತಿಯ ದ್ರವ ರೂಪದ ತಿಂಡಿ ಹಾಗು ಒಂದು ರೀತಿಯ ಮೆಂತೆ ಗಂಜಿಯನ್ನು ಮಾಡುತ್ತಾರೆ .ಈ ಪಾಯಸವನ್ನು ಆಟಿ ತಿಂಗಳಲ್ಲಿ ಮಾತ್ರ ಮಾಡಿ ಕುಡಿಯ ಬಹುದು.ಏಕೆಂದರೆ ಆಟಿ ಸೊಪ್ಪು ಬಳಸಿ ಮಾಡುವ ಆ ಪಾಯಸವನ್ನು ನೀವು ತಿನ್ನಬೇಕೆಂದು ಬಯಸಿದರೂ ಬೇರೆ ಸಮಯದಲ್ಲಿ ಸವಿಯಲು ಸಾಧ್ಯವಾಗುವುದಿಲ್ಲ. ಆಟಿ ತಿಂಗಳಿನಲ್ಲಿ 18 ದಿನಕ್ಕೆ 18 ಬಗೆಯ ಔಷಧೀಯ ಗುಣಗಳು ಸೇರಿರುತ್ತದೆ ಆ ಗಿಡದಲ್ಲಿ . ಅಡುಗೆಮನೆ ಆಟಿ 18: ಕೊಡಗಿನ ಪ್ರತಿ ಮನೆಗಳಲ್ಲೂ ಆಟಿ ಪಾಯಸದ್ದೇ ಘಮಲು ಆಗಸ್ಟ್‌ 3ಕ್ಕೆ ಕೊಡಗಿನಲ್ಲಿ ಆಟಿ ಸಂಭ್ರಮ. ಆಟಿ ೧೮ ಎಂದರೆ ಕೊಡಗಿನವರಿಗೆ ತುಂಬಾನೇ ವಿಶೇಷ. ಅಲ್ಲಿಯ ಪ್ರತಿ ಮನೆಯಲ್ಲೂ ಆಟಿ ಪಾಯಸ ಘಮ್‌ ಅಂತ ಸುವಾಸನೆ ಬೀರುತ್ತಿರುತ್ತದೆ. ವರ್ಷಕ್ಕೆ ಒಂದೇ ಬಾರಿ ಮಾಡುವ ಆ ಪಾಯಸ ತುಂಬಾನೇ ವಿಶೇಷ. ಆಟಿ ೧೮ ಕೊಡಗಿನ ಪ್ರತಿ ಮನೆಗಳಲ್ಲೂ ಆಟಿ ಪಾಯಸದ್ದೇ ಘಮಲು ಏಕೆಂದರೆ ಆಟಿ ಸೊಪ್ಪು ಬಳಸಿ ಮಾಡುವ ಆ ಪಾಯಸವನ್ನು ನೀವು ತಿನ್ನಬೇಕೆಂದು ಬಯಸಿದರೂ ಬೇರೆ ಸಮಯದಲ್ಲಿ ಸವಿಯಲು ಸಾಧ್ಯವಾಗುವುದಿಲ್ಲ. ಆಟಿ ತಿಂಗಳಿನಲ್ಲಿ ೧೮ ದಿನಕ್ಕೆ ೧೮ ಬಗೆಯ ಔಷಧೀಯ ಗುಣಗಳು ಸೇರಿರುತ್ತದೆ ಆ ಗಿಡದಲ್ಲಿ ಎಂದು ಹಿರಿಯರ ನಂಬಿಕೆ . ನೀವು ಬೇರೆ ಸಮಯದಲ್ಲಿ ಅದರ ಸೊಪ್ಪು ಚಿವುಟಿದರೆ ಯಾವುದೇ ವಿಶೇಷ ವಾಸನೆ ಇರುವುದಿಲ್ಲ. ನೀರಿನಲ್ಲಿ ಬೇಯಿಸಿದರೆ ಕಡು ನೀಲಿ ಬಣ್ಣಕ್ಕೆ ತಿರುಗುವುದೂ ಇಲ್ಲ. ಅದೇ ಆಟಿ ತಿಂಗಳಿನಲ್ಲಿ ಆ ಸೊಪ್ಪಿಗೆ ವಿಶೇಷ ವಾಸನೆ ಸೇರಿಕೊಳ್ಳುತ್ತದೆ. ಪ್ರತಿದಿನವೂ ದಿನವೂ ಒಂದೊಂದು ಬಗೆಯ ಔಷಧಿ ಅದರಲ್ಲಿ ಸೇರುತ್ತಾ ಹೋಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಈ ಆಟಿಸೊಪ್ಪು ಬೇರೆ ಕಡೆ ಸಿಗುವುದು ಕಡಿಮೆ, ಕೊಡಗಿನಲ್ಲಿ ಎಲ್ಲಾ ಕಡೆ ಸಿಗುತ್ತದೆ, ಕೊಡಗಿನ ಸಾಮಗ್ರಿ ಸಿಗುವ ವಸ್ತುಗಳು ಬೆಂಗಳೂರಿನಲ್ಲಿದ್ದರೆ ಅಲ್ಲಿ ನಿಮಗೆ ಈ ಸೊಪ್ಪು ಸಿಕ್ಕರೆ ತಂದು ಖಂಡಿತ ಇದರ ರುಚಿ ನೋಡಿ.

ಆಟಿ ಪಾಯಸ ರೆಸಿಪಿ

[ಬದಲಾಯಿಸಿ]

ಆಟಿ ಸೊಪ್ಪು

ಆಟಿ ಸೊಪ್ಪು

1 ಲೋಟ ಅಕ್ಕಿ,1/4 ಕೆಜಿ ಬೆಲ್ಲ,1 ಚಮಚ ತುಪ್ಪ,ಏಲಕ್ಕಿ,ಗೋಡಂಬಿ, ಆಟಿ ಸೊಪ್ಪನ್ನು ತಂದು ಅದನ್ನು ತೊಳೆದು ಬೇಯಿಸಬೇಕು. ಆಗ ನೀರು ಕಡು ನೀಲಿ ಬಣ್ಣಕ್ಕೆ ತಿರುಗುತ್ತದೆ. ನಂತರ ಆ ನೀರಿನಲ್ಲಿ ಅಕ್ಕಿ ಬೇಯಿಸಬೇಕು, ಬೆಲ್ಲದ ಪಾಕ ಮಾಡಿ ಸೇರಿಸಬೇಕು. ಅಕ್ಕಿ ಬೆಂದ ಮೇಲೆ ಸ್ವಲ್ಪ ತುಪ್ಪ ಬಿಸಿ ಮಾಡಿ ಅದರಲ್ಲಿ ಗೋಡಂಬಿ, ತೆಂಗಿನಕಾಯಿಯ ಚಿಕ್ಕ ತುಂಡುಗಳನ್ನು ಹಾಕಿ ಫ್ರೈ ಮಾಡಿ ಸೇರಿಸಿದರೆ ಆಟಿ ಪಾಯಸ ರೆಡಿ.ಆಟಿ ತಿಂಗಳಿನಲ್ಲಿ ಈ ಸೊಪ್ಪಿನಲ್ಲಿ ೧೮ ಬಗೆಯ ಔಷಧೀಯ ಗುಣಗಳು ಸೇರಿರುತ್ತವೆ. ಬೆಂಗಳೂರಿನಲ್ಲಿಯೂ ಕೊಡಗಿನವರುಕೊಡಗು ಇರುವುದರಿಂದ ಅಲ್ಲಿಯ ಕೆಲ ತರಕಾರಿ ಅಂಗಡಿಗಳಲ್ಲಿ ಈ ಸೊಪ್ಪು ಸಿಕ್ಕರೆ ಇದರ ಪಾಯಸ ಮಾಡಿ ಸವಿಯಿರಿ.

Justicia wynaadensis (5595861318)

ಬಾಹ್ಯ ಉಲ್ಲೇಖ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]