ಆಟಿ ಕುಳಿತುಕೊಳ್ಳುವುದು
ಆಟಿದ ಕುಳಿತುಕೊಳ್ಳುವುದು ಸೌರಮಾನೊದ ನಾಲ್ಕನೆ ತಿಂಗಳು ಆಟಿಯಲ್ಲಿ ಈ ಕ್ರಮ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ ಕಳೆದು ದಕ್ಷಿಣಾಯನದ ಈ ಆಟಿ ತಿಂಗಳಲ್ಲಿ ಜೋರು ಮಳೆ ಬರುತ್ತದೆ . ಈ ಮಳೆಗೆ ಭೂಮಿ ಎಲ್ಲಾ ನೆನೆದು ತಂಪಾಗಿರುತ್ತದೆ.ಆ ಸಮಯದಲ್ಲಿ ನಂಬಿಕೆಗೆ ಅನುಸಾರವಾಗಿ ಕೆಲವು ಆಚರಣೆಗಳು ನಡೆಯುತ್ತದೆ .[೧] ಮದುವೆ ಆಗಿ ಗಂಡನ ಮನೆಗೆ ಬಂದ ಹೆಣ್ಣು ಸುರುವಿನ ಆಟಿ ತಿಂಗಳನ್ನು ತವರು ಮನೆಯಲ್ಲಿ ಕಳೆಯುವುದು ಹಿಂದಿನ ಕಾಲದ ಸಂಪ್ರದಾಯ ಇದನ್ನು ಆಟಿ ಕುಳಿತುಕೊಳ್ಳುವುದು ಎಂದು ಹೇಳುತ್ತಾರೆ[೨]
ಹಿನ್ನೆಲೆ
[ಬದಲಾಯಿಸಿ]ಆಟಿ ತಿಂಗಳಿನಲ್ಲಿ ಹೊಸ ಮದುಮಗ ಮತ್ತು ಮದುಮಗಳು ದೈಹಿಕ ಸಂಪರ್ಕ ಮಾಡಬಾರದೆಂಬ ನಂಬಿಕೆ. ಹಾಗಾಗಿ ಅವರನ್ನು ಬೇರ್ಪಡಿಸುವುವ ಸಲುವಾಗಿ ಈ ಸಂಪ್ರದಾಯವನ್ನು ಮಾಡಲಾಗಿದೆ
ಆಟಿಯಲ್ಲಿ ಕರೆದುಕೊಂಡು ಹೋಗುವ ಕ್ರಮ
[ಬದಲಾಯಿಸಿ]ಹೊಸ ಮದುಮಗಳನ್ನು ಸುರುವಿನ ಆಟಿಗೆ ತವರು ಮನೆಯವರು ಹೋಗಿ ಕರೆದು ಕೊಂಡು ಬರುವ ಕ್ರಮ. ಆಮೇಲೆ ಸ್ವಲ್ಪ ದಿವಸದ ನಂತರ ಗಂಡನ ಮನೆಯವರು ಬಂದು ಕರೆದುಕೊಂಡು ಹೋಗುತ್ತಾರೆ.
ಆಟಿ ಸಮ್ಮನ
[ಬದಲಾಯಿಸಿ]ಆಟಿ ಕುಳಿತುಕೊಳ್ಳಲು ಬಂದ ಮಗಳನ್ನು ಗಂಡನ ಮನೆಗೆ ಕರೆದುಕೊಂಡು ಹೋಗುಲು ಬಂದ ನೆಂಟರಿಗೆ ಜೋರಾಗಿ ಔತಣ ನಡೆಯುತ್ತದೆ. ತುಳುವಿನ ಕಬಿತೆಗಳಲ್ಲಿ ಹೀಗೊಂದು ಮಾತಿದೆ , ಬರಾಂದಿ ಬಿನ್ನೆರ್ ಬತ್ತೆರ್ ಮಗ ಸೇಸೊ ಕೊರಾಂದಿ ಸಮ್ಮನೊ ಕೊರೊಡಾಂಡೆ.
ಆಟಿಯ ನಂಬಿಕೆಗಳು
[ಬದಲಾಯಿಸಿ]ಆಟಿಯಲ್ಲಿ ಹೆಣ್ಣು ಮಗಳು ಮೈನೆರೆದರೆ ಅನಿಷ್ಠ ಎಂಬ ನಂಬೊಲಿಕೆ ಇದೆ. ಆಟಿಯಲ್ಲಿ ಮೈನರೆದ ಹುಡುಗಿಗೆ, ಅನಾರೋಗ್ಯ್ದ ಮಕ್ಕಳಿಗೆ, ಗೊಡ್ಡು ಹಸುವಿಗೆ, ಫಲಕೊಡದಿರುವ ತೆಂಗಿನ ಮರಕ್ಕೆ ಮತ್ತು ಸಂತತಿ ಆಗದಿರುವ ಹೆಂಗಸಿಗೆ ಆಟಿ ಕಳೆಂಜನಲ್ಲಿ ತಲೆಗೆ ನೀರು ಹಾಕಿಸಿ ಕಳೆಂಜನಿಗೆ ದಾನ ಕೊಟ್ಟರೆ ಆ ಅನಿಷ್ಠ ಕಳೆಯುತ್ತದೆ ಮಕ್ಕಳಾಗುತ್ತದೆ ಸಮೃದ್ದಿಯಾಗುತ್ತದೆ ಎಂಬ ನಂಬಿಕೆಗಳ ವಿಷಯ ತುಳುನಾಡಿನ ಆಟಿಕಳೆಂಜ ಪಾಡ್ದಾನದಲ್ಲಿ ಉಲ್ಲೇಖಿತವಾಗಿದೆ .
ಆಟಿಯ ತುಳು ಗಾದೆಲು
[ಬದಲಾಯಿಸಿ]- ಆಟಿ ಅಡೋಣ್ತ್ ಪೋಪುಂಡು, ಸೋಣೊ ಸೋಡೋಣ್ತ್ ಪೋಪುಂಡು.[ಆಟಿತಿಂಗಳು ನಿಧಾನವಾಗಿ/ಅಲುಗಿಕೊಂಡು ಹೋಗುತ್ತದೆ. ಸೋಣ ತಿಂಗಳು ಬೇಗನೆ/ತೋಡಿಕೊಂಡು ಹೋಗುತ್ತದೆ][೩]
- ಆಟಿಗೊರ ಸೋಣೊಗೊರ [ಆಷಾಢಕ್ಕೊಮ್ಮೆ ಶ್ರಾವಣಕ್ಕೊಮ್ಮೆ]
- ಆಟಿಡ್ ಅಗೆಲ್ ಸೋಣೊಡ್ ಕೋಲ[ಆಟಿ ತಿಂಗಳಿನ ಅಗೆಲ್ ಎಂಬ ಆಚರಣೆ ಸೋಣ ತಿಂಗಳಿನಲ್ಲಾಗುವ ಕೋಲ ಎಂಬ ಆರಾಧನೆ]
- ಆಟಿತಿಂಗೊಲುಡು ಒರ್ಲ ದಡ್ಡ್ ಇತ್ತಿನಾಯೆ ಪಿದಾಯಿ ಪೋವಾಯೆ [ಆಟಿ ತಿಂಗಳಿನಲ್ಲಿ (ಜೋರಾದ ಮಳೆಯ ಕಾರಣ) ಒಂದ ಬಳ್ಳ ದಡ್ಡು ಭತ್ತ ಇದ್ದವನು ಮನೆ ಬಿಟ್ಟು ಹೊರ ಹೋಗಲಾರನು]
- ಆಟಿದ ದೊಂಬು ಆನೆದ ಬೆರಿ ಪುಡಾವು. [ಆಟಿಯ ಬಿಸಿಲಿಗೆ ಆನೆಯ ಬೆನ್ನೂ ಒಡೆದೀತು]
- ಮಾಯಿಡ್ದ್ ಬುಕ್ಕೊ ಮರಿಯಾಲ, ಆಟಿಡ್ದ್ ಬುಕ್ಕೊ ಅರೆಗಾಲ [ಕುಂಭ(ಸೌರಮಾನದ ಹನ್ನೊಂದನೆಯ ತಿಂಗಳು) ಮಾಸದ ಅನಂತರ ಮಳೆಗಾಲ.ಕರ್ಕಟಕ ಮಾಸದ ಅನಂತರ ಬೇಸಗೆ ಕಾಲ]
- ಮಾಯಿಡ್ ಬರ್ಸ ಬತ್ತ್ಂಡ ಮಲೆ ಬುಲೆವು [ಕುಂಭ ಮಾಸದಲ್ಲಿ ಮಳೆ ಬಂದರೆ ಕಾಡು ಬೆಳೆದೀತು]
- ಆಟಿದ ಪೆಲಕಾಯಿ ನಂಜಿ ಮಗ ಅಮ್ಮೆ ಬತ್ತೆನೊ ತೂಲ ಮಗ[ ಆಷಾಡ ಮಾಸದ ಹಲಸಿನ ಹಣ್ಣು ತಿನ್ನುವುದಕ್ಕೆ ಯೋಗ್ಯವಲ್ಲ ತಿನ್ನುವಾಗ ಏನಾದರೂ ತಂದೆ ಬಂದು ಬಿಟ್ಟರೆ ಬೈಯುತ್ತಾರೆ ಅದಕ್ಕೆ ತಾಯಿ ಹಲಸಿನ ಹಣ್ಣು ಕೊಯ್ಯುವಾಗ ನೋಡಿಕೊಳ್ಳಲು ಮಕ್ಕಳಿಗೆ ಹೇಳುತ್ತಾಳೆ]