ಆಕಾಶಮಲ್ಲಿಗೆ
ಗೋಚರ
Tree Jasmine | |
---|---|
in Hyderabad, India. | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. hortensis
|
Binomial name | |
ಮಿಲ್ಲಿಂಗ್ಟೋನಿಯ ಹೊರ್ಟೆನ್ಸಿಸ್ |
ಆಕಾಶಮಲ್ಲಿಗೆ(Indian Cork Tree)ಮ್ಯಾನ್ಮಾರ್ ದೇಶದ ಮೂಲವಾಸಿ.ಭಾರತದಲ್ಲಿ ಅಲಂಕಾರಕ್ಕೆ ಉದ್ಯಾನವನಗಳಲ್ಲಿ,ಸಾಲುಮರಗಳಾಗಿ ಅಲ್ಲಲ್ಲಿ ಬೆಳೆಸಲಾಗಿದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಬಿಗ್ನೋನಿಯೆಸಿ (Bignoniaceae)ಕುಟುಂಬಕ್ಕೆ ಸೇರಿದ್ದು,ಮಿಲ್ಲಿಂಗ್ಟೋನಿಯ ಹೊರ್ಟೆನ್ಸಿಸ್( Mllingtonia hortensis)ಎಂದು ಸಸ್ಯಶಾಸ್ತ್ರೀಯ ಹೆಸರು.ಬಳಕೆಯಲ್ಲಿ ಇಂಡಿಯನ್ ಕಾರ್ಕ್ ಟ್ರೀ ಎಂದು ಕರೆಯುತ್ತಾರೆ.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಸಾದಾರಣ ಎತ್ತರಕ್ಕೆ ಬೆಳೆಯುವ ಈ ಮರ ಶಂಖುವಿನ ಆಕಾರದ ಹಂದರದಿಂದ ಅಂದವಾಗಿ ಕಾಣುತ್ತದೆ.ಸೆಪ್ಟೆಂಬರ್-ನವೆಂಬರ್ ತಿಂಗಳಲ್ಲಿ ಬಿಳಿಯ ಕೊಳವೆಯಾಕಾರದ ಹೂಗೊಂಚಲುಗಳು ಜೋತು ಬಿದ್ದಿರುವುದು.ತೊಗಟೆಯಿಂದ ಬಿರಟೆ (Cork)ದೊರೆಯುತ್ತದೆ.ದಾರುವು ಹಳದಿ ಛಾಯೆಯ ಬಿಳಿ ಬಣ್ಣದ್ದಾಗಿದ್ದು,ಮೃದುವಾಗಿದೆ.
ಉಪಯೋಗಗಳು
[ಬದಲಾಯಿಸಿ]ತೊಗಟೆಯಿಂದ ಬಿರಟೆ,ದಾರುವು ಟೀ ಪೆಟ್ಟಿಗೆ,ಅಲಂಕಾರ ವಸ್ತುಗಳ ತಯಾರಿಕೆ ಮುಂತಾದ ಕೆಲಸಗಳಿಗೆ ಒದಗುತ್ತದೆ.ಕಾಗದ ಹಾಗೂ ರೆಯಾನ್ ತಯಾರಿಕೆ ಸೂಕ್ತ.ತೊಗಟೆಯು ಜ್ವರ ನಿವಾರಕ ಎಂದು ಹೇಳಲಾಗಿದೆ.
ಛಾಯಾಂಕಣ
[ಬದಲಾಯಿಸಿ]-
in Hyderabad, India.
-
in Hyderabad, India.
-
in Hyderabad, India.
-
in Hyderabad, India.
-
in Hyderabad, India.
-
in Hyderabad, India.
ಆಧಾರ ಗ್ರಂಥಗಳು
[ಬದಲಾಯಿಸಿ]- 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.