ವಿಷಯಕ್ಕೆ ಹೋಗು

ಆಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕಾರದ ಭಿನ್ನ ವ್ಯಾಖ್ಯಾನಗಳ ಒಂದು ಉದಾಹರಣೆ

ಆಕಾರವು ಒಂದು ವಸ್ತುವಿನ ರೂಪ ಅಥವಾ ಅದರ ಬಾಹ್ಯ ಎಲ್ಲೆ, ಬಾಹ್ಯರೇಖೆ, ಅಥವಾ ಬಾಹ್ಯ ಮೇಲ್ಮೈ. ಇದು ಬಣ್ಣ, ರಚನೆ, ಅಥವಾ ಭೌತಿಕ ಸಂಯೋಜನೆಯಂತಹ ಇತರ ಗುಣಲಕ್ಷಣಗಳಿಗೆ ವಿರುದ್ಧವಾಗಿದೆ.

ಮಾನವರು ಮನಸ್ಸಿನಲ್ಲಿ ಚಿತ್ರಗಳನ್ನು ಜಿಯಾನ್‍ಗಳೆಂದು ಕರೆಯಲ್ಪಡುವ ಸರಳ ಜ್ಯಾಮಿತೀಯ ಆಕಾರಗಳಾಗಿ ವಿಭಜಿಸುತ್ತಾರೆ ಎಂದು ಮನೋವಿಜ್ಞಾನಿಗಳು ಸಿದ್ಧಾಂತಿಸಿದ್ದಾರೆ.[] ಜಿಯಾನ್‍ಗಳ ಉದಾಹರಣೆಗಳಲ್ಲಿ ಶಂಕುಗಳು ಮತ್ತು ಗೋಳಗಳು ಸೇರಿವೆ.

ಕೆಲವು ಸರಳ ಆಕಾರಗಳನ್ನು ವಿಶಾಲ ವರ್ಗಗಳಲ್ಲಿ ಇರಿಸಬಹುದು. ಉದಾಹರಣೆಗೆ, ಬಹುಭುಜಾಕೃತಿಗಳನ್ನು ಅವುಗಳ ಅಂಚುಗಳ ಸಂಖ್ಯೆಯ ಪ್ರಕಾರ ತ್ರಿಕೋನಗಳು, ಚತುರ್ಭುಜಗಳು, ಪಂಚಭುಜಗಳು, ಇತ್ಯಾದಿ ಎಂದು ವರ್ಗೀಕರಿಸಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದನ್ನು ಹೆಚ್ಚು ಚಿಕ್ಕ ವರ್ಗಗಳಾಗಿ ವಿಭಜಿಸಲಾಗುತ್ತದೆ. ತ್ರಿಕೋನಗಳು ಸಮಬಾಹು, ಸಮದ್ವಿಬಾಹು, ವಿಶಾಲ, ತೀವ್ರ, ಅಸಮಬಾಹು, ಇತ್ಯಾದಿ ಇರಬಹುದು. ಚತುರ್ಭುಜಗಳು ಆಯಾಕಾರಗಳು, ರಾಂಬಸ್‍ಗಳು, ವಿಷಮ ಚತುರಸ್ರಗಳು, ಚತುಷ್ಕೋನಗಳು, ಇತ್ಯಾದಿ ಇರಬಹುದು.

ಇತರ ಸಾಮಾನ್ಯ ಆಕಾರಗಳೆಂದರೆ ಬಿಂದುಗಳು, ರೇಖೆಗಳು, ಸಮತಲಗಳು ಮತ್ತು ದೀರ್ಘವೃತ್ತಗಳು, ವೃತ್ತಗಳು, ಮತ್ತು ಪರವಲಯಗಳಂತಹ ಶಂಕುಚ್ಛೇದಗಳು.

ಅತ್ಯಂತ ಸಾಮಾನ್ಯ ಮೂರು ಆಯಾಮದ ಆಕಾರಗಳಲ್ಲಿ ಸಮತಲ ಮುಖಗಳಿರುವ ಆಕಾರಗಳಾದ ಬಹುಮುಖ ಘನಾಕೃತಿಗಳು, ಅಂಡಾಕಾರದ ಅಥವಾ ಗೋಳಾಕಾರದ ವಸ್ತುಗಳಾದ ಅಂಡಾಭಗಳು, ಸಿಲಿಂಡರ್‍ಗಳು ಮತ್ತು ಶಂಕುಗಳು ಸೇರಿವೆ.

ಒಂದು ವಸ್ತುವು ಈ ವರ್ಗಗಳ ಪೈಕಿ ಒಂದರಲ್ಲಿ ನಿಖರವಾಗಿ ಅಥವಾ ಸರಿಸುಮಾರಾಗಿ ಕೂಡ ವರ್ಗೀಕರಿಸಲ್ಪಡುವುದಾದರೆ, ನಾವು ಅದನ್ನು ವಸ್ತುವಿನ ಆಕಾರವನ್ನು ವರ್ಣಿಸಲು ಬಳಸಬಹುದು. ಹೀಗೆ, ಆಳುಗುಂಡಿಯ ಮುಚ್ಚಳದ ಆಕಾರ ಡಿಸ್ಕ್ ಎಂದು ಹೇಳುತ್ತೇವೆ, ಏಕೆಂದರೆ ಅದು ಸರಿಸುಮಾರಾಗಿ ಒಂದು ವಾಸ್ತವಿಕ ಜ್ಯಾಮಿತೀಯ ಡಿಸ್ಕ್‌ಗೆ ಸಮಾನವಾದ ಜ್ಯಾಮಿತೀಯ ವಸ್ತುವಾಗಿದೆ.

ಎರಡು ವಸ್ತುಗಳ ಆಕಾರಗಳನ್ನು ಹೋಲಿಕೆ ಮಾಡಲು ಹಲವಾರು ಬಗೆಗಳಿವೆ: ಅನುರೂಪತೆ, ಸಮಾನರೂಪತೆ ಮತ್ತು ಸಮಸ್ಥಾನಿಕತೆ.

ಉಲ್ಲೇಖಗಳು

[ಬದಲಾಯಿಸಿ]
  1. Marr, D., & Nishihara, H. (1978). Representation and recognition of the spatial organization of three-dimensional shapes. Proceedings of the Royal Society of London, 200, 269-294.
"https://kn.wikipedia.org/w/index.php?title=ಆಕಾರ&oldid=1099285" ಇಂದ ಪಡೆಯಲ್ಪಟ್ಟಿದೆ