ವಿಷಯಕ್ಕೆ ಹೋಗು

ಅವಿನಾಶ್ ಕಾಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಅವಿನಾಶ್ ಕಾಮತ್

ಅವಿನಾಶ್ ಕಾಮತ್ ಮುಂಬೈಯ ಕನ್ನಡ ರಂಗಭೂಮಿ ನಟ.

ಜನನ, ವಿದ್ಯಾಭ್ಯಾಸ, ಕುಟುಂಬ

[ಬದಲಾಯಿಸಿ]

ಅವಿನಾಶ್ ಕಾಮತ್ ಅವರು ಏಪ್ರಿಲ್ ೨೬, ೧೯೭೭ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಹಿಂದುಸ್ಥಾನಿ ಗಾಯಕ ಎಮ್. ಎಸ್. ಕಾಮತ್ ಮತ್ತು ತಾಯಿ ಪದ್ಮಾ ಕಾಮತ್. ಕಾಮತರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಮತ್ತು ಉನ್ನತ ಶಿಕ್ಷಣ ಮುಂಬೈನಲ್ಲಾಯಿತು. ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದ ಪ್ರಥಮ ಬಹುಮಾನ ಪಡೆದವರು. ಆಕಾಶವಾಣಿಯ ಬಾಲಕಲಾವಿದರೂ ಆಗಿದ್ದರು. ೧೯೯೮ರಲ್ಲಿ ಮುಂಬೈನ ಕನ್ನಡ ರಂಗಭೂಮಿಯ ನಿರ್ದೇಶಕರಾದ ಭರತ್ ಕುಮಾರ್ ಪೊಲಿಪು ಅವರ ನಿರ್ದೇಶನದಲ್ಲಿ, ಶ್ರೀರಂಗರು ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸಿದರು.

ಅಭಿನಯಿಸಿದ ನಾಟಕಗಳು

[ಬದಲಾಯಿಸಿ]

ಪ್ರಶಸ್ತಿ-ಪುರಸ್ಕಾರ

[ಬದಲಾಯಿಸಿ]
  • ಮಾಟುಂಗ ಕರ್ನಾಟಕ ಸಂಘ ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕುವೆಂಪು ನಾಟಕ ಸ್ಪರ್ಧೆ’ - ‘ಆಟ’ ನಾಟಕಕ್ಕೆ ಅತ್ಯುತ್ತಮ ನಟ ಪ್ರಶಸ್ತಿ
  • 'ಸ್ನೇಹ ಸಂಬಂಧ ಪತ್ರಿಕೆ'ಯು ಆಯೋಜಿಸುವ ರಾಷ್ಟ್ರ ಮಟ್ಟದ ಸಾಹಿತ್ಯಸ್ಪರ್ಧೆಯ ನಾಟಕ ವಿಭಾಗ - ‘ಅತ್ಯುತ್ತಮ ನಾಟಕ ಪ್ರಥಮ’ ಪ್ರಶಸ್ತಿ
  • ೨೦೧೧ರ ಡಿಸೆಂಬರ‍್ನಲ್ಲಿ ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆ - ’ಒರಿ ಮಾಸ್ಟ್ರೆನ ಕತೆ’ ನಾಟಕದ ಸಂಗೀತಕ್ಕೆ ಮೂರನೇ ಅತ್ಯುತ್ತಮ ಸಂಗೀತ ಪ್ರಶಸ್ತಿ

ಚಿತ್ರಗಳು

[ಬದಲಾಯಿಸಿ]