ಅನ್ನಪ್ರಾಶನ
ಗೋಚರ
ಅನ್ನಪ್ರಾಶನ ಒಂದು ಹಿಂದೂ ಸಂಸ್ಕಾರ ಮತ್ತು ಹಾಲನ್ನು ಹೊರತುಪಡಿಸಿ ಬೇರೆ ಆಹಾರದ ಶಿಶುವಿನ ಮೊದಲ ಸೇವನೆಯನ್ನು ಗುರುತಿಸುತ್ತದೆ. ಅನ್ನಪ್ರಾಶನ ಪದದ ಅರ್ಥ ಅಕ್ಷರಶಃ ಆಹಾರ ಉಣಿಸುವುದು ಅಥವಾ ಆಹಾರವನ್ನು ತಿನ್ನುವುದು. ಈ ಸಮಾರಂಭವನ್ನು ಸಾಮಾನ್ಯವಾಗಿ ಪುರೋಹಿತರನ್ನು ಸಮಾಲೋಚಿಸಿ ಯೋಜಿಸಲಾಗುತ್ತದೆ, ಅವರು ಸಮಾರಂಭವನ್ನು ನಡೆಸಲು ಒಂದು ಮಂಗಳಕರ ದಿನಾಂಕವನ್ನು ಏರ್ಪಾಡುಮಾಡುತ್ತಾರೆ.
ಅನ್ನಪ್ರಾಶನವು ಷೋಡಶ ಸಂಸ್ಕಾರಗಳಲ್ಲಿ ೭ನೇಯದು.