ವಿಷಯಕ್ಕೆ ಹೋಗು

ಅಂತರಿಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Ancient and Medieval cosmos as depicted in Peter Apian's Cosmographia (Antwerp, 1539).

ವಿಶ್ವದ ಹೆಚ್ಚಾಗಿ ಶೂನ್ಯ ಜಾಗಗಳ ಶೇಖರಣೆಯನ್ನು ಖಗೋಳಶಾಸ್ತ್ರದಲ್ಲಿ ಅಂತರಿಕ್ಷ ಎನ್ನುತ್ತಾರೆ. ಅಂತರಿಕ್ಷವು ಅಪರಿಮಿತವಾಗಿದ್ದು, ಮೂರು ಆಯಾಮಗಳನ್ನು ಹೊಂದಿದೆ. ಇಂದಿನ ಭೌತಶಾಸ್ತ್ರದ ವಿಜ್ಞಾನಿಗಳು ಇದಕ್ಕೆ ಸಮಯವನ್ನು ನಾಲ್ಕನೆ ಆಯಾಮವಾಗಿ ಸೇರಿಸಿದ್ದಾರೆ. ಒಟ್ಟಾಗಿ ಇದನ್ನು ಸ್ಪೇಸ್-ಟೈಮ್ ಎಂದೂ ಕರೆಯುತ್ತಾರೆ. ವಿಶ್ವದ ಎಲ್ಲ ವಸ್ತು ಹಾಗೂ ಸನ್ನಿವೇಶಗಳು ಅಂತರಿಕ್ಷಕ್ಕೆ ಸಂಭಂದಿಸಿದಂತೆ ಪ್ರತ್ಯೇಕವಾದ ತಾಣ ಹಾಗು ದೆಸೆ ಹೊಂದಿರುತ್ತವೆ. ನಮ್ಮ ವಿಶ್ವದ ಸ್ವರೂಪವನ್ನು ಅರಿತುಕೊಳ್ಳಲು ಅಂತರಿಕ್ಷದ ಜ್ಞಾನ ಆವಶ್ಯಕ. ತತ್ತ್ವಜ್ಞಾನಿಗಳ ನಡುವೆ ಅಂತರಿಕ್ಷದ ಬಗ್ಗೆ ಇನ್ನು ಸರಿಯಾದ ಸಮ್ಮತಿ ಬಂದಿಲ್ಲ. ಕೆಲವರು ಅಂತರಿಕ್ಷವನ್ನು ಒಂದು ವಸ್ತುವೆಂದು ಪರಿಗಣಿಸಿದರೆ, ಕೆಲವರು ವಸ್ತುಗಳ ನಡುವೆ ಇರುವ ಸಂಬಂಧ ಎಂದು, ಇನ್ನೂ ಕೆಲವರು ಅದು ವಿಶ್ವದ ಸ್ವರೂಪವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಒಂದು ಕಾಲ್ಪನಿಕ ಚೌಕಟ್ಟು ಎಂದು ಹೇಳುತ್ತಾರೆ. ಐಸಾಕ್ ನ್ಯೂಟನ್ ಅವರ ದೃಷ್ಟಿಯಲ್ಲಿ ಅಂತರಿಕ್ಷ ಶಾಶ್ವತವಾದುದ್ದು. ಅಂದರೆ ಅದಕ್ಕೆ ತನ್ನದೇ ಆದ ಅಸ್ತಿತ್ವವಿದೆ. ಅದರ ಅಸ್ತಿತ್ವಕ್ಕೆ ಅದು ಯಾವ ವಸ್ತುವಿನ ಮೇಲೂ ಅವಲಂಬಿತವಾಗಿಲ್ಲ. ಲೇಬ್ನಿಝ್ ಅವರ ದೃಷ್ಟಿಯಲ್ಲಿ ಅಂತರಿಕ್ಷವು ಕೇವಲ ವಸ್ತುಗಳ ನಡುವಿನ ಅಂತರ ಹಾಗು ಒಂದಕ್ಕೊಂದರ ಮಧ್ಯೆ ಇರುವ ದಿಕ್ಕಿನ ಸಂಬಂಧಕ್ಕೆ ಇರುವ ಹೆಸರು ಮಾತ್ರ. ತತ್ವಜ್ಞಾನಿಕಾಂಟ್ ಅವರ ಪ್ರಕಾರ ಅಂತರಿಕ್ಷ ಮತ್ತು ಕಾಲವನ್ನು ಅವುಗಳ ವಾಸ್ತವ ಸ್ಥಿತಿಯಲ್ಲಿ ಗ್ರಹಿಸಲು ಅಸಾಧ್ಯ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]