ವಿಷಯಕ್ಕೆ ಹೋಗು

ಸದಸ್ಯ:Sreecharan S Ajjagola

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆ

ನನ್ನ ಹೆಸರು ಶ್ರೀಚರಣ್.ಎಸ್.ಅಜ್ಜಗೋಳ. ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು ಇಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತದ ವಿಷಯಗಳಲ್ಲಿ ಬಿ.ಎಸ್ಸಿ ಮಾಡುತ್ತಿರುತ್ತೇನೆ.

ಜನನ ಮತ್ತು ಕುಟುಂಬ

[ಬದಲಾಯಿಸಿ]

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯಲ್ಲಿ ೧೯೯೯ ರ ಮೇ ೪ ರಂದು ಸಿದ್ದೇಶ್ವರಪ್ಪ ಮತ್ತು ಡಾ.ದಾಕ್ಷಾಯಣಮ್ಮ ದಂಪತಿಗಳಿಗೆ ಜನಿಸಿದೆ. ತಂದೆ ಸಿದ್ದೇಶ್ವರಪ್ಪ ಕೃಷಿಕರು ಹಾಗೂ ತಾಯಿ ದಾಕ್ಷಾಯಣಮ್ಮ ಸರ್ಕಾರಿ ಕಾಲೇಜಿನ ಉಪನ್ಯಾಸಕರು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯಾಮತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಕ ಚೈತ್ರ.ಎ.ಎಸ್ ಬಿ.ಇ ವ್ಯಾಸಂಗ ಮುಗಿಸಿದ್ದಾಳೆ.

ವಿದ್ಯಾಭ್ಯಾಸ

[ಬದಲಾಯಿಸಿ]
ಕ್ರೈಸ್ಟ್ ಯುನಿವರ್ಸಿಟಿ

ಶಿವಮೊಗ್ಗದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ಜ್ಞಾನದೀಪ ಶಾಲೆಯಲ್ಲಿಯೇ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ವ್ಯಾಸಂಗ ಮಾಡಿದ ನಾನು ನನ್ನ ಹತ್ತನೇ ತರಗತಿಯ ಪರೀಕ್ಷೆಯನ್ನು ೨೦೧೫ ರ ಮಾರ್ಚ್ ತಿಂಗಳಲ್ಲಿ ನೀಡಿರುತ್ತೇನೆ. ಶಾಲೆಯಿಂದಲೇ ವಿಜ್ಞಾನದ ಕಡೆಗೆ ನನ್ನ ಒಲವಿತ್ತು, ಹಾಗಾಗಿ ನನ್ನ ಪಿಯುಸಿಯಲ್ಲಿ ವಿಜ್ಞಾನವನ್ನೇ ಆಯ್ದುಕೊಂಡೆ. ಶಿವಮೊಗ್ಗಪೇಸ್ ಪಿಯು ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಓದಿ ೨೦೧೭ ರ ಮಾರ್ಚ್ ತಿಂಗಳಲ್ಲಿನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಪ್ರಸ್ತುತ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ನನ್ನ ಇಷ್ಟದ ವಿಷಯವಾದ ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಪಿಯು ಕಾಲೇಜಿನ ಉಪನ್ಯಾಸಕರೊಬ್ಬರ ಪ್ರೆರಣೆಯಿಂದಾಗಿ ನನಗೆ ಜೈವಿಕ ರಸಾಯನಶಾಸ್ತ್ರದ ಮೇಲೆ ಒಲವು ಬಂದಿದ್ದು.

ಆಸಕ್ತಿ

[ಬದಲಾಯಿಸಿ]

ಶಾಲಾ ದಿನಗಳಿಂದಲೂ ರಸಪ್ರಶ್ನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ವಿಜೇತನಾಗದೇ ಇದ್ದರು ಹೊಸದೇನನ್ನಾದರೂ ಕಲಿಯುವ ಉತ್ಸಾಹದೊಂದಿಗೆ ಭಾಗವಹಿಸುತ್ತಿದ್ದೆ. ಹೀಗೆ ನನ್ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ನನ್ನ ಸಾಮಾನ್ಯ ಜ್ಞಾನ ಬೆಳೆದಿದೆ ಎಂಬ ಹೆಮ್ಮೆಯಿದೆ.ನನ್ನ ಅಚ್ಚುಮೆಚ್ಚಿನ ಕ್ರೀಡೆ ಕ್ರಿಕೆಟ್. ಕ್ರಿಕೆಟ್ ಆಡುವುದು ಹಾಗೂ ನೋಡುವುದು ನನ್ನ ಹವ್ಯಾಸ. ಕ್ರಿಕೆಟ್ ನ ದಂತಕತೆಗಳಲ್ಲಿ ಒಬ್ಬರಾದ ಕಪಿಲ್ ದೇವ್ ನನ್ನ ಮೆಚ್ಚಿನ ಆಟಗಾರ. ಅವರಂತೆ ಭಾರತ ತಂಡದ ನಾಯಕನಾಗುವ ಆಸೆಯು ಇದೆ. ಹಾಗೆಯೇ ಅವರಂತೆ ಆಲ್ರೌಂಡರ್ ಆಗುವುದೂ ನನ್ನ ಆಸೆ. ಕ್ರಿಕೆಟ್ ನಲ್ಲಿ ಆಲ್ರೌಂಡರ್ ಎಂದರೆ ಆತ ದಾಂಡಿಗನೂ ಆಗಿರುತ್ತಾನೆ ಬೌಲಿಂಗ್ ಕೂಡ ಮಾಡಬಲ್ಲವನಾಗಿರುತ್ತಾನೆ ಇನ್ನೂ ಕ್ಷೇತ್ರರಕ್ಷಕನಾಗಿಯು ನಿಪುಣನಾಗಿರುತ್ತಾನೆ. ಹೀಗೆ ನನ್ನ ಜೀವನದಲ್ಲಿಯು ನಾನೊಬ್ಬ ಉತ್ತಮ ಆಲ್ರೌಂಡರ್ ಆಗುವ ಒಂದು ಗುರಿಯನ್ನು ಹೊಂದಿದ್ದೇನೆ. ನನ್ನ ಕೆಲಸ, ಹವ್ಯಾಸ, ಕುಟುಂಬ ಇವ್ಯಾವುಗಳಲ್ಲೂ ಒಂದರಿಂದ ಇನ್ನೊಂದಕ್ಕೆ ಅಡಚಣೆಯಾಗದಿರುವ ಹಾಗೆ ಬದುಕುವ ಗುರಿ ಇದೆ. ಪ್ರತಿಯೊಬ್ಬ ಮಹಾನ್ ಆಟಗಾರನ ಹಿಂದೆ ಅವನ ಸತತ ಪರಿಶ್ರಮವಿರುತ್ತದೆ. ನನ್ನ ಗುರಿಯ ಸಾಧನೆಗೂ ಪರಿಶ್ರಮ ಬೇಕಾಗಿದೆ. ಸದ್ಯಕ್ಕೆ ರಸಾಯನಶಾಸ್ತ್ರದ ಎಂ.ಎಸ್ಸಿ ಗಾಗಿ ಹಲವು ಪರೀಕ್ಷೆಗಳನ್ನು ಎದುರಿಸಬೇಕಿದೆ. ಅತ್ಯುನ್ನತ ಪದವಿಗಳೊಂದಿಗೆ ನನ್ನ ಊರಿಗೆ ಹೋಗಿ ಅಲ್ಲಿ ನನ್ನ ಪೋಷಕರೋದಿಗೆ ಇರುವ ಆಸೆ ನನ್ನದು. ಪ್ರತಿದಿನವು ಹೊಸದನ್ನೇನಾದರು ಕಲಿಯುವುದು, ಹೊಸ ಅನುಭವಗಳಿಗಾಗಿ ಅರಸುವುದು ನನ್ನ ಒಂದು ಗುಣ. ನನ್ನ ಹಳೆಯ ಆಟಿಕೆಗಳು, ಹಳೆಯ ವಿದ್ಯುತ್ ಉಪಕರಣಗಳನ್ನೆಲ್ಲಾ ತೆಗೆದು ಅದರಿಂದ ಏನಾದರು ಉಪಯೋಗವಾದೀತೆಂದು ನೋಡುವುದನ್ನು ಮಾಡುತ್ತಿರುತ್ತೇನೆ.

ಘಟನೆಗಳು

[ಬದಲಾಯಿಸಿ]

ವಿಜ್ಞಾನ ಮತ್ತು ಕ್ರೀಡೆಯ ಹೊರತಾಗಿ ನನಗೆ ರಾಜಕೀಯದಲ್ಲೂ ಆಸಕ್ತಿ ಬರುವಂತೆ ಮಾಡಿದ್ದು ನನ್ನ ತಂದೆ. ನನ್ನ ತಂದೆಯೊಡನೆ ರಾಜಕೀಯದ ಬಗೆಗಿನ ಚರ್ಚೆಗಳು ನನಗೆ ದೇಶದ ರಾಜಕೀಯದ ಜ್ಞಾನವನ್ನು ನೀಡಿದೆ. ಕನ್ನಡದಲ್ಲಿ ನಾನು ಈವರೆಗು ನಾಲ್ಕೈದು ಪುಸ್ತಕಗಳನ್ನು ಓದಿದ್ದು ಇವುಗಳಲ್ಲಿ ನನ್ನ ಮೆಚ್ಚಿನ ಪುಸ್ತಕವೆಂದರೆ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ. ಈ ಪುಸ್ತಕ ರೋಚಕತೆಯಿಂದ ಕೂಡಿದ್ದು ಓದುಗನನ್ನು ಪುಸ್ತಕದ ಕೊನೆಯವರೆಗೂ ಸೆಳೆಯುತ್ತದೆ. ಇನ್ನೂ ಆಂಗ್ಲ ಭಾಷೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇತ್ತೀಚಿಗಷ್ಟೆ ಪ್ರಾರಂಭಿಸಿದ್ದೇನೆ. ಎಲ್ಲೇ ಇರುವುದಾದರು ಪುಸ್ತಕವನೋದುತ್ತಲಿರು ಎಂಬುದು ನಮ್ಮ ಮನೆಯಲ್ಲಿನ ಒಂದು ಧ್ಯೇಯ. ಪುಸ್ತಕ ಜ್ಞಾನ ನಾವು ಎಲ್ಲಿದ್ದರೂ ಕಾಪಾಡುವುದೆಂದು ನಂಬಿರುವ ನನ್ನ ಕುಟುಂಬ. ನನ್ನ ಜೀವನದಲ್ಲಿ ನಾನು ಶಿಕ್ಷಕರಿಗೇ ಮಹತ್ವ, ಯಾಕೆಂದರೆ ಒಬ್ಬ ಶಿಕ್ಷಕ ವಿದ್ಯಾರ್ಥಿಯ ಆಸಕ್ತಿಯನ್ನೂ ಬದಲಾಯಿಸಬಹುದೆಂದು ನಾನು ನಂಬಿದ್ದೇನೆ. ನಾನು ಮೊದಲೇ ಹೇಳಿದಹಾಗೆ ನನ್ನ ರಸಾಯನಶಾಸ್ತ್ರದ ಒಲವಿಗೆ ಕಾರಣರಾದವರು ಒಬ್ಬ ಶಿಕ್ಷಕ. ಇನ್ನು ನನಗೆ ಕನ್ನಡ ಶಿಕ್ಷಕರೆಂದರೆ ಬಹಳ ಇಷ್ಟ. ನಾನು ಒಂಬತ್ತನೇ ತರಗತಿಯಲ್ಲಿರುವಾಗ ನನ್ನ ಕನ್ನಡ ಶಿಕ್ಷಕರು ನಿಯೋಜನೆಯೊಂದನ್ನು ನೀಡಿದ್ದರು, ಇದರ ಅನುಸಾರ ನಾವು ತಂದೆಗೊಂದು ಪತ್ರವನ್ನು ಬರೆಯಬೇಕಿತ್ತು. ಹೀಗೆ ಎಲ್ಲಾ ವಿದ್ಯಾರ್ಥಿಗಳ ನಿಯೋಜನೆಗಳನ್ನು ಸಂಗ್ರಹಿಸಿ ಪುಸ್ತಕ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಪುಸ್ತಕದ ಹೆಸರು ' ಇದು ಪತ್ರವಲ್ಲ ಪ್ರೀತಿಗೊಂದು ಸೇತುವೆ ' ಎಂದು. ಈ ಪುಸ್ತಕದಲ್ಲಿ ನನ್ನದೊಂದು ಲೇಖನವಿತ್ತೆಂಬುದೇ ನನಗೊಂದು ಹೆಮ್ಮೆ. ಈ ರೀತಿಯಾದ ಒಂದು ಅವಕಾಶಗಳನ್ನು ನೀಡುವವರು ಕೇವಲ ಶಿಕ್ಷಕರು.