ಸದಸ್ಯ:Ranganayaki rangu
ರಂಗನಾಯಕಿ.ಎನ್ | |
---|---|
Born | ೬ ೮ ೧೯೯೭ ಬೆಂಗಳುರು |
Nationality | ಇಂಡಿಯನ್ |
Other names | ರಂಗು |
Education | ಬಿ.ಕಾಂ |
Occupation | ವಿಧ್ಯಾರ್ಧಿನಿ |
ನನ್ನ ಪರಿಚಯ
[ಬದಲಾಯಿಸಿ]ನನ್ನ ಹೆಸರು ರಂಗನಾಯಕಿ.ಎನ್.ನಾನು ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಮೊದಲನೆಯ ಬಿ.ಕಾಂ ನಲ್ಲಿ ಓದುತ್ತಿದ್ದೇನೆ. ನನ್ನ ತಂದೆಯ ಹೆಸರು ನಾಗರಾಜ್.ಕೆ , ತಾಯಿ ಗೀತಾ.ಜಿ.ವಿ.ನನಗೆ ಕನ್ನಡ , ಇಂಗ್ಲಿಷ್ , ಹಿಂದಿ , ತೆಲಗು ಬಾಷೆಗಳು ಬರುತ್ತದೆ.
ಜನನ
[ಬದಲಾಯಿಸಿ]ನಾನು ಆಗಸ್ಟ್ ೬ ೧೯೯೭ರಂದು ಬೆಂಗಳೂರಿನಲ್ಲಿ ಜಿನಿಸಿದೆನು.
ಶಿಕ್ಷಣ
[ಬದಲಾಯಿಸಿ]ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ವಿಧ್ಯಾಭ್ಯಾಸ ನಡೆಸಿದೆನು.ನನ್ನ ಹತ್ತನೆ ತರಗತಿಯಲ್ಲಿ ನಾನು ಶೇ.೮೨.೮೬% ಪಡೆದುಕೊಂಡೆನು. ನಂತರ ನಾವು ಕಾರಣಾಂತರದಿಂದ ಬೆಂಗಳೂರಿನ ಗ್ರಾಮಾಂತರದ ಆನೇಕಲ್ ತಾಲೂಕಿನಲ್ಲಿ ನೆಲೆಸಿದೆವು. ಅಲ್ಲಿ ನನ್ನ ಕಾಲೇಜಿನ ದಿನಗಳು ಆರಂಭವಾದವು.ನಾನು ನನ್ನ ಕಾಲೇಜಿನಲ್ಲಿ ಚೆನ್ನಾಗಿ ಓದಿ ನನ್ನ ತಂದೆ , ತಾಯಿಗೆ ಒಳ್ಳೆಯ ಹೆಸರು ತಂದುಕೊಟ್ಟು ಒಳ್ಳೆಯ ವಿಧ್ಯಾರ್ಧಿನಿಯಾಗಬೇಕೆಂಬುವುದು ನನ್ನ ಗುರಿಯಾಗಿತ್ತು.ಇಲ್ಲಿ ನನಗೆ ಚೆನ್ನಾಗಿ ಓದುವುದಕ್ಕೆ ಪೂರಕವಾದ ವಾತಾವರಣ ದೊರಕಿತು. ವಿಶ್ವ ಚೇತನ ಪದವಿ ಪೂರ್ವ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದೆ. ನಾನು ನನ್ನ ದ್ವಿತೀಯ ಪಿ.ಯು.ಸಿಯಲ್ಲಿ ಶೇ.೯೨.೮೩% ಪಡೆದುಕೊಂಡು ನನ್ನ ತಂದೆ , ತಾಯಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟೆನು.ನಂತರ ನನ್ನ ಪದವಿ ವ್ಯಾಸಂಗ ಆರಂಭವಾಯಿತು. ಬೆಂಗಳೂರಿನ ಪ್ರತಿಷ್ಟಿ ಕಾಲೇಜುಗಳಲ್ಲಿ ಒಂದಾದ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಅರ್ಜಿ ಗುಜರಾಯಿಸಿದೆ, ಮತ್ತು ಮೊದಲನೆ ಅವಕಾಶದಲ್ಲಿ ನಾನು ಆಯ್ಕೆಯಾದೆ, ಮತ್ತು ಇಲ್ಲಿ ಓದುವುದು ನನ್ನ ಕನಸಾಗಿತ್ತು ಅದು ನನಸಾಯಿತು.
ಕ್ರೈಸ್ಟ್ ಯೂನಿವರ್ಸಿಟಿ
[ಬದಲಾಯಿಸಿ]ಇಲ್ಲಿನ ಹೊಸ ಹೊಸ ತಾಂತ್ರಿಕರಣಗಳು ನಮಗೆ ಓದುವ ವಿಷಯದಲ್ಲಿ ಬಹಳ ಸಹಾಯಕವಾಗಿದೆ ಹಾಗೂ ಇಲ್ಲಿನ ಅಧ್ಯಾಪಕರು ನಮಗೆ ಓದುವುದರಲ್ಲಿ ಬಹಳ ಉತ್ತೇಜನವನ್ನು ನಿಡುವುದಲ್ಲದೆ ನಮಗೆ ಎಲ್ಲ ವಿಷಯಗಳು ಸಂಪೊರ್ಣವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತಿದ್ದಾರೆ.ಅಲ್ಲದೆ ನನ್ನ ಸ್ನೇಹಿತರು ಕೊಡ ನನಗೆ ಓದುವ ವಿಷಯದಲ್ಲಿ ಬಹಳ ಸಹಾಯ ಮಾಡುತ್ತಾರೆ.ಇಲ್ಲಿನ ವಾತಾವರಣವು ಸ್ವಚ್ಛವಾದ ಹಸಿರಿನಿಂದ ಕೊಡಿರುವುದರಿಂದ ಓದುವುದಕ್ಕು ಆಸಕ್ತಿ ಮೂಡುತ್ತದೆ.
ಹವ್ಯಾಸಗಳು
[ಬದಲಾಯಿಸಿ]ನೃತ್ಯ ಮತ್ತು ಹಾಡುವುದೆಂದರೆ ನನಗೆ ಇಷ್ಟ. ಇಲ್ಲಿನ ಚಂದಾಪುರದ ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದರ ಬಗ್ಗೆ ನಾನು ಪ್ರಭಂದ ಬರೆದೆ , ಮತ್ತು ನೃತ್ಯವನ್ನು ಮಾಡಿದೆ, ಅದೆರಡರಲ್ಲೂ ಬಹುಮಾನಗಳನ್ನು ಪಡೆದೆ, ನಾನು ಮರೆಯದ ಗಳಿಗೆಗಳು.ನನಗೆ ವಿವೇಕಾನಂದರು ಹಾಗೂ ಅಬ್ದುಲ್ ಕಲಾಮ್ ರವರೆಂದರೆ ಬಹಳ ಇಷ್ಟ , ಅಬ್ದುಲ್ ಕಲಾಮ್ ರವರ "ವಿಂಗ್ಸ್ ಆಫ್ ಫೈರ್" ಆತ್ಮಚರಿತ್ರೆಯನ್ನು ಓದಿದ್ದೇನೆ ಹಾಗೂ ಅದರಿಂದ ಬಹಳ ಉಪಯುಕ್ತವಾದ ವಿಷಯಗಳನ್ನು ತಿಳಿದುಕೊಂಡ್ಡಿದ್ದೇನೆ.ಅಲ್ಲದೆ ನನಗೆ ಹಾಡು ಹಾಡುವುದು, ನೃತ್ಯ ಮಾಡುವುದು ,ನನ್ನ ತಾಯಿಯೊಡಣೆ ಮಾತಾಡುವುದು, ನನ್ನ ಸ್ನೇಹಿತರೊಡಣೆ ಮಾತಾಡುವುದು ಆಡುವುದೆಂದರೆ ಬಹಳ ಇಷ್ಟ.
ಗುರಿ
[ಬದಲಾಯಿಸಿ]ನನ್ನ ಗುರಿ ನಾನು ಎಂ.ಬಿ.ಎ. ಮಾಡಬೇಕು , ಒಂದು ದೊಡ್ಡ ಹುದ್ದೆಯಲ್ಲಿ ಮುಂದುವರೆಯಬೇಕು , ನನ್ನ ಸುತ್ತ ಮುತ್ತಲಿನವರನ್ನು ಸಂತೋಷವಾಗಿಡಬೇಕು ಹಾಗು ನನ್ನ ತಂದೆ ತಾಯಿಗೆ ಒಳ್ಳೆ ಮಗಳಾಗಿ , ಜಗತ್ತಿನಲ್ಲಿ ಒಳ್ಳೆ ವ್ಯಕ್ತಿಯಾಗಬೇಕೆಂಬುದೇ ನನ್ನ ಗುರಿ.
ಉಪಸಂಹಾರ
[ಬದಲಾಯಿಸಿ]ವಿಕಿಪೀಡಿಯ ನಮಗೆ ಬಹಳ ಸಹಾಯ ಮಾಡುತ್ತಿದೆ. ನಮಗೆ ತಿಳಿಯದೆ ಇರುವ ವಿಷಯದ ಬಗ್ಗೆ ತಿಳಿದುಕೊಳ್ಳಲು ವಿಕಿಪೀಡಿಯ ನಮಗೆಲ್ಲರಿಗು ಸಹಾಯಕವಾಗಿದೆ.ಇವೆಲ್ಲವನ್ನು ನಾನು ವಿಕಿಪೀಡಿಯದಲ್ಲಿ ಹಂಚಿಕೊಳ್ಳುತ್ತಿರುವುದಕ್ಕೆ ಬಹಳ ಸಂತೋಷ ಪಡುತ್ತಿದ್ದೇನೆ , ಮತ್ತು ಕನ್ನಡದ ಹಾಗೂ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವಿಕಿಪೀಡಿಯ ಸಹಕಾರಿಯಾಗಿದೆ. ಈ ಎಲ್ಲಾ ಉಪಯುಕ್ತವಾದ ವಿಷಯವನ್ನು ನಮ್ಮೆಲ್ಲರಿಗು ತಿಳಿಯಪಡಿಸುತ್ತಿರುವಾ ಈ ವಿಕಿಪೀಡಿಯಾಕ್ಕೆ ನನ್ನ ಅಭಿನಂದನೆಗಳು.
This user is a member of WikiProject Education in India |