ಸದಸ್ಯ:Nalinir269
ಜನನ
[ಬದಲಾಯಿಸಿ]ನನ್ನ ಹೆಸರು ನಳಿನಿ.ಆರ್. ನಳಿನಿ ಎಂದರೆ ಕಮಲ ಎಂದು ಅರ್ಥ.ನನ್ನ ತಂದೆ-ತಾಯಿಯರು ದೇಶದ ಮೇಲೆ ವಿಶ್ವಾಸವಿರುವುದರಿಂದ ರಾಷ್ಟ್ರ ಹೂವಾದ ಕಮಲದ ಇನ್ನೊಂದು ಹೆಸರಾದ ನಳಿನಿ ಎಂದು ಹೆಸರಿಟ್ಟರು.ನಾನು ಹುಟ್ಟಿದು ಕನಾರ್ಟಕದ ಬೆಂಗಳೂರು ಜಿಲ್ಲೆಯ ಶೇಷಾದ್ರಿಪುರ ತಾಲೂಕಿನ ಮಾರುತಿ ನರ್ಸಿಂಗ್ ಹೋಮ್ನಲ್ಲಿ ೩೦/ಮೇ/೧೯೯೯ ಜನಿಸಿದೆನು .ನನ್ನ ಜನನ ನನ್ನ ತಂದೆ-ತಾಯಿಯರಿಗೂ ಮತ್ತು ಕುಟಂಬದವರಿಗೂ ಬಹಳ ಸಂತೋಷವನ್ನು ನೀಡಿತು.ನನ್ನ ತಂದೆ ತಾಯಿಯ ಹೆಸರು ರಾಮು ಮತ್ತು ವೇಂಡಾ,ನಮ್ಮ ಪೂರ್ವಿಕ ಸ್ಥಳ ತಮಿಳುನಾಡು ಆದರೂ ಅಲ್ಲಿಂದ ತೆರಳಿ ಜೀವನ ನಡೆಸುವುದಕ್ಕಾಗಿ ಕನಾರ್ಟಕಕ್ಕೆ ಬಂದರು. ನನ್ನ ತಂದೆ ತಾಯಿಯರು ಜೀವನದಲ್ಲಿ ಹಲವಾರು ಕಷ್ಟಕ್ಕೆ ಒಳಪಟ್ಟು ನಮ್ಮನ್ನು ಬೆಳೆಸಿದರು.ಅವರು ಪಡುವ ಕಷ್ಟಗಳನ್ನು ನೋಡಿಯೇ ಬೆಳೆದೆನು .ನನ್ನ ಜೊತೆ ಹುಟ್ಟಿದ ನನ್ನ ತಮ್ಮನ ಹೆಸರು ಸಂತೋಷ್ . thumb|143x143px| ಬಾಲ್ಯ
ಬಾಲ್ಯ
[ಬದಲಾಯಿಸಿ]ನನ್ನ ಬಾಲ್ಯದ ಜೀವನವು ಬಹಳ ಖುಷಿಕರವಾಗಿ ಕುತೂಹಲದಿಂದ ತುಂಬಿತ್ತು.ಶಾಲೆಯಲ್ಲಿ ಶಿಕ್ಷಕರು ನಾನು ಬಹಳ ತರಲೆ ಮಾಡುತ್ತಿದ್ದೆನೆಂದು ಹೇಳುತ್ತಿದ್ದರು.ನನಗೆ ಓದುವುದರಲ್ಲಿ ಬಹಳ ಆಸಕ್ತಿ ಇರಲಿಲ್ಲ.ಸದಾಕಾಲ ಸ್ನೇಹಿತರೊಂದಿಗೆ ಆಟವಾಡಿಕೊಂಡು ಸಮಯ ಕಳೆಯುತ್ತಿದ್ದೆ.ನನ್ನ ಬಾಲ್ಯದಲ್ಲಿ ನನ್ನ ತಮ್ಮನ ಜೋತೆ ಜಗಳವಾಡಿಕೊಂಡು,ಸದಾಕಾಲ ಸ್ನೇಹಿತರೊಂದಿಗೆ ಅಮಾನುಷ್ಯ ವಿಷಯಗಳನ್ನು ತಿಳಿದುಕೊಳ್ಳಲು ಬಹಳ ಕಾತೂರನಾಗಿದ್ದೆನು ,ಎಲ್ಲ ಕಷ್ಟದಿನಗಳಲ್ಲಿ ನನ್ನ ಬಾಲ್ಯದ ದಿನಗಳು ಕಣ್ಣು ಮುಂದೆ ಬಂದು ನಿಲ್ಲುತ್ತದೆ.
ಶಿಕ್ಷಣ
[ಬದಲಾಯಿಸಿ]ಈ ಸಮಯದಲ್ಲಿ ನನ್ನ ಕುಟುಂಬ ಕಷ್ಟಕರವಾದ ಸ್ಥಿತಿಯಲ್ಲಿ ಇದ್ದಾಗ ನಾವು ಬೇರೆ ಊರಿಗೆ ಹೋಗಬೇಕಾಯಿತು.ಆದುದರಿಂದ ಅಲ್ಲಿದ ರೆಡ್ಡಿ ಜನ ಸಂಘ ಶಾಲೆಯಲ್ಲಿ ನನ್ನ ಪ್ರೌಢ ಶಿಕ್ಷಣವನ್ನು ಮುಗಿಸಿದೆನು.ಈ ಶಾಲೆಗೆ ಸೇರಿದ ನಂತರವೇ ಅಲ್ಲಿ ಇರುವ ಶಿಕ್ಷಕರು ನನ್ನನ್ನು ತಿದ್ದುಪಡಿಸಿದರು.ಮುಕ್ಯವಾಗಿ ನನ್ನ ಮೇಲೆ ಪ್ರಭಾವ ಬೀರಿದವರು ಪದ್ಮಾವತಿ ಎಂಬ ಶಿಕ್ಷಕಿ .ಇವರು ನನ್ನ ಜೀವನದ ಮಾದರಿಯಾಗಿದ್ದಾರೆ. ಹೈ ಸ್ಕೂಲ್ ದಿನಗಳು ನನ್ನ ಬದುಕಿನಲ್ಲಿ ಮುಖ್ಯವಾದ ಅಂಗವಾಗಿತ್ತು.ಈ ಸಮಯ ಕಾಲದಲ್ಲಿ ನನಗೆ ಹೊಸ ಹೊಸ ಅನುಭವಗಳು ಮತ್ತು ಹೊಸ ಮನುಷ್ಯರನ್ನು ಬೇಟಿ ಮಾಡಿದೆನು.ಹತ್ತನೆಯ ತರಗತಿಯಲ್ಲಿಒಳ್ಳೆಯ ಅಂಕಗಳನ್ನುಗಳಿಸಿದ ನಂತರ ನಾನು ಕ್ರೈಸ್ಟ್ ಜುನಿಯರ್ ಕಾಲೇಜಿಗೆ ಸೇರಿದೆನು .ಪುಟ್ಟ ಶಾಲೆಯಲ್ಲಿ ಸ್ವಲ್ಪ ಜನರೊಂದಿಗೆ ಇದ್ದ ನಾನು ಇಲ್ಲಿಗೆ ಬಂದಾಗ ಸಮುದ್ರದ ವಾತಾವರಣದಲ್ಲಿ ಸಿಕ್ಕಿಕೊಂಡ ಹಾಗೆ ಇತ್ತು.ಇಲ್ಲಿ ಸೇರಿದ ನಂತರ ಬದುಕು ಎಂದರೆ ಏನೆಂದು ತಿಳಿಯಿತು. ಹೊಸ ಜನರ ಜೊತೆ ಸೇರಿ ಹೊಸ ವಿಷಯಗಳನ್ನು ಕಲಿತೆನು. ಇಲ್ಲಿ ನನ್ನ ತನಂಬಿಕೆಯು ಹೆಚ್ಚಾಯಿತು.ಈ ಕಾಲೇಜು ಹೊಸ ಹೊಸ ಅವಕಾಶಗಳನ್ನು ನೀಡಿತು.ನನ್ನ ಬದುಕಿನ ಆಸಕ್ತಿಯನ್ನು ಗುರುತಿಸಿಕೊಳ್ಳಲು ಸಹಕರಿಸಿತು.ನನ್ನ ಪಿಯುಸಿ ಉತ್ತಮವಾಗಿ ಮುಗಿಯಿತು.ನಂತರ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಕ್ರೈಸ್ಟ್ ಯೂನಿವರ್ಸಿಟಿ ಸೇರಿಕೊಂಡೆನು.ಮೊದಲೇ ನಾನು ಜುನಿಯರ್ ಕಾಲೇಜಿನಲ್ಲಿ ಕಲಿತುಕೊಂಡಿದ್ದರಿಂದ ಇಲ್ಲಿ ಸುಲಭವಾಗಿ ಎಲ್ಲವನ್ನು ಎದುರಿಸಲು ಸಹಾಯಕವಾಗಿದೆ.ಇಲ್ಲಿ ಹೊಸ ವ್ಯಕ್ತಿಗಳನ್ನು ಬೇಟಿಮಾಡುವುದರಿಂದ ಪ್ರತಿನಿತ್ಯ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ.ಪ್ರತಿ ದಿನವು ಹೊಸ ಹೊಸ ಅನುಭವಗಳನ್ನು ಕೊಡುತ್ತಿದೆ.ಈ ಕಾಲೇಜಿನಿಂದ ನಾನು ಸಂಪೂರ್ಣವಾಗಿ ನನ್ನ ವ್ಯಕ್ತಿತ್ವ,ಮಾನಸಿಕ ಹಾಗೂ ಆತ್ಮವಿಶ್ವಾಸ ಹೆಚ್ಚಾಗಿದೆ.ಕಾಲೇಜು ನೀಡುವ ಅವಕಾಶವನ್ನು ನಾನು ಉಪಯೋಗಿಸಿಕೊಳ್ಳುವುದರಿಂದ ನನ್ನಲ್ಲಿರುವ ಆತ್ಮವಿಶ್ವಾಸ ಎಲ್ಲವನ್ನು ಹೆಚ್ಚಾಗಿರುವುದು ನಾನು ಗಮನಿಸಿದೆನು.
ಹವ್ಯಾಸ
[ಬದಲಾಯಿಸಿ]ನನ್ನ ಹವ್ಯಾಸಗಳು ಎಂದರೆ ತೋಟಗಾರಿಕೆ,ಟೈಲರಿಂಗ್ ,ಪುಸ್ತಕ ಓದುವುದು,ಹಾಡು ಕೇಳುವುದು ,ಇವೆಲ್ಲವು ನನ್ನ ಮನಸಿಗೆ ಆನಂದವನ್ನು ಕೊಡುವ ವಿಷಯಗಳು .ನನಗೆ ಜಾಪನೀಸ್ ಭಾಷೆ ಕಲಿಯುವ ಆಸಕ್ತಿ ಇದೆ, ಈ ಭಾಷೆಯ ತರಬೇತಿ ಸೇರಿದ ಮಧ್ಯದಲ್ಲಿ ಹೊಸ ಭಾಷೆಯಾದುದರಿಂದ ತುಂಬ ಕಷ್ಟವೆನಿಸಿತು. ಆದರೆ ಅದನ್ನು ಬಿಟ್ಟುಕೊಡದೆ ಕಷ್ಟ ಪಟ್ಟು ಓದಿ ಮುಗಿಸಿದೆ.ಈ ಅನುಭವದಿಂದ ನನಗೆ" ಕಷ್ಟ ಪಟ್ಟರೆ ಫಲವುಂಟು" ಎಂಬ ಗಾದೆ ಮಾತಿನ ಅರ್ಥವು ತಿಳಿಯಿತು...
ಬದುಕು ಎಂಬ ಪಯಣವು ಮುಗಿಯುವುದಿಲ್ಲ......