ಸದಸ್ಯ:Meghana111
ಪರಿಚಯ
[ಬದಲಾಯಿಸಿ]ನನ್ನ ಹೆಸರು ಮೇಘನ ವಸಂತ ಕುಮಾರ್. ನಾನು ಹುಟ್ಟಿದ್ದು ೨೧ ಮೇ, ೧೯೯೯ ರಲ್ಲಿ. ನನ್ನ ವಯಸ್ಸು ೧೮. ನಾನು ಹುಟ್ಟಿದ್ದು ಬೆಳೆದಿದ್ದು ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ.
ನನಗೆ ಕನ್ನಡ, ಇಂಗ್ಲಿಶ್, ತಮಿಳು, ತೆಲಗು, ಹಿಂದಿ ಮುಂತಾದ ಭಾಷೆಗಳು ಮಾತನಾಡಲು ಬರುತ್ತದೆ.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ಕ್ರೈಸ್ಟ್ ಕಾಲೇಜಿನಲ್ಲಿ ಬಿಎ ಓದುತಿದ್ದೇನೆ. ನಾನು ಓದುತ್ತಿರುವ ವಿಷಯಗಳು ಕನ್ನಡ, ಇಂಗ್ಲಿಷ್, ಮೀಡಿಯಾ ಸ್ಟಡೀಸ್ ಹಾಗೂ ಸೈಕಾಲಜಿ ಅಥವಾ ಮನೋವಿಜ್ಞಾನ. ನಾನು ಇಂದಿರಾನಗರದಲ್ಲಿರುವ ನ್ಯೂ ಹೊರೈಜನ್ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದೆ. ನನಗೆ ಕಾಲೇಜಿನಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ನನ್ನ ಸ್ನೇಹಿತರು ನನಗೆ ಬಹಳ ಮುಖ್ಯ.
ಕುಟುಂಬ
[ಬದಲಾಯಿಸಿ]ನನ್ನ ತಂದೆಯ ಹೆಸರು ವಸಂತ ಕುಮಾರ್ ಹಾಗೂ ನನ್ನ ತಾಯಿಯ ಹೆಸರು ಶೋಭಾ ನಾರಾಯಣಪ್ಪ. ಅವರಿಬ್ಬರ ಜನ್ಮ ಸ್ಥಳ ಮೈಸೂರು ನಗರ. ನಾವು ವೊಕ್ಕಲಿಗ ಜಾತಿಗೆ ಸೇರಿದವರು. ನನ್ನ ತಂದೆ ತಾಯಿ ಇಬ್ಬರೂ ವೈದ್ಯಕರಾಗಿ ಕೆಲಸ ಮಾಡುತ್ತಿದ್ದಾರೆ. ನನಗೊಬ್ಬ ಅಣ್ಣನಿದ್ದಾನೆ. ಅವನ ಹೆಸರು ಕುಬೇರ್. ಅವನು ಮುಂಬೈ ನಗರದಲ್ಲಿ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ನಮ್ಮ ಮನೆಯಲ್ಲಿ ವಾಸ ಮಾಡುವವರು ನಾನು, ನನ್ನ ತಂದೆ, ನನ್ನ ತಾಯಿ,ನನ್ನ ಅಜ್ಜಿ ಹಾಗೂ ನನ್ನ ತಾತನವರು.ನಾನು ಹಿಂದೂ ಧರ್ಮವನ್ನು ಸ್ವೀಕರಿಸಿ ದೇವರಲ್ಲಿ ನಂಬಿಕೆ ಇಟ್ಟು ಪ್ರಾರ್ಥನೆ ಸಲ್ಲಿಸುತ್ತೇನೇ. ನನಗೆ ಪ್ರಾಣಿಗಳನ್ನು ಕಂಡರೆ ಬಹಳ ಪ್ರೇಮ. ನಮ್ಮ ಮನೆಯಲ್ಲಿ ಒಂದು ನಾಯಿಯನ್ನೂ ಸಾಕಿದ್ದೇವೆ.
ಹವ್ಯಾಸಗಳು
[ಬದಲಾಯಿಸಿ]ನನಗೆ ಕಥೆ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ನೃತ್ಯ ಮಾಡುವುದು, ಚಿತ್ರ ಬಿಡಿಸುವುದು ಹಾಗು ಅದಕ್ಕೆ ಬಣ್ಣ ಹಾಕುವುದು ಬಹಳ ಇಷ್ಟ. ನಾನು ಬಹಳ ವರ್ಷಗಳಿಂದ ಗಿಟಾರ್ ನುಡಿಸುವುದನ್ನು ಕಲಿಯುತ್ತಿದ್ದೇನೆ. ಚಿತ್ರ ಬಿಡಿಸುವ ಕಲೆಗಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹು ಪ್ರಶಸ್ತಿಕೂಡ ನನಗೆ ಸಿಗಲಾಗಿದೆ. ನನಗೆ ಇಂಗ್ಲಿಶ್ ಹಾಗೂ ಕನ್ನಡದಲ್ಲಿ ಕವಿತೆಗಳನ್ನು ಬರೆಯುವ ಆಸಕ್ತಿಯೂ ಇದೆ. ನನಗೆ ವಿಭಿನ್ನ ವಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸಂತೋಷವಾಗುತ್ತದೆ. ಯಾವುದೇ ಕ್ರೀಡೆ ಆದರು ಆಡಬೇಕು ಎಂಬುವ ಛಲ ನನ್ನಲ್ಲಿದೆ. ನಾನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಆಟದಲ್ಲಿ ಕೂಡ ಭಾಗವಹಿಸಿದ್ದೇನೆ. ನನಗೆ ಯಾರಾದರು ಹೊಸ ವಿದ್ಯೆ ಕಿಲಿಸಿಕೊಟ್ಟರೆ, ಕಲಿಯುವ ಆಸಕ್ತಿ ಇದೆ.
ಗುರಿ
[ಬದಲಾಯಿಸಿ]ಯಾವುದೇ ವಯಸ್ಸಿನಲ್ಲಿಯೂ ಕನಸು ಕಾಣುವುದನ್ನು ನಿಲ್ಲಿಸಬಾರದು ಎಂಬುದಾಗಿ ನಾನು ನಂಬಿದ್ದೇನೆ. ನಾನು ಚಿಕ್ಕವಳಿದ್ದಾಗಲಿಂದ ನನ್ನ ತಂದೆ ತಾಯಿ ನನ್ನನ್ನು ಕೇರಳ, ಚೆನ್ನೈ, ಊಟಿ, ದೆಹಲಿ ಮುಂತಾದ ಜಾಗಗಳಿಗೆ ಕರೆದುಕೊಂಡು ಹೋಗುತ್ತಿದ್ದರಿಂದ ನನಗೆ ಓಡಾಡುವ ಅಭ್ಯಾಸವಾಯಿತು. ಒಂದು ದಿನ ಜಗತ್ತಿನಲ್ಲಿರುವ ಎಲ್ಲಾ ಮಹತ್ವವಾದ ಜಾಗಗಳಿಗೆ ಪ್ರಯಾಣ ಮಾಡಬೇಕೆಂಬುದೇ ನನ್ನ ಕನಸು. ನನಗೆ ಅಲ್ಲಿನ ಜನರ ಕಥೆ ಕೇಳಿ, ಅವರಿಂದ ಜ್ಞಾನ ಪಡೆಯುವುದರೊಂದಿಗೆ, ಅವರಿಗೆ ಸಹಾಯ ಮಾಡಬೇಕೆಂಬ ಆಸೆ. ನನ್ನ ಕನಸು ಒಂದು ದಿವಸ ನನಸಾಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಿಎ ಓದು ಮುಗಿಸಿದ ನಂತರ, ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮುಂದುವರಿಸುವ ಯೋಜನೆ ಇದೆ.