ವಿಷಯಕ್ಕೆ ಹೋಗು

ಸದಸ್ಯ:Johnrobin251

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈಯಕ್ತಿಕ ಜೀವನ

[ಬದಲಾಯಿಸಿ]
ಕ್ರೈಸ್ಟೈಟ್

ನನ್ನ ಹೆಸರು ಜಾನ್ ರಾಬಿನ್. ನಾನು ಹುಟ್ಟಿದ ಊರು ಬೆಂಗಳೂರು ಹಾಗು ಹುಟ್ಟಿದ ದಿನ ೩೧-೩-೨೦೦೦. ನನ್ನ ಮಾತೃಭಾಷೆ ತಮಿಳು ಮತ್ತು ನಾನು ಕ್ರೈಸ್ತ ಧರ್ಮದ ರೋಮನ್ ಕ್ಯಾಥೋಲಿಕ್ ಜಾತಿಗೆ ಸೇರಿದವನು . ನನ್ನ ತಂದೆಯ ಹೆಸರು ನಿರ್ಮಲ್ ಕುಮಾರ್ ಹಾಗೂ ತಾಯಿಯ ಹೆಸರು ಮರಿಯಾ ಎಲಿಜಬೆತ್. ನನ್ನ ತಂದೆ ಒಂದು ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಾಯಿ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ . ನಾನು ನನ್ನ ತಂದೆ ತಾಯಿಗೆ ಒಬ್ಬನೇ ಮಗ. ನಾನು ಈಗ ಆಡುಗೋಡಿಯಲ್ಲಿ ವಾಸಿಸುತ್ತಿದ್ದೇನೆ. ನನ್ನ ಬ್ಲಡ್ ಗ್ರೂಪ್ ಬಿ ಪಾಸಿಟಿವ್. ಸಾಮಾನ್ಯವಾಗಿ ಎಲ್ಲರು ನನ್ನನ್ನು ರಾಬಿನ್ ಎಂದು ಕರೆಯುತ್ತಾರೆ. ನನ್ನ ಹವ್ಯಾಸಗಳು ಏನೆಂದರೆ ಕ್ರಿಕೆಟ್,ಬ್ಯಾಡ್ಮಿಂಟನ್, ಥ್ರೋ ಬಾಲ್, ಖೋ ಖೋ, ಫುಟ್ಬಾಲ್ ,ಪುಸ್ತಕ ಓದುವುದು, ಗ್ರಂಥಾಲಯಕ್ಕೆ ಹೋಗುವುದು, ಸಣ್ಣ ಕಥೆಗಳು ಓದುವುದು ಇತ್ಯಾದಿ. ನನ್ನ ನೆಚ್ಚಿನ ಬಣ್ಣ ಹಸಿರು.

ಶಾಲೆಯ ನೆನಪು

[ಬದಲಾಯಿಸಿ]

ನಾನು ಬೆಂಗಳೂರಿನ ಆಡುಗೋಡಿಯಲ್ಲಿರುವ 'ವಿ.ಐ.ಪಿ ಪ್ರೌಢಶಾಲೆ'ಯಲ್ಲಿ ನನ್ನ ಶಾಲಾ ಶಿಕ್ಷಣವನ್ನು ಮಾಡಿದೆ. ನನ್ನ ಶಾಲೆಯ ಅನುಭವಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಹಾಗೆ ಉಳಿದಿವೆ. ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಓದಿದೆ. ನಾನು ಅನೇಕ ಸ್ನೇಹಿತರನ್ನು ಮಾಡಿಕೊಂಡು ನಾವೆಲ್ಲರೂ ಬಹಳ ಸಂತೋಷದಿಂದ ಒಟ್ಟಾಗಿ ಆಡುತ್ತಿದ್ದೆವು. ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಹಲವಾರು ಹಬ್ಬಗಳನ್ನು ಆಚರಿಸುತ್ತಿದ್ದರು. ಹಾಗೂ ಕ್ರೀಡೆಯ ದಿನ ನಡೆಸುತ್ತಿದ್ದರು ಇದರಲ್ಲಿ ನಾನು ಅನೇಕ ಚಟುವಟಿಕೆಯಲ್ಲಿ ಭಾಗವಹಿಸಿ ಅನೇಕ ಮೆಡಲ್ ಹಾಗೂ ಪದಕಗಳನ್ನು ಗೆಲ್ಲುತ್ತಿದ್ದೆ. ವರ್ಷಕೊಮ್ಮೆ ಶಾಲಾ ವಾರ್ಷಿಕೋತ್ಸವ ನಡೆಸಿ ಇದರಲ್ಲಿ ಹಲವಾರು ಮನೋರಂಜನಾ ಕಾರ್ಯಕ್ರಮಗಳು, ನೃತ್ಯ, ನಾಟಕಗಳಲ್ಲಿ ನಾವು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದೆವು. ನಾನು ಹತ್ತನೇ ತರಗತಿಯಲ್ಲಿ ಚೆನ್ನಾಗಿ ಓದಿ ೯೨% ಹೊಂದಿದೆ.

ಕಾಲೇಜು ಅನುಭವ

[ಬದಲಾಯಿಸಿ]
ಕ್ರೈಸ್ಟ್ ಯೂನಿವರ್ಸಿಟಿ ೨೦೧೭ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳು

' ಸಂತ ಫ್ರಾನ್ಸಿಸ್ ಕಾಲೇಜಿ'ನಲ್ಲಿ ಪಿಯುಸಿ ಶಿಕ್ಷಣವನ್ನು ಮಾಡಿದೆ. ಮೊದಲ ವಾರದವರೆಗೂ ಕಾಲೇಜಿಗೆ ಹೋಗಲು ಸ್ವಲ್ಪ ಕಷ್ಟವಾಗುತ್ತಿತ್ತು ನಂತರ ನಾನು ಅಭ್ಯಾಸ ಮಾಡಿಕೊಂಡೆ. ಅಲ್ಲಿ ಹೆಚ್ಚು ಸ್ನೇಹಿತರನ್ನು ಮಾಡಿಕೊಂಡು ಬಹಳ ಖುಷಿಯಿಂದ ಕಾಲ ಕಳೆದೆ. ನನ್ನ ಶಿಕ್ಷಕರ ಜೊತೆ ಬಹಳ ಉತ್ತಮವಾಗಿ ನಡೆದುಕೊಂಡು ಒಳ್ಳೆ ಹೆಸರು ಪಡೆದುಕೊಂಡಿದೆ. ಇಲ್ಲಿ ಹಲವಾರು ಕ್ರೀಡೆಗಳಲ್ಲಿ ಹಾಗೂ ನೃತ್ಯ ನಾಟಕಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದೆ. ಇಲ್ಲಿ ನಾವು ವರ್ಷಕೊಮ್ಮೆ ಫ್ರಾನ್ಸಿಸ್ ಹಬ್ಬ ಎಂಬ ವಾರ್ಷಿಕೋತ್ಸವ ಆಚರಿಸುತ್ತಿದ್ದೆವು. ಆ ದಿನ ನಾನು ಮರೆಯಲಾಗದ ಅನುಭವವಾಗಿತ್ತು. ಇಲ್ಲಿನ ಶಿಕ್ಷಕರು ಪರೀಕ್ಷೆಯ ಮುಂಚಿನ ದಿನ ನಮಗೆ ಅಭ್ಯಾಸವಾಗಲು ಅಭ್ಯಾಸ ಪ್ರಶ್ನೆ ಪತ್ರಿಕೆಗಳನ್ನು ನೀಡುತ್ತಿದ್ದರು. ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೯೪% ಹೊಂದಿದೆ.

ಪದವಿ ಜೀವನ

[ಬದಲಾಯಿಸಿ]

ನಾನು 'ಕ್ರೈಸ್ಟ್ ಡೀಮ್ಡ್ (ಟು ಬಿ ಯೂನಿವರ್ಸಿಟಿ)'ದಲ್ಲಿ ಒಂದನೇ ವರ್ಷದ ಬಿಕಾಂ ಪದವಿಯನು ಮಾಡುತ್ತಿದ್ದೇನೆ. ಈ ಕಾಲೇಜಿಗೆ ಸೇರಿದ ಕಾರಣ ಪ್ಲೇಸ್ಮೆಂಟ್ ಹಾಗೂ ನನಗೆ ಇಷ್ಟವಾಗಿತ್ತು . ನಾನು ಪ್ರತಿ ನಿತ್ಯ ಕಾಲೇಜಿಗೆ ನಡೆದುಕೊಂಡೆ ಬರುತ್ತೇನೆ. ನನಗೆ ಈ ಕಾಲೇಜಿನಲ್ಲಿ ಒಳ್ಳೆಯ ಸ್ನೇಹಿತರು ಹಾಗೂ ಶಿಕ್ಷಕರು ಸಿಕ್ಕಿದ್ದಾರೆ. ಈಗಾಗಲೇ ಒಂದನೆಯ ಸೆಮಿಸ್ಟರ್ ಮುಗಿದುಹೋಗಿದೆ. ಇದರಲ್ಲಿ ನಾನು ೭೨% ಹೊಂದಿದೆ. ಇಲ್ಲಿನ ವಾತಾವರಣ ಸುಂದರವಾಗಿದೆ. ಒಂದನೆಯ ಸೆಮಿಸ್ಟರಿನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿಲ್ಲ ಆದರೆ ಎರಡನೇ ಸೆಮಿಸ್ಟರಿನಲ್ಲಿ ತೆಗೆಯುವೆ ಎಂದು ಅಂದುಕೊಂಡಿದ್ದೇನೆ . ಕ್ರೈಸ್ತ ಕಾಲೇಜಿನಲ್ಲಿ ಪ್ರತಿನಿತ್ಯ ಯಾವುದಾದರೊಂದು ಕಾರ್ಯಕ್ರಮ ನಡೆದುಕೊಂಡೇ ಇರುತ್ತವೆ. ಇದನ್ನು ನೋಡುವುದಕ್ಕೆ ಬಹಳ ಉತ್ತಮವಾದದ್ದು. ಇಂಥ ಕಾರ್ಯಕ್ರಮಗಳಲ್ಲಿ ನಮಗೆ ಭಾಗವಹಿಸಲು ಹೆಚ್ಚು ಅವಕಾಶಗಳನ್ನು ನೀಡುತ್ತಾರೆ. ಹಾಗೂ ಕ್ರೀಡೆ ಕಾರ್ಯಕ್ರಮ ಈಗ ಮುಂದುವರಿಯುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಲಿವೆ. ಈ ಕಾಲೇಜಿಗೆ ಸೇರಿ ನನಗೆ ಬಹಳ ಖುಷಿಯಾಗಿದೆ.