ವಿಷಯಕ್ಕೆ ಹೋಗು

ಸದಸ್ಯ:Indushree11

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂದು

ನಾನು ಇಂದುಶ್ರೀ ಎಸ್. ನಾನು ೧೦ ಏಪ್ರಿಲ್ ೧೯೯೮ ರಂದು ಬೆಂಗಳೂರಿನಲ್ಲಿ ಜನಿಸಿದೆನು.

ಕುಟುಂಬ

[ಬದಲಾಯಿಸಿ]

ನಮ್ಮದೊಂದು ಚಿಕ್ಕ ಕುಟುಂಬ ನನ್ನ ತಂದೆ ಸಂಪಂಗಿರಾಮಯ್ಯನವರು ಹಾಗು ತಾಯಿ ಲಕ್ಷ್ಮಿ. ನನಗೆ ನನ್ನ ತಂದೆ ಒಬ್ಬ ಒಳ್ಳೇ ಸ್ನೇಹಿತರು ಸಹ ಹೌದು. ನನಗೆ ನನ್ನ ತಂದೆ ಎಂದರೆ ಅಪಾರ ಪ್ರೀತಿ ಹಾಗು ಗೌರವ ಜಾಸ್ತಿ. ನನ್ನ ತಂದೆ ರೈತರು ಹಾಗು ತಾಯಿ ದರ್ಜಿ ಕೆಲಸ ಮಾಡುತ್ತಾರೆ. ನನ್ನ ತಂದೆಯವರು ರೈತರಾದ್ದರಿಂದ ನಮಗೆ ವ್ಯವಸಾಯದಲ್ಲಿ ಲಾಭ, ನಷ್ಟ ಎರಡೂ ಉಂಟು. ಆದರೆ ಎರಡರ ಸಮಯದಲ್ಲೂ ನನ್ನ ಅಪ್ಪ ತುಂಬಾ ಚೆನ್ನಾಗಿ ನಮ್ಮ ಕುಟುಂಬದ ವೆಚ್ಚಗಳನ್ನು ನಿಭಾಯಿಸುತ್ತಾರೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಪರಿಸರ ಪ್ರಿಯರು. ನಮಗೆ ಪ್ರಕ್ರುತಿಯೊಡನೆ ಕಾಲ ಕಳೆಯುವುದು ತುಂಬ ಇಷ್ಟ. ನನ್ನ ತಂದೆ ಹೆಚ್ಚಾಗಿ ರಾಗಿ, ಅವರೆ, ಭತ್ತ, ಜೋಳ, ಸೇವಂತಿ ಹೂ ಇತ್ಯಾದಿಯನ್ನು ವಾತಾವರಣಕ್ಕೆ ಅನುಗುಣವಾಗಿ ಬೆಳೆಯುತ್ತೇವೆ. ನಾವೆಲ್ಲರು ದೇವರಲ್ಲಿ ಭಕ್ತಿ ಹಾಗು ನಂಬಿಕೆ ಹೊಂದಿದ್ದೇವೆ.

ಶಿಕ್ಷಣ

[ಬದಲಾಯಿಸಿ]

ನಾನು ನನ್ನ ಹತ್ತನೆ ತರಗತಿಯಲ್ಲಿ ತುಂಬಾ ಕಡಿಮೆ ಅಂಕಗಳನ್ನು ಗಳಿಸಿದ್ದೆ. ಇದಕ್ಕೆ ಕಾರಣ ನನ್ನ ಆರೋಗ್ಯ ಎಂಬುದೇ ನನಗೆ ಬೇಜಾರು. ಆದರಿಂದ್ದ ನಾನು ನನ್ನ ಪದವಿಪೂರ್ಣ ಘಟ್ಟದಲ್ಲಿ ತುಂಬಾ ಜಾಗ್ರುತಿಯಿಂದ್ದ ಇದ್ದು, ಶ್ರದ್ದೆಯಿಂದ ಓದಿ ವಾಣಿಜ್ಯದಲ್ಲಿ ಒಳ್ಳೇ ಅಂಕಗಳನ್ನು ಗಳಿಸಿದೆ. ಇದರಿಂದ ನನ್ನ ತಂದೆ ತಾಯಿ ಬಹಳ ಖುಷಿಪಟ್ಟರು ಹಾಗು ನಾನು ಸಂತೋಷಿತಳಾದೆನು. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎ. ಮಾಡುತ್ತಿದ್ದೇನೆ. ಹಾಗು ಇಲ್ಲಿ ಓದುತ್ತಿರುವುದೇ ನನಗೆ ಬಹಳ ಸಂತೋಷಕರ ಸಂಗತಿ. ಮುಂದೆ ನಾನು ಒಬ್ಬ ಒಳ್ಳೇ ಮನಶಾಸ್ತ್ರಗ್ನಳಾಗಬೇಕೆಂಬ ಆಸೆ.

ಆಸಕ್ತಿಗಳು

[ಬದಲಾಯಿಸಿ]

ನನಗೆ ಶಾಸ್ತ್ರೀಯ ಸಂಗೀತ ಎಂದರೆ ತುಂಬಾ ತುಂಬಾ ಇಷ್ಟಾ ಹಾಗು ತುಂಬಾ ಗೌರವ. ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಸಂಗೀತವನ್ನು ಸರ್ಟಿಫಿಕೇಟ್ ಕೊರ್ಸ್ ಆಗಿ ಮಾಡುತ್ತಿದೇನೆ. ಹಾಗಾಗಿ ತುಂಬಾ ಖುಷಿಯಾಗಿದ್ದೇನೆ. ಹಾಗು ನನಗೆ ವಿವಿಧ ಭಾಷೆಗಳು ಕಲಿಯುವುದು, ಮಾತನಾಡುವುದು ಎಂದರೆ ಹೆಚ್ಚು ಕುತೂಹಲಕಾರಿಯಾದ ವಿಷಯ. ನನ್ನ ಶಾಲೆಯ ಸ್ನೇಹಿತರೊಡನೆ ಹಾಗು ನನ್ನ ಕುಟುಂಬದವರೊಡನೆ ಕಾಲಕಳೆಯುವುದು, ಮೋಜು, ಮಸ್ತಿ ಮಾಡುವುದು ನನಗೆ ಸಂತೋಷತರುವ ಇನ್ನೊಂದು ವಿಷಯ. ದೇವಸ್ಥಾನಕ್ಕೆ ಹೋಗುವುದು ಹಾಗು ದೇವರ ಲೀಲೆಗಳನ್ನು ತಿಳಿಯುವುದು ನನ್ನ ಮನಸ್ಸಿಗೆ ಹಿತಕರವಾದ ಅನುಭವವನ್ನು ಕೊಡುತ್ತದೆ. ನನಗೆ ಶ್ರೀ ಕ್ರಿಷ್ಣನ ಕುರಿತು ತಿಳಿದುಕೊಳ್ಳುವುದೆಂದರೆ ಬಹಳಾ ಇಷ್ಟ. ಕುಟುಂಬದೊಡನೆ ಸೇರಿ ಗುಡ್ಡಗಾಡು ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗುವುದು ಬಹಳಾ ಸಂತೋಷವಾಗುತ್ತದೆ.

This user is a member of WikiProject Education in India

ಉಪಪುಟಗಳು

[ಬದಲಾಯಿಸಿ]