ವಿಷಯಕ್ಕೆ ಹೋಗು

ಸದಸ್ಯ:Harini aradhya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಮತ್ತು ಕುಟುಂಬ

[ಬದಲಾಯಿಸಿ]

ನನ್ನ ಹೆಸರು ಹರಿಣಿ.ಆರ್ ನನ್ನ ತಂದೆಯ ಹೆಸರು ರಾಜಣ್ಣ.ಆರ್ ಹಾಗು ನನ್ನ ತಾಯಿಯ ಹೆಸರು ರೂಪ.ಕೆ. ನಾನು ಹುಟ್ಟಿದ ದಿನಾಂಕ ೨೫/೦೯/೧೯೯೭. ನಾವು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನವರು.ನಮ್ಮ ಪೋಷಕರಿಗೆ ನಾನೊಬ್ಬಳೆ ಮಗಳು. ನಮ್ಮ ಮನೆಯಲ್ಲಿ ನಾವು ೩ ಮಂದಿ ವಾಸಿಸುತ್ತಿದ್ದೇವೆ. ನನ್ನ ತಂದೆ ಚಾಲಕ ವೃತ್ತಿಗೆ ಸೇರಿದವರು. ನಾನು ತುಂಬಾ ಮುಂಗೋಪಿ ಆದ್ದರಿಂದ ನನ್ನ ಸ್ನೇಹಿತರು ನನ್ನನ್ನು ಆಂಗ್ರಿ ಬರ್ಡ್ ಎಂದು ಕರೆಯುತ್ತಾರೆ.

ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗು ಆನೇಕಲ್ಲಿನ ಪರ್ಲ್ ವ್ಯಾಲಿ ಶಾಲೆಯಲ್ಲಿ ವ್ಯಾಸಂಗ ಮಾಡಿದೆ. ಆನಂತರ ಪ್ರಥಮ ಪಿ.ಯು.ಸಿ ಹಾಗು ದ್ವಿತೀಯ ಪಿ.ಯು.ಸಿಯನ್ನು ಸ್ವಾಮಿ ವಿವೇಕಾನಂದ ಸಂಸ್ಥೆ,ಚಂದಾಪುರದಲ್ಲಿ ಓದಿ ಉತ್ತಿರ್ಣಳಾದೆ. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರಥಮ ಬಿ.ಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ಧೇನೆ.

ಕ್ರೀಡೆ ಮತ್ತು ಸಾಧನೆ

[ಬದಲಾಯಿಸಿ]

ನಾನು ೧೩ ವರ್ಷಗಳಿಂದ ಕರಾಟೆ ಕಲೆಯನ್ನು ಶಿಹಾನ್.ನಾಗೇಂದ್ರ ರಾಂವ್ ಅವರ ಬಳಿ ಕಲಿಯುತ್ತಿದೇನೆ. ಅನೇಕ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದ್ದೇನೆ. ೨೦೦೮ರಲ್ಲಿ ತಮಿಳು ನಾಡಿನ ಸೇಲಂನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಟೂರ್ನಮೆಂಟಿನಲ್ಲಿ ಬಾಲಕಿಯರ ವಿಭಾಗದ ಕುಮಿತೆಯಲ್ಲಿ ಚಿನ್ನದ ಪದಕವನ್ನು ಗಳಿಸಿದ್ದೇನೆ ಹಾಗು ನಮ್ಮ ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದೇನೆ. ಹಾಗು ೨೦೧೩ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಟೂರ್ನಮೆಂಟಿನ ಬಾಲಕಿಯರ ವಿಭಾಗದ ಕುಮಿತೆಯಲ್ಲಿಯೂ ಸಹ ಚಿನ್ನದ ಪದಕವನ್ನು ಪದೆದು ನಮ್ಮ ಬೆಂಗಳೂರು ಜಿಲ್ಲೆಯನ್ನು ಪ್ರತಿಭಿಂಬಿಸಿದ್ದೇನೆ. ಹಾಗು ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ.ನಾನು ವಾಲಿಬಾಲ್ ನಲ್ಲಿ ತಾಲೂಕು ಮಟ್ಟದಲ್ಲಿ ಭಾಗವಹಿಸಿದ್ದೇನೆ ಹಾಗು ಯೋಗಾಸನದಲ್ಲಿಯೂ ಸಹ ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ್ದೇನೆ ಈ ನನ್ನ ಸಾಧನೆಗೆ ಮುಖ್ಯ ಕಾರಣರು ನಮ್ಮ ತಂದೆ,ತಾಯಿ ಹಾಗು ನಮ್ಮ ಕರಾಟೆ ಗುರುಗಳು. ನಾನು ಅವರಿಗೆ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.

ಹವ್ಯಾಸಗಳು

[ಬದಲಾಯಿಸಿ]

ನಾನು ನಮ್ಮ ತಂದೆ-ತಾಯಿಗೆ ಒಬ್ಬಳೆ ಮಗಳು ಆದ್ದರಿಂದ ಅವರು ನನ್ನನ್ನು ತುಂಬಾ ಪ್ರೀತಿಯಿಂದ ಸಾಕುತ್ತಿದ್ಧಾರೆ. ಅವರಿಗೆ ನಾನು ಪೋಲಿಸ್ ಅಧಿಕಾರಿಯಾಗಬೇಕೆಂಬ ಗುರಿ. ನನಗೆ ಅವರ ಆಸೆಯನ್ನು ಸಾಧಿಸುವ ಛಲ. ನನಗೆ ಸಾಕು ಪ್ರಾಣಿಗಳೆಂದರೆ ತುಂಬಾ ಪ್ರೀತಿ. ನನ್ನ ಹವ್ಯಾಸಗಳು ಕಾದಂಬರಿಳನ್ನು ಓದುವುದು, ಹಾಡು ಕೇಳುವುದು, ಸ್ನೇಹಿತರೊಡನೆ ಅಲೆದಾಡುವುದು, ಆಟವಾಡುವುದು ಹಾಗು ಬಿಡುವಿನ ಸಮಯದಲ್ಲಿ ನಿದ್ರಿಸುವುದು.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Harini aradhya