ಸದಸ್ಯ:Harini aradhya/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಿಷಭ್ ಪಂತ್[ಬದಲಾಯಿಸಿ]

ರಿಷಭ್ ಪಂತ್ ಭಾರತ ತಂಡದ ಯುವ ಕ್ರಿಕೆಟ್ ಆಟಗಾರ. ೧೯೯೭ರ ಅಕ್ಟೋಬರ್ ೬ ರಂದು ಉತ್ತರಾಖಂಡ್‍ನ ಹರಿದ್ವಾರದಲ್ಲಿ ಜನಿಸಿದ ರಿಷಭ್ ಪಂತ್ ತನ್ನ ಬ್ಯಾಟಿಂಗ್ ಮತ್ತು ಫಿಲ್ಡಿಂಗ್ ಮೂಲಕ ಗುರುತಿಸಿಕೊಂಡವರು. ಇವರ ಪೂರ್ಣ ಹೆಸರು ರಿಷಭ್ ರಾಜೇಂದ್ರ ಪಂತ್.

ಬಾಲ್ಯ ಹಾಗು ವೈಯಕ್ತಿಕ ಜೀವನ[ಬದಲಾಯಿಸಿ]

ಹರಿದ್ವಾರ ಮೂಲದ ರಾಜೇಂದ್ರ ಪಂತ್ ಅವರು ರಿಷಭ್ ಪಂತ್‍ನ ತಂದೆ ಹಾಗು ಸರೊಜ್ ಪಂತ್ ಅವರು ರಿಷಭ್ ಪಂತ್‍ನ ತಾಯಿ. ರಿಷಭ್ ಪಂತ್‍ ಬಾಲ್ಯದಿಂದಲು ಕ್ರಿಕೆಟ್ ಆಟವನ್ನು ಅಭ್ಯಾಸ ಮಾಡುತ್ತಿದ್ದಾರೆ.

ರಿಷಭ್ ಪಂತ್‍ನ ಆಟದ ಠೀವಿ[ಬದಲಾಯಿಸಿ]

ರಿಷಭ್ ಪಂತ್ ೨೦೧೫-೨೦೧೬ರ ರಣಜಿ ಟ್ರೋಫಿಯ[೧] ಮೂಲಕ ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ನಂತರ ಅದೇ ವರ್ಷದಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ[೨] ಸಹ ಡೆಲ್ಲಿ ತಂಡವನ್ನು ಪ್ರತಿನಿಧಿಸಿದರು. ನಂತರ ರಿಷಭ್ ಪಂತ್ ರವರು ಐಪಿಎಲ್ ನಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ತಂಡದಲ್ಲಿ ಆಡಿದರು. ರಿಷಭ್ ಪಂತ್ ಮೂಲತಃ ಎಡಗೈ ಬ್ಯಾಟ್ಸ್‌ಮಾನ್, ವಿಕೆಟ್ ಕೀಪರ್ ಹಾಗು ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕ್ರಿಕೆಟ್‍ನ ಗೋಡೆ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಡೆಲ್ಲಿ ಡೇರ್‍ಡೆವಿಲ್ಸ್ ಕೋಚ್ ಆಗಿದ್ದರು. ಅದೇ ತಂಡದ ಆಟಗಾರ‍ನಾಗಿದ್ದ ರಿಷಭ್ ಪಂತ್ ರಾಹುಲ್ ದ್ರಾವಿಡ್‍ರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮುನ್ನೆಡೆದಿದ್ದರು. ಎರಡು ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ರಿಷಭ್ ಪಂತ್ ೧೨೦ ರನ್‍ಗಳನ್ನು ಗಳಿಸಿದ್ದಾರೆ. ಇದರಲ್ಲಿ ೬೫ ರನ್ಸ್ ಇವರ ಅಧಿಕ ಸ್ಕೋರ್ ಆಗಿದೆ. ಅದೇ ರೀತಿ ಲಿಸ್ಟ್ 'ಎ'ನಲ್ಲಿ ಮೂರು ಪಂದ್ಯಗಳನ್ನಾಡಿದ್ದು ಐವತ್ತು ರನ್‍ಗಳಿಸಿದ್ದಾರೆ. ಇದರಲ್ಲಿ ೨೫ ರನ್ಸ್ ಅಧಿಕ ಸ್ಕೋರ್ ಆಗಿದೆ. ೨೦-೨೦ ಕ್ರಿಕೆಟ್‍ನಲ್ಲಿ ಹತ್ತು ಪಂದ್ಯಗಳನ್ನಾಡಿದ್ದು ೧೯೮ ರನ್‍ಗಳನ್ನು ಗಳಿಸಿದ್ದಾರೆ. ಇದರಲ್ಲಿ ೬೯ ರನ್ಸ್ ಇವರ ಅತ್ಯಧಿಕ ಸ್ಕೋರ್ ಆಗಿದೆ. ರಿಷಭ್ ರಾಜೇಂದ್ರ ಪಂತ್‍ರವರು ವಿಕೆಟ್ ಕೀಪಿಂಗ್‍ನಲ್ಲಿ ೧೩ ಕ್ಯಾಚ್‍ಗಳನ್ನು ಹಿಡಿದಿದ್ದಾರೆ ಹಾಗು ೩ ಸ್ಟಂಪ್‍ಔಟ್ ಮಾಡಿದ್ದಾರೆ. ೧೯ ವರ್ಷದೊಳಗಿನ ವಿಶ್ವಕಪ್ ಪಂದ್ಯಗಳಲ್ಲಿ ಸಹ ರಿಷಭ್ ವಿಶ್ವದ ಗಮನ ಸೆಳೆದಿದ್ದ ೨೦೧೬ ಫೆಬ್ರವರಿ ೧‍ರಂದು ಜರುಗಿದ್ದ ಪಂದ್ಯಾವಳಿ‍ಯಲ್ಲಿ ನೇಪಾಳ ತಂಡದ ವಿರುದ್ದ ರಿಷಭ್ ಪಂತ್ ಕೇವಲ ಹದಿನೆಂಟು ಎಸತಗಳಲ್ಲಿ ಎಂದರೆ ೩ ಓವರ್‍ನಲ್ಲಿ ಅರ್ಧಶತಕವನ್ನು ಹೊಡೆದರು[೩].

ಐಪಿಎಲ್ ರನ್ಸ್[ಬದಲಾಯಿಸಿ]

೨೦೧೬ ಫೆಬ್ರವರಿ ೬‍ರಂದು ಜರುಗಿದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ೧೦ ಲಕ್ಷ ರುಪಾಯಿ ಮೂಲ ಬೆಲೆಯಿಂದ ೧.೯ ಕೋಟಿ ಬೆಲೆಗೆ ಡೆಲ್ಲಿ ಡೇರ್‍ಡೆವಿಲ್ಸ್ ತಂಡಕ್ಕೆ ಬಿಕರಿಯಾದರು ಅದೇ ದಿನ ವಿಶ್ವಕಪ್‍ನಲ್ಲಿ ಶತಕವನ್ನು ಸಹ ರಿಷಭ್ ಪಂತ್ ಗಳಿಸಿದ[೪]. ೨೦೧೬ ಎಪ್ರಿಲ್ ೨೭‍ ರಂದು ದೆಹಲಿ ಫಿರೊಜ್‍ಶಾಃ ಕೊಟ್ಲ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ದ ರಿಷಭ್ ೧೭ ಎಸೆತಗಳಲ್ಲಿ ೨೦ ರನ್‍ಗಳಿಸಿ ,೨ ಬೌಂಡರಿ ಹೊಡೆದಿದ್ದಾರೆ. ೨೦೧೬ ಎಪ್ರಿಲ್ ೩೦ ರಂದು ದೆಹಲಿ ಫಿರೊಜ್‍ಶಾಃ ಕೊಟ್ಲ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ದ ರಿಷಭ್ ೪ ಎಸೆತಗಳಲ್ಲಿ ೪ ರನ್‍ಗಳಿಸಿದರು. ೨೦೧೬ ಮೇ ೩ ರಂದು ಸೌರಾಷ್ಟ್ರ ಕ್ರಿಕೆಟ್ ಸಂಘ ಕ್ರೀಡಾಂಗಣ ರಾಜ್‍ಕೋಟ್‍ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ದ ರಿಷಭ್ ೪೦ ಎಸೆತಗಳಲ್ಲಿ ೬೯ ರನ್‍ಗಳಿಸಿ ,೯ ಬೌಂಡರಿ,೨ ಸಿಕ್ಸರ್‍ಗಳನ್ನು ಭಾರಿಸಿದ್ದಾರೆ. ೨೦೧೬ ಮೇ ೫ ರಂದು ದೆಹಲಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪುಣೆ ಸೂಪರ್ ಜೈಂಟ್ಸ್ ವಿರುದ್ದ ರಿಷಭ್ ೮ ಎಸೆತಗಳಲ್ಲಿ ೨ ರನ್‍ಗಳನ್ನು ಗಳಿಸಿದ್ದಾರೆ. ೨೦೧೬ ಮೇ ೭ ರಂದು ಮೊಹಾಲಿಯ ಬಿಂದ್ರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಭ್ ತಂಡದ ವಿರುದ್ದ ರಿಷಭ್ ೩ ಎಸೆತಗಳಲ್ಲಿ ೪ ರನ್‍ಗಳನ್ನು, ೧ ಬೌಂಡರಿಯನ್ನು ಹೊಡೆದಿದ್ದಾರೆ. ೨೦೧೬ ಮೇ ೧೨ ರಂದು ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ ಹೈದರಾಬಾದ್ ತಂಡದ ವಿರುದ್ದ ರಿಷಭ್ ೨೬ ಎಸೆತಗಳಲ್ಲಿ ೩೯ ರನ್‍ಗಳನ್ನು ಗಳಿಸಿ, ೨ ಬೌಂಡರಿ ಹಾಗು ೩ ಸಿಕ್ಸರ್‍ ಹೊಡೆದಿದ್ದಾರೆ. ೨೦೧೬ ಮೇ ೧೫ ರಂದು ವಿಶಾಕಪಟ್ನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ದ ರಿಷಭ್ ೧೭ ಎಸೆತಗಳಲ್ಲಿ ೨೩ ರನ್‍ಗಳನ್ನು ಗಳಿಸಿ, ೨ ಬೌಂಡರಿ ಹಾಗು ೧ ಸಿಕ್ಸ್ ಹೊಡೆದಿದ್ದಾರೆ. ೨೦೧೬ ಮೇ ೧೭ ರಂದು ವಿಶಾಕಪಟ್ನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡದ ವಿರುದ್ದ ರಿಷಭ್ ೯ ಎಸೆತಗಳಲ್ಲಿ ೪ ರನ್‍ಗಳನ್ನು ಗಳಿಸಿದ್ದಾರೆ. ೨೦೧೬ ಮೇ ೨೦ ರಂದು ರಾಯ್‍ಪುರ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ ಹೈದರಾಬಾದ್ ತಂಡದ ವಿರುದ್ದ ರಿಷಭ್ ೨೬ ಎಸೆತಗಳಲ್ಲಿ ೩೨ ರನ್‍ಗಳನ್ನು ಗಳಿಸಿದ್ದು, ೩ ಬೌಂಡರಿಗಳನ್ನು ಹೊಡೆದಿದ್ದಾರೆ. ೨೦೧೬ ಮೇ ೨೨ ರಂದು ರಾಯ್‍ಪುರ್‍ನಲ್ಲಿರುವ ಶಹೀದ್‍ವೀ‍ರ್‍ನಾರಯಣ್ ಸಿಂಗ್ ಅಂತರಾಷ್ಟ್ರಿಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ರಿಷಭ್ ೨ ಎಸೆತಗಳಲ್ಲಿ ೧ ರನ್‍ ಗಳಿಸಿದ್ದಾರೆ. ಹೀಗೆ ಪ್ರತಿಪಂದ್ಯಗಳಲ್ಲು ಒಳ್ಳೆಯ ಆಟವನ್ನು ಪ್ರದರ್ಶಿಸುತ್ತಿದ್ದಾನೆ. ರಿಷಭ್ ತಾನು 'ಅಭ್ಯಾಸಕ್ಕೋಸ್ಕರ ವಿವಿಧ ನಗರಗಳು, ವಿವಿಧ ರಾಜ್ಯಗಳನ್ನು ಅಲೆದಾಡಿದ್ದೇನೆ, ಹಲವಾರು ಅವಮಾನವನ್ನು ಅನುಭವಿಸಿದ್ದೇನೆ, ಕೋಚ್‍ಗಳಿಗಾಗಿ ತಿರುಗಾಡಿದ್ದೇನೆ ಆದರು ದೃತಿಗೆಡದೆ ನನ್ನ ಅಭ್ಯಾಸದಿಂದಾಗಿ ಇಂದು ಕ್ರಿಕೆಟ್‍ನಲ್ಲಿ ನೆಲೆಯೂರಿದ್ದೇನೆ' ಎಂದು ರಿಷಭ್ ಪಂತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಗಂಗಾ ನದಿಯ ತೀರವಾಗಿರುವ ಹರಿದ್ವಾರದಿಂದ ಬಂದ ಹುಡುಗ ಇಂದು ಐಪಿಎಲ್, ೧೯ ವರ್ಷದೊಳಗಿನ ವಿಶ್ವಕಪ್, ರಣಜಿ, ವಿಜಯ್ ಹಜಾರೆ ಟ್ರೋಫಿ ಮುಂತಾದ ಪಂದ್ಯಾವಳಿಗಳನ್ನು ಆಡಿದ್ದಾರೆ. ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ರಿಷಭ್ ಸುದ್ದಿಗಾರರೊಂದಿಗೆ ಮಾತನಾಡುತ್ತ'ದೇಶಕ್ಕಾಗಿ ಆಡುವಾಗ ಒಂದು ಹುಮ್ಮಸ್ಸು ನಮ್ಮಲ್ಲಿರುತ್ತದೆ. ಆ ಶಕ್ತಿಯೇ ನಮ್ಮನ್ನು ಗೆಲುವಿನ ದಡ ಸೇರಿಸುತ್ತದೆ' ಎಂಬ ಮಾತನ್ನು ಹೇಳಿದ್ದಾನೆ. ಮುಂದೊಂದು ಭಾರತ ಸೀನಿಯರ್ ತಂಡದಲ್ಲಿ ಆಡುವ ಎಲ್ಲಾ ಲಕ್ಷಣಗಳು ರಿಷಭ್‍ನಲ್ಲಿದೆ. ಒಟ್ಟಾರೆ ಆಟದ ಮೂಲಕವೆ ಗಮನ ಸೆಳೆದಿರುವ ರಿಷಭ್ ಪಂತ್ ಬ್ಯಾಟಿಂಗ್, ಫೀಲ್ಡಿಂಗ್, ಕೀಪಿಂಗ್ ಎಲ್ಲದರಲ್ಲೂ ಸಮತೋಲನದಿಂದ ಕೂಡಿರುವ ಆಟಗಾರನಾಗಿದ್ದಾನೆ.

  1. http://www.espncricinfo.com/ci/engine/match/901763.html
  2. http://www.espncricinfo.com/ci/engine/match/902075.html
  3. http://www.espncricinfo.com/icc-under-19-world-cup-2016/content/story/967879.html
  4. http://www.dnaindia.com/sport/report-rishabh-pant-powers-india-u-19-to-semi-finals-on-his-ipl-pay-day-2174661