ಸದಸ್ಯ:Harini aradhya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿ.ಸಿ.ಮಹಾಲನೋಬಿಸ್

ಮೂಲವಿ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಜ್ಞಾನದಲ್ಲಿ ಹೆಸರು ಪಡೆದು, ಸಂಖ್ಯಾಶಾಸ್ತ್ರದಲ್ಲಿ ಪಿತಾಮಹರಾದ ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರು ಭಾರತದ ಹತ್ತು ಪ್ರಸಿದ್ಡ ಗಣಿತ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಇವರು ಮಾದರಿ ಸರ್ವೆಕ್ಷಣವನ್ನು(ನ್ಯಾಷನಲ್ ಸ್ಯಾಂಪಲ್ ಸರ್ವೆ) ಭಾರತದಲ್ಲಿ ಪರಿಚಯಿಸಿದರು.

ಪಿ.ಸಿ.ಮಹಾಲನೋಬಿಸ್ ಅವರ ಸಹಿ

ಬಾಲ್ಯ[ಬದಲಾಯಿಸಿ]

ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರು ಪಶ್ಚಿಮ ಬಂಗಾಲದ ಕಲ್ಕತ್ತಾದಲ್ಲಿ ೧೮೯೩ರ ಜೂನ್ ೨೯ರಂದು ಜನಿಸಿದರು. ಮಹಾಲನೋಬಿಸ್ ಅವರು ಮೂಲತಃ ಬೆಂಗಾಲಿ ಮೂಲದವರು. ಈಗಿನ ಬಾಂಗ್ಲಾ ದೇಶದ ಬಿಕ್ರಮ್‍ಪುರ ಎಂಬ ಊರಿನವರು. ಇವರ ತಾತನ ಹೆಸರು ಗುರುಚರಣ್(೧೮೩೩-೧೯೧೬). ಗುರುಚರಣ್‍ರವರು ೧೮೫೪‍ರಲ್ಲಿ ಕಲ್ಕತ್ತಾಗೆ ಕುಟುಂಬ ಸಮೇತ ಹೋದರು. ಹಾಗು ಆರು ವರ್ಷಗಳ ನಂತರ ೧೮೬೦ರಲ್ಲಿ ರಸಾಯನಶಾಸ್ತ್ರಜ್ಞ ಅಂಗಡಿ ಪ್ರಾರಂಭಿಸಿದರು. ದೇವೇಂದ್ರನಾಥ್ ಟಾಗೋರ್ (1817-1905), ನೋಬೆಲ್ ಪ್ರಶಸ್ತಿ ವಿಜೇತ ಕವಿ, ರವೀಂದ್ರನಾಥ ಟ್ಯಾಗೋರ್ ಪಿತಾಮಹ ಅವರಿಂದ ಗುರುಚರಣ್‍‍ರು ಪ್ರಭಾವಿತರಾಗಿದ್ದರು. ಗುರುಚರಣ್ ಅವರು ಒಬ್ಬ ವಿಧವೆಯನ್ನು ಮದುವೆಯಾದರು, ಸಾಮಾಜಿಕ ಸಂಪ್ರದಾಯಗಳು ವಿರುದ್ಧವಾಗಿ ಕ್ರಮ ಕೈಗೊಂಡರು. ಗುರುಚರಣ್ ಅವರ ಹಿರಿಯ ಮಗ ಸುಬೋಧ ಚಂದ್ರ(೧೮೬೭-೧೯೫೩) ಹಾಗು ಕಿರಿಯ ಮಗ ಪ್ರಬೋಧ್ ಚಂದ್ರ(೧೮೬೯-೧೯೪೨). ಗುರುಚರಣ್ ಅವರ ಹಿರಿಯ ಮಗ ಅವರ ಸುಬೋಧ ಚಂದ್ರರು ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರದ ಅಧ್ಯಯನ ನಂತರ ವಿಶಿಷ್ಠ ಶಿಕ್ಷಕರಾದರು. ಹಾಗು ಅವರು ಕಾರ್ಡಿಫ್ ಯೂನಿವರ್ಸಿಟಿಯಲ್ಲಿ ವಿಜ್ಞಾನ ಇಲಾಖೆಯ ಮುಖ್ಯಸ್ಥರಾಗಿದ್ದರು. ೧೯೦೦ ರಲ್ಲಿ ಸುಬೋಧ ಚಂದ್ರ ಅವರು ಭಾರತಕ್ಕೆ ಮರಳಿದರು ನಂತರ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶರೀರಶಾಸ್ತ್ರದ ಇಲಾಖೆ ಸಂಸ್ಥಾಪಕರಾದರು ಹಾಗು ಕಲ್ಕತ್ತಾ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ಪ್ರಬೋಧ್ ಚಂದ್ರ ಹಾಗು ನಿರೋಬಶ್ನಿ ದಂಪತಿಯ ಆರು ಜನ ಮಕ್ಕಳಲ್ಲಿ ಮೊದಲ ಮಗನಾಗಿ ಮಹಲನೋಬಿಸ್ ಅವರು ಜನಿಸಿದರು.[೧]

ಶಿಕ್ಷಣ ಮತ್ತು ವೃತ್ತಿ ಜೀವನ[ಬದಲಾಯಿಸಿ]

ಪಿ.ಸಿ.ಮಹಾಲನೋಬಿಸ್ ಅವರು ಕಲ್ಕತ್ತದ ಬ್ರಹ್ಮೋ ಬಾಯ್ಸ್ ಶಾಲೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಪಡೆದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ೧೯೦೮ರಲ್ಲಿ ಪದವಿ ಪಡೆದರು. ಇಲ್ಲಿ ಜಗದೀಶ್ ಚಂದ್ರಬೋಸ್ ಹಾಗು ಪ್ರಫುಲ್ಲಾ ಚಂದ್ರರಾಯ್ ಅವರಿಂದ ಪ್ರಭಾವಿತರಾದರು. ಜೊತೆಗೆ ಸುಭಾ‍ಷ್ ಚಂದ್ರಬೋಸ್ ಅವರು ಇದೇ ಕಾಲೆಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ೧೯೧೨ರಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಭೌತಶಾಸ್ತ್ರ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದರು. ೧೯೧೩ರಿಂದ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ತೆರಳಿದರು. ಇಂಗ್ಲೆಂಡ್‍ನ ಕಿಂಗ್ಸ್ ಕಾಲೇಜ್ ಚಾಪೆಲ್‍ನಲ್ಲಿ ಭೌತಶಾಸ್ತ್ರ ಅಧ್ಯಯನ ನಡೆಸಿದರು. ವಿದೇಶದಲ್ಲಿ ಉನ್ನತ ವ್ಯಾಸಂಗದ ನಂತರ ಸಿ.ಟಿ.ಆರ್.ವಿಲ್ಸನ್ ಅವರ ಕೇವೆನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಡಿಶ್ ಸಂಶೋಧನಾ ಲ್ಯಾಬರೋಟರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಭಾರತಕ್ಕೆ ಹಿಂತಿರುಗಿ ನಂತರ ಮತ್ತೆ ಇಂಗ್ಲೆಂಡ್‍‍‍‍‍‍‍‍‍‍‍‍‍ಗೆ ತೆರಳಿ ಅಲ್ಲಿ ಬಯೋಮೆಟ್ರಿಕಾ ಎಂಬ ಜರ್ನಲನ್ನು ಆಕ್ಸಫರ್ಡ್ ವಿಶ್ವವಿದ್ಯಾಲಯದ ಸಹಕಾರದಿಂದ ಪ್ರಸ್ತುತ ಪಡಿಸಿದರು. ಇಲ್ಲಿ ಪಿ.ಸಿ.ಮಹಾಲನೋಬಿಸ್ ಅವರ ಪಾತ್ರ ಪ್ರಮುಖವಗಿರುತ್ತದೆ. ೧೯೨೨ರಲ್ಲಿ ಭಾರತಕ್ಕೆ ಹಿಂತಿರುಗಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸುತ್ತಾರೆ, ಮೂರು ದಶಕಗಳ ಕಾಲ ಇಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಸಂಖ್ಯಾಗ್ರಹಣ ಮತ್ತು ಅಂಕಿಅಂಶಗಳ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ನಂತರದ ದಿನಗಳಲ್ಲಿ ಅಂಕಿಅಂಶಗಳ ವಿಶ್ಲೇಷಣೆಯಲ್ಲಿ ಅಚಾರ್ಯ ಬ್ರಜೆನಾಥ್ ಸೀಲ್ ಅವರಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಆಸಕ್ತಿವುಳ್ಳ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಭಾರತೀಯ ಸಂಖ್ಯಾಶಾಸ್ತ್ರದ ಸಂಸ್ಥೆಯನ್ನು ೧೯೩೨ರಲ್ಲಿ ಸ್ಥಾಪಿಸಿದರು. ಈ ಮೂಲಕ ಸಂಖ್ಯಾಶಾಸ್ತ್ರದ ಮಹತ್ವವನ್ನು ಹೆಚ್ಚಿಸಿದರು.[೨] ಈ ಸಂಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆಯಿತು. ಮಾಜಿಪ್ರಧಾನಿ ಜವಹಾರ್ ಲಾಲ್ ನೆಹರೂ ಅವರ ಕಾರ್ಯದರ್ಶಿಯಾಗಿದ್ದ ಪಿತಾಂಬರ್‍ಪಂತ್ ಅವರು ಸಹ ಈ ಸಂಸ್ಥೆಯಲ್ಲಿ ಕೂಡಿಕೊಂಡರು. ಎಸ್.ಎನ್.ಬೋಸ್, ಜಿ.ಎಂ.ಸೆನ್‍ಗುಪ್ತಾ, ಆರ್.ಸಿ.ಬೋಸ್, ಎಸ್.ಎನ್.ರಾಯ್, ಕೆ.ಆರ್.ನಾಯರ್, ಆರ್.ಆರ್.ಬಹದ್ದೂರ್, ಗೋಪಿನಾಥ್ ಮುಂತಾದವರು ಇಲ್ಲಿ ಸೇರ್ಪಡೆಯಾಗಿ ಸಂಸ್ಥೆ ಉನ್ನತವಾಗುತ್ತಾ ಸಾಗಿತು. ೧೯೩೦ರಲ್ಲಿ ಸಂಖ್ಯಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಮೋಜಿಣಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ತಮ್ಮ ಕರ್ತವ್ಯವನ್ನು, ಹೆಚ್ಚಿನ ಸಮಯಯನ್ನು ಮೋಜಿಣಿಯಲ್ಲಿ ಕಳೆದರು. ೧೯೩೭ ರಿಂದ ೧೯೪೪ ರವರೆಗೆ ಸರ್ವೆ ಸ್ಯಾಂಪಲ್ ಎಂಬ ಸರ್ವೆಯಲ್ಲಿ ತಮ್ಮನ್ನು ಅಳವಡಿಸಿಕೊಂಡರು. ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಗ್ರಾಹಕರ ಅಭಿಪ್ರಾಯ ಮತ್ತಿತರ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸರ್ವೆ ಕೆಲಸಗಳಲ್ಲಿ ತೊಡಗುತ್ತಿದ್ದರು. ಇವರ ಆಸಕ್ತಿಯನ್ನು ಗಮನಿಸಿದ ಭಾರತ ಸರ್ಕಾರ ೧೯೮೪ರಲ್ಲಿ ಸ್ಯಾಂಪಲ್ ಸರ್ವೆಯ ತರಬೇತಿ ಮತ್ತು ಅಭಿವೃದ್ಧಿ ಘಟಕವನ್ನು ಸ್ಥಾಪಿಸಿ ಇವರ ಮುಂದಾಳತ್ವದಲ್ಲಿಯೇ ನಡೆಯಿತು. ವಿಶ್ವದಾದ್ಯಂತ ಸಂಖ್ಯಾಶಾಸ್ತ್ರದ ಮಹತ್ವವನ್ನು ಸಾರುವ ಮಹತ್ತರ ಕಾರ್ಯವನ್ನು ಮಹಾಲನೋಬಿಸ್ ಅವರು ಕೈಗೊಂಡರು. ೧೯೪೭ ರಿಂದ ೧೯೫೧ ರವರೆಗೆ ವಿಶ್ವ ಸಂಸ್ಥೆಯ ಸಂಖ್ಯಾಶಾಸ್ತ್ರ ವಿಭಾಗದಲ್ಲಿನ ಒಂದು ಶಾಖೆಗೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ನ್ಯಾಷನಲ್ ಸರ್ವೇ ಸ್ಯಾಂಪಲ್ ಸಹಯವನ್ನು ೧೯೫೦ ರಲ್ಲಿ ಸ್ಥಾಪಿಸಿದರು. ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ನಿರ್ಮಾಣ ಮಾಡಿದರು. ೧೯೫೫ ರಲ್ಲಿ ಭಾರತೀಯ ಯೋಜನಾ ಪ್ರಾಧಿಕಾರದ ಸದಸ್ಯರಾಗಿದ್ದರು. ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಳ್ಳಲು ಇವರು ನೆರವಾದರು. ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತಾಗಲು ವಿಶೇಷ ಕ್ರಮ ಕೈಗೊಂಡರು. ಬೃಹತ್ ಕೈಗಾರಿಕೆಗಳನ್ನು ಎರಡನೇ ಪಂಚ ವಾರ್ಷಿಕ ಯೋಜನೆಯಲ್ಲಿ ಸೇರಿಸಲು ಇವರ ಕ್ರಮ ಹೆಚ್ಚಿತ್ತು.ಮಹಾಲನೋಬಿಸ್ ಅವರು ಭಾರತೀಯ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಭಾಷಾವಾರು ಸಂಶೋಧನಾ ಘಟಕ ಪರಿಮಾಣಾತ್ಮಕ ಭಾಷಾಶಾಸ್ತ್ರ ಮತ್ತು ಭಾಷೆಯ ಯೋಜನೆ ಕ್ಷೇತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ೧೯೩೦ ರಲ್ಲಿ ಸ್ಥಾಪಿಸಿದರು. ಮುಂದಿನ ದಿನಗಳಲ್ಲಿ ಈ ಸಂಸ್ಥೆ ವಿಶ್ವಕ್ಕೆ ಮಾದರಿಯಾಯಿತು. ಸಂಖ್ಯಾಶಾಸ್ತ್ರದಲ್ಲಿಯೆ ಪ್ರಾಚೀನ ಸಂಸ್ಥೆ ಎಂಬ ಬಿರುದನ್ನು ಈ ಸಂಸ್ಥೆ ಪಡೆದಿದೆ. ಸಂಖ್ಯಾಶಾಸ್ತ್ರಕ್ಕೆ ಇವರ ಕೊಡುಗೆ ಅಪಾರ. ಮಹಾಲನೋಬಿಸ್ ಕ್ರಮಾಂಕಣ ಎಂಬ ಸಂಖ್ಯಾಶಾಸ್ತ್ರದ ಪ್ರಕಾರವನ್ನು ೧೯೩೬ರಲ್ಲಿ ಕಂಡುಹಿಡಿದರು.[೩][೪]

ಮದುವೆ[ಬದಲಾಯಿಸಿ]

ಹೀರಂಬಚ್ಚೆಂದ್ರ ಮಿತ್ರಾ ಅವರ ಪುತ್ರಿಯಾದ ನಿರ್ಮಲಾಕುಮಾರಿ ಎಂಬುವವರೊಂದಿಗೆ ಪ್ರೇಮ ವಿವಾಹವಾಗಿದ್ದರು.

ಗೌರವ, ಪ್ರಶಸ್ತಿಗಳು[ಬದಲಾಯಿಸಿ]

ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರಿಗೆ ಹಲವು ಪ್ರಶಸ್ತಿಗಳು ದೊರೆತಿವೆ. ಮಹಾಲನೋಬಿಸ್ ಅವರು ೧೯೪೪ ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲದಿಂದ ವೆಲ್‍ಡನ್ ಮೆಮೊರಿಯಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಪ್ರಥಮ ಭಾರತೀಯ ಸಹ ಇವರೇ ಆಗಿದ್ದಾರೆ. ಮಹಾಲನೋಬಿಸ್ ಅವರು ೧೯೪೫ ರಲ್ಲಿ ರಾಯಲ್ ಸ್ಟಾಟ್ಸ್ ಸೊಸೈಟಿಯಿಂದ ಹೆನೊರಿ ಫೆಲೋ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೯೬೮ ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಡೆದರು ಹಾಗು ಇವರು ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ೧೯೫೭ ರಲ್ಲಿ ಸರ್ ದೇವಿಪ್ರಸಾದ್ ಸರ್ವಾಧಿಕಾರಿ ಚಿನ್ನದ ಪದಕ, ೧೯೬೧ ರಲ್ಲಿ ದುರ್ಗಪ್ರಸಾದ್ ಕೈಟನ್ ಚಿನ್ನದ ಪದಕ ಹಾಗು ೧೯೬೮ ರಲ್ಲಿ ಶ್ರೀನಿವಾಸ ರಾಮಾನುಜಮ್ ಚಿನ್ನದ ಪದಕವನ್ನು ಗಳಿಸಿದ್ದಾರೆ.ಭಾರತ ಸರ್ಕಾರದ ನ್ಯಾಶನಲ್ ಸ್ಟ್ಯಾಟಿಸ್ಟಿಕಲ್ ಡೇ ಅವರ ಜನ್ಮದಿನವಾದ 29 ಜೂನ್, ಆಚರಿಸಲು ೨೦೦೬ ರಲ್ಲಿ ನಿರ್ಧರಿಸಿದರು.

ನಿಧನ[ಬದಲಾಯಿಸಿ]

ಮಹಾಲನೋಬಿಸ್ ತನ್ನ ಎಪ್ಪತ್ತೊಂಬತ್ತನೆ ಹುಟ್ಟುಹಬ್ಬದ ಒಂದು ದಿನದ ಮೊದಲೆ 1972 ರ ಜೂನ್ 28 ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. http://www-history.mcs.st-andrews.ac.uk/Biographies/Mahalanobis.html
  2. https://archive.org/stream/recordsofindianm23192indi#page/n7/mode/2up
  3. http://www.thehindu.com/seta/2003/05/15/stories/2003051500180300.htm
  4. https://web.archive.org/web/20131113031109/http://sankhya.isical.ac.in/search/55a3/55a3040.pdf