ಸದಸ್ಯ:ಜೀವಿತ ನಿತ್ಯ/sandbox
ವಂದನಾ ಶಿವ | |
---|---|
Born | ವಂದನಾ ಶಿವ ೫ ನವೆಂಬರ್೧೯೫೨ ಡೆಹ್ರಾಡೂನ್, ಭಾರತ, ಉತ್ತರ ಪ್ರದೇಶ(ಈಗಿನ ಉತ್ತರಖಂಡ್ |
Nationality | ಭಾರತೀಯರು |
Alma mater | ಪಂಜಾಬ್ ವಿಶ್ವವಿದ್ಯಾಲಯ, ಚಂಡಿಗರ್, ಗೈಲ್ವೆ ವಿಶ್ವವಿದ್ಯಾಲಯ, ವೆಸ್ಟ್ರನ್ ಒಂಟಾರಿಯೋ ವಿಶ್ವವಿದ್ಯಾಲಯ |
Occupation(s) | ತತ್ವಜ್ಞಾನಿ, ಪರಿಸರವಾದಿ, ಲೇಖಕ, ವೃತ್ತಿಪರ ಸ್ಪೀಕರ್, ಸಾಮಾಜಿಕ ಕಾರ್ಯಕರ್ತ |
Awards | ರೈಟ್ ಲೈವ್ಲಿಹುಡ್ ಪ್ರಶಸ್ತಿ (1993),ಸಿಡ್ನಿ ಪೀಸ್ ಪ್ರಶಸ್ತಿ ೨೦೧೦, ಫೋಕೂಕ ಏಷ್ಯನ ಸಂಸ್ಕೃತಿ ಪ್ರಶಸ್ತಿ (2012) |
</ref> | |
Website | www |
ವಂದನಾ ಶಿವ- ಭಾರತೀಯ ವಿದ್ವಾಂಸೆ, ಪರಿಸರ ಕಾರ್ಯಕರ್ತೆ ಮತ್ತು ಜಾಗತೀಕರಣದ ಲೇಖಕಿ ವಂದನಾ ಶಿವ[೧]. ಇಂಟರ್ನ್ಯಾಷ್ನಲ್ ಫೋರಮ್ ಆನ್ ಗ್ಲೋಬಲೈಸೇಷನ್ನ ಅಧ್ಯಕ್ಷೆ ಹಾಗೂ ಮಂಡಳಿಯ ಸದಸ್ಯತೆಯನ್ನು ವಹಿಸಿಕೊಂಡಿದ್ದರು. ವೈಜ್ಞಾನಿಕ ಸಮಿತಿಯ ಫಂಡಸಿಯನ್ ಐಡಿಯಾಸ್ನಲ್ಲಿ ಮತ್ತು ಅಂತರಾಷ್ಟ್ರೀಯ ಸಂಸ್ಠೆಯಲ್ಲಿ ಸದಸ್ಯರಾಗಿದ್ದರು. ೧೯೯೩ ರಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಜೀವನ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ವಂದನಾ ಶಿವ ಅವರು ೫ ನವೆಂಬರ್ ೧೯೫೨ ರಂದು ಡೆಹ್ರಾಡೂನ್ ನಲ್ಲಿ ಜನಿಸಿದರು. ತಂದೆ ಅರಣ್ಯ ಸಂರಕ್ಷಣಾಧಿಕಾರಿ
, ತಾಯಿ ಪ್ರಕೃತಿಯನ್ನು ಪ್ರೀತಿಸುವ ರೈತಳಾಗಿ ಕೆಲಸವನ್ನು ಮಾಡುತ್ತಿದ್ದರು. ಸೆಂಟ್ ಮೇರಿ ಶಾಲೆ, ಜೀಸಸ್ ಮತ್ತು ಮೇರಿ ಕಾನ್ವೆಂಟ್ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಚಂಡೀಘರ್ನಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿ ೧೯೭೨ರಲ್ಲಿ ವಿಜ್ಞಾನದ ಸ್ನಾತಕ ಪದವಿ ಮತ್ತು ೧೯೭೪ರಲ್ಲಿ ವಿಜ್ಞಾನದ ಸ್ನಾತಕೋತ್ತರ
ಪದವಿಯನ್ನು ಪಡೆದಿದ್ದಾರೆ. ೧೯೭೭ ರಲ್ಲಿ ಗೈಲ್ವೆ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆಯಲು ಕೆನಡಕ್ಕೆ ಹೋಗುವ ಮೊದಲು ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಬೆಳಕಿನ ಆವರ್ತಕದಲ್ಲಿ ಆಗುವ ಬದಲಾವಣೆಗಳು ಎನ್ನುವ ಪ್ರಬಂಧದ ಬಗ್ಗೆ ಸಂಕ್ಷಿಪ್ತವಾಗಿ ಕೆಲಸ ಮಾಡಿದರು. ೧೯೭೮ರಲ್ಲಿ ವೆಸ್ಟ್ರನ್ ಒಂಟಾರಿಯೋ ಎಂಬ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದು, ಹಿಡನ್ ಅಸ್ಠಿರ ಹಾಗೂ ಕ್ವಾಂಟಮ್ ಸಿದ್ದಾಂತದ ಬಡಾವಣೆ ಎಂಬ ಪ್ರಬಂಧದಲ್ಲಿ ಬೆಲ್ಸ್ ಪ್ರಮೇಯದ ನಿಯಮಗಳ ಹೊರಗೆ ಇರುವ ಗಣಿತ ಮತ್ತು ತತ್ವಶಾಸ್ತ್ರದ ಗುಪ್ತ ಅಸ್ಠಿರ ಸಿದ್ಧಾಂತದ ಪರಿಣಾಮಗಳನ್ನು ಚರ್ಚಿಸುತ್ತಾರೆ. ವಿಜ್ಞಾನ, ತಂತ್ರಜ್ಞಾನ, ಮತ್ತು ಪರಿಸರ ನೀತಿಯ ಬಗ್ಗೆ ಅಂತರ-ಸಂಶೋಧನೆ ಮಾಡಲು ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಂಜ್ಮೆಂಟ್ಗೆ ಹೋದರು.
ವೃತ್ತಿ
[ಬದಲಾಯಿಸಿ]ಕೃಷಿ ಮತ್ತು ಆಹಾರ ಕ್ಷೇತ್ರದ ಪ್ರಗತಿಯ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಭೌದ್ಧಿಕ ಆಸ್ತಿಯ ಹಕ್ಕು (ಇಂಟೆಲ್ಕೆಟುಯಲ್ ಪ್ರಾಪರ್ಟಿ ರೈಟ್ಸ್), ಜೀವ ವೈವಿದ್ಯ (ಬಯೋಡೈವರ್ಸಿಟಿ), ಜೈವಿಕ ತಂತ್ರಜ್ಞಾನ (ಬಯೋಎಥಿಕ್ಸ್), ಜೆನಿಟಿಕ್ ಇಂಜಿನಿಯರಿಂಗ್, ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಕೃಷಿಯಲ್ಲಿ ತಳಿವಿಜ್ಞಾನ ಆದರಿತ ಅಭಿವೃದ್ಧಿ ವಿರುದ್ಧ ಆಪ್ರಿಕಾ, ಏಷ್ಯಾ, ಲ್ಯಾಟಿನ್, ಅಮೆರಿಕ, ಐರ್ಲೆಂಡ್, ಮತ್ತು ಆಸ್ಟ್ರಿಯಾದಂತಹ ಹಸಿರು ಚಳವಳಿಯ ಜನಸಾಮನ್ಯ ಸಂಸ್ಥೆಗಳು ಸಹಕಾರ ನೀಡುವಂತೆ ಮಾಡಿದರು.
ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರಕ್ಕಾಗಿ ೧೯೮೨ರಲ್ಲಿ ರಿಸರ್ಚ್ ಫೌಂಡೇಶನ್ನನ್ನು ಸ್ಥಾಪಿಸಿದರು. ರಾಷ್ಟ್ರೀಯ ಚಳುವಳಿಯ ವೈವಿಧ್ಯತೆ ಮತ್ತು ಜೀವಂತ ಸಂಪನ್ಮೂಲಗಳ ಸಮಗ್ರತೆ, ವಿಶೇಷವಾಗಿ ಸ್ಥಳೀಯ ಬೀಜ ಸಾವಯುವ ಕೃಷಿ ಮತ್ತು ನ್ಯಾಯೋಚಿತ ವ್ಯವಹಾರದ ಬೆಂಬಲ ರಕ್ಷಿಸಲು ೧೯೯೧ರಲ್ಲಿ ನವದನ್ಯ[೨] ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಕೃತಿ ಸ್ನೇಹಿ ಜೀವನಕ್ಕಾಗಿ ೨೦೦೪ರಲ್ಲಿ ಫೋಮೇಕರ್ ಕಾಲೇಜ್(ಯು.ಕೆ) ಸಹಯೋಗದೊಂದಿಗೆ ಬೀಜ ವಿದ್ಯಾಪೀಠ್ ಅಂತರಾಷ್ಟ್ರೀಯ ಕಾಲೇಜನ್ನು ಡೂನ್ ಕಣಿವೆಯಲ್ಲಿ ಆರಂಭಿಸಿದರು. ಭೌದ್ಧಿಕ ಆಸ್ತಿ ಮತ್ತು ಜೀವ ವೈವಿಧ್ಯವಿರುವ ಪ್ರದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರಕ್ಕೆ ಇರುವ ರಿಸರ್ಚ್ ಫೌಂಡೇಶನ್ ಮೂಲಕ ವಂದನಾ ಶಿವ ಮತ್ತು ಅವರ ತಂಡದವರು ಬಯೋಪ್ರಸಿಯ ಬೇವು, ಬಾಸುಮತಿ ಅಕ್ಕಿ ಮತ್ತು ಗೋಧಿಗಳಿಗೆ ವಿಶ್ವ ಮಾನ್ಯತೆ (ಐಪಿಆರ್) ದೊರಕಲು ಸಹಾಯ ಮಾಡಿದರು.
ವಂದನಾ ಶಿವ ರವರ ಮೊದಲ ಪುಸ್ತಕ ಅಲೈವ್(೧೯೮೮). "ಭಾರತದಲ್ಲಿ ಅನೇಕ ರೈತರು ಮಹಿಳೆಯರು" ಎಂದು ಮಹಿಳೆಯರ ಮತ್ತು ಕೃಷಿಯ ಮೇಲೆ ಎಫ್.ಎ.ಒ ಗೆ ಒಂದು ವರದಿಯನ್ನು ಬರೆದರು. ಕಠ್ಮಂಡು ಮೌಂಟೇನ್ ಅಭಿವೃದ್ಧಿ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಲಿಂಗ ಘಟಕವನ್ನು ಸ್ಥಾಪಿಸಿದರು. ಮಹಿಳೆಯರ ಪರಿಸರ ಮತ್ತು ಅಭಿವೃದ್ಧಿ ಮಂಡಳಿಯಲ್ಲಿ ಸದಸ್ಯ ಸಂಸ್ಥಾಪಕರಾಗಿದ್ದರು. ಮತ್ತು ಇದೇ ರೀತಿ ಭಾರತ ಮತ್ತು ವಿದೇಶಿ ಸರ್ಕಾರಗಳಿಗೆ,ಇಂಟರ್ನ್ಯಾಷ್ನಲ್ ಫೋರಮ್ ಆಫ್ ಗ್ಲೋಬಲೈಸೇಷನ್, ಮಹಿಳೆಯರ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆ, ಥರ್ಡ್ ವರ್ಲ್ಡ್ ನೆಟ್ವರ್ಕ್ ಸೇರಿದಂತೆ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವರ್ಲ್ಡ್ ಟ್ರೇಡ್ ಆರ್ಗನೈಸೇಷನ್ ವಿರುದ್ಧ ಇಂಡಿಯನ್ ಪೀಪಲ್ ದಂಡೆಯಾತ್ರೆಯ ಸ್ಟೀಲಿಂಗ್ ಕಮಿಟಿ ಸದಸ್ಯರಾಗಿ, ವರ್ಲ್ಡ್ ಫ್ಯೋಚರ್ ಕೌಂಸಿಲ್ನಲ್ಲಿ ಶಾಸಕರಾಗಿದ್ದರು. ಭಾರತ ಸರ್ಕಾರದ ಸಮಿತಿಗಳಲ್ಲಿ ಜೈವಿಕ ಕೃಷಿ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ೨೦೦೭ರಲ್ಲಿ ಸ್ಟಾಕ್ ಎಕ್ಸ್ಚೇಂಜ್ ಆಫ್ ವಿಷನ್ಸ್ ಯೋಜನೆಯಲ್ಲಿ ಭಾಗವಹಿಸುತ್ತಿದ್ದರು.
ವಂದನಾ ಶಿವ ತನ್ನ ಜೀವನವನ್ನು ರಕ್ಷಣಾ ಜೀವವೈವಿದ್ಯ ಮತ್ತು ಸ್ಥಳೀಯ ಜ್ಞಾನದ ಆಚರಣೆಯಲ್ಲಿ ಕಳೆದರು. ಕೃಷಿಯಲ್ಲಿ ಜೀವವೈವಿದ್ಯ ಉತ್ತೇಜಿಸಲು ಮತ್ತು ಉತ್ಪಾದಕತೆ, ಪೋಷಣೆ, ರೈತನ ಆದಾಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಛಿಸಲು ಬಹಳ ಕಷ್ಟಪಟ್ಟರು. ೨೦೦೩ರಲ್ಲಿ ಈ ಕೆಲಸಕ್ಕೆ ಟೈಮ್ ಮ್ಯಾಹಜೀನರವರು "ಪರಿಸರದ ಹೀರೋ" ಎನ್ನುವ ಮಾನ್ಯತೆಯನ್ನು ನೀಡಿದರು. ಪಂಜಾಬ್ ನಲ್ಲಿ
ಹಿಂಸೆ ಮತ್ತು ಯೂನಿಯನ್ ಕಾರ್ಬೆಡ್ ಕೀಟನಾಶಕ ಉತ್ಪಾದನಾ ಸಸ್ಯದಿಂದ ಅನಿಲ ಸೋರಿಕೆ ಆದ ನಂತರ ೧೯೮೪ರಲ್ಲಿ ಕೃಷಿಯ ಕೆಲಸವನ್ನು ಆರಂಭಿಸಿದರು.
ಸಾಕ್ಷ್ಯಾಚಿತ್ರಗಳು
[ಬದಲಾಯಿಸಿ]ಹಲವಾರು ಸಾಕ್ಷ್ಯಾಚಿತ್ರಗಳಲ್ಲಿ ಅವಕಾಶ ದೊರಕಿದೆ. ಫ್ರೀಡಮ್ ಅಹೆದ್, ಒನ್ ವಾಟರ್, ದಿ ಕಾರ್ಪೋರೇಶನ್, ಮುಂತಾದ ಚಿತ್ರಗಳಲ್ಲಿ ಭಾಗವಹಿಸಿದ್ದಾರೆ
. ಗಂಗಾ ನೀರಿನ ಸಮಸ್ಯೆಯ ಮೇಲೆ ಸಾಕ್ಷ್ಯಾಚಿತ್ರಗಳನ್ನು ಮಾಡಿದ್ದಾರೆ . ಅದು ಗಂಗಾ ಫ್ರಮ್ ದಿ ವಾಟರ್ ವಾರ್ಸ್, ಫ್ಲೋ ಫಾರ್ ಲವ್ ಆಫ್ ವಾಟರ್.
ಹೊರಗಿನ ಕೊಂಡಿಗಳು
[ಬದಲಾಯಿಸಿ]- https://www.theguardian.com/sustainable-business/vandana-shiva-corporate-monopoly-seeds
- https://www.geneticliteracyproject.org/glp-facts/vandana-shiva/