ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು

ವಿಕಿಪೀಡಿಯ ಇಂದ
Jump to navigation Jump to search
Indian Institute of Science
भारतीय विज्ञान संस्थान
Iisc-Founder.jpg
ಪ್ರಕಾರPublic
ಸ್ಥಾಪನೆ1909 (1909)
ಸಂಸ್ಥಾಪಕJamsetji Tata
ಡೈರೆಕ್ಟರ್Anurag Kumar[೧]
ಶೈಕ್ಷಣಿಕ ಸಿಬ್ಬಂಧಿ
467[೨]
ವಿದ್ಯಾರ್ಥಿಗಳು3743[೨]
ಪದವಿ ಶಿಕ್ಷಣ418
ಸ್ನಾತಕೋತ್ತರ ಶಿಕ್ಷಣ3325
ಸ್ಥಳBangalore, Karnataka, 560012, India
13.022° N, 77.567° E
ಆವರಣUrban. 400 acres: main campus in Bangalore. 1500 acres: second campus in Challakere.[೩]
ಭಾಷೆEnglish
ಜಾಲತಾಣwww.iisc.ac.in

ಬೆಂಗಳೂರಿನ ಐ.ಐ.ಎಸ್ ಸಿ ಯು ಉನ್ನತಮಟ್ಟದ ವಿದ್ಯಾಭ್ಯಾಸಕ್ಕೆ, ಉತ್ಕೃಷ್ಟವಾಗಿದ್ದು 1909 ರಲ್ಲಿ ಸ್ಥಾಪನೆಯಾಯಿತು. ಇದು ಬೆಂಗಳೂರಿನ ಉತ್ತರ ಭಾಗದಲ್ಲಿದ್ದು, ಮುಖ್ಯ ರೈಲು ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿದೆ. ಈ ಸಂಸ್ಥೆಯ ಸ್ಥಾಪನೆಯು ಕುತೂಹಲಕಾರಿಯಾದ ಇತಿಹಾಸವನ್ನು ಹೊಂದಿದೆ. 1892 ರಲ್ಲಿ ಜಮ್ ಸೇಠಜಿ ಮತ್ತು ಸ್ವಾಮಿ ವಿವೇಕಾನಂದರ ಮಧ್ಯೆ ನಡೆದಂತಹ ಸಹಜ ಮಾತುಕತೆಯಲ್ಲಿ ಇದರ ಯೊಚನೆ ಮೂಡಿ ಬಂದಿತು. ಮುಂದೆ 1909 ರಲ್ಲಿ ಮೈಸೂರಿನ ಮಹಾರಾಜರಿಂದ ಇದರ ಶಂಖು ಸ್ಥಾಪನೆ ನೆರವೇರಿಸಲಾಯಿತು. ಇಲ್ಲಿ ಒಟ್ಟು 40 ವಿಭಾಗಗಳಿದ್ದು, ಜಗತ್ತಿನ ಉತ್ತಮ ಮೂಲಸೌಕರ್ಯಗಳನ್ನು ಹೊಂದಿದೆ.[೪] 6 ಕ್ಯಾಂಟಿನ್ ಗಳು, ಜಿಮ್ಖಾನಾ, ಫುಟ್ ಬಾಲ ಮತ್ತು ಕ್ರಿಕೇಟ್ ಮೈದಾನ, ಹೋಟೆಲ್ ಗಳು, ಮಹಿಳೆ ಹಾಗು ಪುರುಷ ಹೊಸ್ಟೆಲ್ ಗಳನ್ನು ಇದು ಒಳಗೊಂಡಿದೆ. ಇಷ್ಟೇ ಅಲ್ಲದೆ ಈ ಸಂಸ್ಥೆಯ ಆವರಣವು ತನ್ನ ಉದ್ಯೋಗಿಗಳಿಗೆ ವಸತಿಗೃಹಗಳು, ಗ್ರಂಥಾಲಯಗಳು, ಶಾಪಿಂಗ್ ಕೇಂದ್ರಗಳು ಹಾಗು ಮಸಾಜ್ ಪಾರ್ಲರ್ ಗಳನ್ನು ಹೊಂದಿದೆ. ಇಲ್ಲಿ ದೇಸಿಯ ಮತ್ತು ವಿದೇಶಿಯ ಸಸ್ಯರಾಶಿಗಳ ಬೃಹತ ಸಂಗ್ರಹವಿದ್ದು ನೋಡಲು ಅದ್ಭುತವಾಗಿದೆ. ಕಟ್ಟಡವು ಶಾಸ್ತ್ರೀಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಸಂಸ್ಥೆಯು ಕೊಡುವ ಪದವಿಗಳನ್ನು ಎರಡು ವಿಭಾಗದಲ್ಲಿ ವಿಂಗಡಿಸಬಹುದಾಗಿದ್ದು ಒಂದು ಸಂಶೋಧನೆಗೆ ಕೊಡುವ ಪಿ.ಹೆಚ.ಡಿ ಮತ್ತು ಎಂ.ಎಸ್ ಪದವಿಗಳು. ಇನ್ನೊಂದು ಎಂ.ಇ ಹಾಗು ಎಂ.ಬಿ.ಎ ಪದವಿಗಳು ಎಂದು ಹೇಳಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "administration".
  2. ೨.೦ ೨.೧ "IISc in Numbers". Indian Institute of Science. Retrieved 19 July 2016.
  3. "IISc Challakere campus". Indian Institute of Science. Retrieved 27 July 2016.
  4. "Our Heritage" (PDF). Pursuit and Promotion of Science. Indian Institute of Science. p. 18. Retrieved 19 October 2012.