ಹ್ಯುಂಡೇ ಐ೧೦

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹ್ಯುಂಡೇ ಐ೧೦ ಕಾರು

ಹ್ಯುಂಡೇ ಐ೧೦ (ಮಲೇಷಿಯಾದಲ್ಲಿ ಇನೊಕಾಮ್ ಐ೧೦ಎಂದು ಕರೆಯಲಾಗುವ) ಹ್ಯುಂಡೇ ಮೋಟರ್ ಕಂಪನಿಯಿಂದ ಉತ್ಪಾದಿಸಲಾದ, ೩೧ ಅಕ್ಟೋಬರ್ ೨೦೦೭ರಂದು ಬಿಡುಗಡೆಗೊಳಿಸಲಾದ, ಹ್ಯುಂಡೇಯ ಭಾರತದ ಚೆನ್ನೈ ಕಾರ್ಖಾನೆಯಲ್ಲಿ ಮಾತ್ರ ತಯಾರಿಸಲಾಗುವ, ಮತ್ತು ಜಾಗತಿಕವಾಗಿ ಮಾರಾಟಮಾಡಲಾಗುವ ಒಂದು ನಗರ ಕಾರು (ಹ್ಯಾಚ್‌ಬ್ಯಾಕ್). ಆಟೋಸ್/ಆಟೋಸ್ ಪ್ರೈಮ್/ಅಮೀಕಾ/ಸ್ಯಾಂಟ್ರೋದ ಬದಲಾಗಿ ಬಂದ (ಭಾರತದ ಹೊರತು, ಇಲ್ಲಿ ಕಡಿಮೆ ಬೆಲೆಯ ಸ್ಯಾಂಟ್ರೋ ಜ಼ಿಂಗ್ ಈಗಲೂ ಅದರ ಕೆಳಗೆ ಮಾರಾಟಮಾಡಲಾಗುತ್ತಿದೆ) ಇದು ಗೆಟ್ಜ್ ಹಾಗೂ (ಬಹುತೇಕ ದೇಶಗಳಲ್ಲಿ ಗೆಟ್ಜ್ ಬದಲಾಗಿ ಬಂದ) ಐ೨೦ಗಳಿಗಿಂತ ಕಡಿಮೆ ಬೆಲೆಗೆ ಮಾರಾಟಮಾಡಲಾಗುತ್ತಿದೆ. ಸ್ಯಾಂಟ್ರೋ/ಆಟೋಸ್ ಪ್ರೈಮ್‌ನ ನಂತರ ಹ್ಯುಂಡೇಗೆ ಅದರ ಜಾಗ ತುಂಬಲು ಒಂದು ಮಾದರಿಯ ಅಗತ್ಯವಿತ್ತು ಮತ್ತು ಹ್ಯುಂಡೇ ಪಿಎ ಸಂಕೇತನಾಮದ ಒಂದು ಹ್ಯಾಚ್‌ಬ್ಯಾಕ್ ಯೋಜನೆಯನ್ನು ಆರಂಭಿಸಿತು.