ಹ್ಯಾರಿ ಸೆಲ್ಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹ್ಯಾರಿ ಸೆಲ್ಡನ್ ಐಸಾಕ್ ಅಸಿಮೋವ್ ರವರ ಪ್ರತಿಷ್ಠಾನ ಸರಣಿ ಕಾದಂಬರಿಗಳ ಕಾಲ್ಪನಿಕ ಪಾತ್ರ - ಇವುಗಳಲ್ಲಿ ಅವನನ್ನು ಮೇಧಾವಿ ಕಥಾನಾಯಕ ಮತ್ತು ಪ್ರತಿಷ್ಠಾನಗಳ ಪ್ರಜೆಗಳ ಗೌರವಪಾತ್ರನೆಂದು ಬಣ್ಣಿಸಲಾಗಿದೆ. ಪ್ರತಿಷ್ಠಾನ ಕಾದಂಬರಿ ಸರಣಿಯ ಕೇವಲ ಮೂರರಲ್ಲಿ ಮಾತ್ರ ಇವನು ಪ್ರತ್ಯಕ್ಷವಾಗಿ ಭಾಗವಹಿಸಿದ್ದರೂ, ಸರಣಿಯುದ್ದಕ್ಕೂ ಇವನ ಪ್ರಸ್ತಾಪ, ಇವನ ಅನ್ವೇಷಣೆ ಮಾನಸಿಕ-ಐತಿಹಾಸಿಕಶಾಸ್ತ್ರದ ಪ್ರಸ್ತಾಪವು ಆಗಿಂದಾಗ್ಗೆ ಇರುವುದು.

ಸಂಕ್ಷಿಪ್ತ ಪಾತ್ರ ಪರಿಚಯ[ಬದಲಾಯಿಸಿ]

  • ಆರ್ಕ್ಟರಸ್ ವಿಭಾಗದಲ್ಲಿನ ಹೆಲೆಕಾನ್ ಎಂಬ ಗ್ರಹದ ತಂಬಾಕು ಕೃಷಿಕನ ಮಗನಾಗಿ ಹುಟ್ಟಿದ ಮೇಧಾವಿ ಹ್ಯಾರಿ ಸೆಲ್ಡನ್, ಕ್ಷೀರ ಪಥ ಸಾಮ್ರಾಜ್ಯದ ಆಡಳಿತ ಕೇಂದ್ರಗ್ರಹವಾದ ಟ್ರ್ಯಾಂಟರ್ ನ ಸ್ಟ್ರೀಲಿಂಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುತ್ತಾನೆ. ಅಲ್ಲದೆ ಅವನು ಚಕ್ರವರ್ತಿ ಮೊದಲ ನೆಯ ಕ್ಲಿಯಾನ್ ನ ಪ್ರಥಮ ಮಂತ್ರಿಯಾಗಿಯೂ ಸೇವೆ ಸಲ್ಲಿಸಿರುವನು.
  • ಇವನ ಅನ್ವೇಷಣೆಗಳಲ್ಲಿ ಮಾನಸಿಕ-ಐತಿಹಾಸಿಕ ಶಾಸ್ತ್ರವು ಪ್ರಮುಖ - ಈ ಕಾಲ್ಪನಿಕ ಗಣಿತದ ಪ್ರಕಾರ, ವೈಯಕ್ತಿಕ ನಡವಳಿಕೆಗಳು ಗಣಿತ ಸೂತ್ರಗಳ ಹಿಡಿತಕ್ಕೆ ಸಿಲುಕದಿದ್ದರೂ, ಬಹುಸಂಖ್ಯಾತ ಗುಂಪುಗಳ ನಡವಳಿಕೆಗಳನ್ನು ಮುಂಗಾಣಬಹುದು. ಹೀಗಾಗಿ ಕ್ಷೀರಪಥ ಸಾಮ್ರಾಜ್ಯದ ಕ್ವಿಂಟಿಲಿ ಯನ್ ಗಟ್ಟಲೆ ಪ್ರಮಾಣದ ಜನಸ್ತೋಮಕ್ಕೂ ಈ ಶಾಸ್ತ್ರವು ಅನ್ವಯಿಸುತ್ತದೆ.
  • ಈ ರೀತಿ, ಹ್ಯಾರಿ ಸೆಲ್ಡನ್ ಕ್ಷೀರ ಪಥ ಸಾಮ್ರಾಜ್ಯವು ಪತನದತ್ತ ಸಾಗಿದೆಯೆಂದೂ, ಪುನರುತ್ಥಾನವು ಮೂವತ್ತು ಸಹಸ್ರಮಾನಗಳ ನಂತರವಾಗುವುದೆಂದೂ, ಈ ಹೊಸ ಗಣಿತದ ಸೂಚನೆಯ ಪ್ರಕಾರ ಭವಿಷ್ಯವನ್ನು ರೂಪಿಸಿದ್ದಲ್ಲಿ ಈ ಅಂಧಕಾರಮಯ ಮಧ್ಯಂತರವನ್ನು ಏಕೈಕ ಸಹಸ್ರ ಮಾನದವರೆಗೆ ಕುಗ್ಗಿಸಬಹುದೆಂದು ಹ್ಯಾರಿ ಸೆಲ್ಡನ್ ಕಂಡುಕೊಳ್ಳುವನು.
  • ಗಣಿತಜ್ಞನಲ್ಲದೆ ಇವನು ಟ್ವಿಸ್ಟರ್ ಎಂಬ ಮಲ್ಲವಿದ್ಯೆಯಲ್ಲಿಯೂ ಸಿದ್ಧಹಸ್ತನೆಂಬ ಪ್ರಸ್ತಾಪಬರುವುದು. ಪ್ರತ್ಯಕ್ಷವಾಗಿ ಇವನು ಪ್ರತಿಷ್ಠಾನಕ್ಕೆ ಪೂರ್ವರಂಗ, ಮುಂದೊಯ್ಯಿ ಪ್ರತಿಷ್ಠಾನವನು ಮತ್ತು ಪ್ರತಿಷ್ಠಾನ ಎಂಬ ಕಾದಂಬರಿಗಳಲ್ಲಿ ಭಾಗವಹಿಸುವನು.