ಹೊಸಗುಂದ
ಹೊಸಗುಂದ
ಹೊಸಗುಂದ |
---|
"ಹೊಸಗುಂದ" ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ದಿಂದ ೨೨ ಕಿ.ಮೀ ದೂರದಲ್ಲಿದೆ.
ಇತಿಹಾಸ
[ಬದಲಾಯಿಸಿ]ಕೇರಳದ ರಾಜನೊಬ್ಬ ಈ ಭಾಗಕ್ಕೆ ಬಂದಾಗ ಆತನಿಗೆ ಲಕ್ಷ್ಮೀ ವಿಗ್ರಹದೊಂದಿಗೆ ಗಣಪತಿಯ ವಿಗ್ರಹ ದೊರಕಿತಂತೆ. ಆದ್ದರಿಂದ ಆ ಗಣಪತಿಗೆ ಲಕ್ಷ್ಮೀ ಗಣಪತಿ [೧] ಎಂಬ ಹೆಸರು ಬಂದಿತು, ಈ ತರಹದ ಲಕ್ಷ್ಮೀ ಗಣಪತಿಗಳು ಕೇರಳದಲ್ಲಿವೆ, ಆದರೆ ಕರ್ನಾಟಕದಲ್ಲಿರುವುದು ಇದೊಂದೇ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾಂತರಸರು ( ಹೊಯ್ಸಳರು ) ತದನಂತರ ೧೦ನೇ ಶತಮಾನದ ಸುಮಾರಿಗೆ [೨] ಇಲ್ಲಿ ಹಲವು ದೇವಸ್ಥಾನಗಳನ್ನು ಕಟ್ಟಿಸಿದರಂತೆ.ಅದರಲ್ಲಿ ಮುಖ್ಯವಾದುದು ಉಮಾಮಹೇಶ್ವರ ದೇವಸ್ಥಾನ. ಈ ದೇವಾಲಯ ಮುಖಮಂಟಪ, ನವರಂಗ, ಗರ್ಭಗುಡಿ ಮತ್ತು ಪ್ರದಕ್ಷಿಣಾಪಥಗಳನ್ನು ಹೊಂದಿದೆ. ಮುಖಮಂಟಪದಲ್ಲಿ ೨೦ ಕಂಬಗಳಿದ್ದು, ೩ ಕಡೆಯಿಂದ ದ್ವಾರಗಳಿವೆ .[೩] ನವರಂಗದ ದ್ವಾರಕ್ಕೆ ಜಾಲಂಧ್ರಗಳಿದ್ದು, ಬದಿಯಲ್ಲಿ ಕಿಟಕಿಯಂತಹ ರಚನೆಯಿದೆ. ಪಾಳುಬಿದ್ದಿದ್ದ ದೇಗುಲದ ಗರ್ಭಗುಡಿಯಲ್ಲಿ ಮೊದಲಿನಿಂದಲೂ ಶಿವಲಿಂಗವಿರಲಿಲ್ಲವಂತೆ. ಈಗ ದೇಗುಲದ ಜೀರ್ಣೋದ್ದಾರ ಪ್ರಕ್ರಿಯೆ ನಡೆಯುತ್ತಿದ್ದು ನೂತನವಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಿದ್ದಾರಂತೆ. ಉಮಾಮಹೇಶ್ವರ ದೇಗುಲವಲ್ಲದೇ ಇಲ್ಲಿ ವೀರಭದ್ರ, ಸುಬ್ರಹ್ಮಣ್ಯ, ಕಂಚಿ ಕಾಳಮ್ಮ, ಪ್ರಸನ್ನನಾಥ, ಚೌಡೇಶ್ವರಿ ದೇಗುಲಗಳೂ ಇವೆ.
ಉಲ್ಲೇಖಗಳು
[ಬದಲಾಯಿಸಿ]- ↑ http://prashasti-prashantavanam.blogspot.in/2011/11/blog-post_21.html
- ↑ "ಆರ್ಕೈವ್ ನಕಲು". Archived from the original on 2012-09-13. Retrieved 2012-09-08.
- ↑ http://rajesh-naik.blogspot.in/2009/04/blog-post.html
- Pages using the JsonConfig extension
- Short description with empty Wikidata description
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಕರ್ನಾಟಕದ ಇತಿಹಾಸ
- ಸಾಗರ ತಾಲೂಕಿನ ಪ್ರವಾಸಿ ತಾಣಗಳು