ಹೊಳೆತುಂಬೆ
ಗೋಚರ
ಹೊಳೆತುಂಬೆ | |
---|---|
ಹೊಳೆತುಂಬೆ ಹೂ | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. religiosa
|
Binomial name | |
ಕ್ರಾಟೆವಾ ರೆಲಿಜಿಯೋಸ |
ಹೊಳೆತುಂಬೆ(ಆದಿರಾಜ,ನೆರ್ವಾಳ,ಹೊಳೆನೆಕ್ಕಿ)ಮುಂತಾದ ಹೆಸರಿನಿಂದ ಕರೆಯಲ್ಪಡುತ್ತದೆ.ಜಪಾನ್,ಆಸ್ಟ್ರೇಲಿಯಹಾಗೂ ದಕ್ಷಿಣ ಏಷಿಯಾಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಕಪ್ಪರಾಸಿಕ(Capparaceae)ಕುಟುಂಬಕ್ಕೆ ಸೇರಿದ್ದು,ಕ್ರಾಟೆವಾ ರೆಲಿಜಿಯೋಸ (Crataeva Religiosa)ಎಂದು ಸಸ್ಯಶಾಸ್ತ್ರೀಯ ಹೆಸರಿದೆ. ತುಳು ಭಾಷೆಯಲ್ಲಿ ತುದೆಮದರಂಗಿಎಂದು ಹೆಸರು.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಸಣ್ಣಪ್ರಮಾಣದ ಮರ.ಉದ್ದನೆಯ ತೊಟ್ಟಿನ ಎಲೆಗಳಿವೆ.ಬೂದು ಬಣ್ಣದ ತೊಗಟೆ.ಬಿಳಿ ಮಾಸಲು ಹಳದಿ ಬಣ್ಣದ ಹೂ ಗಳು ಎಪ್ರಿಲ್-ಮೇ ತಿಂಗಳಲ್ಲಿ ಕಂಡು ಬರುತ್ತದೆ.ಹೆಚ್ಚಾಗಿ ನದಿ,ತೊರೆ ಹಾಗೂಹಳ್ಳಗಳ ದಡಗಳಲ್ಲಿ ಬೆಳೆಯುತ್ತದೆ.
ಉಪಯೋಗಗಳು
[ಬದಲಾಯಿಸಿ]ದಾರುವು ಮೃದುವಾಗಿದ್ದು,ಸಮಾನ ಕಣರಚನೆ ಹೊಂದಿರುವುದರಿಂದ ಬಾಚಣಿಗೆ,ತಬಲಾ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ತೊಗಟೆ,ಬೇರು,ಎಲೆ ಮೂತ್ರಾಂಗ ಸಂಬಂಧವಾದ ರೋಗಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ.
ಆಧಾರ ಗ್ರಂಥಗಳು
[ಬದಲಾಯಿಸಿ]- 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.