ಹೊನ್ನೇಮರಡು
ಗೋಚರ
ಹೊನ್ನೇಮರಡು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ೨೫ ಕಿಮಿ ದೂರದಲ್ಲಿರುವ ಪ್ರವಾಸಿ ತಾಣ. ಇದು ಶರಾವತಿ ನದಿಯ ದಡದಲ್ಲಿರುವ ಹಿನ್ನೀರು ಪ್ರದೇಶ. ಹೊನ್ನೇಮರಡು ನಿಸರ್ಗದ ಸುಂದರ ನೋಟವನ್ನು ನಿಮ್ಮ ಮುಂದೆ ಅನಾವರಣ ಗೊಳಿಸುತ್ತದೆ. ಶರಾವತಿ ನದಿಯ ನೀರಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿರುವ ಅಣೆಕಟ್ಟೆಯು ಹೊನ್ನೇಮರಡು ಅಂತಹ ನಿಸರ್ಗ ಸಹಜ ಸೌಂದರ್ಯವನ್ನು ಸೃಷ್ಟಿ ಮಾಡಿದೆ.ಅತೀ ದೂರದ ವರೆಗೆ ಶುಭ್ರ ನೀರಿನ ನೋಟ ಯಾವುದೇ ರೀತಿಯ ಮಾಲಿನ್ಯಕ್ಕೆ ಅವಕಾಶವಿಲ್ಲದೆ ಪ್ರವಾಸಿಗರನ್ನು ಸೆಳೆಯುತ್ತದೆ.ತೆಪ್ಪದಲ್ಲಿ ಒಂದು ಸುತ್ತು ಹಾಕಿ, ನೀರಿನ ನಡುವೆ ಇರುವ ನಡುಗಡ್ಡೆ ಗಳಿಗೆ ಹೋಗಿಬಂದರೆ ಆ ಪ್ರವಾಸದ ರುಚಿಯ ನೆನಪು ಸಾಕಷ್ಟು ದಿನ ಕಾಡುತ್ತಲೇ ಇರುತ್ತೆ.
ಹತ್ತಿರದ ಆಕರ್ಷಣೆಗಳು
[ಬದಲಾಯಿಸಿ]ಗ್ಯಾಲರಿ
[ಬದಲಾಯಿಸಿ]-
Sunrise at Honnemaradu
-
Honnemaradu
-
Island view at Honnemaradu
-
Another view of Honnemaradu
-
Boating at Honnemaradu
ಎಲ್ಲೆಲ್ಲಿಂದ ಎಷ್ಟು ದೂರ
[ಬದಲಾಯಿಸಿ]Wikimedia Commons has media related to Honnemaradu.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |