ಹೇಮಲತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೇಮಲತಾ
Born
ಚೆನ್ನೈ
Other namesಹೇಮಾ
Occupationದೂರದರ್ಶನ ನಟಿ ಮತ್ತು ನೃತ್ಯಗಾರ್ತಿ
Years active೧೯೯೫-೨೦೧೫

ಸಾಮಾನ್ಯವಾಗಿ ಹೇಮಾ ಎಂದೇ ಮನ್ನಣೆ ಪಡೆದ ಹೇಮಲತಾ ಅವರು ಭಾರತೀಯ ನಟಿ ಮತ್ತು ನೃತ್ಯಗಾರ್ತಿಯಾಗಿದ್ದಾರೆ. ಸ್ಟಾರ್ ವಿಜಯ್‌ನಲ್ಲಿ ಜನಪ್ರಿಯ ಸೋಪ್ ಒಪೆರಾ ಕನಾ ಕಾಣುಮ್ ಕಾಲಂಗಲ್‌ನಲ್ಲಿ ರಾಘವಿ ಪಾತ್ರದಲ್ಲಿ ಮತ್ತು ಸನ್ ಟಿವಿ ತೆಂಡ್ರಾಲ್‌ನಲ್ಲಿ ಸೂಪರ್‌ಹಿಟ್ ತಮಿಳು ನಾಟಕ ಧಾರಾವಾಹಿಯಲ್ಲಿ ದೀಪಾ ಪಾತ್ರಕ್ಕಾಗಿ ಇವರು ಮೆಚ್ಚುಗೆ ಪಡೆದಿದ್ದಾರೆ. ಇವರು ಮೈಕೆಲ್ ತಂಗದುರೈ ಅವರೊಂದಿಗೆ ಸೀಸನ್ ೩ ರಲ್ಲಿ ಜೋಡಿ ನಂಬರ್ ಒನ್ ರಿಯಾಲಿಟಿ ಡ್ಯಾನ್ಸ್ ಶೋ ವಿಜೇತರಾಗಿದ್ದರು. [೧] [೨] [೩] [೪]

ವೃತ್ತಿ[ಬದಲಾಯಿಸಿ]

ಹೇಮಲತಾ ಅವರು ತಮಿಳು ಕುಟುಂಬದಲ್ಲಿ ಜನಿಸಿದರು. ಇವರು ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ರಜನಿಕಾಂತ್ ಅಭಿನಯದ ಮತ್ತು ಸೂಪರ್ ಹಿಟ್ 'ಬಾಷಾ' [೫] ನಲ್ಲಿ ನಟಿಸುವುದರ ಮೂಲಕ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು. ನಂತರ ಇವರು 'ಶರತ್ ಕುಮಾರ್' ಅಭಿನಯದ 'ಸೂರ್ಯವಂಶ 'ಚಿತ್ರದಲ್ಲಿ ನಟಿಸಿದರು. [೬] ಇವರ ಮೊದಲ ತಮಿಳು ಧಾರಾವಾಹಿ 'ಚಿತಿ'ಯಲ್ಲಿ 'ಬೇಬಿ ಕಾವೇರಿ' ಪಾತ್ರವನ್ನು ನಿರ್ವಹಿಸಿದರು [೭] [೮] ಅದರಂತೆ ಹೇಮಾ ಅವರು 'ಕನಾ ಕಾಣುಮ್ ಕಾಲಂಗಲ್' [೯] ನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ 'ರಾಘವಿ' ಪಾತ್ರವನ್ನು ನಿರ್ವಹಿಸಿದರು. ನಂತರ 'ಪ್ರೈಮ್ ಟೈಮ್' ಧಾರಾವಾಹಿ 'ತೆಂಡ್ರಾಲ್‌'ನಲ್ಲಿ 'ದೀಪಾ' ಪಾತ್ರವನ್ನು ನಿರ್ವಹಿಸಿದರು. ಇದರಿಂದ ಹೇಮಾ ಅವರು ಎಲ್ಲರ ಮನೆಮಗಳಂತಾದರು. ಅಷ್ಟೆ ಅಲ್ಲದೇ ದೂರದರ್ಶನದ ಉನ್ನತ ನಟಿಯರಲ್ಲಿ ಇವರು ಕೂಡ ಒಬ್ಬರಾದರು. [೧೦]

ದೂರದರ್ಶನ[ಬದಲಾಯಿಸಿ]

ವರ್ಷ ಧಾರಾವಾಹಿ ಪಾತ್ರ ಚಾನಲ್
೧೯೯೯ – ೨೦೦೦ ಚಿತಿ ಬೇಬಿ ಕಾವೇರಿ ಸನ್ ಟಿವಿ
೨೦೦೪ – ೨೦೦೬ ಮನೈವಿ ವಿಜಿ
೨೦೦೬ – ೨೦೦೯ ಕನ ಕಾಣುಂ ಕಾಲಂಗಳು ರಾಘವಿ ಸ್ಟಾರ್ ವಿಜಯ್
೨೦೦೭ – ೨೦೧೧ ಮಗಲ್ ಜನನಿ ಸನ್ ಟಿವಿ
೨೦೦೯ ಜೋಡಿ ನಂಬರ್ ಒನ್ ಸ್ಪರ್ಧಿ ಸ್ಟಾರ್ ವಿಜಯ್
೨೦೦೯ – ೨೦೧೦ ಅಂಬೆ ವಾ ಏಂಜೆಲ್
೨೦೦೯ – ೨೦೧೫ ತೆಂಡ್ರಾಲ್ ದೀಪಾ ಪ್ರಭಾಕರ್ ಸನ್ ಟಿವಿ
೨೦೧೦ – ೨೦೧೫ ಮೂಡಣೈ ಮುಡಿಚು ವೇದವಲ್ಲಿ

ಚಿತ್ರಕಥೆ[ಬದಲಾಯಿಸಿ]

ವರ್ಷ ಶೀರ್ಷಿಕೆ ಭಾಷೆ ಪಾತ್ರ ವಿವರಣೆ
೧೯೯೫ ಬಾಷಾ ತಮಿಳು ಮಾರ್ಕ್ ಆಂಟನಿ ಅವರ ಮಗಳು ಬಾಲ ನಟಿ
೧೯೯೬ ಪೂವೆ ಉನಕ್ಕಾಗ ತಮಿಳು ಬಾಲ ನಟಿ
೧೯೯೭ ಸೂರ್ಯವಂಶ ತಮಿಳು ಶಕ್ತಿವೇಲ್ ಗೌಂಡರ್ ಜೂ ಬಾಲ ನಟಿ
೧೯೯೮ ಇನಿಯವಳೆ ತಮಿಳು ರಾಣಿ ಬಾಲ ನಟಿ
೧೯೯೮ ಉನ್ನಿದತ್ತಿಲ್ ಎನ್ನೈ ಕೊಡುತೆನ್ ತಮಿಳು ಬಾಲ ನಟಿ
೧೯೯೯ ಪೂಮಗಲ್ ಊರ್ವಲಂ ತಮಿಳು ಬಾಲ ನಟಿ
೧೯೯೯ ಸೇತು ತಮಿಳು ಬಾಲ ನಟಿ
೨೦೦೨ ಆಲ್ಬಮ್ ತಮಿಳು ಗೀತಾ, ಜೀವಾ ಅವರ ಸಹೋದರಿ ಬಾಲ ನಟಿ
೨೦೦೩ ಅಂಬೆ ಉನ್ ವಾಸಂ ತಮಿಳು ಹೇಮಾ
೨೦೦೩ ಕಾದಲ್ ಕೊಂಡೆನ್ ತಮಿಳು ದೇವಿ
೨೦೦೪ ಮಾಧುರೆ ತಮಿಳು ಸುಶೀಲಾ ಅವರ ಸಹೋದರಿ
೨೦೦೫ ಜಿ ತಮಿಳು ಭುವನಾ ಸ್ನೇಹಿತೆ
೨೦೦೬ ಪಾರಿಜಾತಮ್ ತಮಿಳು ಸುಭಾತ್ರಳ ಸ್ನೇಹಿತೆ
೨೦೦೬ ತಿಮಿರು ತಮಿಳು
೨೦೦೬ ಅಡೈಕಲಂ ತಮಿಳು ಅಮುದಾ

ಉಲ್ಲೇಖಗಳು[ಬದಲಾಯಿಸಿ]

  1. "Time to dream and enjoy humour". The Hindu. 13 January 2007. Retrieved 14 December 2014.
  2. "Naanal". The Hindu. 12 December 2008. Retrieved 15 December 2014.
  3. "Dance Machi Dance". The Hindu. 4 January 2008. Retrieved 15 December 2014.
  4. "குழந்தை நக்மாவாக நான்!". Dinamani. 6 June 2010. Retrieved 14 June 2015.
  5. "Time to dream". The Hindu. 10 January 2007. Retrieved 13 December 2014.
  6. "சூர்ய வம்சம் படத்தில் சரத்குமார் மகனாக நடித்த ஹேமலதா இன்று வளர்ந்த மங்கையாய்...!". manimegalai a. Asianet News. 22 August 2019. Retrieved 26 July 2021.
  7. "The Chithi we never forgot: Remembering Radikaa's popular mega serial ahead of its sequel". Vinay Kumar V. the News Minute. 21 December 2019. Retrieved 25 June 2021.
  8. "சூர்யவம்சம் படத்தில் நடித்த குழந்தையா இது.. கல்யாணம் ஆகி ஆளே மாறிய புகைப்படம்". Cinemapettai. 23 June 2021. Retrieved 26 July 2021.
  9. "Irfan gets nostalgic as he shares throwback pictures from the show Kana Kaanum Kaalangal; see posts". The Times of India. 25 April 2020. Retrieved 25 June 2021.
  10. "'தற்போது வரை காத்திருக்கிறேன்'… அதில் எனக்கு விருப்பமில்லை "கனா காணும் காலங்கள்" 'புகழ் ஹேமலதா வாழ்க்கையில்'… ஏற்பட்ட சோகம்". CineFeeds. 14 January 2020. Archived from the original on 25 June 2021. Retrieved 25 June 2021.
"https://kn.wikipedia.org/w/index.php?title=ಹೇಮಲತಾ&oldid=1196078" ಇಂದ ಪಡೆಯಲ್ಪಟ್ಟಿದೆ