ವಿಷಯಕ್ಕೆ ಹೋಗು

ಹೆನ್ರಿ ಥಾಮಸ್ ಗಾಡ್ವಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆನ್ರಿ ಥಾಮಸ್ ಗಾಡ್ವಿನ್

ಹೆನ್ರಿ ಥಾಮಸ್ ಗಾಡ್ವಿನ್ (1784-1853) ಬ್ರಿಟಿಷ್ ಭಾರತ ಸೇನೆಯ ಒಬ್ಬ ಅಧಿಕಾರಿ. 1824-26ರಲ್ಲಿ ಒಂದನೆಯ ಬರ್ಮ ಯುದ್ಧದಲ್ಲಿ ಭಾಗವಹಿಸಿದ್ದ. 1837ರಲ್ಲಿ ಕರ್ನಲ್ ಆಗಿ ಬಡ್ತಿ ಹೊಂದಿ 1846ರಲ್ಲಿ ಮೇಜರ್ ಜನರಲ್ ಆದ.[]

1852-53ರಲ್ಲಿ ನಡೆದ ಎರಡನೆಯ ಬರ್ಮ ಯುದ್ಧದಲ್ಲಿ ಗಾಡ್ವಿನ್ ನಾಯಕತ್ವದಲ್ಲಿ ಬ್ರಿಟಿಷ್ ಭೂಸೇನೆ ಕಾರ್ಯಾಚರಣೆ ನಡೆಸಿತು. 1852 ರ ಎಪ್ರಿಲ್ ತಿಂಗಳಲ್ಲಿ ರಂಗೂನ್‍ನ್ನು ಸ್ವಾಧೀನ ಮಾಡಿಕೊಳ್ಳಲು ಗಾಡ್ವಿನ್ ಮುನ್ನಡೆದನು.[] ಆ ತಿಂಗಳ ೧೪ರ ವರೆಗೆ ಹೊಡೆದಾಟ ಮುಂದುವರಿದು, ಬೃಹತ್ ಡಾಗೋನ್ ಪಗೋಡಾದ ಲಗ್ಗೆಯೊಂದಿಗೆ ರಂಗೂನ್‍ನ ಸ್ವಾಧೀನ ಸಂಪೂರ್ಣವಾಯಿತು.[] ತನ್ನ ಸಾಹಸಕ್ಕಾಗಿ ನೈಟ್ ಪದವಿ ಪಡೆದಿದ್ದ ಗಾಡ್ವಿನ್ 1853ರಲ್ಲಿ ಸಿಮ್ಲಾದಲ್ಲಿ ತೀರಿಕೊಂಡ.

ಉಲ್ಲೇಖಗಳು

[ಬದಲಾಯಿಸಿ]
  1. H. M. Chichester & Alex May, 'Godwin, Sir Henry Thomas (1784–1853), army officer' in Oxford Dictionary of National Biography (Oxford University Press, 2007)
  2. Dictionary of Indian Biography, p. 168: "GODWIN, SIR HENRY THOMAS (1784-1853) Joined the 9th foot in 1799... held the Command-in-Chief of the Force in the second Burmese war, 1852-3 : captured Rangoon, April, 1852..."
  3. Burke (1853), pp. 284–286