ವಿಷಯಕ್ಕೆ ಹೋಗು

ಪಗೋಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐದು ಅಂತಸ್ತಿನ ಕಟ್ಟಿಗೆಯ ಪಗೋಡ, ಜಪಾನ್

ಪಗೋಡ ಎಂದರೆ ಅನೇಕ ಸೂರುಗಳಿರುವ ಒಂದು ಬಹುಮಹಡಿ ಗೋಪುರ. ಇದು ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಬಹುತೇಕ ಪಗೋಡಗಳನ್ನು ಧಾರ್ಮಿಕ ಕಾರ್ಯಕ್ಕಾಗಿ ಕಟ್ಟಲಾಗಿತ್ತು, ಬಹುತೇಕ ವೇಳೆ ಬೌದ್ಧ ಆದರೆ ಕೆಲವೊಮ್ಮೆ ಟಾವೊ ತತ್ತ್ವಕ್ಕಾಗಿ, ಮತ್ತು ಹಲವುವೇಳೆ ವಿಹಾರಗಳಲ್ಲಿ ಅಥವಾ ಅವುಗಳ ಹತ್ತಿರ ಸ್ಥಿತವಾಗಿದ್ದವು. ಪಗೋಡದ ಮೂಲಗಳನ್ನು ಪ್ರಾಚೀನ ಭಾರತದ ಸ್ತೂಪಗಳಲ್ಲಿ ಮೂಲಾನ್ವೇಷಣ ಮಾಡಬಹುದು.[][]

ಪೂರ್ವ ಏಷ್ಯಾದಲ್ಲಿ, ಚೈನಾದ ಗೋಪುರಗಳು ಮತ್ತು ಚಾವಣಿ ಕಟ್ಟಡಗಳ ವಾಸ್ತುಶಿಲ್ಪವು ಪಗೋಡದ ವಾಸ್ತುಶಿಲ್ಪದಲ್ಲಿ ಬೆರಕೆಯಾಯಿತು ಮತ್ತು ಅಂತಿಮವಾಗಿ ಆಗ್ನೇಯ ಏಷ್ಯಾದಲ್ಲಿ ಕೂಡ ಹರಡಿತು. ಅವಶೇಷಗಳು ಮತ್ತು ಪವಿತ್ರ ಬರಹಗಳಿಗೆ ಸ್ಥಳ ಕಲ್ಪಿಸುವುದು ಪಗೋಡದ ಮೂಲ ಉದ್ದೇಶವಾಗಿತ್ತು. ಬೌದ್ಧ ಅವಶೇಷಗಳನ್ನು ವಿತರಿಸಲು ಮತ್ತು ಕೊಂಡಾಡಲು ಈ ಉದ್ದೇಶವನ್ನು ಬೌದ್ಧ ಪ್ರಚಾರಕರು, ಪ್ರಯಾಣಿಕರು, ಅರಸರು ಮತ್ತು ಸಾಮಾನ್ಯ ಭಕ್ತರು ಜನಪ್ರಿಯಗೊಳಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. "The Origin of Pagodas". China.org.cn. 2002-09-19. Retrieved 2017-01-23.
  2. "Pagoda". Webpages.uidaho.edu. Retrieved 2017-01-23.


"https://kn.wikipedia.org/w/index.php?title=ಪಗೋಡ&oldid=961767" ಇಂದ ಪಡೆಯಲ್ಪಟ್ಟಿದೆ