ವಿಷಯಕ್ಕೆ ಹೋಗು

ಹೆನ್ರಿ ಟಾಮ್ಲಿನ್ಸನ್ ಮೇಜರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆನ್ರಿ ಟಾಮ್ಲಿನ್ಸನ್ ಮೇಜರ್ (1873-1958). ಇಂಗ್ಲಿಷ್ ಕಾದಂಬರಿಕಾರ ಹಾಗೂ ಪತ್ರಿಕೋದ್ಯಮಿ ; ಪ್ರವಾಸ ಕಥನಗಳನ್ನೂ ಬರೆದಿದ್ದಾನೆ.

ಬದುಕು, ಬರಹ

[ಬದಲಾಯಿಸಿ]

ಹಲವು ವರ್ಷ ನೌಕಾ ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ತರುವಾಯ 1904ರಲ್ಲಿ ಮಾರ್ನಿಂಗ್ ಸ್ಟಾರ್ ಪತ್ರಿಕೆಗೆ ಸೇರಿದ. ಆ ಪತ್ರಿಕೆ ಡೇಲಿ ನ್ಯೂಸ್ ಪತ್ರಿಕೆಯಲ್ಲಿ ವಿಲೀನಗೊಂಡಾಗಲೂ ಪತ್ರಿಕೋದ್ಯಮಿಯಾಗಿ ಮುಂದುವರಿದ. ದಿ ಸೀ ಅಂಡ್ ದಿ ಜಂಗಲ್ (1912) ಈತನ ಮೊದಲ ಪುಸ್ತಕ. ಬ್ರಜಿಲ್ ದೇಶಕ್ಕೆ ಈತ ಮಾಡಿದ ಹಡಗಿನ ಪ್ರಯಾಣವನ್ನು ಇದರಲ್ಲಿ ವರ್ಣಿಸಲಾಗಿದೆ. 1914-1917ರ ಅವಧಿಯಲ್ಲಿ ಈತ ಫ್ರಾನ್ಸಿನಲ್ಲಿ ಯುದ್ಧ ವರದಿಗಾರನಾಗಿದ್ದ. 1917ರಿಂದ 1923ರವರೆಗೆ ದಿ ನೇಷನ್ ಅಂಡ್ ಅಥೆನಿಯಮ್ ಪತ್ರಿಕೆಯಲ್ಲಿ ಸಾಹಿತ್ಯ ವಿಭಾಗದ ಸಂಪಾದಕನಾಗಿದ್ದ. ಪೂರ್ವ ಇಂಡೀಸ್ ದ್ವೀಪಗಳಲ್ಲಿ (ಈಗ ಇಂಡೊನೇಷ್ಯ) ಒಂಬತ್ತು ತಿಂಗಳು ಇದ್ದ ಬಳಿಕ 1924ರಲ್ಲಿ ಟೈಡ್ ಮಾಕ್ರ್ಸ್ ಎಂಬ ಪುಸ್ತಕವನ್ನು ಹಾರ್ಪರ್ಸ್ ಮ್ಯಾಗಜೀನ್ ಎಂಬ ನಿಯತಕಾಲಿಕೆಗಾಗಿ ಬರೆದ. ಗ್ಯಾಲಿಯನ್ಸ್ ರೀಚ್ (1927) ಎಂಬ ಈತನ ಮೊದಲ ಕಾದಂಬರಿಗೆ ಫ್ರಾನ್ಸಿನ ಪ್ರಿಕ್ಸ್ ಫೆಮಿನಾ ವಿಕ್ ಹ್ಯೂರೋಸ್ ಪಾರಿತೋಷಕ ದೊರೆಯಿತು. ಯುದ್ಧದ ಚಿತ್ರವನ್ನು ಕೊಡುವ ಆಲ್ ಅವರ್ ಯೆಸ್ಟರ್‍ಡೇಸ್ ಎಂಬ ಈತನ ಕಾದಂಬರಿ ತುಂಬ ಮನ್ನಣೆ ಪಡೆಯಿತು. ಈತನ ಇತರ ಕಾದಂಬರಿಗಳೆಂದರೆ : ದಿ ಸ್ನೋಸ್ ಆಫ್ ಹೆಲಿಕಾನ್ (1933), ದಿ ಡೇ ಬಿಫೋರ್ (1939), ಮಾರ್ನಿಂಗ್ ಲೈಟ್ (1946), ಮತ್ತು ದಿ ಟ್ರಿಂಪೆಟ್ ಷಲ್ ಸೌಂಡ್ (1957). ಈತನ ಪ್ರವಾಸೀ ಗ್ರಂಥಗಳು ಮತ್ತು ಪ್ರಬಂಧ ಸಂಗ್ರಹಗಳು ಇವು : ಓಲ್ಡ್ ಜಂಕ್ (1918), ಲಂಡನ್ ರಿವರ್ (1921), ವೇಟಿಂಗ್ ಫಾರ್ ಡೇ ಲೈಟ್ (1922), ಸೌತ್ ಟು ಕೆಡೀಝ್ (1934), ದಿ ಫೇಸ್ ಆಫ್ ದಿ ಅರ್ತ್ (1950). ಎ ಮಿಂಗ್‍ಲ್ಡ್‍ಯಾರ್ನ್: ಆಟೊಬಯೊಗ್ರಾಫಿಕಲ್ ಸ್ಕೆಚಸ್ (1953) ಎಂಬುದು ಆತ್ಮಕಥಾನಕ.