ಹೆಚ್.ಕೆ.ಪಾಟೀಲ
ಗೋಚರ
ಹನುಮಂತಗೌಡ ಕೃಷ್ಣ ಗೌಡ ಪಾಟೀಲ ಹೆಚ್.ಕೆ.ಪಾಟೀಲ | |
---|---|
![]() | |
ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ | |
Preceded by | ಕೆ ಎಸ್ ಈಶ್ವರಪ್ಪ |
Constituency | ಗದಗ, ಗದಗ ಜಿಲ್ಲೆ |
Personal details | |
Born | ಹುಲಕೋಟಿ,,ಗದಗ, ಕರ್ನಾಟಕ | 15 August 1953
Political party | ಕಾಂಗ್ರೆಸ್ |
Spouse | ಹೇಮಾ ಪಾಟೀಲ |
Children | ೧ ಪುತ್ರ ಕೃಷ್ಣಗೌಡ,೨ -ಲಕ್ಷ್ಮಿ ಮತ್ತು ರಾಜೇಶ್ವರಿ. |
Residence(s) | ಹುಲಕೋಟಿ, ಗದಗ ಜಿಲ್ಲೆ |
Alma mater | "ಬಿ.ಎಸ್ಸಿ. ಹಾಗು ಎಲ್.ಎಲ್.ಬಿ(ಸ್ಪೆಷಲ್)" |
Website | "" |
ಜೀವನ
[ಬದಲಾಯಿಸಿ]ವಿದ್ಯಾಭ್ಯಾಸ
[ಬದಲಾಯಿಸಿ]ರಾಜಕೀಯ ಜೀವನ
[ಬದಲಾಯಿಸಿ]ಗದಗದಿಂದ ಆಯ್ಕೆಯಾದ ಎಚ್.ಕೆ. ಪಾಟೀಲ್‌ಗೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಜತೆಗೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವವೂ ಇದೆ. ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ೧೯೮೪ರಿಂದ ೨೦೦೮ರವರೆಗೂ ಪಶ್ಚಿಮ ಪಧವೀಧರ ಕ್ಷೇತ್ರದಿಂದ ೪ ಬಾರಿ ವಿಧಾನ ಪರಿಷತ್‌ಗೆ ಆಯ್ಕೆ. ಜವಳಿ ಮತ್ತು ಆಹಾರ ಸಂಸ್ಕರಣೆ, ಜಲಸಂಪನ್ಮೂಲ ಇಲಾಖೆ, ಕೃಷಿ ಇಲಾಖೆ, ಕಾನೂನು ಮಾನವಹಕ್ಕು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೪ರಿಂದ ೧೯೯೮ ಹಾಗೂ ೨೦೦೬ರಿಂದ ೨೦೦೮ರವರೆಗೆ ಪ್ರತಿಪಕ್ಷ ನಾಯಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಶುದ್ಧ ಕುಡಿಯುವ ನೀರು ಜನಾಂದೋಲನದ ಮೂಲಕ ಉತ್ತರ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ.
ರಾಜಕಿಯ
[ಬದಲಾಯಿಸಿ]ವರ್ಷ | ಮತಕ್ಷೇತ್ರ | ಸದಸ್ಯ | ಪಕ್ಷ |
---|---|---|---|
೨೦೧೩- | ಗದಗ | ವಿಧಾನ ಸಭೆ | ಕಾಂಗ್ರೆಸ್ |
೨೦೦೨-೨೦೦೮ | ಪಶ್ಚಿಮ ಪದವೀಧರ ಕ್ಷೇತ್ರ | ವಿಧಾನ ಪರಿಷತ್ತು | ಕಾಂಗ್ರೆಸ್ |
೧೯೯೬ -೨೦೦೨ | ಪಶ್ಚಿಮ ಪದವೀಧರ ಕ್ಷೇತ್ರ | ವಿಧಾನ ಪರಿಷತ್ತು | ಕಾಂಗ್ರೆಸ್ |
೧೯೮೪ -೧೯೯೦ | ಪಶ್ಚಿಮ ಪದವೀಧರ ಕ್ಷೇತ್ರ | ವಿಧಾನ ಪರಿಷತ್ತು | ಕಾಂಗ್ರೆಸ್ |
೧೯೯೦ - ೧೯೯೦ | ಪಶ್ಚಿಮ ಪದವೀಧರ ಕ್ಷೇತ್ರ | ವಿಧಾನ ಪರಿಷತ್ತು | ಕಾಂಗ್ರೆಸ್ |
ಅಲಂಕರಿಸಿದ ಹುದ್ದೆಗಳು
[ಬದಲಾಯಿಸಿ]- ಕಾನೂನು ಮಾನವಹಕ್ಕು ಹಾಗೂ ಸಂಸದೀಯ ವ್ಯವಹಾರಗಳ ಸಚಿವ [೧೯-.೧೨.೨೦೦೪ ರಿಂದ ೦೧-೦೨-೨೦೦೬]
- ಕೃಷಿ ಸಚಿವ [೧೨-೧೨-೨೦೦೩ ರಿಂದ ೨೮-೦೫-೨೦೦೪]
- ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ [೧೮-೧೨-೧೯೯೪-]
- ಜಲಸಂಪನ್ಮೂಲ ಇಲಾಖೆ ಸಚಿವ [೧೭-೧೦-೧೯೯೯ ರಿಂದ ೧೨-೧೨-೨೦೦೩]
- ಸಣ್ಣ ಮತ್ತು ಮಧ್ಯಮ ಕೈಗಾರಿಕಾ ರಾಜ್ಯ ಸಚಿವ [ ೧೭-೧೦-೧೯೯೯-]
- ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ [೨೮-೧೨-೧೯೯೪ ರಿಂದ ೧೬-೧೦-೧೯೯೯]
- ಜವಳಿ ಮತ್ತು ಆಹಾರ ಸಂಸ್ಕರಣೆ ರಾಜ್ಯ ಸಚಿವರು [೨೦-೦೧–೧೯೯೨ ರಿಂದ ೧೧-೧೨-೧೯೯೪]
ಸದಸ್ಯರು
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರು
- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು
- ಇಂಡೋ ಚೀನಿ ಸ್ನೇಹ ಸಂಘ ಹೊಸ ದೆಹಲಿ ಸದಸ್ಯರು
- ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುಣಾವಣಾ ಸಮಿತಿ ಸದಸ್ಯರು
ಸಹಕಾರಿ ಸಂಸ್ಥೆ
- ದಿ ನ್ಯಾಶನಲ್ ಫೆಡರೇಶನ್ ಆಫ್ ದಿ ಕರ್ನಾಟಕ ಆರ್ಬನ್ ಕೋ-ಆಪರೇಟಿವ ಬ್ಯಾಂಕ್ ಮತ್ತು ಕ್ರೆಡಿಟ್ ಸೊಸೈಟಿ - ಅದ್ಯಕ್ಷರು
- ದಿ ಕರ್ನಾಟಕ ರಾಜ್ಯ ಕೋ-ಆಪರೇಟಿವ ಆರ್ಬನ್ ಬ್ಯಾಂಕ್ ಫೆಡರೇಶನ್ ಲಿಮಿಟೆಡ್, ಬೆಂಗಳೂರ- ಅದ್ಯಕ್ಷರು
- ಕೆ.ಎಚ್.ಪಾಟೀಲ ಪ್ರತಿಷ್ಠಾನ
- ರೂರಲ್ ಮೆಡಿಕಲ್ ಸೊಸೈಟಿ ಮೂಲಕ ಶುದ್ಧ ಕುಡಿಯುವ ನೀರು ಘಟಕ
ವ್ಯವಸ್ಥಾಪಕ
- ನ್ಯಾಶನಲ್ ಕೋ-ಆಪರೇಟಿವ ಆರ್ಬನ್ ಬ್ಯಾಂಕ್, ಹೊಸ ದೆಹಲಿ
- ನ್ಯಾಶನಲ್ ಕೋ-ಆಪರೇಟಿವ ಯೂನಿಯನ್, ಹೊಸ ದೆಹಲಿ
ಪ್ರಕಾಶನಗಳು
- ಕೇಳಿ ಕೃಷಿಯ ಕೂಗು
- ಚಲುವ ಕನ್ನಡ ನಾಡು - ನನಸಾದ ಕನಸು
- ಹೇಳ್ಳಿದ್ದೇನು - ಮಾಡಿದ್ದೇನು
- ಅಂಕಣಕಾರ ಮತ್ತು ಲೇಖಕ
- ಸ್ಪೆಶಲ್ ಆರ್ಟಿಕಲ್ ಆನ್ ಕೋ-ಆಪರೇಟಿವ ಬ್ಯಾಂಕಿಂಗ್