ವಿಷಯಕ್ಕೆ ಹೋಗು

ಹೆಗ್ಗೋಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಹೆಗ್ಗೋಡು ಕರ್ನಾಟಕಸಾಗರ ತಾಲ್ಲೂಕಿನ ಒಂದು ಹಳ್ಳಿ. ಇಲ್ಲಿನ ಸಂಸ್ಥೆಗಳ ಕಾರಣದಿಂದಾಗಿ , ಇದು ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ .

ಸಂಸ್ಥೆಗಳು[ಬದಲಾಯಿಸಿ]

ಪದವಿಪೂರ್ವ ಮತ್ತು ಪದವಿ ಕಾಲೇಜು ಹೊರತಾಗಿ, ಇದು ಪ್ರಖ್ಯಾತ ನಾಟಕಕಾರ ಕೆ. ವಿ. ಸುಬ್ಬಣ್ಣ ಅವರ ಕನಸಿನ ಕೂಸಾದ ನೀನಾಸಂ ನಾಟಕ ಸಂಸ್ಥೆಯನ್ನು ಹೊಂದಿದೆ.

ನೀನಾಸಂ[ಬದಲಾಯಿಸಿ]

ಪ್ರಸ್ತುತ ಅಕ್ಷರ ಕೆ ವಿ ನೇತೃತ್ವದ ನಾಟಕ ಸಂಸ್ಥೆ, ನಾಟಕ, ಚಲನಚಿತ್ರಗಳು ಮತ್ತು ಸಾಹಿತ್ಯವನ್ನು ಕೇಂದ್ರೀಕರಿಸುತ್ತದೆ. ದಕ್ಷಿಣ ಭಾರತದ ನಾಟಕ ಸಂಸ್ಕೃತಿಯನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ಇದು ವರ್ಷಾದ್ಯಂತ ಅನೇಕ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ.

ಅಕ್ಷರ ಪ್ರಕಾಶನ [ಬದಲಾಯಿಸಿ]

ಇದು ಕನ್ನಡ ಪ್ರಕಾಶನ ಸಂಸ್ಥೆ.

ಚರಕ [ಬದಲಾಯಿಸಿ]

ಬಿ. ಪ್ರಸನ್ನ ಅವರ ನೇತೃತ್ವದಲ್ಲಿ, ಇದು ಖಾದಿ ಧರಿಸುವುದು ಮತ್ತು ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಣೆಗೆ ವಿನ್ಯಾಸ ಮತ್ತು ಪ್ರಚಾರವನ್ನು ಕೇಂದ್ರೀಕರಿಸುತ್ತದೆ.

ಪ್ರಯಾಣ[ಬದಲಾಯಿಸಿ]

ಈ ಸ್ಥಳವು ಸಾಗರಕ್ಕೆ ಸಮೀಪ ಇರುವುದರಿಂದ, ರೈಲು ಮತ್ತು ರಸ್ತೆಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಸ್ಥಳವು ಸಾಗರ, ಹೊಸನಗರ ಮುಂತಾದ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಬಸ್ ಸೌಲಭ್ಯಗಳನ್ನು ಹೊಂದಿದೆ.