ಹೃದಯಶಾಸ್ತ್ರ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಹೃದಯಶಾಸ್ತ್ರವು ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳನ್ನು ನಿರ್ವಹಿಸುವ ಒಂದು ವೈದ್ಯಕೀಯ ಪರಿಣತಿ. ಈ ಕಾರ್ಯಕ್ಷೇತ್ರವು ಜನ್ಮಜಾತ ಹೃದಯ ದೋಷಗಳು, ಕಿರೀಟಾಕೃತಿ ಅಪಧಮನಿಯ ರೋಗ, ಹೃದಯ ವೈಫಲ್ಯ, ಹೃದ್ಕವಾಟ ರೋಗ ಮತ್ತು ವಿದ್ಯುತ್ ಶರೀರವಿಜ್ಞಾನದ ರೋಗನಿದಾನ ಮತ್ತು ಚಿಕಿತ್ಸೆಯನ್ನು ಒಳಗೊಳ್ಳುತ್ತದೆ. ಈ ಕಾರ್ಯಕ್ಷೇತ್ರದಲ್ಲಿ ಪರಿಣತರಾದ ವೈದ್ಯರನ್ನು ಹೃದಯಶಾಸ್ತ್ರಜ್ಞರೆಂದು ಕರೆಯಲಾಗುತ್ತದೆ.