ವಿಷಯಕ್ಕೆ ಹೋಗು

ಹೃದಯದ ಆವರ್ತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೃದಯ ಆವರ್ತನದಲ್ಲಿ ಸಂಭವಿಸುವ ಹೃದಯದ ಘಟನೆಗಳು (ಸಂಗತಿಗಳು).ಎರಡು ಪೂರ್ಣಗೊಂಡ ಆವರ್ತನಗಳು ವಿವರಿಸಲ್ಪಟ್ಟಿವೆ.

ಹೃದಯದ ಆವರ್ತನ ಇದು ಒಂದು ಹೃದಯದ ಬಡಿತದ ಪ್ರಾರಂಭದಿಂದ ಮತ್ತೊಂದು ಬಡಿತದ ಪ್ರಾರಂಭದವರೆಗೆ ಸಂಭವಿಸುವ ರಕ್ತದ ಪ್ರವಹಿಸುವಿಕೆ ಅಥವಾ ರಕ್ತದ ಒತ್ತಡಕ್ಕೆ ಸಂಬಂಧಿಸಿದ ಎಲ್ಲಾ ಅಥವಾ ಯಾವುದಾದರೂ ಘಟನೆಗಳನ್ನು ಉಲ್ಲೇಖಿಸುವ ಶಬ್ದವಾಗಿದೆ.[] ಹೃದಯ ಆವರ್ತನದ ಆವರ್ತನ ವೇಗವು ಹೃದಯ ಬಡಿತ ವೇಗ ಎಂದು ಕರೆಯಲ್ಪಡುತ್ತದೆ. ಹೃದಯದ ಪ್ರತಿ ಬಡಿತವು ಐದು ಪ್ರಮುಖ ಹಂತಗಳನ್ನು ಒಳಗೊಂಡಿರುತ್ತವೆ: ಮೊದಲನೆಯದು, "ವಿಳಂಬ ವ್ಯಾಕೋಚನ", ಯಾವಾಗ ಸೆಮಿಲ್ಯುನರ್ ಕವಾಟಗಳು ಮುಚ್ಚಲ್ಪಡುತ್ತವೆಯೋ, ಏಟ್ರಿಯೋವೆಂಟ್ರಿಕ್ಯುಲರ್ (AV) ಕವಾಟಗಳು ತೆರೆಯಲ್ಪಡುತ್ತವೆಯೋ ಮತ್ತು ಪೂರ್ತಿ ಹೃದಯವು ವಿರಮಿಸಿದ ಸ್ಥಿತಿಯಲ್ಲಿರುತ್ತದೆಯೋ ಆಗ ಅದನ್ನು ವಿಳಂಬ ವ್ಯಾಕೋಚನ ಎನ್ನುವರು. ಎರಡನೆಯದು, "ಹೃತ್ಕರ್ಣದ ಸಂಕುಚನ", ಯಾವಾಗ ಹೃತ್ಕರ್ಣವು ಸಂಕುಚಿಸಲ್ಪಡುತ್ತದೆಯೋ, ಏಟ್ರಿಯೋವೆಂಟ್ರಿಕ್ಯುಲರ್ ಕವಾಟಗಳು ತೆರೆಯಲ್ಪಡುತ್ತವೆಯೋ, ಮತ್ತು ರಕ್ತವು ಹೃತ್ಕರ್ಣದಿಂದ ದೇಹದೊಳಗಿನ ಕುಹರಕ್ಕೆ ಪ್ರವಹಿಸುತ್ತದೆಯೋ ಆಗ ಇದು ಸಂಭವಿಸುತ್ತದೆ. ಮೂರನೆಯದು, "ಭಿನ್ನಗಾತ್ರದ ಕುಹರಗಳ ಸಂಕೋಚನ", ಈ ಸಂದರ್ಭದಲ್ಲಿ ಕುಹರಗಳು ಸಂಕುಚಿಸಲು ಪ್ರಾರಂಭಿಸುತ್ತವೆ, ಆಟ್ರಿಯೋವೆಂಟ್ರಿಕ್ಯುಲರ್ ಮತ್ತು ಸೆಮಿಲ್ಯುನರ್ ಕವಾಟಗಳು ತೆರೆಯಲ್ಪಡುತ್ತವೆ, ಮತ್ತು ಅಲ್ಲಿ ಗಾತ್ರದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ನಾಲ್ಕನೆಯದು, "ಕುಹರಗಳ ನಿಷ್ಕಾಸನ", ಯಾವಾಗ ಕುಹರಗಳು ಖಾಲಿಯಾಗಲ್ಪಡುತವೆಯೋ ಮತ್ತು ಸಂಕುಚಿತವಾಗುತ್ತವೆಯೋ, ಮತ್ತು ಸೆಮಿಲ್ಯುನರ್ ಕವಾಟಗಳು ತೆರೆಯಲ್ಪಡುತ್ತವೆಯೋ ಆಗ ಇದು ಸಂಭವಿಸುತ್ತದೆ. "ಭಿನ್ನಗಾತ್ರದ ಕುಹರಗಳ ವಿರಮಿಸುವಿಕೆ" ಈ ಐದನೆಯ ಹಂತದ ಸಮಯದಲ್ಲಿ, ಒತ್ತಡವು ಕಡಿಮೆಯಾಗುತ್ತದೆ, ಕುಹರದೊಳಗಡೆ ರಕ್ತವು ಪ್ರವೇಶಿಸುವುದಿಲ್ಲ, ಕುಹರಗಳು ಸಂಕುಚನಗೊಳ್ಳುವುದನ್ನು ನಿಲ್ಲಿಸುತ್ತವೆ ಮತ್ತು ವಿರಮಿಸಲು ಪ್ರಾರಂಭಿಸುತ್ತವೆ, ಮತ್ತು ಮಹಾಪಧಮನಿಯಲ್ಲಿನ ರಕ್ತದ ಒತ್ತಡದ ಕ್ರಣದಿಂದ ಸೆಮಿಲ್ಯುನರ್ ಕವಾಟಗಳು ಮುಚ್ಚಲ್ಪಡುತ್ತವೆ.

ಹೃದಯದ ಆವರ್ತನದುದ್ದಕ್ಕೂ, ರಕ್ತದ ಒತ್ತಡವು ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ. ಹೃದಯ ಆವರ್ತನವು, ಸೈನೋ-ಹೃತ್ಕರ್ಣದ ಗಂಟು ಮತ್ತು ಏಟ್ರಿಯೋವೆಂಟ್ರಿಕ್ಯುಲರ್ ಗಂಟುಗಳೊಳಗೆ ಕಂಡುಬರುವ ವಿಶೇಷ ರೀತಿಯ ಹೃದಯದ ಕೋಶಗಳ ಮೂಲಕ ಉತ್ಪತ್ತಿ ಮಾಡಲ್ಪಟ್ಟ ವಿದ್ಯುತ್ ಪ್ರಚೋದನೆಗಳಂತಹ ಒಂದು ಸರಣಿ ಪ್ರಚೋದನೆಗಳಿಂದ ಸಂಯೋಜಿಸಲ್ಪಡುತ್ತದೆ. ಹೃದಯದ ಸ್ನಾಯುವು, ಬಾಹ್ಯ ನರಗಳ ಸಹಾಯವಿಲ್ಲದೇ ತಮ್ಮಷ್ಟಕ್ಕೇ ತಾವೇ ಸಂಕುಚನಗೊಳ್ಳುವಿಕೆಯನ್ನು ಪ್ರಾರಂಭಿಸುವ ಮೈಯೋಸೈಟ್ (ಸಂಕುಚನಗೊಳ್ಳುವ ಕೋಶ) ಸ್ನಾಯುಗಳಿಂದ ರಚಿಸಲ್ಪಟ್ಟಿದೆ (ಚಯಾಪಚಯ ಬೇಡಿಕೆಯ ಕಾರಣದಿಂದ ಹೃದಯ ಬಡಿತ ವೇಗವನ್ನು ಬದಲಾಯಿಸುವುದರ ವಿನಾಯಿತಿಯ ಜೊತೆ) . ಸಾಧಾರಣವಾದ ಸಂದರ್ಭಗಳ ಅಡಿಯಲ್ಲಿ, ಪ್ರತಿ ಆವರ್ತನವು ಸರಿಸುಮಾರಾಗಿ ಒಂದು ಸೆಕೆಂಡ್ ಅನ್ನು ತೆಗೆದುಕೊಳ್ಳುತ್ತದೆ.

ಹೃತ್ಕರ್ಣ ಸಂಕುಚನ

[ಬದಲಾಯಿಸಿ]
ಹೃತ್ಕರ್ಣದ ಸಂಕುಚನ

ಹೃತ್ಕರ್ಣ ಸಂಕುಚನ ವು ಎಡ ಭಾಗದ ಮತ್ತು ಬಲಭಾಗದ ಹೃತ್ಕರ್ಣಗಳ ಹೃದಯದ ಸ್ನಾಯುಗಳ (ಮಯೋಕಾರ್ಡಿಯಾ ) ಸಂಕುಚನವಾಗಿದೆ. ಸಾಮಾನ್ಯವಾಗಿ, ಎರಡೂ ಹೃತ್ಕರ್ಣಗಳೂ ಒಂದೇ ಸಮಯದಲ್ಲಿ ಸಂಕುಚನಗೊಳ್ಳುತ್ತವೆ. ಸಂಕುಚನ ಎಂಬ ಶಬ್ದವು ಸ್ನಾಯುವಿನ ಸಂಕುಚನ (ಚಲನೆ ಅಥವಾ ಚಿಕ್ಕದಾಗಿಸುವಿಕೆ) ಶಬ್ದಕ್ಕೆ ಸಮ ಅರ್ಥವನ್ನು ಕೊಡುವಂತದ್ದಾಗಿದೆ. ವಿದ್ಯುತ್ ಪರಿಣಾಮದ ಸಂಕುಚನ ಇದು ಹೃದಯದ ಕೋಣೆಗಳ ಮಯೋಕಾರ್ಡಿಯಮ್‌ಗಳನ್ನು ಸಂಕುಚನಗೊಳಿಸಲು ಪ್ರಚೋದಿಸುವ ಒಂದು ವಿದ್ಯುತ್ ಪರಿಣಾಮದ ಚಟುವಟಿಕೆಯಾಗಿದೆ. ಇದನ್ನು ನಂತರದಲ್ಲಿ ಹೃದಯದ ಯಾಂತ್ರಿಕ ಸಂಕುಚನ ಎಂದು ಕರೆಯಲ್ಪಡುವ ಯಾಂತ್ರಿಕ ಸಂಕುಚನ ವು ಅನುಸರಿಸುತ್ತದೆ.

ಹೃತ್ಕರ್ಣವು ಸಂಕುಚಿಸಿದಂತೆ, ಪ್ರತಿ ಹೃತ್ಕರ್ಣದಲ್ಲಿನ ರಕ್ತದ ಒತ್ತಡವು ಏರುತ್ತದೆ, ಅದು ಹೆಚ್ಚುವರಿ ರಕ್ತವನ್ನು ಕುಹರದೊಳಕ್ಕೆ ಪ್ರವೇಶಿಸುವಂತೆ ಒತ್ತಡವನ್ನು ಹೇರುತ್ತದೆ. ರಕ್ತದ ಹೆಚ್ಚುವರಿ ಪ್ರವಹಿಸುವಿಕೆಯು ಹೃತ್ಕರ್ಣದ ತೀವ್ರತೆ (ಚೇತರಿಕೆ ಶಕ್ತಿ) ಎಂದು ಕರೆಯಲ್ಪಡುತ್ತದೆ.

70% ರಕ್ತ ಪ್ರವಾಹಗಳು ನಿಷ್ಕ್ರಿಯವಾಗಿ ಕುಹರದ ಕೆಳಭಾಗದಲ್ಲಿರುತ್ತವೆ, ಆದ್ದರಿಂದ ಹೃತ್ಕರ್ಣಗಳು ಹೆಚ್ಚಿನ ಪ್ರಮಾಣದಲ್ಲಿ ಸಂಕುಚನಗೊಳ್ಳುವ ಅವಶ್ಯಕತೆಯಿರುವುದಿಲ್ಲ.[]

ಹೃದಯದಲ್ಲಿ ಸಹಜ ಸ್ಥಿತಿಯ ವಿದ್ಯುತ್ ಪರಿಣಾಮದ ಸಾಗಣೆಯ ನಷ್ಟ ಸಂಭವಿಸಿದ್ದರೆ, ಉದಾಹರಣೆಗೆ ಹೃತ್ಕರ್ಣದ ಕಂಪನ, ಹೃತ್ಕರ್ಣದ ಹೊಡೆದುಕೊಳ್ಳುವಿಕೆ, ಮತ್ತು ಹೃದಯದ ಪೂರ್ತಿಯಾದ ಪ್ರತಿಬಂಧ ಸ್ಥಿತಿಗಳಲ್ಲಿ ಹೃತ್ಕರ್ಣದ ತೀವ್ರತೆಯು ಅಲ್ಲಿ ಸಂಭವಿಸುವುದಿಲ್ಲ, ಹೃತ್ಕರ್ಣದ ತೀವ್ರತೆಯು ಹೃದಯದ ಸ್ಥಿತಿಯನ್ನು ಆಧರಿಸಿ ಗುಣಲಕ್ಷಣಗಳಲ್ಲೂ ಭಿನ್ನವಾಗಿರುತ್ತದೆ, ಉದಾಹರಣೆಗೆ ಸೆಟೆದುಕೊಂಡ ಹೃದಯ, ಅದು ವ್ಯಾಕೋಚನಕ್ಕೆ ಸಂಬಂಧಿಸಿದ ಸ್ನಾಯುವು ಸರಿಯಾಗಿ ಕಾರ್ಯನಿರ್ವಹಿಸಲಾಗದ ಸ್ಥಿತಿಯನ್ನು ಹೊಂದಿರುವ ರೋಗಿಗಳಲ್ಲಿ ಕಂಡುಬರುತ್ತದೆ.

ಹೃತ್ಕರ್ಣ ಸಂಕುಚನದ ಕಂಡುಹಿಡಿಯುವಿಕೆ

[ಬದಲಾಯಿಸಿ]

ಹೃತ್ಕರ್ಣದ ವಿದ್ಯುತ್ ಪರಿಣಾಮದ ಸಂಕುಚನವು ಇಸಿಜಿಯ ಮೇಲೆ ಪಿ ತರಂಗಗಳ ಪ್ರಾರಂಭಿಸುವಿಕೆಯ ಜೊತೆ ಪ್ರಾರಂಭವಾಗುತ್ತದೆ. ದ್ವಿಧ್ರುವೀಕರಣದ (ಅಥವಾ ವಿಧ್ರುವೀಕರಣ) ತರಂಗಗಳು ಬಲಭಾಗದ ಹೃತ್ಕರ್ಣದ ಮೇಲ್ಭಾಗದಲ್ಲಿ ಸ್ಥಾಪಿತಗೊಂಡ ಸೈನೋಹೃತ್ಕರ್ಣದ ಗಂಟಿನ ಕಾರಣದಿಂದ ಎರಡೂ ಹೃತ್ಕರ್ಣಗಳನ್ನು ಏಕಕಾಲದಲ್ಲಿ ಸಂಕುಚನಗೊಳ್ಳುವುದನ್ನು ಪ್ರಚೋದಿಸುತ್ತದೆ. ಈ ಹಂತದಲ್ಲಿ 30% ಕುಹರಗಳು ತುಂಬಿಕೊಳ್ಳಲ್ಪಡುತ್ತವೆ.

ಕುಕ್ಷೀಯ (ಕುಹರದ) ಸಂಕುಚನ

[ಬದಲಾಯಿಸಿ]
ಕುಹರದ (ಕಕ್ಷೀಯ) ಸಂಕುಚನ

ಕುಕ್ಷೀಯ ಸಂಕುಚನವು ಎಡಭಾಗದ ಮತ್ತು ಬಲಭಾಗದ ಕುಹರಗಳ ಸ್ನಾಯುಗಳ (ಮಯೋಕಾರ್ಡಿಯಾ ) ಸಂಕುಚನವಾಗಿದೆ.

ನಿಷ್ಕಾಸನ ಹಂತದ ನಂತರದ ಭಾಗಗಳಲ್ಲಿ, ಕುಹರದ ಒತ್ತಡವು ಮಹಾಪಧಮನಿಯ ಒತ್ತಡಕ್ಕಿಂತಲೂ ಕೆಳಗಿರಲ್ಪಟ್ಟಾಗ್ಯೂ, ಮಹಾಪಧಮನಿಯ ರಕ್ತದ ಜಡತ್ವದ ಶಕ್ತಿಯ ಕಾರಣದಿಂದಾಗಿ ಮಹಾಪಧಮನಿಯ ಕವಾಟವು ಸ್ಪಷ್ಟ ಗೋಚರವಾಗಿ ಇರಲ್ಪಡುತ್ತದೆ.[]

ಹೃದಯ ಆವರ್ತನದುದ್ದಕ್ಕೂ ಮಹಾಪಧಮನಿಯ ಒತ್ತಡದ ಚಿತ್ರಣವು, ಮಹಾಪಧಮನಿಯ ಕವಾಟದ ಮುಚ್ಚುವಿಕೆಯ ಜೊತೆ ಸಂಪೂರ್ಣ ಸಾದೃಯವನ್ನು ಹೊಂದುವ ಒಂದು ಸ್ವಲ್ಪ ಕಡಿಮೆಯಾಗುವಿಕೆಯನ್ನು ತೋರಿಸುತ್ತದೆ. ಚಿತ್ರಣದಲ್ಲಿನ ಕಡಿಮೆಯಾಗುವಿಕೆಯು ಒಂದು ಸಂಕ್ಷಿಪ್ತ ಏರಿಕೆ ನಂತರ ಹಂತ ಹಂತವಾದ ಇಳಿಕೆಗಳನ್ನು ಅನುಸರಿಸುತ್ತದೆ. ಚಿತ್ರಣದಲ್ಲಿನ ಕಡಿಮೆ ಪ್ರಮಾಣದ ಹೆಚ್ಚುವಿಕೆಯು "ದ್ವಿಸ್ಪಂದನದ ಹಂತ" ಅಥವಾ "ಇನ್ಸಿಶ್ಯೂರ್" ಎಂದು ಕರೆಯಲ್ಪಡುತ್ತದೆ, ಮತ್ತು ಹೃತ್ಕರ್ಣದ ಒತ್ತಡದಲ್ಲಿನ ಒಂದು ಕ್ಷಣಿಕವಾದ ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಕುಹರಗಳು ವ್ಯಾಕೋಚನವನ್ನು ಪ್ರವೇಶಿಸುತ್ತಿರುವಂತೆ, ಎಡಭಾಗದ ಕುಹರಗಳಿಗೆ ವಾಪಾಸಾದ ಮಹಾಪಧಮನಿಯ ಪ್ರವಹಿಸುವಿಕೆಯ ಸಂಕ್ಷಿಪ್ತ ಹಿಂಚಲನೆಯು ಮಹಾಪಧಮನಿಯ ಕವಾಟಗಳು ಮುಚ್ಚುವುದಕ್ಕೆ ಕಾರಣವಾಗುತ್ತವೆ. ಇದು ಸೆಮಿಲ್ಯುನರ್ ಕವಾಟಗಳು ಮತ್ತು ಮಹಾಪಧಮನಿಯ ಹಿಗ್ಗುವಿಕೆಯ ಹಿಂಚಲನದಿಂದ ಉಂಟಾದ ಮಹಾಪಧಮನಿಯ ಒತ್ತಡದಲ್ಲಿನ ಕಡಿಮೆ ಪ್ರಮಾಣದ ಹೆಚ್ಚುವಿಕೆಗೆ ಕಾರಣವಾಗುತ್ತದೆ.[][][]

ಕುಹರದ ಸಂಕುಚನದ ಕಂಡುಹಿಡಿಯುವಿಕೆ

[ಬದಲಾಯಿಸಿ]

ಹೃದಯ ಶಬ್ದಗಳು

[ಬದಲಾಯಿಸಿ]

ಕುಹರದ ಸಂಕುಚನದ ಪ್ರಾರಂಭ ದಲ್ಲಿ, ಎಡಭಾಗದ ಮತ್ತು ತ್ರಿಕೋನಾಕಾರದ ಮೂರು ಭಾಗಗಳಿರುವ ಕವಾಟಗಳ ಮುಚ್ಚುವಿಕೆಯು (ಈ ಎರಡೂ ಕವಾಟಗಳು ಜೊತೆಯಾಗಿ ಏಟ್ರಿಯೋವೆಂಟ್ರಿಕ್ಯುಲರ್ (ಹೃತ್ಕರ್ಣ ಕುಹರ) ಕವಾಟಗಳು ಎಂದು ಕರೆಯಲ್ಪಡುತ್ತವೆ) ಹೃದಯವು ತನ್ನ ಬಡಿತವಾಗಿ ಉಂಟುಮಾಡುವ "ಲಬ್-ಡಬ್" ಶಬ್ದದ ಮೊದಲಿನ ಭಾಗಕ್ಕೆ ಕಾರಣವಾಗುತ್ತದೆ. ಔಪಚಾರಿಕವಾಗಿ, ಈ ಶಬ್ದವು ಹೃದಯ ಮೊದಲ ಸ್ವರ ಅಥವಾ ಎಸ್1 ಎಂದು ಕರೆಯಲ್ಪಡುತ್ತದೆ. ಹೃದಯದ ಮೊದಲ ಶಬ್ದವು ಎಡಭಾಗದ ಮತ್ತು ತ್ರಿಕೋಣಾಕಾರದ ಮೂರು ಭಾಗಗಳ ಕವಾಟಗಳ ಮುಚ್ಚುವಿಕೆಯ ಮೂಲಕ ಉತ್ಪತ್ತಿಯಾಗಲ್ಪಡುತ್ತದೆ ಮತ್ತು ಇದು ವಾಸ್ತವಿಕವಾಗಿ ಎಮ್1, ಟಿ1 ಎಂಬ ಎರಡು ಶಬ್ದಗಳನ್ನು ಒಳಗೊಂಡಿರುತ್ತದೆ.

"ಲಬ್-ಡಬ್" ಶಬ್ದದ ಎರಡನೆಯ ಭಾಗವು (ಹೃದಯದ ಎರಡನೆಯ ಶಬ್ದ ಅಥವಾ ಎಸ್2 ), ಇದು ಕುಹರದ ಸಂಕುಚನದ ಕೊನೆ ಯಲ್ಲಿ ಮಹಾಪಧಮನಿ ಮತ್ತು ಶ್ವಾಸಕೋಶದ ಕವಾಟಗಳ ಮುಚ್ಚುವಿಕೆಯಿಂದ ಉಂಟಾಗುತ್ತದೆ. ಎಡ ಭಾಗದ ಕುಹರವು ಖಾಲಿಯಾದಂತೆ, ಇದರ ಒತ್ತಡವು ಮಹಾಪಧಮನಿಯಲ್ಲಿನ ಒತ್ತಡಕ್ಕಿಂತ ಕಡಿಮೆಗೆ ಇಳಿಯಲ್ಪಡುತ್ತದೆ, ಮತ್ತು ಮಹಾಪಧಮನಿಯ ಕವಾಟವು ಮುಚ್ಚಲ್ಪಡುತ್ತದೆ. ಅದೇ ರೀತಿಯಾಗಿ, ಬಲ ಭಾಗದ ಕುಹರದ ಒತ್ತಡವು ಶ್ವಾಸಕೋಶದ ಅಪಧಮನಿಗಳಲ್ಲಿನ ಒತ್ತಡಕ್ಕಿಂತ ಕಡಿಮೆಯಾದಂತೆ, ಶ್ವಾಸಕೋಶದ ಕವಾಟವು ಮುಚ್ಚಲ್ಪಡುತ್ತದೆ. ಹೃದಯದ ಎರಡನೆಯ ಶಬ್ದವೂ ಕೂಡ ಎ2 ಮತ್ತು ಪಿ2 ಎಂಬ ಎರಡು ಘಟಕಗಳನ್ನು ಒಳಗೊಂಡಿದೆ. ಮಹಾಪಧಮನಿಯ ಕವಾಟವು ಶ್ವಾಸಕೋಶದ ಕವಾಟಕ್ಕಿಂತ ಮುಂಚಿತವಾಗಿ ಮುಚ್ಚಲ್ಪಡುತ್ತದೆ ಮತ್ತು ಅವುಗಳು ಹೃದಯದ ಎರಡನೆಯ ಶಬ್ದದಲ್ಲಿ ಒಂದರಿಂದ ಒಂದು ಕೇಳಿಸುವಂತೆ ಬೇರ್ಪಡಿಸಲ್ಪಡುತ್ತವೆ. ಎಸ್2 ದ ಈ ರೀತಿಯಾದ "ಬೇರ್ಪಡುವಿಕೆ"ಯು ಕೇವಲ ಉಸಿರನ್ನು ಒಳಗೆಳೆದುಕೊಳ್ಳುವ ಸಮಯದಲ್ಲಿ ಮಾತ್ರ ಕೇಳಬಹುದಾಗಿರುತ್ತದೆ.

ವಿದ್ಯುತ್ ಹೃದಯಸ್ಪಂದನಲೇಖ

[ಬದಲಾಯಿಸಿ]

ಒಂದು ವಿದ್ಯುತ್ ಹೃದಯಸ್ಪಂದನಲೇಖದಲ್ಲಿ, ಕುಹರಗಳ ವಿದ್ಯುತ್ ಪರಿಣಾಮದ ಸಂಕುಚನವು ಕ್ಯೂಆರ್‌ಎಸ್ ಘಟಕಗಳ ಪ್ರಾರಂಭದಲ್ಲಿ ಸಂಭವಿಸಲು ಪ್ರಾರಂಭವಾಗುತ್ತದೆ.

ವ್ಯಾಕೋಚನ‌

[ಬದಲಾಯಿಸಿ]
ಹೃದಯದ ವ್ಯಾಕೋಚನ

ಹೃದಯದ ವ್ಯಾಕೋಚನ ವು ರಕ್ತದ ಪರಿಚಲನೆಯ ಜೊತೆ ಪುನರ್ಭರ್ತಿ ಮಾಡುವುದರ ತಯಾರಿಗಾಗಿ ಹೃದಯವು ಸಂಕುಚನದ ನಂತರ ವಿರಮಿಸುವ ಕಾಲದ ಅವಧಿಯಾಗಿದೆ. ಕುಹರದ ವ್ಯಾಕೋಚನ ವು ಕುಹರಗಳು ವಿರಮಿಸುತ್ತಿರುವಾಗ ಕಂಡುಬರುತ್ತದೆ, ಅದೇ ರಿತಿಯಲ್ಲಿ ಹೃತ್ಕರ್ಣದ ವ್ಯಾಕೋಚನ ವು ಹೃತ್ಕರ್ಣವು ವಿರಮಿಸುತ್ತಿರುವಾಗ ಕಂಡುಬರುತ್ತದೆ. ಅವುಗಳು ಜೊತೆಯಾಗಿ ಪೂರ್ಣ ಹೃದಯದ ವ್ಯಾಕೋಚನ ಎಂದು ಕರೆಯಲ್ಪಡುತ್ತವೆ.

ಕುಹರದ ವ್ಯಾಕೋಚನದ ಸಮಯದಲ್ಲಿ, ಕುಹರಗಳಲ್ಲಿನ (ಬಲ ಭಾಗ ಮತ್ತು ಎಡ ಭಾಗದ ಕುಹರ) ಒತ್ತಡವು ಹೆಚ್ಚಿನ ಮಟ್ಟದಿಂದ ಇಳಿಯಲ್ಪಡುತ್ತದೆ ಮತ್ತು ಅದು ಸಂಕುಚನವನ್ನು ಮುಟ್ಟುತ್ತದೆ. ಎಡಭಾಗದ ಕುಹರದಲ್ಲಿನ ಒತ್ತಡವು ಎಡ ಭಾಗದ ಹೃತ್ಕರ್ಣದ ಒತ್ತಡಕ್ಕಿಂತ ಕಡಿಮೆಯಾಗಲ್ಪಟ್ಟಾಗ, ಎಡಹೃದಯದ ಕವಾಟವು ತೆರೆಯಲ್ಪಡುತ್ತದೆ, ಮತ್ತು ಎಡ ಭಾಗದ ಕುಹರವು ರಕ್ತದಿಂದ ತುಂಬಿಕೊಳ್ಳುತ್ತದೆ ಮತ್ತು ಅದು ಎಡ ಹೃತ್ಕರ್ಣದಲ್ಲಿ ಶೇಖರಣೆಯಾಗುತ್ತದೆ. ಭಿನ್ನಗಾತ್ರದ ವಿರಮಿಸುವಿಕೆಯ ಕಾಲ (IVRT), ಇದು ಹೃದಯದ ಎರಡನೆಯ ಶಬ್ದದ ಮಹಾಪಧಮನಿಯ ಘಟಕದಿಂದ, ಅಂದರೆ, ಮಹಾಪಧಮನಿಯ ಕವಾಟದ ಮುಚ್ಚುವಿಕೆಯ ಸಮಯದಿಂದ, ಎಡಬದಿಯ ಕವಾಟದ ತೆರೆಯುವಿಕೆಯ ಮೂಲಕ ತುಂಬಿಕೊಳ್ಳುವಿಕೆಯ ಪ್ರಾರಂಭದವರೆಗಿನ ಸಮಯದ ಅಂತರವಾಗಿದೆ.[] ಅದೇ ರೀತಿಯಾಗಿ, ಬಲ ಭಾಗದ ಕುಹರದಲ್ಲಿನ ಒತ್ತಡವು ಬಲಭಾಗದ ಮಹಾಪಧಮನಿಯ ಒತ್ತಡಕ್ಕಿಂತ ಕಡಿಮೆಯಾದಾಗ, ತ್ರಿಕೋನಾಕಾರದ ಮೂರು ಭಾಗಗಳುಳ್ಳ ಕವಾಟವು ತೆರೆಯಲ್ಪಡುತ್ತದೆ, ಮತ್ತು ಬಲ ಭಾಗದ ಕುಹರವು ರಕ್ತದಿಂದ ತುಂಬಿಕೊಳ್ಳುತ್ತದೆ, ಅದು ಬಲಭಾಗದ ಮಹಾಪಧಮನಿಯಲ್ಲಿ ಶೆಖರಣೆಯಾಗುತ್ತದೆ. ವ್ಯಾಕೋಚನದ ಸಮಯದಲ್ಲಿ ಮಯೋಕಾರ್ಡಿಯಮ್‌ನಲ್ಲಿನ ಒತ್ತಡವು ಮಹಾಪಧಮನಿಯಲ್ಲಿನ ಒತ್ತಡಕ್ಕಿಂತ ಕಡಿಮೆಯಾಗಿರುತ್ತದೆ, ಅದು ಪರಿಧಮನಿಯ ಅಪಧಮನಿಗಳ ಮೂಲಕ ಹೃದಯದಲ್ಲಿಯೇ ರಕ್ತದ ಪರಿಚಲನೆಗೆ ಅವಕಾಶ ನೀಡುತ್ತದೆ.

ಹೃದಯ ಆವರ್ತನದ ನಿಯಂತ್ರಣ

[ಬದಲಾಯಿಸಿ]

ಹೃದಯದ ಸ್ನಾಯುವು ಸ್ವಯಂ ಚಲನೆಯನ್ನು ಹೊಂದಿದೆ, ಅಂದರೆ ಅದರ ಅರ್ಥ ಅದು ಸ್ವಯಂ-ಪ್ರಚೋದನೆಗೊಳ್ಳುತ್ತದೆ. (ನೀವು ಇದನ್ನು "ಸ್ನಾಯುಜ" ಅಂಗಾಂಶ ಎಂದೂ ಕೂಡ ಕರೆಯಬಹುದು. ಅದರ ಅರ್ಥ ಒಂದು ಅಂಗಾಂಶವು ತನ್ನ ಸ್ವಂತ ಪ್ರಚೋದನೆಯನ್ನು ಉತ್ಪಾದಿಸಿಕೊಳ್ಳಬಹುದಾಗಿದೆ ಎಂಬುದಾಗಿದೆ.) ಇದು ಅಸ್ಥಿಪಂಜರದ ಸ್ನಾಯುಗಳಿಗೆ ವ್ಯತಿರಿಕ್ತವಾಗಿದೆ, ಅಸ್ಥಿಪಂಜರದ ಸ್ನಾಯುವು ಪ್ರಚೋದನೆಗಾಗಿ ಪ್ರಜ್ಞೆಯುಳ್ಳ ಅಥವಾ ಪ್ರತಿಫಲಿತ ನರಗಳ ಪ್ರಚೋದನೆ ಇವುಗಳಲ್ಲಿ ಯಾವುದಾದರೂ ಒಂದನ್ನು ಅವಲಂಬಿಸುತ್ತದೆ. ಹೃದಯದ ಲಯಬದ್ಧವಾದ ಸಂಕುಚನಗಳು ಸ್ವಾಭಾವಿಕವಾಗಿ ಸಂಭವಿಸುತ್ತವೆ, ಆದಾಗ್ಯೂ ಸಂಕುಚನದ ಪ್ರಮಾಣವು ನರಗಳ ಅಥವಾ ಹಾರ್ಮೋನ್‌ಗಳ ಪ್ರಭಾವದಿಂದ, ವ್ಯಾಯಾಮಗಳಿಂದ ಮತ್ತು ಭಾವನೆಗಳಿಗನುಗುಣವಾಗಿ ಬದಲಾಗಬಹುದು. ಉದಾಹರಣೆಗೆ, ಹೃದಯಗಳ ಅನುವೇದನ ನರಗಳು ಹೃದಯದ ಬಡಿತವನ್ನು ಹೆಚ್ಚಿಸುತ್ತವೆ ಮತ್ತು ವೇಗಸ್ ನರಗಳು ಹೃದಯದ ಬಡಿತವನ್ನು ಕಡಿಮೆಯಾಗಿಸುತ್ತವೆ.

ಸಂಕುಚನಗಳ ಲಯಬದ್ಧವಾದ ಅನುಕ್ರಮವು ಸೈನೋಹೃತ್ಕರ್ಣದ (SA) ಮತ್ತು ಏಟ್ರಿಯೋವೆಂಟ್ರಿಕ್ಯುಲರ್ (ಹೃತ್ಕರ್ಣ ಕುಹರ) ಗಂಟುಗಳ ಮೂಲಕ ಸಂಯೋಜಿಸಲ್ಪಡುತ್ತದೆ. ಅನೇಕ ವೇಳೆ ಹೃದಯದ ನಿಯಂತ್ರಕ ಎಂದು ಕರೆಯಲ್ಪಡುವ ಸೈನೋ ಹೃತ್ಕರ್ಣದ ಗಂಟು ಬಲ ಭಾಗದ ಹೃತ್ಕರ್ಣದ ಮೇಲ್ಭಾಗದಲ್ಲಿ ಸ್ಥಾಪಿತಗೊಂಡಿದೆ ಮತ್ತು ಒಂದು ಕಾರ್ಯದ ಸಂಭವನೀಯತೆಯನ್ನು ನಿರ್ಮಿಸುವ ಮೂಲಕ ಹೃತ್ಕರ್ಣದ ಸಂಕುಚನವನ್ನು ಪ್ರಾರಂಭಿಸುವ ವಿದ್ಯುತ್ ಪರಿಣಾಮದ ಪ್ರಚೋದನೆಯ ತರಂಗಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಒಮ್ಮೆ ತರಂಗವು ಕೆಳ ಬಲಭಾಗದ ಹೃತ್ಕರ್ಣದಲ್ಲಿ ಸ್ಥಾಪಿತಗೊಂಡ ಎವಿ ಗಂಟನ್ನು ಮುಟ್ಟಿದ ನಂತರ, ಇದು ಹಿಸ್‌ ನ ಸಮೂಹಗಳು ಮತ್ತು ಪರ್ಕಿಂಜೆ ಫೈಬರ್‌ಗಳ ಮೂಲಕ ಸಾಗಿಸುವುದಕ್ಕೆ ಮುಂಚೆ ಅಲ್ಲಿ ತಡಮಾಡಲ್ಪಡುತ್ತದೆ, ಅದು ಕುಹರಗಳ ಒಂದು ಸಂಕುಚನಕ್ಕೆ ಕಾರಣವಾಗುತ್ತದೆ. ಎವಿ ಗಂಟಿನಲ್ಲಿನ ತಡಮಾಡುವಿಕೆಯು ಹೃತ್ಕರ್ಣದಲ್ಲಿನ ರಕ್ತಗಳಿಗೆ ಅವುಗಳ ಅನುಕ್ರಮ ಕುಹರಗಳನ್ನು ತುಂಬಿಸುವಿಕೆಗೆ ಸಾಕಷ್ಟು ಸಮಯವನ್ನು ನೀಡುತ್ತದೆ. ತೀವ್ರವಾದ ರೋಗನಿದಾನಶಾಸ್ತ್ರದಲ್ಲಿ, ಎವಿ ಗಂಟೂ ಕೂಡ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ; ಇದು ಸಾಮಾನ್ಯವಾಗಿ ಕಾರಣವಾಗಿರುವುದಿಲ್ಲ ಏಕೆಂದರೆ ಅವುಗಳ ಸ್ವಾಭಾವಿಕ ದಹನದ ಪ್ರಮಾಣವು ಎಸ್‌ಎ ಗಂಟಿನಲ್ಲಿನ ನಿಯಂತ್ರಕ ಕೋಶಗಳಿಗಿಂತ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿರುತ್ತವೆ ಮತ್ತು ಆದ್ದರಿಂದ ಹೆಚ್ಚಾಗಿ ಸ್ವಯಂಚಾಲಿತವಾಗಿರುತ್ತವೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಅತ್ಯುನ್ನತ ಮಟ್ಟದ ಬಡಿತ
  • ರಕ್ತದೊತ್ತಡ
  • ಹೃದಯದ ಕಾರ್ಯಗಳ ಸಂಭವನೀಯತೆ
  • ಹೃದಯದ ಸ್ನಾಯು
  • ಹೃದಯದ ಔಟ್‌ಪುಟ್‌
  • ವಿದ್ಯುತ್ ಹೃದಯಸ್ಪಂದನಲೇಖ
  • ಹೃದಯ
  • ಸಂಕುಚನದ ವ್ಯೂಹ (ಕಂಪ್ಯೂಟರ್ ವಿನ್ಯಾಸ)
  • ಕುಹರ

ಉಲ್ಲೇಖಗಳು

[ಬದಲಾಯಿಸಿ]
  1. ಗೈಟೊನ್, ಎ.ಸಿ. & ಹಾಲ್, ಜೆ.ಇ. (2006) ವೈದ್ಯಕೀಯ ಶರೀರ ವಿಜ್ಞಾನದ ಪಠ್ಯಪುಸ್ತಕ (11ನೆಯ ಆವೃತ್ತಿ) ಫಿಲಾಡೆಲ್ಫಿಯಾ: ಎಲ್ಸವೇರ್ ಸೌಂಡರ್ ಐಎಸ್‌ಬಿಎನ್ 0-7216-0240-1
  2. ನಿಮಗಾಗಿ ಮುಂದುವರೆದ ಜೀವಶಾಸ್ತ್ರ - ಗ್ಯಾರೆತ್ ವಿಲಿಯಮ್ಸ್
  3. ರಿಚರ್ಡ್ ಇ. ಕ್ಲಾಬಂಡೆ, ಪಿಎಚ್.ಡಿ. ಅವರಿಂದ ಹೃದಯ ನಾಳಗಳ ಭೌತಶಾಸ್ತ್ರದ ವಿಷಯಗಳು: ಹೃದಯ ಆವರ್ತನ - ಕಡಿಮೆಗೊಳಿಸಲ್ಪಟ್ಟ ನಿಷ್ಕಾಸನ (ಹಂತ 4)
  4. ಪ್ಲೆತಿಸ್ಮೋಗ್ರಾಫ್
  5. "ಹೃದಯ". Archived from the original on 2011-06-06. Retrieved 2010-08-19.
  6. "ಮಾನವ ಹೃದಯ ಶ್ವಾಸಕೋಶದ ಶರೀರ ವಿಜ್ಞಾನ". Archived from the original on 2011-06-08. Retrieved 2010-08-19. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  7. ಹೃಲ್ಲೇಖ ವಿಧಾನದ ಸೇರಿಸುವಿಕೆ (ಥರೋಕೋಕಾರ್ಡಿಯೋಗ್ರಫಿ): ಎಡ ಭಾಗದ ಕುಹರದ ತುಂಬುವಿಕೆಯನ್ನು ನಿಯಂತ್ರಿಸುವ ಒಂದು ನವೀನ, ಆಕ್ರಮಣಶೀಲವಲ್ಲದ ತಂತ್ರಗಾರಿಕೆ. ನಿರ್ಣಾಯಕ ಸಂರಕ್ಷಣೆಯ ನಿಯತಕಾಲಿಕ, ಆವೃತ್ತಿ 14, ಬಿಡುಗಡೆ 4, ಪುಟಗಳು 177-185

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ದಪ್ಪ ಅಕ್ಷರಗಳು