ಹೂಕಲೆ

ವಿಕಿಪೀಡಿಯ ಇಂದ
Jump to navigation Jump to search

ಹೂಕಲೆಯು ಹೂವುಗಳ ಉತ್ಪಾದನೆ, ವಾಣಿಜ್ಯ ಮತ್ತು ವ್ಯಾಪಾರ.[೧] ಇದು ಹೂ ಆರೈಕೆ ಹಾಗೂ ನಿಭಾವಣೆ, ಪುಷ್ಪವಿನ್ಯಾಸ, ಅಥವಾ ಹೂವಿನ ಜೋಡಣೆ, ಮಾರಾಟ, ಮತ್ತು ಪ್ರದರ್ಶನ ಮತ್ತು ಹೂ ವಿತರಣೆಯನ್ನು ಒಳಗೊಳ್ಳುತ್ತದೆ. ಸಗಟು ಹೂವಾಡಿಗರು ದೊಡ್ಡ ಪ್ರಮಾಣದಲ್ಲಿ ಹೂವುಗಳನ್ನು ಮತ್ತು ಸಂಬಂಧಿತ ಪೂರೈಕೆಗಳನ್ನು ವ್ಯಾಪಾರದಲ್ಲಿನ ವೃತ್ತಿಪರರಿಗೆ ಮಾರುತ್ತಾರೆ. ಚಿಲ್ಲರೆ ಹೂವಾಡಿಗರು ತಾಜಾ ಹೂವುಗಳು ಮತ್ತು ಸಂಬಂಧಿತ ಉತ್ಪನ್ನಗಳು ಹಾಗೂ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಾರೆ. ಮೊದಲ ಹೂವಿನ ಅಂಗಡಿಯು ೧೮೭೫ರಲ್ಲಿ ತೆರೆಯಿತು.

ಹೂಕಲೆಯು ಹೂವುಗಳ ಬೇಸಾಯ ಜೊತೆಗೆ ಅವುಗಳ ಜೋಡಣೆ, ಮತ್ತು ಅವುಗಳನ್ನು ಮಾರಾಟ ಮಾಡುವ ವ್ಯಾಪಾರವನ್ನು ಕೂಡ ಒಳಗೊಳ್ಳಬಹುದು. ಹೂಕಲೆ ವ್ಯಾಪಾರಕ್ಕೆ ಪೂರೈಕೆ ಮಾಡಲಾದ ಹೆಚ್ಚಿನ ಕಚ್ಚಾವಸ್ತುವು ಕತ್ತರಿಸಿದ ಹೂವುಗಳ ಉದ್ಯಮದಿಂದ ಬರುತ್ತದೆ. ಹೂವಾಡಿಗರ ಅಂಗಡಿಗಳು, ಜೊತೆಗೆ ಆನ್‍ಲೈನ್ ಅಂಗಡಿಗಳು ಹೂವಿಗೆ ಮೀಸಲದ ಮುಖ್ಯ ಅಂಗಡಿಗಳಾಗಿವೆ, ಆದರೆ ಸೂಪರ್‌ಮಾರ್ಕೆಟ್‍ಗಳು, ಉದ್ಯಾನ ಪೂರೈಕೆ ಅಂಗಡಿಗಳು ಹಾಗೂ ಪೆಟ್ರೋಲ್ ಪಂಪ್‍ಗಳು ಕೂಡ ಹೂವುಗಳನ್ನು ಮಾರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಹೂಕಲೆ&oldid=915104" ಇಂದ ಪಡೆಯಲ್ಪಟ್ಟಿದೆ