ಹುಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಂಬೆ ಪ್ರಾಂತ್ಯದಲ್ಲಿ ಮುಂಚಿತವಾಗಿ ಮುದ್ರಿಸಲಾದ 2500 ರೂಪಾಯಿಗಳ ಒಂದು ಹುಂಡಿ, ಕಂದಾಯ ಅಂಚೆ ಚೀಟಿಯೊಂದಿಗೆ 1951ರಲ್ಲಿ ಮುದ್ರೆ ಹಾಕಲ್ಪಟ್ಟಿತು.

ಹುಂಡಿ ಎಂಬುದು ಮಧ್ಯಕಾಲೀನ ಭಾರತದಲ್ಲಿ ವ್ಯಾಪಾರ ಮತ್ತು ಸಾಲದ ವಹಿವಾಟುಗಳ ಬಳಕೆಗಾಗಿ ಅಭಿವೃದ್ಧಿಪಡಿಸಲಾದ ಹಣಕಾಸು ಸಾಧನ. ಹುಂಡಿಗಳನ್ನು ಹಣ ವರ್ಗಾಯಿಸಲು, ಹಣ ರವಾನೆ ಸಾಧನವಾಗಿ, ಸಾಲದ ಸಾಧನವಾಗಿ, ಐ. ಓ. ಯು. ನ ರೂಪದಲ್ಲಿ ಹಣವನ್ನು ಎರವಲು ಪಡೆಯಲು ಮತ್ತು ವ್ಯಾಪಾರ ವಹಿವಾಟುಗಳಲ್ಲಿ ವಿನಿಮಯ ಪತ್ರವಾಗಿ ಬಳಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಹುಂಡಿಯನ್ನು " ನಿರ್ದಿಷ್ಟ ಮೊತ್ತದ ಹಣವನ್ನು ಆದೇಶದಲ್ಲಿ ಹೆಸರಿಸಲಾದ ವ್ಯಕ್ತಿಗೆ ಪಾವತಿಸುವಂತೆ, ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ನಿರ್ದೇಶನ ನೀಡುವ ಲಿಖಿತ ಆದೇಶ" ಎಂದು ವಿವರಿಸುತ್ತದೆ.[೧]

ಹುಂಡಿಯ ನಕಲಿಗಳನ್ನು ತಡೆಗಟ್ಟಲು ಸರ್ಕಾರವು ಬಿಡುಗಡೆ ಮಾಡಿದ ಜಲಚಿಹ್ನೆಯನ್ನು ಹುಂಡಿಗಳಲ್ಲಿ ಸೇರಿಸಲಾಗಿತ್ತು.

ಭಾರತದಲ್ಲಿ ಹುಂಡಿಗಳಿಗೆ ಬಹಳ ಸುದೀರ್ಘ ಕಾಲದ ಇತಿಹಾಸವಿದೆ. ಲಿಖಿತ ದಾಖಲೆಗಳು ಹನ್ನೆರಡನೆಯ ಶತಮಾನದಷ್ಟು ಹಿಂದೆಯೇ ಅವುಗಳ ಬಳಕೆಯನ್ನು ತೋರಿಸುತ್ತವೆ.[೨] 1586ರಲ್ಲಿ ಜನಿಸಿದ ಬನಾರಸಿ ದಾಸ್ ಎಂಬ ವ್ಯಾಪಾರಿ, ತನ್ನ ತಂದೆಯಿಂದ 200 ರೂಪಾಯಿಗಳಿಗೆ ಹುಂಡಿಯನ್ನು ಪಡೆದಿದ್ದನು. ಈ ರೀತಿ ವ್ಯಾಪಾರವನ್ನು ಪ್ರಾರಂಭಿಸಲು ಹಣವನ್ನು ಪಡೆಯಲು ಸಾಧ್ಯವಾಯಿತು.

ವಸಾಹತುಶಾಹಿ ಯುಗದಲ್ಲಿ, ಬ್ರಿಟಿಷ್ ಸರ್ಕಾರವು ಹುಂಡಿ ವ್ಯವಸ್ಥೆಯನ್ನು ಸ್ಥಳೀಯ ಅಥವಾ ಸಾಂಪ್ರದಾಯಿಕವೆಂದು ಪರಿಗಣಿಸಿತು. ಆದರೆ ಬ್ರಿಟಿಷ್ ಸರ್ಕಾರವು ಹುಂಡಿ ವ್ಯವಸ್ಥೆಯನ್ನು ಅನೌಪಚಾರಿಕವಲ್ಲವೆಂದು ಪರಿಗಣಿಸಲ್ಲಿಲ್ಲ. ಇದು ಭಾರತೀಯ ಆರ್ಥಿಕತೆಯ ಪ್ರಮುಖ ಭಾಗವಾಗಿರುವುದರಿಂದ ಅದರಲ್ಲಿ ಹಸ್ತಕ್ಷೇಪ ಮಾಡಲು ಬ್ರಿಟಿಷರು ಹಿಂಜರಿಯುತ್ತಿದ್ದರು. ಆರ್ಥಿಕ ವ್ಯವಸ್ಥೆಯಲ್ಲಿ ನಡೆಯುವ ವಹಿವಾಟುಗಳಿಗೆ ತೆರಿಗೆ ವಿಧಿಸುವ ಇಚ್ಚೆಯು ಈ ಹಿಂಜರಿಕೆಯ ಇನ್ನೊಂದು ಕಾರಣವಾಗಿತ್ತು.[೩] ಅಧಿಕೃತ ಹುಂಡಿ ರೂಪದ ಕಂದಾಯ ಅಂಚೆಚೀಟಿಗಳು ರಾಣಿ ವಿಕ್ಟೋರಿಯಾ ಸೇರಿದಂತೆ ಬ್ರಿಟಿಷ್ ರಾಜರ ಚಿತ್ರದೊಂದಿಗೆ ತಯಾರಿಸಲಾಯಿತು. ವ್ಯಾಪಾರಿಗಳ ನಡುವಿನ ವಿವಾದಗಳು ಆಗಾಗ್ಗೆ ನ್ಯಾಯಾಲಯ ವ್ಯವಸ್ಥೆಯನ್ನು ಪ್ರವೇಶಿಸಿದವು. ಸಾಮಾನ್ಯ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸುಗಮವಾಗಿ ನಡೆಯಲ್ಲಿಲ್ಲ. ಆದ್ದರಿಂದ ಯಾವುದೇ ರೀತಿಯಲ್ಲಿ ಈ ವ್ಯವಸ್ಥೆಯು ಭದ್ರವಾಗಿ ನೆಲೆಯೂರಲಿಲ್ಲ.[೪]

ಹುಂಡಿಯ ವಿಧಗಳು[ಬದಲಾಯಿಸಿ]

  • ನಾಮ್-ಜೋಗ್ ಹುಂಡಿ: ಈ ಹುಂಡಿಯನ್ನು ಯಾರ ಹೆಸರನ್ನು ಹುಂಡಿಯಲ್ಲಿ ಉಲ್ಲೇಖಿಸಲಾಗಿದೆಯೋ ಆ ವ್ಯಕ್ತಿಗೆ ಮಾತ್ರ ಪಾವತಿಸಲಾಗುತ್ತದೆ. ಅಂತಹ ಹುಂಡಿಯನ್ನು ಬೇರೆ ಯಾವುದೇ ವ್ಯಕ್ತಿಯ ಪರವಾಗಿ ಅನುಮೋದಿಸಲಾಗುವುದಿಲ್ಲ. ಇದು ನಿರ್ಬಂಧಿತ ಅನುಮೋದನೆಯನ್ನು ಮಾಡಲಾದ ಮಸೂದೆಯನ್ನು ಹೋಲುತ್ತದೆ.
  • ಫರ್ಮಾನ್-ಜೋಗ್ ಹುಂಡಿ: ಈ ಹುಂಡಿಯನ್ನು ಹುಂಡಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಗೆ ಅಥವಾ ಅವನು ಆದೇಶಿಸಿದ ಯಾವುದೇ ವ್ಯಕ್ತಿಗೆ ಪಾವತಿಸಬಹುದು. ಈ ರೀತಿಯ ಹುಂಡಿಯು ಆದೇಶದ ಮೇರೆಗೆ ಪಾವತಿಸಬೇಕಾದ ಚೆಕ್ ಅನ್ನು ಹೋಲುತ್ತದೆ. ಇಂತಹ ಹುಂಡಿಯ ಮೇಲೆ ಯಾವುದೇ ಅನುಮೋದನೆಯ ಅಗತ್ಯವಿಲ್ಲ.
  • ಧಾನಿ-ಜೋಗ್ ಹುಂಡಿ: ಹುಂಡಿಯನ್ನು ಕೊಂಡುಕೊಳ್ಳುವವರಿಗೆ ಅಥವಾ ಧಾರಕರಿಗೆ ಪಾವತಿಸಿದಾಗ, ಅದನ್ನು ಧಾನಿ ಜೋಗ್ ಹುಂಡಿ ಎಂದು ಕರೆಯಲಾಗುತ್ತದೆ. ಇದು ಧಾರಕನಿಗೆ ಪಾವತಿಸಬೇಕಾದ ಸಾಧನವನ್ನು ಹೋಲುತ್ತದೆ.
  • ಜೋಕಿಮ್-ಹುಂಡಿ: ಸಾಮಾನ್ಯವಾಗಿ ಹುಂಡಿಯಲ್ಲಿ ಷರತ್ತುಗಳಿರುವುದಿಲ್ಲ. ಆದರೆ ಜೋಕಿಮ್ ಹುಂಡಿ ಷರತ್ತುಬದ್ಧವಾಗಿರುತ್ತದೆ, ಅಂದರೆ ಡ್ರಾಯರ್ ಒಂದು ನಿರ್ದಿಷ್ಟ ಷರತ್ತಿನ ಮೇಲೆ ಮಾತ್ರ ಹುಂಡಿ ಮೊತ್ತವನ್ನು ಪಾವತಿಸುವ ಭರವಸೆ ನೀಡುತ್ತಾರೆ. ಅಂತಹ ಹುಂಡಿಗಳನ್ನು ಬದಲಾಯಿಸಲಾಗುವುದಿಲ್ಲ, ಮತ್ತು ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಅಂತಹ ಹುಂಡಿಗಳ ಬಳಕೆಯನ್ನು ಸ್ವೀಕರಿಸಲು ನಿರಾಕರಿಸುವುದರಿಂದ ಅಂತಹ ಹುಂಡಿಗಳು ಪ್ರಸ್ತುತ ದಿನಗಳಲ್ಲಿ ಬಹಳ ಅಪರೂಪವಾಗಿವೆ.
  • ಜವಾಬಿ ಹುಂಡಿ: ಹಣವು ಹುಂಡಿಯ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದರೆ ಮತ್ತು ಪಾವತಿಯನ್ನು ಸ್ವೀಕರಿಸುವ ವ್ಯಕ್ತಿಯು ತನ್ನ ಸ್ವೀಕೃತಿ(ಜವಾಬ್)ಯನ್ನು ನೀಡಿದರೆ, ಅಂತಹ ಹುಂಡಿಯನ್ನು ಜವಾಬಿ ಹುಂಡಿಯೆಂದು ಕರೆಯಲಾಗುತ್ತದೆ.
  • ಖಾಕಾ ಹುಂಡಿ: ಈಗಾಗಲೇ ಪಾವತಿಯನ್ನು ಮಾಡಲಾಗಿರುವ ಹುಂಡಿಯನ್ನು ಖಾಕಾ ಹುಂಡಿಯೆಂದು ಕರೆಯಲಾಗುತ್ತದೆ.
  • ಖೋತಿ ಹುಂಡಿ: ಒಂದು ವೇಳೆ ಹುಂಡಿಯನ್ನು ನಕಲಿ ಮಾಡಿದ್ದರೆ ಅಥವಾ ಹುಂಡಿಯಲ್ಲಿ ಯಾವುದೇ ರೀತಿಯ ದೋಷವಿದ್ದರೆ, ಅಂತಹ ಹುಂಡಿಯನ್ನು ಖೋತಿ ಹುಂಡಿಯೆಂದು ಕರೆಯಲಾಗುತ್ತದೆ.

ಹುಂಡಿಯಲ್ಲಿಇನ್ನೂ ಕೆಲವು ವಿದಗಳಿವೆ. ನಾಮ-ಜೋಗ್ ಹುಂಡಿ, ಧಾನಿ-ಜೋಗ್ ಹುಂಡಿ, ಜವಾಬೀ ಹುಂಡಿ, ಜೋಖಮಿ ಹುಂಡಿ, ಫರ್ಮನ್-ಜೋಗ್ ಹುಂಡಿ ಇತ್ಯಾದಿ.[೫]

  • ಸಹಯೋಗ್ ಹುಂಡಿ: ಈ ಹುಂಡಿಯ ಪ್ರಕಾರ ಒಬ್ಬ ವ್ಯಾಪಾರಿಯು ಮತ್ತೊಬ್ಬ ವ್ಯಾಪಾರಿಗೆ ಮೂರನೇಯ ವ್ಯಕ್ತಿಗೆ ಮೊತ್ತವನ್ನು ಪಾವತಿಸುವಂತೆ ಆದೇಶಿಸುತ್ತಾನೆ. ಯಾವ ವ್ಯಕ್ತಿಯ ಪರವಾಗಿ ಹುಂಡಿಯನ್ನು ಬಳಸಲಾಗಿದೆಯೋ ಆ ವ್ಯಕ್ತಿ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿಗೆ 'ಸಾಲದ ಅರ್ಹತೆ' ಯನ್ನು ಹೊಂದಿರುದರಿಂದ ಮಾರುಕಟ್ಟೆಯಲ್ಲಿ ಪರಿಚಿತನಾಗಿರುತ್ತಾನೆ. ಒಂದು ಸಹಯೋಗ ಹುಂಡಿ ಒಬ್ಬರಿಂದ ಮತ್ತೊಂಬರ ಕೈಗೆ ಹಾದುಹೋಗುತ್ತದೆ, ಅದು ಅಂತಿಮವಾಗಿ ಸ್ವೀಕರಿಸುವವರನ್ನು ತಲುಪುವವರೆಗೆ ಪಾವತಿಯನ್ನು ಸ್ವೀಕರಿಸಲು ಸಮಂಜಸವಾದ ವಿಚಾರಣೆಗಳು ನಡೆಯುತ್ತವೆ. ವ್ಯಾಪಾರಿಗಳ ಪ್ರಧಾನ ಭಾಷೆಯಾದ ಹಿಂದಿಯಲ್ಲಿಮತ್ತು ಗುಜರಾತಿಯಲ್ಲಿ ಸಹಯೋಗ ಎಂದರೆ ಸಹಕಾರ ಎಂದರ್ಥ .[೬] ಹುಂಡಿಯಲ್ಲಿ ಅಪಾಯವನ್ನು ಸ್ವೀಕರಿಸಲು ಮತ್ತು ಪಾವತಿಸಲು ಬಹು ಪಕ್ಷಗಳ ಸಹಕಾರದ ಅಗತ್ಯವಿದೆ. ಈ ಕಾರಣದಿಂದಾಗಿ ಹುಂಡಿಗೆ ಈ ಹೆಸರನ್ನು ನೀಡಲಾಗಿದೆ.[೭]
  • ದರ್ಶನಿ ಹುಂಡಿ: ಇದು ಕಣ್ಣಿಗೆ ಕಾಣಿಸುವ ಹಣ. ಈ ಹುಂಡಿಯನ್ನು ಹೊಂದಿರುವವರು ಸ್ವೀಕರಿಸಿದ ನಂತರ ನಿರ್ದಿಷ್ಟ ಸಮಯದೊಳಗೆ ಪಾವತಿಗಾಗಿ ಅದನ್ನು ಪ್ರಸ್ತುತಪಡಿಸಬೇಕು. ಆದ್ದರಿಂದ, ಇದು ಬೇಡಿಕೆ ಮಸೂದೆಯನ್ನು ಹೋಲುತ್ತದೆ .[1][೬]
  • ಮುದ್ದತಿ ಹುಂಡಿ: ಮುದ್ದತಿ ಅಥವಾ ಮಿಯಾದಿ ಹುಂಡಿಯನ್ನು ನಿರ್ದಿಷ್ಟ ಅವಧಿಯ ನಂತರ ಪಾವತಿಸಲಾಗುತ್ತದೆ. ಇದು ಸಮಯದ ಮಸೂದೆಯನ್ನು ಹೋಲುತ್ತದೆ.
ಹಣ ರವಾನೆ
  • ರಾಷ್ಟ್ರಗಳ ರವಾನೆಯ ಜಾಗತಿಕ ಶ್ರೇಯಾಂಕ
  • ಭಾರತಕ್ಕೆ ಹಣ ರವಾನೆ
  • ಹವಾಲಾ
  • ಅನೌಪಚಾರಿಕ ಮೌಲ್ಯ ವರ್ಗಾವಣೆ ವ್ಯವಸ್ಥೆ
  • ಹಣಕಾಸು ಕ್ರಿಯಾ ಕಾರ್ಯಪಡೆ
ಭಾರತದ ಆರ್ಥಿಕತೆ
  • ಭಾರತದ ಆರ್ಥಿಕತೆ
  • ಭಾರತದ ಆರ್ಥಿಕ ಇತಿಹಾಸ
  • ಭಾರತಕ್ಕೆ ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ
  • ಭಾರತದ ವಿದೇಶಿ ವ್ಯಾಪಾರ
  • ಭಾರತದ ರಫ್ತುಗಳ ಪಟ್ಟಿ
  • ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರ ಪಟ್ಟಿ
ಭಾರತಕ್ಕೆ ರವಾನೆಯಾಗುವ ಹಣದ ಮೇಲೆ ಪ್ರಭಾವ ಬೀರುವ ಅಂಶಗಳು
ಇತರರು
  • ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881
  • ವರದಿಗಾರನ ಖಾತೆ

ಉಲ್ಲೇಖಗಳು[ಬದಲಾಯಿಸಿ]

ಮುಂದೆ ಓದಿ[ಬದಲಾಯಿಸಿ]

  1. Hundies, Reserve Bank of India, 2013. Retrieved 26 November 2013. Archived 2 December 2023[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  2. "Reserve Bank of India - Publications". m.rbi.org.in. Retrieved 2020-07-12.
  3. Between informality and formality: Hundi/Hawala in India, Marina Martin, London School of Economics India Blog, 16 January 2013. Retrieved 26 November 2013. Error in webarchive template: Check |url= value. Empty.
  4. Habib, Irfan; The system of bills of exchange (hundis) in the Mughal Empire; Proceedings of the Indian History Congress, 33rd Session, Muzatarppur, 1972, S. 290–303. New Delhi
  5. Marina Martin; Hundi/Hawala: The Problem of Definition; Modern Asian Studies, Vol. 43, No. 4 (Jul., 2009), S. 909–937
  6. ೬.೦ ೬.೧ Indian Encyclopaedia, Volume 1 - The Indian Encyclopaedia: Biographical, Historical, Religious, Administrative, Ethnological, Commercial and Scientific. Subodh Kapoor. Cosmo Publications 2002. 318 pag. ISBN 8177552570, ISBN 9788177552577
  7. Hundies at Reserve Bank of India
"https://kn.wikipedia.org/w/index.php?title=ಹುಂಡಿ&oldid=1223036" ಇಂದ ಪಡೆಯಲ್ಪಟ್ಟಿದೆ